ಶ್ರಾವಣಿ ಸುಬ್ರಹ್ಮಣ್ಯ: ಮಗ–ಸೊಸೆಯನ್ನು ಹನಿಮೂನ್‌ಗೆ ಕಳಿಸೊಲ್ಲ ಅಂತ ಪಟ್ಟು ಹಿಡಿದ ಇಂದ್ರಮ್ಮ, ಮುಂದೇನು ಮಾಡ್ತಾಳೆ ಶ್ರಾವಣಿ
ವಿಶಾಲಾಕ್ಷ್ಮಿ ತಲೆ ಕೆಡಿಸಲು ನೋಡಿ ಪ್ಲಾಪ್ ಆದ ಕಾಂತಮ್ಮ–ಸುಂದರ. ಮಗ–ಸೊಸೆಯನ್ನು ಹನಿಮೂನ್‌ಗೆ ಕಳಸ್ಸೋದೆ ಇಲ್ಲ ಅಂತ ಹಟ ಹಿಡಿದ ಇಂದ್ರಮ್ಮ. ಶ್ರಾವಣಿ ಹೆಸರಲ್ಲಿರೋ ಆಸ್ತಿ ವಿಚಾರ ಕೇಳಿ ಪ್ಲೇಟ್ ಚೇಂಜ್ ಮಾಡಿದ್ಲು ಇಂದ್ರಮ್ಮನ ತಂಗಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 9ರ ಸಂಚಿಕೆಯ ವಿವರ.

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್ 8ರ ಸಂಚಿಕೆಯಲ್ಲಿ ವಿಶಾಲಾಕ್ಷಿ ತಲೆ ಕೆಡಿಸಿ ಅವಳ ಬಾಯಿಂದ ಸುಬ್ಬು–ಶ್ರಾವಣಿ ಹನಿಮೂನ್‌ಗೆ ಹೋಗದಂತೆ ತಡೆಯಬೇಕು ಎಂದುಕೊಂಡ ಕಾಂತಮ್ಮನ ಪ್ಲಾನ್ ಫ್ಲಾಪ್ ಆಗುತ್ತೆ. ಸೊಸೆಯನ್ನು ಮನಸಾರೆ ಒಪ್ಪಿಕೊಂಡಿರುವ ವಿಶಾಲಾಕ್ಷಿ ಮಗ–ಸೊಸೆ ಒಟ್ಟಾಗಿ ಹನಿಮೂನ್‌ಗೆ ಹೋಗಿ ಬರಲಿ ಎಂದು ಬಯಸುತ್ತಾರೆ. ಆದರೆ ಕಾಂತಮ್ಮ–ಸುಂದರನ ಎದುರು ಸುಬ್ಬು–ಶ್ರಾವಣಿ ಮೇಲೆ ಕೋಪ ಬಂದಂತೆ ನಟಿಸುತ್ತಾರೆ. ಕೋಪದಲ್ಲೇ ಯಾರು ಎಲ್ಲಿಗಾದ್ರೂ ಹೋಗ್ಲಿ ನಂಗೇನು ಅಂತ ಹೇಳ್ತಾರೆ.
ವರದ–ವರಲಕ್ಷ್ಮೀಯನ್ನು ಹನಿಮೂನ್‌ಗೆ ಕಳಿಸೋದೇ ಇಲ್ಲ ಎಂದು ಹಟ ಹಿಡಿದ ಇಂದ್ರಮ್ಮ
ವರದ ಬೆಳಗೆದ್ದು ಆಫೀಸ್‌ಗೆ ಹೊರಟಾಗ ತಿಂಡಿ ಬಾಕ್ಸ್ ಹಿಡಿದು ಬರುತ್ತಾಳೆ ವರಲಕ್ಷ್ಮೀ. ಅಷ್ಟೊತ್ತಿಗೆ ಸುಬ್ಬು ಹಾಗೂ ಶ್ರಾವಣಿ ವರದನ ಮನೆಗೆ ಬರುತ್ತಾರೆ. ಅವರನ್ನು ನೋಡಿ ವರದ ಅಮ್ಮನನ್ನು ಕರೆಯುತ್ತಾನೆ. ಸುಬ್ಬು–ಶ್ರಾವಣಿಯನ್ನು ನೋಡಿ ದರ್ಪದಲ್ಲಿ ಏನು ಎಂದು ಕೇಳುವ ಇಂದ್ರಮ್ಮನ ಬಳಿ ಯಜಮಾನ್ರರು ಹನಿಮೂನ್‌ಗೆ ಎಂದು ಹೇಳಲು ಶುರು ಮಾಡುತ್ತಾನೆ ಸುಬ್ಬು. ಅವರ ಮಾತನ್ನು ಅರ್ಧಕ್ಕೆ ತಡೆಯುವ ಶ್ರಾವಣಿ ‘ಯಜಮಾನ್ರರು ಅಲ್ಲಾ ಮಾವ ಅಂತ ಹೇಳಿ‘ ಎನ್ನುತ್ತಾಳೆ. ಸುಬ್ಬುಗೆ ಮಾತನಾಡಲು ಬಿಡದೇ ತಾನೇ ಇಂದ್ರಮ್ಮನ ಬಳಿ ‘ಅಜ್ಜಿ ನಂಗೂ ಸುಬ್ಬಗೂ,ವರದ ಹಾಗೂ ವರಲಕ್ಷ್ಮೀಗೂ ಹನಿಮೂನ್ ಟಿಕೆಟ್ ಬುಕ್ ಮಾಡಿದ್ದಾರೆ. ನಾಳೆನೇ ಹೊರಡಬೇಕು. ಅಪ್ಪ ಕೂಡ ಇದಕ್ಕೆ ಒಪ್ಪಿದ್ದಾರೆ. ಅದಕ್ಕೆ ವರದ–ವರಲಕ್ಷ್ಮೀ ಹನಿಮೂನ್‌ಗೆ ಬರುವ ವಿಚಾರವಾಗಿ ನಿಮ್ಮ ಬಳಿ ಮಾತನಾಡಿಕೊಂಡು, ಪರ್ಮಿಷನ್ ಕೇಳಿ ಹೋಗಲು ಬಂದಿದ್ದೇವೆ‘ ಎಂದು ಹೇಳುತ್ತಾಳೆ. ಶ್ರಾವಣಿ ಮಾತು ಕೇಳಿ ಕೋಪ ಮಾಡಿಕೊಳ್ಳುವ ಇಂದ್ರಮ್ಮ ‘ಎಲ್ಲವೂ ನೀವು ನಿರ್ಧಾರ ಮಾಡಿ ಕೊನೆಯಲ್ಲಿ ನಮ್ಮ ಒಪ್ಪಿಗೆ ಪಡೆಯಲು ಬಂದಿದ್ದೀರಾ. ನಾನು ನನ್ನ ಮಗನನ್ನು ಎಲ್ಲಿಗೂ ಕಳುಹಿಸುವುದಿಲ್ಲ. ಮದುವೆಯಾಗಿ ಈ ಮನೆಗೆ ಬಂದ ಮೇಲೆ ವರಲಕ್ಷ್ಮೀ ಈ ಮನೆಯ ಸ್ವತ್ತು. ಅವಳನ್ನು ಕೂಡ ನಾನು ಎಲ್ಲಿಗೂ ಕಳುಹಿಸುವುದಿಲ್ಲ‘ ಎಂದು ಕೋಪದಲ್ಲಿ ಹೇಳುತ್ತಾಳೆ. ಸುಬ್ಬು ಇಂದ್ರಮ್ಮನ ಮನವೊಲಿಸಲು ನೋಡುತ್ತಾನೆ. ಆದರೆ ಇಂದ್ರಮ್ಮ ಸುತಾರಂ ಒಪ್ಪುವುದಿಲ್ಲ. ಆಗ ಶ್ರಾವಣಿ ‘ಹನಿಮೂನ್ ಹೋಗ್ತಾ ಇರೋದು ವರಲಕ್ಷ್ಮೀ ಹಾಗೂ ವರದ. ವರದಂಗೆ ಆಲ್‌ರೆಡಿ ಈ ವಿಚಾರ ಗೊತ್ತಿದೆ. ವರಲಕ್ಷ್ಮೀ ಬಳಿ ಮಾತನಾಡಿ ಅವಳು ಒಕೆ ಅಂದ್ರೆ ಸರಿ, ಅವಳಿಗೆ ಇಷ್ಟ ಅಲ್ಲ ಬರೋಲ್ಲ ಅಂದ್ರೆ ನಾನೇನು ಒತ್ತಾಯ ಮಾಡೊಲ್ಲ, ನಾನು ವರಳ ಜೊತೆ ಮಾತನಾಡಬೇಕು‘ ಎಂದು ವರಳನ್ನು ಹುಡುಕಿ ಹೋಗುತ್ತಾಳೆ.
ಶ್ರೀವಲ್ಲಿ–ವಿಜಯಾಂಬಿಕಾ ಮಾತನಾಡುತ್ತಿರುವ ಕೋಣೆಗೆ ಬಂದ ಶ್ರಾವಣಿ
ಶ್ರಾವಣಿ–ಸುಬ್ಬು ತಮ್ಮ ಮನೆಗೆ ಬಂದಿದ್ದೇ ತಡ ಅವರು ಬಂದಿರುವ ವಿಚಾರವನ್ನು ಹೇಳಲು ವಿಜಯಾಂಬಿಕಾಗೆ ಹೇಳಲು ಕಾಲ್ ಮಾಡುತ್ತಾಳೆ ಶ್ರೀವಲ್ಲಿ. ಆಗ ವಿಜಯಾಂಬಿಕಾ ಶ್ರೀವಲ್ಲಿ ಕೂಡ ಅವರ ಜೊತೆ ಹನಿಮೂನ್‌ಗೆ ಹೋಗಿ ಸುಬ್ಬು ಹಾಗೂ ಶ್ರಾವಣಿ ನಡುವೆ ಏನೂ ಇಲ್ಲ ಎಂಬುದನ್ನು ಪ್ರೂವ್ ಮಾಡಬೇಕು ಎಂದು ಹೇಳಿ ಶ್ರೀವಲ್ಲಿ ತಲೆ ಕೆಡಿಸುತ್ತಾಳೆ. ಶ್ರೀವಲ್ಲಿಗೆ ಸುಬ್ಬು–ಶ್ರಾವಣಿ ಹನಿಮೂನ್‌ಗೆ ಹೋಗೋದು ಇಷ್ಟ ಇಲ್ಲ ಅಂದ್ರು ವಿಜಯಾಂಬಿಕಾ ಪ್ಲಾನ್‌ನಂತೆ ಅವರ ಮಧ್ಯೆ ಏನೂ ಇಲ್ಲ ಎಂಬುದನ್ನು ಪ್ರೂವ್ ಮಾಡಬಹುದು ಎಂಬ ಆಸೆಯಿಂದ ವಿಜಯಾಂಬಿಕಾ ಹೇಳಿದ್ದಕ್ಕೆ ಒಪ್ಪಿಕೊಳ್ಳುತ್ತಾಳೆ. ಹೀಗೆ ಮಾತನಾಡುತ್ತಿರುವಾಗಲೇ ಮಧ್ಯದಲ್ಲಿ ಶ್ರೀವಲ್ಲಿ ಕೋಣೆಗೆ ಬರುವ ಶ್ರಾವಣಿ ಶ್ರೀವಲ್ಲಿ ಎಂದು ಕರೆಯುತ್ತಾಳೆ. ಆಗ ಶ್ರೀವಲ್ಲಿ ಆ ಕಡೆಯಿಂದ ವಿಜಯಾಂಬಿಕಾ ಇಬ್ಬರೂ ಗಾಬರಿಯಾಗುತ್ತಾರೆ. ಎಲ್ಲಿ ಶ್ರಾವಣಿ ತಮ್ಮ ಮಾತನ್ನು ಕೇಳಿಸಿಕೊಂಡಿದ್ದಾಳೋ ಎಂದು ಗಾಬರಿಯಾಗುತ್ತಾರೆ. ಆದರೆ ಕೊನೆಗೆ ಶ್ರಾವಣಿ ವರಲಕ್ಷ್ಮೀಯನ್ನು ಹುಡುಕಿಕೊಂಡು ಬಂದಿದ್ದು, ಅವಳು ತಮ್ಮ ಮಾತನ್ನು ಕೇಳಿಸಿಕೊಂಡಿಲ್ಲ ಅನ್ನೋದು ಗೊತ್ತಾಗಿ ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾರೆ.
ಶ್ರಾವಣಿ ಹೋದ ಬೆನ್ನಲ್ಲೇ ಶ್ರೀವಲ್ಲಿಯನ್ನು ಹುಡುಕಿ ಅವಳ ಕೋಣೆಗೆ ಬರುತ್ತಾಳೆ ಚಿಕ್ಕಮ್ಮ. ಶ್ರೀವಲ್ಲಿಗೆ ನೀನ್ಯಾಕೆ ಇಲ್ಲಿದ್ದೀಯಾ, ಅವರು ಬಂದಿದ್ದಾರೆ ಅಂತ ನೀನು ಕೋಣೆ ಸೇರಿದ್ಯಾ ಅಂತೆಲ್ಲಾ ಕೇಳ್ತಾಳೆ. ಆಗ ಶ್ರೀವಲ್ಲಿ ನಾನ್ಯಾಕೆ ಅವರಿಗೆ ಹೆದರಲಿ. ಇದು ನನ್ನ ಮನೆ, ನಾನು ಯಾರಿಗೂ ಹೆದರೊಲ್ಲ. ಆದರೂ ಇತ್ತೀಚೆಗೆ ಆ ಶ್ರಾವಣಿ ತುಂಬಾ ಆಡ್ತಿದ್ದಾಳೆ. 300–400 ಕೋಟಿ ಆಸ್ತಿ ತನ್ನ ಹೆಸರಿಗೆ ಬರ್ತಿದೆ ಅಂತ ಕೊಬ್ಬು ಅವಳಿಗೆ ಅಂತಾಳೆ. ಅದನ್ನ ಕೇಳಿ ಶ್ರೀವಲ್ಲಿ ಚಿಕ್ಕಮ್ಮ ಶಾಕ್ ಆಗುತ್ತಾಳೆ. ಶ್ರೀವಲ್ಲಿಯಿಂದ ಎಲ್ಲಾ ವಿಚಾರ ತಿಳಿದುಕೊಂಡ ಆಕೆ ಶ್ರಾವಣಿ ಹತ್ತಿರ ಹೋಗಿ ಸಾಫ್ಟ್ ಆಗಿ ಮಾತನಾಡುತ್ತಾಳೆ. ಮಾತ್ರವಲ್ಲ ಹನಿಮೂನ್‌ಗೆ ವರದ–ವರಲಕ್ಷ್ಮೀಯನ್ನು ಕಳಿಸೊಲ್ಲ ಅಂತ ಕೂತ ಅಕ್ಕನನ್ನು ತರಾಟೆ ತೆಗೆದುಕೊಂಡು ಅವರು ಈಗಿನ ಕಾಲದವರು ಹೋಗಿ ಬರ್ಲಿ ಎಂದು ತಲೆ ತಿರುಗಿಸಲು ನೋಡುತ್ತಾಳೆ.
ಶ್ರಾವಣಿ ಹೆಸರಿಗೆ ಆಸ್ತಿ ಬಂದಿರುವ ವಿಚಾರ ಅಕ್ಕನಿಗೆ ತಿಳಿಸಿ, ಅಕ್ಕ ಮನವೊಲಿಸಿ ವರದ–ವರಲಕ್ಷ್ಮೀ ಹನಿಮೂನ್‌ಗೆ ಹೋಗುವಂತೆ ಮಾಡ್ತಾಳಾ ಇಂದ್ರಮ್ಮನ ತಂಗಿ, ವಿಜಯಾಂಬಿಕಾ ಹಾಗೂ ಶ್ರೀವಲ್ಲಿ ಪ್ಲಾನ್‌ನಂತೆ ಹನಿಮೂನ್‌ನಲ್ಲಿ ಹೊರ ಬರುತ್ತಾ ಸುಬ್ಬು–ಶ್ರಾವಣಿ ಗುಟ್ಟು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿ ಬಗ್ಗೆಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
