ಮ್ಯಾರೇಜ್‌ ಸರ್ಟಿಫಿಕೇಟ್‌ಗೆ ಸಹಿ ಹಾಕಲು ಒಪ್ತಿಲ್ಲ ಸುಬ್ಬು, ಮಗ–ಸೊಸೆ ಸಂಸಾರದ ಗುಟ್ಟು ವಿಶಾಲಾಕ್ಷಿ ಮುಂದೆ ರಟ್ಟು; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಮ್ಯಾರೇಜ್‌ ಸರ್ಟಿಫಿಕೇಟ್‌ಗೆ ಸಹಿ ಹಾಕಲು ಒಪ್ತಿಲ್ಲ ಸುಬ್ಬು, ಮಗ–ಸೊಸೆ ಸಂಸಾರದ ಗುಟ್ಟು ವಿಶಾಲಾಕ್ಷಿ ಮುಂದೆ ರಟ್ಟು; ಶ್ರಾವಣಿ ಸುಬ್ರಹ್ಮಣ್ಯ

ಮ್ಯಾರೇಜ್‌ ಸರ್ಟಿಫಿಕೇಟ್‌ಗೆ ಸಹಿ ಹಾಕಲು ಒಪ್ತಿಲ್ಲ ಸುಬ್ಬು, ಮಗ–ಸೊಸೆ ಸಂಸಾರದ ಗುಟ್ಟು ವಿಶಾಲಾಕ್ಷಿ ಮುಂದೆ ರಟ್ಟು; ಶ್ರಾವಣಿ ಸುಬ್ರಹ್ಮಣ್ಯ

ಸುಬ್ಬು–ಶ್ರಾವಣಿ, ವರಲಕ್ಷ್ಮೀ–ವರದ ಹನಿಮೂನ್‌ಗೆ ಹೋಗುವ ಜಾಗ ಪತ್ತೆ ಮಾಡಿದ್ಲು ಶ್ರೀವಲ್ಲಿ. ಮಗ–ಸೊಸೆಗೆ ಚಕ್ಕುಲಿ ನಿಪ್ಪಟ್ಟು ಮಾಡಿಕೊಟ್ಟ ವಿಶಾಲಾಕ್ಷಿಗೆ ಶ್ರಾವಣಿ ಜೊತೆ ಮಾತಾಡುವಾಸೆ. ಮ್ಯಾರೇಜ್‌ ಸರ್ಟಿಫಿಕೇಟ್‌ಗೆ ಸಹಿ ಮಾಡುವುದಿಲ್ಲ ಎಂದ ಸುಬ್ಬು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 14ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 14ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 14ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 14ರ ಸಂಚಿಕೆಯಲ್ಲಿ ಅಣ್ಣ–ಅತ್ತಿಗೆ ಕೋಣೆ ಹೊಕ್ಕುವ ಶ್ರೀವಲ್ಲಿ ಬ್ಯಾಗ್‌ನೆಲ್ಲಾ ತಡಕಾಡಿ ಕೊನೆಗೂ ಸುಬ್ಬು–ಶ್ರಾವಣಿ, ವರದ–ವರಲಕ್ಷ್ಮೀ ಹನಿಮೂನ್‌ಗೆ ಯಾವ ಜಾಗಕ್ಕೆ ಹೋಗ್ತಿದ್ದಾರೆ ಅಂತ ಪತ್ತೆ ಮಾಡೇಬಿಟ್ಲು ಶ್ರೀವಲ್ಲಿ. ಕೂಡಲೇ ಅದನ್ನು ವಿಜಯಾಂಬಿಕಾಗೆ ತಿಳಿಸುತ್ತಾಳೆ. ವಿಜಯಾಂಬಿಕಾ ಶ್ರೀವಲ್ಲಿಗೂ ಫ್ಲೈಟ್‌ ಟಿಕೆಟ್ ಸೇರಿ ಅಲ್ಲಿ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆ ಮಾಡ್ತೀನಿ ಅಂತ ಭರವಸೆ ನೀಡ್ತಾರೆ, ಮಾತ್ರವಲ್ಲ ಸುಬ್ಬು–ಶ್ರಾವಣಿ ನಡುವೆ ಏನೂ ಸರಿ ಇಲ್ಲ ಅನ್ನೋದನ್ನು ನೀನು ಸಾಬೀತುಪಡಿಸಿಕೊಂಡೇ ಬರಬೇಕು ಎಂದು ಶ್ರೀವಲ್ಲಿಗೆ ಖಡಾಖಂಡಿತವಾಗಿ ಹೇಳುತ್ತಾಳೆ. ಇತ್ತ ಮನೆಯಲ್ಲಿ ಫ್ರೆಂಡ್ ಮನೆಗೆ ಮಡಿಕೇರಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿಸಲು ಎಲ್ಲಾ ರೆಡಿ ಮಾಡಿಕೊಳ್ಳುತ್ತಾಳೆ ಶ್ರೀವಲ್ಲಿ. ವಿಜಯಾಂಬಿಕಾ ದಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಶ್ರೀವಲ್ಲಿಗೆ ತಾನು ಮಾಡುತ್ತಿರುವುದು ತಪ್ಪು ಎನ್ನುವುದರ ಅರಿವೂ ಇರುವುದಿಲ್ಲ. ಹೇಗಾದರೂ ಮಾಡಿ ಮಾಡಿ ಸುಬ್ಬುವನ್ನು ಪಡೆಯಬೇಕು ಎನ್ನುವ ಹುಚ್ಚು ಮಾತ್ರ ಶ್ರೀವಲ್ಲಿಯಲ್ಲಿರುತ್ತದೆ.

ಅಕ್ಕನ ಮನವೊಲಿಸಲು ಸರಸು ಪ್ರಯತ್ನ

ಚಿಂತೆ ಮಾಡುತ್ತಾ ಕುಳಿತ ಅಕ್ಕ ಇಂದ್ರಮ್ಮನ ಬಳಿ ಸರಸು ಅಕ್ಕ ಇದ್ಯಾಕೆ ನೀನು ಹೀಗೆ ಯೋಚನೆ ಮಾಡ್ತಾ ಕೂತಿದೀಯಾ, ನಿನ್ನ ಸೊಸೆ ಏನಾದ್ಲು ಹೇಳಿದ್ಲಾ ಎಂದು ಪ್ರಶ್ನೆ ಮಾಡ್ತಾಳೆ. ಅದಕ್ಕೆ ಇಂದ್ರಮ್ಮ ನನ್ನ ಸೊಸೆ, ನನ್ನ ಎದುರು ಉಸಿರು ಬಿಡೋಕು ಹೆದರ್ತಾಳೆ ಅಂತಾದ್ರಲ್ಲಿ ಅವಳು ನಂಗೇನು ಹೇಳೋಕೆ ಸಾಧ್ಯ ಅಂತ ಹೇಳ್ತಾಳೆ. ಆಗ ಸರಸು ಅಕ್ಕ ಅಂಥ ಸೊಸೆ ಸಿಗೋಕೆ ನೀನು ಪುಣ್ಯ ಮಾಡಿರಬೇಕು. ಈಗೆಲ್ಲಾ ಸೊಸೆಯರು ಅತ್ತೆ ಮೇಲೆ ಎಷ್ಟೆಲ್ಲಾ ದೂರು ಹೇಳ್ತಾರೆ. ಅಲ್ಲದೇ ಅತ್ತೆ–ಸೊಸೆ ವಿಚಾರಕ್ಕೆ ಬಂದಾಗ ಸಮಾಜ ಸೊಸೆಯ ಪರವಾಗಿಯೇ ಇರುತ್ತೆ, ಅತ್ತೆಯೇ ಸರಿಯಿಲ್ಲ ಅನ್ನೋ ಮಾತು ಬರುತ್ತೆ, ನಿಂಗೆ ಅದೆಲ್ಲಾ ಬೇಕಾ‘ ಎಂದು ಪ್ರಶ್ನೆ ಕೇಳ್ತಾಳೆ. ಆಗ ಇಂದ್ರಮ್ಮ ಅದೇನೋ ಕಣೆ, ನಂಗೆ ಅವರು ಹನಿಮೂನ್‌ ಹೋಗೋದು ಇಷ್ಟ ಇಲ್ಲ ಅಂತಾಳೆ. ಅವರು ಹನಿಮೂನ್‌ಗೆ ಹೋಗಿ ಮಕ್ಕಳು ಮರಿ ಅಂತಾ ಆದ್ರೆ ಅಂತ ಹೇಳ್ತಾಳೆ. ಅದಕ್ಕೆ ಸರಸು ಆದ್ರೆ ಏನಕ್ಕ ನೀನು ಅಜ್ಜಿ ಆಗ್ತಿಯಾ, ಖುಷಿ ವಿಚಾರ ಅಲ್ವಾ ಅಂತಾಳೆ. ಅದಕ್ಕೆ ಇಂದ್ರಮ್ಮ ತನಗೆ ಅಜ್ಜಿ ಆಗೋದು ಇಷ್ಟ ಇಲ್ಲ ಅನ್ನೋ ಥರ ಮಾತಾಡ್ತಾರೆ.

ವಿಶಾಲಾಕ್ಷಿ ಮುಂದೆ ಸುಬ್ಬು ಸಂಸಾರದ ಗುಟ್ಟು ರಟ್ಟು

ರಾತ್ರಿ ಮಲಗಿದಾಗ ವಿಶಾಲಾಕ್ಷಿಗೆ ತಾನು ಶ್ರಾವಣಿಗೆ ಕೊಟ್ಟ ಕಷ್ಟಗಳು, ಸದ್ಯ ಧನಲಕ್ಷ್ಮೀ ಹಾಗೂ ಕಾಂತಮ್ಮ ಅವಳಿಗೆ ಹೇಳುತ್ತಿರುವ ಮಾತುಗಳು ಎಲ್ಲವೂ ನೆನಪಾಗಿ ಅಳು ಬರುತ್ತದೆ. ರಾತ್ರಿ ಹೊತ್ತು ಅಳುತ್ತಾ ಕುಳಿತ ಹೆಂಡತಿ ಬಳಿ ಯಾಕೆ ಅಳ್ತಾ ಇದ್ದೀಯಾ ವಿಶಾಲು ಅಂತ ಪ್ರಶ್ನೆ ಮಾಡ್ತಾರೆ. ಅದಕ್ಕೆ ತಾನು ಸೊಸೆಗೆ ಎಷ್ಟೆಲ್ಲಾ ಕಷ್ಟಕೊಟ್ಟೆ, ಈಗ ಧನ ಹಾಗೂ ಕಾಂತಮ್ಮ ಕೂಡ ಶ್ರಾವಣಿ ಅಮ್ಮೋರಿಗೆ ಇಲ್ಲ ಸಲ್ಲದ್ದೆಲ್ಲಾ ಹೇಳಿ ಮನಸ್ಸಿಗೆ ನೋವು ಕೊಡ್ತಾ ಇದಾರೆ. ಇದಕ್ಕೆಲ್ಲ ಅಂತ್ಯ ಯಾವಾಗ ಎಂದು ಪ್ರಶ್ನೆ ಮಾಡ್ತಾರೆ. ಅದಕ್ಕೆ ಪದ್ಮನಾಭ ‘ವಿಶಾಲು ಇಷ್ಟಕ್ಕೆಲ್ಲಾ ನೀನೇ ಕಾರಣ. ನೀನು ಅವರ ಜೊತೆ ಚೆನ್ನಾಗಿ ಇದ್ದಿದ್ರೆ ಎಲ್ಲವೂ ಚೆನ್ನಾಗಿ ಇರ್ತಾ ಇತ್ತು. ಈಗಲೂ ಕಾಲ ಮಿಂಚಿಲ್ಲ. ನೀನು ಅವರನ್ನು ಮಾತನಾಡಿಸಲು, ಚೆನ್ನಾಗಿ ನೋಡಿಕೊಳ್ಳಲು ಆರಂಭಿಸಿದರೆ ಎಲ್ಲರೂ ಬದಲಾಗುತ್ತಾರೆ ಅಂತಾರೆ. ಆಗ ವಿಶಾಲಾಕ್ಷಿ ಹೌದು ನಾನಿನ್ನು ತಡ ಮಾಡಬಾರದು ಶ್ರಾವಣಿ ಅಮ್ಮೋರನ್ನ, ಅಲ್ಲಲ್ಲ ನನ್ನ ಸೊಸೆಯನ್ನು ಮಾತನಾಡಿಸಿ, ಅವರನ್ನು ನನ್ನ ಸೊಸೆ ಅಂತ ಒಪ್ಪಿಕೊಂಡು ಬಿಡಬೇಕು ಎಂದು ಸುಬ್ಬು ಕೋಣೆಯತ್ತ ಹೋಗುತ್ತಾರೆ.

‌ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸಹಿ ಹಾಕೊಲ್ಲ, ಕಡ್ಡಿ ಮುರಿದಂತೆ ಹೇಳಿದ ಸುಬ್ಬು

ಸುಬ್ಬು ಎದುರು ಮ್ಯಾರೇಜ್ ಸರ್ಟಿಫಿಕೇಟರ್ ಹಿಡಿದ ಶ್ರಾವಣಿ ಸಹಿ ಹಾಕುವಂತೆ ಹೇಳುತ್ತಾಳೆ. ಆದರೆ ನಾನು ಅದಕ್ಕೆ ಯಾವುದೇ ಕಾರಣಕ್ಕೂ ಸಹಿ ಹಾಕೊಲ್ಲ ಮೇಡಂ, ಹಾಗೆ ಹಾಕಿದ್ರೆ ನಾವು ಕಾನೂನು ಪ್ರಕಾರವಾಗಿ ಗಂಡ–ಹೆಂಡತಿ ಆಗ್ತೀವಿ. ನಾವು ಮದುವೆನೇ ಆಗಿಲ್ಲ. ಅಲ್ಲದೇ ಅದು ನನಗೆ ಇಷ್ಟನೂ ಇಲ್ಲ. ನೀವೇನೇ ಹೇಳಿದ್ರು ನಾನು ಸಹಿ ಹಾಕೊಲ್ಲ ಅಂತಾನೆ. ನೀನು ಸಹಿ ಹಾಕಿಲ್ಲ ಅಂದ್ರೆ ನಾನು ಮನೆಯವರಿಗೆ, ಅಜ್ಜಿಗೆ ಏನು ಅಂತ ಹೇಳ್ಲಿ ಸುಬ್ಬು ಅಂತ ಶ್ರಾವಣಿ ಕಣ್ಣೀರು ತುಂಬಿಕೊಳ್ಳುತ್ತಾಳೆ. ಆದರೆ ಆಗ ಸುಬ್ಬು ನೀವು ಏನಾದ್ರೂ ಹೇಳಿಕೊಳ್ಳಿ ಮೇಡಂ, ನನಗೂ ಅದಕ್ಕೂ ಸಂಬಂಧ ಇಲ್ಲ. ಆದರೆ ಈ ವಿಚಾರದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ನನ್ನ ಒತ್ತಾಯ ಮಾಡಬೇಡಿ ಎಂದು ಹೇಳಿ ಹೊದ್ದು ಮಲಗುತ್ತಾನೆ. ಸೊಸೆಯನ್ನು ಮಾತಾಡಿಸಬೇಕು ಎಂದುಕೊಂಡು ಖುಷಿಯಿಂದ ಬರುತ್ತಿದ್ದ ವಿಶಾಲಾಕ್ಷಿಗೆ ಇವರ ಜಗಳ ಕೇಳಿಸುತ್ತದೆ. ಅವಳಿಗೆ ಸುಬ್ಬು–ಶ್ರಾವಣಿ ಮುಂದೆ ಏನೂ ಸರಿ ಅನ್ನೋದು ಅರ್ಥ ಆಗುತ್ತೆ. ಅಲ್ಲದೇ ತಾನು ಶ್ರಾವಣಿಯನ್ನು ಪ್ರೀತಿಸಿಯೂ ಇಲ್ಲ, ಅವಳನ್ನು ಮದುವೆಯಾಗಿಯೂ ಇಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ಬು ಹೇಳಿದ್ದು ನೆನಪಾಗುತ್ತದೆ. ಆಗ ವಿಶಾಲಾಕ್ಷಿ ಹೇಗಾದ್ರೂ ಮಾಡಿ ಸುಬ್ಬು–ಶ್ರಾವಣಿಯನ್ನು ಒಂದು ಮಾಡಬೇಕು. ಅವರ ಸಂಸಾರ ಸರಿ ಮಾಡಬೇಕು ಅಂತ ಪಟ ತೊಡ್ತಾಳೆ.

ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸುಬ್ಬು ಸಹಿ ಹಾಕೋದೇ ಇಲ್ವಾ, ವಿಶಾಲಾಕ್ಷಿ ಅಂದುಕೊಂಡಂತೆ ಮಗ–ಸೊಸೆ ಸಂಸಾರ ಸರಿ ಮಾಡ್ತಾರಾ, ಸರಸು ಕಾರಣದಿಂದ ಸೊಸೆ ವಿಚಾರದಲ್ಲಿ ಬದಲಾಗ್ತಾರಾ ಇಂದ್ರಮ್ಮ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿ ಬಗ್ಗೆಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner