ಅತ್ತೆಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡ ಶ್ರಾವಣಿ, ಅಮ್ಮನೆದುರು ಸುಳ್ಳು ಹೇಳಿದ್ದ ಶ್ರೀವಲ್ಲಿಗೆ ಸಂಕಷ್ಟ; ಶ್ರಾವಣಿ ಸುಬ್ರಹ್ಮಣ್ಯ
ಅತ್ತೆಗಾಗಿ ಹನಿಮೂನ್‌ಗೆ ಹೋಗುವುದನ್ನು ಕ್ಯಾನ್ಸಲ್ ಮಾಡಿಕೊಂಡ ಶ್ರಾವಣಿ. ನಾವು ಕೂಡ ಹೋಗೊಲ್ಲ ಅಂದ್ರು ವರದ–ವರಲಕ್ಷ್ಮೀ. ಸುಳ್ಳು ಹೇಳಿದ ಶ್ರೀವಲ್ಲಿಗೆ ಎದುರಾಯ್ತು ಸಂಕಷ್ಟ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 16ರ ಸಂಚಿಕೆಯ ವಿವರ.

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್ 16ರ ಸಂಚಿಕೆಯಲ್ಲಿ ಅತ್ತೆಗೆ ಹುಷಾರಿಲ್ಲದ ಕಾರಣ ಹನಿಮೂನ್‌ಗೆ ಹೋಗೋದಿಲ್ಲ ಎಂದು ನಿರ್ಧಾರ ಮಾಡಿದ್ಲು ಶ್ರಾವಣಿ. ಸುಬ್ಬು ‘ಮೇಡಂ, ಲಲಿತಾದೇವಿ ಅಮ್ಮೋರಿಗೆ ಏನು ಹೇಳೋದು‘ ಅಂತ ಆತಂಕ ವ್ಯಕ್ತಪಡಿಸಿದ್ರೂ ‘ಸುಬ್ಬು ಅಜ್ಜಿಗೆ ನಾನು ಹೇಳ್ತೀನಿ. ನೀನು ತಲೆ ಕೆಡಿಸಿಕೊಳ್ಳಬೇಡ. ಅತ್ತೆಗೆ ಇಷ್ಟೊಂದು ಹುಷಾರಿಲ್ಲದೇ ಇರುವಾಗ ನಾವು ಹನಿಮೂನ್‌ಗೆ ಹೋಗೋದು ಬೇಕಾ, ನೀನು ಹೋಗಿ ಡಾಕ್ಟರ್ ಕರೆದುಕೊಂಡು ಬಾ‘ ಎಂದು ಗಂಡನಿಗೆ ಅಭಯ ನೀಡುತ್ತಾಳೆ.
ಜ್ವರದ ನಡುವೆಯೂ ತನ್ನಿಂದ ಹನಿಮೂನ್ ಕ್ಯಾನ್ಸಲ್ ಆಗೋದು ಬೇಡ ಎಂದುಕೊಳ್ಳುವ ವಿಶಾಲಾಕ್ಷಿ, ನಾನು ಆರಾಮಾಗ್ತೀನಿ ನೀವು ಹೋಗಿ ಬನ್ನಿ ಎಂದು ಹೇಳುತ್ತಾಳೆ. ಪದ್ಮನಾಭ ಕೂಡ ಅವಳಿಗೆ ಧ್ವನಿಗೂಡಿಸಿ, ಹೌದು ಶ್ರಾವಣಿಯಮ್ಮ, ಹೋಗಿ ಬನ್ನಿ ಇಲ್ಲಿ ನಾನು ವಿಶಾಲುವನ್ನು ನೋಡಿಕೊಳ್ತೀನಿ ಎಂದು ಹೇಳುತ್ತಾರೆ. ಆದರೆ ಅದಕ್ಕೂ ಶ್ರಾವಣಿ ಒಪ್ಪುವುದಿಲ್ಲ. ತಾನೇ ಮುಂದೆ ನಿಂತು ಅತ್ತೆಯನ್ನು ನೋಡಿಕೊಳ್ಳುತ್ತೇನೆ ಎಂದು ನಿರ್ಧಾರ ಮಾಡುತ್ತಾಳೆ.
ಸುಬ್ಬು–ಶ್ರಾವಣಿ ಇಲ್ಲದೇ ತಾವು ಹೋಗಲ್ಲ ಎಂದ ವರದ–ವರಲಕ್ಷ್ಮೀ
ಅತ್ತೆಯ ಸೇವೆಗೆ ನಿಂತ ಶ್ರಾವಣಿ ಗಂಜಿ ಮಾಡಿಕೊಂಡು ಬಂದು ತಲೆಗೆ ತಣ್ಣೀರ ಪಟ್ಟಿ ಹಾಕುತ್ತಿರುತ್ತಾಳೆ. ಅಷ್ಟೊತ್ತಿಗೆ ಅವಳಿಗೆ ವರದ–ವರಲಕ್ಷ್ಮೀಗೆ ಹನಿಮೂನ್‌ಗೆ ನಾನು–ಸುಬ್ಬು ಬರ್ತಿಲ್ಲ ಅಂತ ಹೇಳೋದೆ ಮರೆತೆ ಅನ್ನೋದು ನೆನಪಾಗುತ್ತೆ. ಕೂಡಲೇ ವರದನಿಗೆ ಕಾಲ್ ಮಾಡಿ ಕ್ಷಮೆ ಕೇಳುವ ಶ್ರಾವಣಿ ಒಂದು ಮುಖ್ಯವಾದ ಕೆಲಸ ಬಂದಿರುವ ಕಾರಣ ನಾನು–ಸುಬ್ಬು ಹನಿಮೂನ್‌ಗೆ ಬರೋಕೆ ಆಗೊಲ್ಲ, ನೀವಿಬ್ಬರೂ ಹೋಗಿ ಬನ್ನಿ, ಅಲ್ಲಿ ಎಲ್ಲ ವ್ಯವಸ್ಥೆಯಾಗಿದೆ ಎಂದು ಹೇಳುತ್ತಾಳೆ. ಆದರೆ ವರದ ಶ್ರಾವಣಿ ಬಳಿ ‘ಅಲ್ಲಾ ಶ್ರಾವಣಿಯವರೇ ನೀವು ಬರದೆ ನಾವು ಮಾತ್ರ ಹೋಗೋದು ಹೇಗೆ ಸರಿಯಾಗುತ್ತಾನೆ ಎನ್ನುತ್ತಾನೆ. ಆಗ ಫೋನ್ ತೆಗೆದುಕೊಂಡು ಮಾತನಾಡುವ ವರಲಕ್ಷ್ಮೀ ಅತ್ತಿಗೆ ನಾನು ನೀನು ಅಣ್ಣ ಹಾಗೂ ವರದ ಎಲ್ಲರೂ ಒಟ್ಟಿಗೆ ಹೋಗೋಣ ಅಂತ ನಿರ್ಧಾರ ಮಾಡಿದ್ವಿ, ಈಗ ಅನಿವಾರ್ಯ ಕಾರಣ ಇರೋದ್ರಿಂದ ನೀವು ಬರ್ತಾ ಇಲ್ಲ ಅಂದ್ರೆ ನಾವು ಹೋಗೋದಿಲ್ಲ. ಮುಂದಿನ ಸಲ ಎಲ್ಲರೂ ಒಟ್ಟಾಗಿಯೇ ಹೋಗೋಣ ಅಂತ ಹೇಳ್ತಾಳೆ. ಆದ್ರೆ ಶ್ರಾವಣಿಗೆ ಅವರಿಗೆ ಹನಿಮೂನ್‌ಗೆ ಹೋಗುವಂತೆ ಒತ್ತಾಯಿಸುತ್ತಾಳೆ. ಆದರೂ ಅವರು ತಾವು ಕೂಡ ಹೋಗುವುದಿಲ್ಲ ಎಂದು ನಿರ್ಧಾರ ಮಾಡುತ್ತಾರೆ. ಅವರ ಬಳಿ ಸಾರಿ ಕೇಳಿ ಅತ್ತೆಯ ಸೇವೆಯಲ್ಲಿ ನಿರತಳಾಗುತ್ತಾಳೆ ಶ್ರಾವಣಿ.
ಮನೆಯಲ್ಲಿ ಸುಳ್ಳು ಹೇಳಿದ ಶ್ರೀವಲ್ಲಿಗೆ ಧರ್ಮಸಂಕಟ
ಸುಬ್ಬು–ಶ್ರಾವಣಿ ಹನಿಮೂನ್‌ಗೆ ಹೋಗುವ ಜಾಗಕ್ಕೆ ಶ್ರೀವಲ್ಲಿ ಕೂಡ ಹೋಗಲು ಎಲ್ಲಾ ವ್ಯವಸ್ಥೆ ಆಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ಅವರು ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡಿರುವ ವಿಚಾರ ಶ್ರೀವಲ್ಲಿಗೆ ತಿಳಿಯುತ್ತದೆ. ಅದನ್ನ ಕೇಳಿ ಅವಳಿಗೆ ಶಾಕ್ ಆಗುತ್ತದೆ. ಆದರೆ ಯಾವ ಕಾರಣಕ್ಕೆ ಅವರು ಹನಿಮೂನ್ ಕ್ಯಾನ್ಸಲ್ ಮಾಡ್ಕೊಂಡ್ರು ಅನ್ನೋದು ಅರಿವಾಗೋದಿಲ್ಲ. ಸುಬ್ಬು–ಶ್ರಾವಣಿ ಹನಿಮೂನ್‌ಗೆ ಹೋಗಿಲ್ಲ ಅಂದ್ರೆ ಅವರ ನಡುವೆ ಏನೂ ಇಲ್ಲ ಅನ್ನೋದು ಸಾಬೀತಾಗಲ್ಲ ಅಂತ ಶ್ರೀವಲ್ಲಿಗೆ ಸಂಕಟವಾಗುತ್ತದೆ. ಅದನ್ನು ವಿಜಯಾಂಬಿಕಾಗೂ ಕಾಲ್ ಮಾಡಿ ಹೇಳ್ತಾಳೆ. ಸುಬ್ಬು–ಶ್ರಾವಣಿ ಇದ್ದಕ್ಕಿದ್ದ ಹಾಗೆ ಹನಿಮೂನ್‌ಗೆ ಹೋಗ್ತಿಲ್ಲ ಅನ್ನೋ ವಿಚಾರ ಕೇಳಿ ವಿಜಯಾಂಬಿಕಾ ತಲೆ ಕೆಡುತ್ತೆ. ಅವಳಿಗೂ ಯಾವ ಕಾರಣಕ್ಕೆ ಹೋಗ್ತಿಲ್ಲ ಅನ್ನೋದು ಅರ್ಥ ಆಗೊಲ್ಲ. ಇತ್ತ ಮಡಿಕೇರಿಗೆ ಸ್ನೇಹಿತೆಯ ಮದುವೆ ಹೋಗ್ತೀನಿ ಎಂದು ಮನೆಯಲ್ಲಿ ಸುಳ್ಳು ಹೇಳಿದ್ದ ಶ್ರೀವಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾಳೆ. ಹೊರಡೊಲ್ವಾ ಎಂದು ಕೇಳಲು ಬಂದ ಅಮ್ಮ ಬಳಿ ಒಬ್ಬಳೇ ಹೋಗಲು ಬೇಸರ ಎನ್ನುತ್ತಾಳೆ. ಅಷ್ಟಕ್ಕೆ ಇಂದ್ರಮ್ಮ, ಅದಾಕ್ಯಾಕೆ ಬೇಸರ, ನಿನ್ನ ಜೊತೆ ನಾನು ಬರ್ತೀನಿ. ಇಬ್ರೂ ಜಾಲಿ ಎರಡು ದಿನ ಸುತ್ತಾಡಿಕೊಂಡು ಬರೋಣ ಅಂತಾಳೆ. ಅಮ್ಮನ ಮಾತು ಕೇಳಿ ಶ್ರೀವಲ್ಲಿ ತಬ್ಬಿಬಾಗಿ ನಿಲ್ತಾಳೆ.
ಜೊತೆಗೆ ಬರುತ್ತೇನೆ ಎಂದ ಅಮ್ಮನಿಗೆ ಏನು ಹೇಳಿ ತಪ್ಪಿಸಿಕೊಳ್ತಾಳೆ ಶ್ರೀವಲ್ಲಿ, ಸುಬ್ಬು–ಶ್ರಾವಣಿ ಯಾವ ಕಾರಣಕ್ಕೆ ಹನಿಮೂನ್‌ಗೆ ಹೋಗ್ತಿಲ್ಲ ಅನ್ನೋದನ್ನು ಹೇಗೆ ಕಂಡುಹಿಡಿತಾಳೆ ವಿಜಯಾಂಬಿಕಾ, ಸೊಸೆಯನ್ನು ಮಾತನಾಡಿಸಿ ಕ್ಷಮೆ ಕೇಳ್ತಾರಾ ವಿಶಾಲಾಕ್ಷಿ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿ ಬಗ್ಗೆಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ


