ಸುಬ್ಬು ಬಾಯಲ್ಲಿ ಶ್ರೀವಲ್ಲಿ ಹೆಸರು ಕೇಳಿ ಉರ್ಕೊಂಡ ಶ್ರಾವಣಿ, ಸುಂದರನಿಗೆ ಶುರುವಾಯ್ತು ಹನಿಮೂನ್ ಆಸೆ; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಬಾಯಲ್ಲಿ ಶ್ರೀವಲ್ಲಿ ಹೆಸರು ಕೇಳಿ ಉರ್ಕೊಂಡ ಶ್ರಾವಣಿ, ಸುಂದರನಿಗೆ ಶುರುವಾಯ್ತು ಹನಿಮೂನ್ ಆಸೆ; ಶ್ರಾವಣಿ ಸುಬ್ರಹ್ಮಣ್ಯ

ಸುಬ್ಬು ಬಾಯಲ್ಲಿ ಶ್ರೀವಲ್ಲಿ ಹೆಸರು ಕೇಳಿ ಉರ್ಕೊಂಡ ಶ್ರಾವಣಿ, ಸುಂದರನಿಗೆ ಶುರುವಾಯ್ತು ಹನಿಮೂನ್ ಆಸೆ; ಶ್ರಾವಣಿ ಸುಬ್ರಹ್ಮಣ್ಯ

ಮಗ–ಸೊಸೆಯನ್ನು ಹನಿಮೂನ್‌ಗೆ ಕಳುಹಿಸಲು ಒಪ್ಪಿದ ಇಂದ್ರಮ್ಮ. ಶ್ರೀವಲ್ಲಿ ಹೆಸರು ಹೇಳಿದ ಸುಬ್ಬು ಮೇಲೆ ಶ್ರಾವಣಿ ಕೋಪ. ಸೊಸೆಗಾಗಿ ಕಾಲುಂಗುರ ತಂದ ವಿಶಾಲು–ಪದ್ದು. ಸುಂದರನಿಗೆ ಶುರುವಾಯ್ತು ಹನಿಮೂನ್ ಆಸೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 10ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 10ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 10ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 10ರ ಸಂಚಿಕೆಯಲ್ಲಿ ಅಕ್ಕನಿಗೆ ನೀನಿನ್ನೂ ಹಳೆ ಕಾಲದವಳು, ನಿಂಗೆ ವಯಸ್ಸಾಗೋಕೆ ಶುರುವಾಗಿದೆ. ಈಗಿನ ಕಾಲದಲ್ಲಿ ಹನಿಮೂನ್‌ಗೆ ಹೋಗಿ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕೋದು ಕೂಡ ಪ್ರತಿಷ್ಠೆ. ನಿಂಗೆ ಇದೆಲ್ಲ ಗೊತ್ತಾಗಲ್ಲ ಅಂತಾಳೆ. ಅವಳ ಮಾತು ಕೇಳಿ ಪ್ರತಿಷ್ಠೆ, ಪ್ರಸ್ಟೀಜ್ ಅನ್ನೋದೆಲ್ಲ ತಲೆಗೆ ಬಂದಿದ್ದೆ ತಡ ಹನಿಮೂನ್‌ಗೆ ಕಳುಹಿಸಲು ಒಪ್ಪಿಗೆ ನೀಡುತ್ತಾರೆ ಇಂದ್ರಮ್ಮ. ಕೊನೆಗೂ ಇಂದ್ರಮ್ಮ ಹನಿಮೂನ್‌ಗೆ ಹೋಗಲು ಒಪ್ಪಿಗೆ ನೀಡಿದ್ದು ಎಲ್ಲರಿಗೂ ಖುಷಿ ಕೊಡುತ್ತದೆ. ಇದಕ್ಕೆ ಕಾರಣಳಾದ ಇಂದ್ರಮ್ಮನ ತಂಗಿ ಸರಸುಗೆ ಶ್ರಾವಣಿ ಥ್ಯಾಂಕ್ಸ್ ಹೇಳಿದ್ರೆ, ಸರಸು ಮಾತ್ರ ಮನಸ್ಸಲ್ಲೇ ಶ್ರಾವಣಿ ಆಸ್ತಿ ಲೆಕ್ಕಚಾರ ಮಾಡುತ್ತಿರುತ್ತಾಳೆ.

ಸುಬ್ಬು ಬಾಯಲ್ಲಿ ಶ್ರೀವಲ್ಲಿ ಹೆಸರು ಕೇಳಿ ಬ್ಲಾಸ್ಟ್ ಆದ ಶ್ರಾವಣಿ

ಹನಿಮೂನ್‌ಗೆ ಹೋಗೋಕೆ ಬ್ಯಾಗ್ ರೆಡಿ ಮಾಡೋಕೆ ಅಂತ ಮೇಲಿರುವ ಬ್ಯಾಗ್ ತೆಗೆಯಲು ಹೋದಾಗ ಕಾಲು ಎಡವಿ ಬೀಳುವಂತಾಗುತ್ತಾಳೆ. ಆಗ ಓಡಿ ಬಂದು ಅವಳನ್ನು ಹಿಡಿಯುತ್ತಾನೆ ಸುಬ್ಬು. ಕ್ಷಣ ಹೊತ್ತು ಸುಬ್ಬು–ಶ್ರಾವಣಿ ನಡುವೆ ಕಣ್ ಕಣ್ಣ ಸಲಿಗೆ ನಡೆಯುತ್ತೆ. ಶ್ರಾವಣಿ ಅಂತೂ ಖುಷಿಯಲ್ಲಿ ತೇಲುತ್ತಾಳೆ. ನಿಂಗೆಷ್ಟೂ ಕಾಳಜಿ ಸುಬ್ಬು ನನ್ ಮೇಲೆ ಎಂದಾಗ ಸುಬ್ಬು ಕಾಳಜಿ ಈಗೇನು ಹೊಸತಲ್ಲ ಮೊದಲಿಂದಲೂ ಇತ್ತು ಅಂತಾನೆ. ಆಗ ಶ್ರಾವಣಿ ಆದ್ರೂ ನಾನು ನಿನ್ ಕೈಹಿಡಿಯೋಕೆ ಅದೃಷ್ಟ ಮಾಡಿದ್ದೆ ಸುಬ್ಬು ಅಂತಾಳೆ. ಅದನ್ನ ಕೇಳಿ ಸುಮ್ನೆ ಇರಿ ಮೇಡಂ, ಆ ಶ್ರೀವಲ್ಲಿನೂ ಹೀಗೆ ಹೇಳ್ತಾ ಇದ್ಲು. ಯಾವಾಗ ನೋಡಿದ್ರು ನಿನ್ ಕೈಹಿಡಿಯೋಕೆ ಅದೃಷ್ಟ ಮಾಡಿದ್ದೆ, ಅದೃಷ್ಟ ಮಾಡಿದ್ದೆ ಅಂತಾನೇ ಇದ್ಲು. ಅದೃಷ್ಟ, ದುರಾದಷ್ಟ ಏನೂ ಇಲ್ಲ ಅಂತಾನೆ. ಆಗ ಕೋಪಗೊಳ್ಳುವ ಶ್ರಾವಣಿ ಸುಬ್ಬು ಕಾಲರ್ ಹಿಡಿದು ‘ಏಯ್‌ ಸುಬ್ಬು, ನೀನು ಪದೇ ಪದೇ ಆ ಶ್ರೀವಲ್ಲಿ ಹೆಸರು ಹೇಳ್ತಾ ಇರ್ಬೇಡ, ಮದುವೆ ಇನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ, ಬ್ರಹ್ಮ ಅಲ್ಲೇ ಸ್ವರ್ಗದಲ್ಲಿ ಅವರಿಗೆ ಇವರೇ ಅಂತ ಗಂಟು ಹಾಕಿ ಇರ್ತಾನೆ. ಅದಕ್ಕೆ ಬ್ರಹ್ಮಗಂಟು ಅನ್ನೋದು. ನೀನು ಪದೇ ಪದೇ ನನ್ನ ಕಾರಣದಿಂದ ನಿನ್ನ ಆ ಶ್ರೀವಲ್ಲಿ ಮದುವೆ ನಿಂತು ಹೋಯ್ತು ಅಂದ್ರೆ ನಂಗೆ ಕೋಪ ಬರುತ್ತೆ‘ ಅಂತಾಳೆ. ಮನಸ್ಸಲ್ಲೇ ‘ನಾನು ನಿನ್ನ ಬೆಟ್ಟದಷ್ಟು ಪ್ರೀತಿ ಮಾಡ್ತಾ ಇದೀನಿ ಕಣೋ ಸುಬ್ಬು‘ ಅಂತಾನೂ ಹೇಳ್ತಾಳೆ. ಸುಬ್ಬು ಅಯ್ಯೋ ಮೇಡಂ ಮುಗಿದು ಹೋಗಿರೋದೆಲ್ಲಾ ಯಾಕೆ. ನಾವೇನೋ ಬಾಯಿ ತಪ್ಪಿ ಹೇಳ್ದೆ ಅಂತಾಳೆ. ಆಗ ಶ್ರಾವಣಿ ನೀನು ಹೀಗೆಲ್ಲಾ ಹೇಳಿದ್ರೆ ನಂಗೆ ಬೇಜಾರಾಗುತ್ತೆ ಸುಬ್ಬು ಅಂತಾಳೆ. ಸುಬ್ಬು ಏನೂ ಹೇಳದೇ ಕೋಣೆಯಿಂದ ಹೊರಟು ಹೋಗುತ್ತಾನೆ.

ಸೊಸೆ ಕಾಲುಂಗರ ತರಲು ಅತ್ತೆ–ಮಾವನ ಪ್ಲಾನ್

ಆಟೊ ಓಡಿಸಲು ಹೋಗಲು ರೆಡಿ ಆಗುವಾಗ ಕೋಣೆಯೊಳಗೆ ಬಂದ ಹೆಂಡತಿಯನ್ನು ನೋಡಿ ಶರ್ಟ್ ಮುಚ್ಚಿಡುತ್ತಾರೆ ಪದ್ಮನಾಭ. ವಿಶಾಲು ಬಂದವಳೇ ಎಲ್ಲಿಗೋ ಹೋಗಬೇಕು ಬನ್ನಿ ಎಂದು ಕರೆಯುತ್ತಾಳೆ. ಎಲ್ಲಿಗೆ ಎಂದು ಕೇಳಿದಾಗ ಮೊದಲು ಹೇಳುವುದಿಲ್ಲ. ನಂತರ ಶ್ರಾವಣಿಯಮ್ಮನ ಕಾಲಲ್ಲಿ ಒಂದು ಕಾಲುಂಗರ ಕೂಡ ಇಲ್ಲ. ಅವರಿಗೆ ಕಾಲುಂಗರ ಹಾಗೂ ಕಾಲ್ಗೆಜ್ಜೆ ತರಬೇಕು ಎಂದು ಹೇಳುತ್ತಾಳೆ. ಅದನ್ನು ಕೇಳಿ ಪದ್ಮನಾಭರಿಗೆ ಸಂತೋಷ, ದುಃಖ ಎರಡೂ ಆಗುತ್ತದೆ. ಆಗ ಅವರು ತಾವು ಶ್ರಾವಣಿಗೆ ಏನಾದ್ರೂ ಕೊಡಿಸಬೇಕು ಅಂತ ಆಟೊ ಡ್ರೈವರ್ ಆಗಿ ಕೆಲಸ ಮಾಡ್ತಾ ಇರೋದು ಹೆಂಡತಿ ಬಳಿ ಹೇಳ್ತಾರೆ. ಜೊತೆಗೆ ಶ್ರಾವಣಿ ಮನೆಗೆ ಬಂದಾಗ ನೀವ್ಯಾರು ತೊಡಲು ಬಟ್ಟೆ ಕೊಡದೇ ಇದ್ದಾಗ ಆಕೆ ತನ್ನ ಉಂಗುರ ನೀಡಿ ಅದನ್ನು ಅಡ ಇಡಲು ಹೇಳಿ ಬಟ್ಟೆ ತರಲು ಹೇಳಿದ್ದು, ಅದನ್ನು ಬಿಡಿಸಿ ಕೊಡುವ ಸಲುವಾಗಿ ತಾನು ಕಷ್ಟಪಟ್ಟು ದುಡಿತಾ ಇರೋದು ಎಲ್ಲವನ್ನೂ ಹೆಂಡತಿ ಬಳಿ ಹೇಳಿಕೊಳ್ಳುತ್ತಾರೆ. ಶ್ರಾವಣಿ ಆರಂಭದಲ್ಲಿ ತಮ್ಮ ಮನೆಗೆ ಬಂದಾಗ ತಾವು ಎಷ್ಟೆಲ್ಲಾ ಕಷ್ಟಕೊಟ್ವಿ ಎಂದು ನೆನೆದು ಕಣ್ಣೀರು ಹಾಕುತ್ತಾರೆ ವಿಶಾಲು. ಅಲ್ಲದೇ ತಾನು ಚೀಟಿ ಕಟ್ಟಿದ್ದು ಆ ದುಡ್ಡನ್ನು ಎತ್ತಿ ಶ್ರಾವಣಿಗೆ ಕಾಲುಂಗರ ಕಾಲ್ಗೆಜ್ಜೆ ತರೋಣ ಎಂದು ಹೇಳಿ ಗಂಡನನ್ನು ಹೊರಡಿಸುತ್ತಾರೆ. ಪದ್ಮನಾಭ ಕೂಡ ಸೊಸೆಗೆಂದು ತಾನು ಕೂಡಿಸಿ ಇಟ್ಟ ಹಣವನ್ನು ಕೊಡುತ್ತಾರೆ.

ಸುಂದರನಿಗೆ ಹನಿಮೂನ್‌ಗೆ ಹೋಗುವ ಆಸೆ

ಸುಬ್ಬು ಶ್ರಾವಣಿ ಬದಲು ತನ್ನನ್ನು ಧನಲಕ್ಷ್ಮೀಯನ್ನೂ ಹನಿಮೂನ್‌ಗೆ ಕಳುಹಿಸು ಎಂದು ತಾಯಿ ಬಳಿ ಹೇಳಲು ಬರುತ್ತಾನೆ. ಆದರೆ ಅವರು ಹನಿಮೂನ್‌ಗೆ ಹೋಗುವಾಗ ನಿನ್ನನ್ನು ಹೇಗೋ ಕಳಿಸೋದು ಅಂತ ಕಾಂತಮ್ಮ ಮಗನಿಗೆ ಬೈಯುತ್ತಾರೆ. ಆಗ ಸುಂದರ ಅದೆಲ್ಲಾ ಗೊತ್ತಿಲ್ಲ. ನೀನು ಏನಾದ್ರೂ ಪ್ಲಾನ್ ಮಾಡಿ ಆ ಶ್ರಾವಣಿ–ಸುಬ್ಬು ಹನಿಮೂನ್‌ಗೆ ಹೋಗೋದು ತಡೆದು ನಮ್ಮನ್ನು ಕಳ್ಸು ಎಂದು ಕಾಂತಮ್ಮನಿಗೆ ಹೇಳುತ್ತಾನೆ. ಕಾಂತಮ್ಮ ಕೂಡ ಮಗನ ಆಸೆಗೆ ಇಲ್ಲ ಎನ್ನದೇ ಏನಾದ್ರೂ ಪ್ಲಾನ್ ಮಾಡಿ ಖ್ಯಾತೆ ತೆಗೆತೀನಿ ಅಂತಾಳೆ.

ಸುಬ್ಬು–ಶ್ರಾವಣಿ ಹನಿಮೂನ್‌ಗೆ ಹೋಗದಂತೆ ತಡಿಯೋಕೆ ಕಾಂತಮ್ಮನಿಂದ ಸಾಧ್ಯವಾಗುತ್ತಾ, ಸುಂದರ ಅಂದುಕೊಂಡಂತೆ ಅವನಿಗೆ ಹನಿಮೂನ್‌ಗೆ ಹೋಗೋಕೆ ಆಗುತ್ತಾ, ಸುಬ್ಬು ಕೈಯಿಂದ ಶ್ರಾವಣಿಗೆ ಕಾಲುಂಗರ ತೊಡಿಸ್ತಾರಾ ಪದ್ಮನಾಭ–ವಿಶಾಲು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

‌ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿ ಬಗ್ಗೆಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner