ಶ್ರೀವಲ್ಲಿ ಬಳಿ ನನ್ನನ್ನು ಅತ್ತೆ ಅಂತ ಕರಿಬೇಡ ಎಂದ ವಿಶಾಲಾಕ್ಷಿ, ಲಲಿತಾದೇವಿಗೆ ಮೊಮ್ಮಗಳ ಸಂಸಾರದ ಚಿಂತೆ; ಶ್ರಾವಣಿ ಸುಬ್ರಹ್ಮಣ್ಯ
ಶ್ರಾವಣಿ ಆರೈಕೆಯಿಂದ ಬೇಗನೆ ಸುಧಾರಿಸಿಕೊಂಡ ವಿಶಾಲಾಕ್ಷಿ. ಶ್ರೀವಲ್ಲಿ ಬಳಿ ತನ್ನನ್ನು ಇನ್ನು ಮುಂದೆ ಅತ್ತೆ ಅಂತ ಕರಿಬೇಡ ಎಂದ ವಿಶಾಲು. ಲಲಿತಾದೇವಿಗೆ ಮೊಮ್ಮಗಳ ಸಂಸಾರ ಸರಿ ಮಾಡುವ ಚಿಂತೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 18ರ ಸಂಚಿಕೆಯ ವಿವರ.

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್ 18ರ ಸಂಚಿಕೆಯಲ್ಲಿ ಮುನಿಸೆಲ್ಲಾ ಮರೆತು ಒಂದಾದ ಅತ್ತೆ–ಸೊಸೆ ಉಭಯಕುಶಲೋಪರಿ ಮಾತನಾಡುತ್ತಿರುವಾಗ ಡಾಕ್ಟರ್ ಕರೆದುಕೊಂಡು ಬರಲು ಹೋಗಿದ್ದ ಸುಬ್ಬು ಮನೆಗೆ ಬರ್ತಾನೆ. ಆದರೆ ತಾವಿಬ್ಬರೂ ಒಂದಾಗಿರೋದು ಈಗಲೇ ಸುಬ್ಬುಗೆ ಗೊತ್ತಾಗೋದು ಬೇಡ ಅಂತ ವಿಶಾಲಾಕ್ಷಿ ಸೊಸೆಯ ಬಳಿ ಹೇಳುತ್ತಾರೆ. ಅಂತೆಯೇ ಅವರು ಸುಬ್ಬು ಎದುರು ನಾಟಕ ಮಾಡುತ್ತಾರೆ. ತಾಯಿ ಮಾತು ಶ್ರಾವಣಿ ಮೇಡಂಗೆ ಬೇಸರ ತರಿಸುತ್ತಿದೆ ಎಂದು ಸುಬ್ಬು ಮನದಲ್ಲೇ ಮರುಕ ಪಡುತ್ತಾನೆ. ಡಾಕ್ಟರ್ ಬಂದಾಗ ಎಲ್ಲರನ್ನೂ ಹೊರ ಹೋಗಲು ಹೇಳುತ್ತಾರೆ. ಆದರೆ ಶ್ರಾವಣಿ ತಾನು ಅತ್ತೆಯ ಬಳಿಯೇ ಇರುತೇನೆ ಎಂದು ಹಟ ಮಾಡಿ ಅಲ್ಲಿಯೇ ಇರುತ್ತಾಳೆ.
ವಿಶಾಲು ಮನವೊಲಿಸಿಕೊಳ್ಳುವ ನೆಪದಲ್ಲಿ ಸುಬ್ಬು ಮನೆಗೆ ಬರುವ ಶ್ರೀವಲ್ಲಿ
ವಿಶಾಲಾಕ್ಷಿ ಮನ ಒಲಿಸಿಕೊಂಡರೆ ತಾನು ಈ ಮನೆಗೆ ಬರುವುದು ಸುಲಭ ಎಂದು ಪ್ಲಾನ್ ಮಾಡುವ ಶ್ರೀವಲ್ಲಿ ಜ್ವರ ಬಂದ ಅವಳ ಸೇವೆ ಮಾಡುವ ನೆಪದಲ್ಲಿ ಸುಬ್ಬು ಮನೆಗೆ ಬರುತ್ತಾಳೆ. ಮನೆಯೊಳಗೆ ಬಂದ ಅವಳು ಕೋಣೆಯ ಬಾಗಿಲ ಬಳಿ ನಿಂತಿದ್ದ ಸುಬ್ಬು ಬಳಿ ‘ಸುಬ್ಬು ಅತ್ತೆ ಈಗ ಹೇಗಿದಾರೆ, ನಾನು ಇದ್ದಿದ್ರೆ ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾ ಇದ್ದೆ, ಅವರಿಗೆ ಏನೂ ಆಗೋಕೆ ಬಿಡ್ತಾ ಇರ್ಲಿಲ್ಲ‘ ಅಂತೆಲ್ಲಾ ಹೇಳ್ತಾಳೆ. ಅಲ್ಲದೇ ತಾನು ಕೋಣೆಯೊಳಗೆ ಹೋಗ್ತೀನಿ ಎಂದು ಹೊರಡಲು ಸಿದ್ಧಳಾಗುತ್ತಾಳೆ. ಆಗ ಸುಬ್ಬು ‘ಬೇಡ ಶ್ರೀವಲ್ಲಿ, ಡಾಕ್ಟರ್ ಯಾರೂ ಬರಬೇಡಿ ಅಂದಿದ್ದಾರೆ, ಅದು ಅಲ್ಲದೇ ಶ್ರಾವಣಿ ಮೇಡಂ ಒಳಗಡೆ ಇದಾರೆ ಬಿಡು‘ ಅಂತಾನೆ. ಆಗ ಶ್ರೀವಲ್ಲಿ ‘ನೀನು ಶ್ರಾವಣಿ ನಿಜವಾಗ್ಲೂ ಮದುವೆ ಆಗಿದೀರಾ ಅಥವಾ ಮದುವೆ ಆದವರ ಥರ ಇದೀರಾ. ನೀವು ಮದುವೆ ಆದ ಮೇಲೆ ಅವರನ್ನು ಮೇಡಂ ಅಂತ ಕರಿಯೋದು ಯಾಕೆ‘ ಅಂತ ಪ್ರಶ್ನೆ ಮಾಡ್ತಾಳೆ. ಸುಬ್ಬುಗೆ ಏನು ಉತ್ತರ ಕೊಡಬೇಕು ಅಂತ ತಡಕಾಡುತ್ತಾನೆ. ಅಷ್ಟೊತ್ತಿಗೆ ಕೋಣೆ ಬಾಗಿಲು ತೆರೆದು ಡಾಕ್ಟರ್ ಹೊರಬರುತ್ತಾರೆ.
ಶ್ರಾವಣಿಯನ್ನು ಹೊಗಳುವ ಡಾಕ್ಟರ್
ಡಾಕ್ಟರ್ ಹೊರ ಬರುವ ಹೊತ್ತಿಗೆ ಸರಿಯಾಗಿ ದೇವಸ್ಥಾನಕ್ಕೆ ಹೋದವರು ಬರುತ್ತಾರೆ. ಇಂದ್ರಮ್ಮ ಹಾಗೂ ಸುಂದರ ತಾವಿಬ್ಬರೂ ವಿಶಾಲಾಕ್ಷಿ ಬೇಗ ಹುಷಾರಾಗ್ಲಿ ಅಂತ ಬೇಡಿಕೊಳ್ಳೊಕೇ ದೇವಸ್ಥಾನಕ್ಕೆ ಹೋಗಿದ್ದು ಅನ್ನೋ ಥರ ನಾಟಕ ಮಾಡುತ್ತಾರೆ. ಇತ್ತ ಶ್ರೀವಲ್ಲಿ ಕೂಡ ನಾನು ಅತ್ತೆಯನ್ನು ನೋಡಿಕೊಳ್ತೇನೆ, ಅವರ ಪಾದ ನೆಲಕ್ಕೆ ಸೋಕಲು ಬಿಡೊಲ್ಲ ಅಂತೆಲ್ಲಾ ಹೇಳ್ತಾಳೆ. ಆಗ ಡಾಕ್ಟರ್ ನೀವೆಲ್ಲಾ ಏನೂ ಮಾಡೋದು ಬೇಡ. ಶ್ರಾವಣಿ ಆಗಾಗ ಅವರ ಹಣೆ ಮೇಲೆ ತಣ್ಣೀರು ಬಟ್ಟೆ ಇಟ್ಟು, ಆರೈಕೆ ಮಾಡಿ ನನ್ನ ಕೆಲಸ ಅರ್ಧ ಕಡಿಮೆ ಮಾಡಿದ್ದಾಳೆ. ನೀವೆಲ್ಲರೂ ನನಗಲ್ಲ ಥ್ಯಾಂಕ್ಸ್ ಹೇಳಬೇಕಾಗಿದ್ದು, ಶ್ರಾವಣಿಗೆ ಎಂದು ಹೇಳಿ ಹೊರಡುತ್ತಾರೆ.
ನನ್ನನ್ನು ಅತ್ತೆ ಅನ್ನಬೇಡಮ್ಮ ಆಂಟಿ ಅಂತ ಕರಿ ಎಂದ ವಿಶಾಲು
ಧನಲಕ್ಷ್ಮೀ ಬಳಿ ಸುಬ್ಬು–ಶ್ರಾವಣಿ ಸಂಬಂಧ ಬಗ್ಗೆ ತಿಳಿದುಕೊಳ್ಳಲು ಬಯಸುವ ಶ್ರೀವಲ್ಲಿಗೆ ನಿರಾಸೆಯ ಉತ್ತರ ದೊರೆಯುತ್ತದೆ. ಸುಬ್ಬು ಹಾಗೂ ಶ್ರಾವಣಿ ಯಾವಾಗ್ಲೂ ರೂಮ್‌ನಲ್ಲೇ ಇರ್ತಾರೆ. ಯಾವಾಗಲೂ ಗುಸು ಗುಸು ಅಂತ ಮಾತಾಡ್ತಾ ಇರ್ತಾರೆ ಅಂತಾಳೆ. ಇದನ್ನ ಕೇಳಿ ಶ್ರೀವಲ್ಲಿ ತಲೆ ಕೆಡುತ್ತೆ. ಅಷ್ಟೊತ್ತಿಗೆ ಅಲ್ಲಿಗೆ ವಿಶಾಲು ಬರ್ತಾಳೆ. ಅವಳನ್ನು ನೋಡಿ ಶ್ರೀವಲ್ಲಿ ‘ಅತ್ತೆ ಈಗ ಹೇಗಿದೀರಾ, ಅತ್ತೆ ನಿಮಗೆ ಏನೇ ಬೇಕಾದ್ರೂ ನನ್ನ ಕೇಳಿ‘ ಅಂತೆಲ್ಲಾ ಹೇಳ್ತಾಳೆ. ಆಗ ವಿಶಾಲಾಕ್ಷಿಗೆ ಶ್ರೀವಲ್ಲಿ ಪದೇ ಪದೇ ತನ್ನ ಅತ್ತೆ ಅತ್ತೆ ಅನ್ನೋದು ಸರಿ ಕಾಣೋಲ್ಲ. ಅವಳಿಗೆ ಇದನ್ನು ತಿಳಿಸಿ ಹೇಳಬೇಕು ಎನ್ನಿಸುತ್ತದೆ. ಅವಳು ಶ್ರೀವಲ್ಲಿಯನ್ನು ಕರೆದು ‘ನೋಡಮ್ಮ ಶ್ರೀವಲ್ಲಿ, ಇನ್ನು ಮುಂದೆ ನೀನು ನನಗೆ ಅತ್ತೆ ಅಂತ ಕರಿಬೇಡ, ಮೊದಲು ನನ್ನ ಮಗನ ಜೊತೆ ನಿನ್ನ ಮದುವೆ ನಿಶ್ಚಯ ಆಗಿತ್ತು, ಹಾಗಾಗಿ ನೀನು ಅತ್ತೆ ಅಂತ ಕರೆದ್ರೂ ತೊಂದರೆ ಇರಲಿಲ್ಲ. ಆದರೆ ಈಗ ಅವನಿಗೆ ಬೇರೆ ಮದುವೆ ಆಗಿದೆ. ಈಗ ನೀನು ನನಗೆ ಅತ್ತೆ ಅನ್ನೋದು ಸರಿ ಕಾಣಿಸೋಲ್ಲ. ನೀನು ನಂಗೆ ಅಂಟಿ ಅಂತ ಕರಿ‘ ಅಂತ ಹೇಳ್ತಾಳೆ. ಆದರೆ ಶ್ರೀವಲ್ಲಿ ಮಾತ್ರ ಎದುರಿಗೆ ಓಕೆ ಅಂದು ಮನಸ್ಸಲ್ಲಿ ಬೇರೆಯದೇ ಪ್ಲಾನ್ ಮಾಡುತ್ತಾಳೆ.
ಇತ್ತ ಲಲಿತಾದೇವಿ ಮೊಮ್ಮಗಳ ಸಂಸಾರ ಸರಿ ಆಗಲಿ ಎಂದುಕೊಂಡು ಹನಿಮೂನ್‌ಗೆ ಕಳುಹಿಸುವ ಪ್ಲಾನ್ ಮಾಡಿದ್ದು, ಅವರು ಹನಿಮೂನ್‌ಗೆ ಹೋಗಲು ಸಾಧ್ಯವಾಗದೇ ಇದಿದ್ದು ಈ ಬಗ್ಗೆಲ್ಲಾ ವಂದನಾ ಜೊತೆ ಮಾತನಾಡಿ, ಅವರ ಸಂಸಾರವನ್ನು ಹೇಗಾದ್ರೂ ಸರಿ ಮಾಡ್ತೀನಿ ಅಂತ ಹೇಳ್ತಾರೆ.
ಶ್ರೀವಲ್ಲಿ ಅಂದುಕೊಳ್ಳುವಂತೆ ಅವಳು ಸುಬ್ಬು ಹೆಂಡತಿಯಾಗಿ ಅವರ ಮನೆ ಸೊಸೆಯಾಗಿ ಬರೋಕೆ ಸಾಧ್ಯವಾಗುತ್ತಾ, ಲಲಿತಾದೇವಿ ಅಂದುಕೊಂಡಂತೆ ಸುಬ್ಬು–ಶ್ರಾವಣಿ ಒಂದಾಗ್ತಾರಾ ಈ ಎಲ್ಲವನ್ನೂ ಕಾದು ನೋಡಬೇಕಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ