ಸೊಸೆಯ ವಿಚಾರದಲ್ಲಿ ವಿಶಾಲಾಕ್ಷಿ ಕಣ್ಣು ತೆರೆಸಿದ ಪದ್ಮನಾಭ, ಶ್ರಾವಣಿಗೆ ಸಿಕ್ತು ಅಡುಗೆಮನೆ ಜವಾಬ್ದಾರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಶ್ರಾವಣಿ ಕಣ್ಣೀರು ಕಂಡು ಲಲಿತಾದೇವಿ ಮಾತು ನೆನಪಾಗಿ ಇನ್ನೆಂದು ಕಣ್ಣೀರು ತರಿಸೊಲ್ಲ ಎಂದ ಸುಬ್ಬು. ಸೊಸೆ ತಮ್ಮ ಮನೆಗಾಗಿ ಮಾಡಿದ ಎಲ್ಲಾ ತ್ಯಾಗಗಳ ಬಗ್ಗೆ ಹೆಂಡತಿಗೆ ಹೇಳಿ ಕಣ್ಣು ತೆರೆಸಿದ ಪದ್ಮನಾಭ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್ 24ರ ಸಂಚಿಕೆಯ ವಿವರ.

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 24ರ ಸಂಚಿಕೆಯಲ್ಲಿ ಅತ್ತೆ ತನ್ನನ್ನು ಎಂದಿಗೂ ಸೊಸೆ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದು ಕೇಳಿ ಶ್ರಾವಣಿಗೆ ದುಃಖ ಉಮ್ಮಳಿಸಿ ಬರುತ್ತದೆ. ರೂಮ್‌ನಲ್ಲಿ ಬಂದು ಬೇಸರದಲ್ಲಿ ಕುಳಿತ ಅವಳಿಗೆ ಸುಬ್ಬು ‘ಯಾಕೇ ಮೇಡಂ ಬೇಜಾರಲ್ಲಿ ಇದೀರಾ ಎಂದು ಪ್ರಶ್ನೆ ಮಾಡುತ್ತಾನೆ‘ ಅವನು ಅಷ್ಟು ಕೇಳಿದ್ದಕ್ಕೆ ಖುಷಿ ಪಡುವ ಶ್ರಾವಣಿ ‘ಸುಬ್ಬು ನಿನಗೆ ನಾನು ಬೇಸರದಲ್ಲಿ ಇರೋದು ಗೊತ್ತಾಗುತ್ತೆ ಅಲ್ವಾ, ಆದರೂ ನೀನು ನನ್ನ ಜೊತೆ ಮೊದಲಿನ ರೀತಿ ಇರ್ತಾ ಇಲ್ಲ. ಮೊದಲಿನ ಹಾಗೆ ನನ್ನ ನೋವು, ದುಃಖದಲ್ಲಿ ನೀನು ಜೊತೆ ನಿಲ್ತಾ ಇಲ್ಲ‘ ಎಂದು ಹುಸಿಮುನಿಸಿನಲ್ಲಿ ಹೇಳುತ್ತಾರೆ. ಅದಕ್ಕೆ ಸುಬ್ಬು ‘ಮೇಡಂ ನೀವು ಯಾವಾಗ ಮದುವೆ ಮನೆಯಲ್ಲಿ ನನ್ನ ಅಕ್ಕ ಬಂದು ನಿಂತ್ರೋ ಆಗ ನನಗೆ ಇನ್ನೆಂದು ನಿನ್ನ ಜೊತೆ ನಿಲ್ಲಬಾರದು ಎಂದು ಅನ್ನಿಸಿತ್ತು‘ ಎಂದು ಹೇಳುತ್ತಾನೆ.
ಅವನ ಮಾತು ಕೇಳಿ ಶ್ರಾವಣಿಗೆ ಜೋರಾಗಿ ಅಳು ಬರುತ್ತದೆ. ಅವಳ ಅಳು ನೋಡಿದ ಸುಬ್ರಹ್ಮಣ್ಯನಿಗೆ ಲಲಿತಾದೇವಿ ಮೊಮ್ಮಗಳನ್ನು ಚೆನ್ನಾಗಿ ನೋಡಿಕೋ ಅವಳ ಕಣ್ಣಲ್ಲಿ ನೀರು ಹಾಕಿಸಬೇಡ ಎಂದು ಹೇಳಿದ್ದು ನೆನಪಾಗುತ್ತದೆ. ಕೂಡಲೇ ಅವನು ಮೇಡಂ ನೀವು ಅಳಬೇಡಿ, ನಾನೇನೋ ಕೋಪದಲ್ಲಿ ಆ ಮಾತು ಹೇಳಿದೆ. ನನಗೆ ನಿಮ್ಮನ್ನು ಬೇಸರ ಪಡಿಸುವ ಯಾವುದೇ ಉದ್ದೇಶವಿಲ್ಲ. ದಯವಿಟ್ಟು ನೀವು ಕಣ್ಣೀರು ಹಾಕಬೇಡಿ, ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿ ಸುಬ್ಬು ಶ್ರಾವಣಿಯ ಕ್ಷಮೆ ಕೇಳುತ್ತಾನೆ. ಆದರೆ ಅವನು ಲಲಿತಾದೇವಿಯವರಾಗಿ ಈ ಮಾತು ಹೇಳಿದ್ದು ಅನ್ನೋದು ಶ್ರಾವಣಿಗೆ ತಿಳಿದಿರುವುದಿಲ್ಲ. ಅವಳು ಸುಬ್ಬು ಹೇಳಿದ ಮಾತು ಹೇಳಿ ಸಂತಸದಲ್ಲಿ ತೇಲುತ್ತಾಳೆ. ಅವಳಿಗೆ ಸುಬ್ಬು ಮನದಲ್ಲಿ ನನ್ನ ಬಗ್ಗೆ ಯಾವುದೇ ಭಾವನೆ ಇಲ್ಲ ಎನ್ನುವುದು ಗೊತ್ತೇ ಆಗುವುದಿಲ್ಲ.
ಹೆಂಡತಿಯ ಕಣ್ಣು ತೆರೆಸುವ ಪದ್ಮನಾಭ
ಶ್ರಾವಣಿಯನ್ನು ಕಂಡರೆ ಸಿಡಿದು ಬೀಳುವ ವಿಶಾಲಾಕ್ಷಿಗೆ ಬುದ್ಧಿವಾದ ಹೇಳಲು ನೋಡುತ್ತಾರೆ ಪದ್ಮನಾಭ. ನೀವು ಕಾರಣಕ್ಕೆ ಅವರನ್ನು ದ್ವೇಷ ಮಾಡುತ್ತಿದ್ದೀಯಾ, ಅವರಿಂದ ಈ ಮನೆಗೆ ಒಳಿತೇ ಆಗಿದೆ. ಆದರೆ ನಿನಗೆ ಅದು ಅರ್ಥ ಆಗ್ತಿಲ್ಲ ಎಂದು ಸೊಸೆಯ ಪರ ಹೆಂಡತಿ ಬಳಿ ವಾದ ಮಾಡುತ್ತಾರೆ. ಆದರೆ ಶ್ರಾವಣಿ ಮದುವೆ ನಿಲ್ಲಿಸಿದರು ಎನ್ನುವ ಕೋಪವೇ ಮನಸ್ಸಿನಲ್ಲಿ ತುಂಬಿಕೊಂಡಿದ್ದ ವಿಶಾಲಾಕ್ಷಿಗೆ ಅವರ ಮಾತು ತಲೆಗೆ ಹೋಗುವುದಿಲ್ಲ, ಕೊನೆಗೆ ಪದ್ಮನಾಭ ಸುಬ್ಬು ಹಾಗೂ ವಿಶಾಲಾಕ್ಷಿ ಒಂದಾಗಲು ಕಾರಣ ಕೂಡ ಶ್ರಾವಣಿ ಎಂದು ಹೇಳಿ ಅವಳು ತಾಯಿ–ಮಗನನ್ನು ಒಂದು ಮಾಡಲು ಪಟ್ಟಕಷ್ಟಗಳನ್ನೆಲ್ಲಾ ಹೇಳುತ್ತಾರೆ. ಜೊತೆಗೆ ಶ್ರಾವಣಿ ನಿನ್ನಿಂದ ಬಯಸುತ್ತಿರುವುದು ತಾಯಿ ಪ್ರೀತಿ, ಅವರು ಚಿಕ್ಕ ವಯಸ್ಸಿನಿಂದಲೂ ತಾಯಿ ಇಲ್ಲದೇ ಬೆಳೆದ ಮಗು. ದೊಡ್ಡ ಮನೆಯ ಹುಡುಗಿ ಆದ್ರೂ ನೀವು ಎಷ್ಟೆಲ್ಲಾ ಹೇಳಿದ್ರೂ ಏನೆಲ್ಲಾ ಮಾಡಿದ್ರು ಈ ಮನೆ ಖುಷಿಯಾಗಿ ಈ ಮನೆಯವರ ಖುಷಿಗಾಗಿ ಏನೆಲ್ಲಾ ಮಾಡ್ತಿದ್ದಾರೆ. ಇನ್ನೂ ನೀನು ಅವರ ವಿಚಾರದಲ್ಲಿ ಬದಲಾಗಿಲ್ಲ ಎಂದರೆ ನಿನ್ನಲ್ಲಿರುವ ತಾಯಿ ಕರುಳೇ ಸತ್ತು ಹೋಗಿದೆ ಎಂದು ವಿಶಾಲಾಕ್ಷಿಗೆ ಜೋರು ಮಾಡಿ ಹೊರಟು ಬಿಡುತ್ತಾರೆ. ಆಗ ತಾನು ಸೊಸೆಯ ಒಳ್ಳೆತನ ವಿಶಾಲಾಕ್ಷಿಗೆ ಅರಿವಾಗುತ್ತದೆ. ಆದರೆ ಅದನ್ನು ತೋರ್ಪಡಿಸಿಕೊಳ್ಳಲು ಆಗದೇ ಒದ್ದಾಡುತ್ತಾರೆ.
ಅಡುಗೆಮನೆ ಜವಾಬ್ದಾರಿ ಸೊಸೆಗೆ ಕೊಟ್ಟ ವಿಶಾಲಾಕ್ಷಿ
ಧನಲಕ್ಷ್ಮೀ ಮಗಳ ಜೊತೆ ಸುಬ್ರಹ್ಮಣ್ಯದಿಂದ ಅವಳಿಗಾಗಿ ತಂದಿರುವ ಉಡುಗೊರೆಗಳನ್ನೆಲ್ಲಾ ತೋರಿಸುತ್ತಾ ಕೂತಿದ್ದ ಶ್ರಾವಣಿ ಬಳಿ ಕ್ಷಮೆ ಕೇಳೋದಾ ಅಂತ ಯೋಚಿಸ್ತಾ ನಿಂತಿರ್ತಾರೆ ವಿಶಾಲಾಕ್ಷಿ. ಆಗ ಅಲ್ಲಿಗೆ ಬರುವ ಧನಲಕ್ಷ್ಮೀ ಅಮ್ಮ ಅಡುಗೆ ಮಾಡು, ನಾನು ಮಾಡಿದ್ರೆ ನಿನ್ನ ಅಳಿಯ, ಬೀಗತ್ತಿ ತಿನ್ನೊಲ್ಲ ಅಂತ ಹೇಳ್ತಾಳೆ. ವಿಶಾಲಾಕ್ಷಿಗೆ ಶ್ರಾವಣಿ ಬಳಿ ಅಡುಗೆ ಮಾಡಿಸೋಣ ಅನ್ನಿಸುತ್ತೆ. ಅದಕ್ಕೆ ‘ಅಯ್ಯೋ ಈ ಮನೆಯಲ್ಲಿ ಅಡುಗೆ ಮಾಡೋರು ಯಾರೂ ಇಲ್ವಾ, ಸುಬ್ರಹ್ಮಣ್ಯಕ್ಕೆ ಹೋಗಿ ಸುಸ್ತಾಗಿ ಬಂದಿದ್ದೇನೆ ಆದರೂ ನಾನೇ ಮಾಡ್ಬೇಕಾ ಅಂತ ನಾಟಕ ಮಾಡ್ತಾಳೆ. ಆಗ ಶ್ರಾವಣಿಗೆ ತನಗೆ ಅವರು ಹೇಳುತ್ತಿರುವುದು ಅಂತ ಗೊತ್ತಾಗಿ ‘ಅತ್ತೆ ನಾನು ಅಡುಗೆ ಮಾಡ್ತೀನಿ‘ ಅಂತು ಖುಷಿಯಿಂದ ಕೇಳಿಕೊಂಡು ಬರ್ತಾಳೆ. ಧನಲಕ್ಷ್ಮೀ ಇದಕ್ಕೆ ಬೇಡ ಅಂದ್ರು ವಿಶಾಲಾಕ್ಷಿ ಮಾಡ್ಲಿ ಬಿಡು, ಯಾರು ಮಾಡಿದ್ರೆ ಏನು ಒಟ್ಟಾರೆ ಅಡುಗೆ ಆದ್ರೆ ಆಯ್ತು. ಹಸಿವಾದ್ರೆ ಯಾರು ಮಾಡಿದ ಅಡುಗೆಯನ್ನಾದ್ರೂ ತಿನ್ನಲೇಬೇಕು‘ ಎಂದು ಹೇಳಿ ಸೊಸೆ ಕೈಯಾರೆ ಅಡುಗೆ ಮಾಡ್ಲಿ ಎಂದು ಹುಸಿ ಕೋಪ ನಟಿಸುತ್ತಾ ಹೇಳುತ್ತಾರೆ. ಶ್ರಾವಣಿಗೆ ಅತ್ತೆ ತನಗೆ ಅಡುಗೆ ಮಾಡಲು ಹೇಳಿದ್ದು ಸ್ವರ್ಗದಲ್ಲೇ ತೇಲಾಡಿದಷ್ಟು ಖುಷಿ ನೀಡಿರುತ್ತದೆ.
ಇತ್ತ ಶ್ರೀವಲ್ಲಿ ಸುಬ್ಬು ಮನೆಯವರು ಕುಕ್ಕೆ ಸುಬ್ರಹ್ಮಣ್ಮಕ್ಕೆ ಹೋದ ವಿಚಾರವನ್ನು ವಿಜಯಾಂಬಿಕಾಗೆ ಕರೆ ಮಾಡಿ ಹೇಳುತ್ತಾರೆ. ಆಗಲೂ ವಿಜಯಾಂಬಿಕಾ ವರಲಕ್ಷ್ಮೀಗೆ ಟಾರ್ಚರ್ ಕೊಡಬೇಕು ಎಂದು ಶ್ರೀವಲ್ಲಿ ತಲೆ ತುಂಬಿಸುತ್ತಾರೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
