ರಿಜಿಸ್ಟ್ರರ್ ಆಫೀಸ್‌ನಲ್ಲಿ ಸತ್ಯ ಹೇಳುವ ಪ್ರಯತ್ನದಲ್ಲಿ ಸುಬ್ಬು; ಶ್ರಾವಣಿಗೆ ಗಾಬರಿ, ವಿಜಯಾಂಬಿಕಾಗೆ ಖುಷಿ; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ರಿಜಿಸ್ಟ್ರರ್ ಆಫೀಸ್‌ನಲ್ಲಿ ಸತ್ಯ ಹೇಳುವ ಪ್ರಯತ್ನದಲ್ಲಿ ಸುಬ್ಬು; ಶ್ರಾವಣಿಗೆ ಗಾಬರಿ, ವಿಜಯಾಂಬಿಕಾಗೆ ಖುಷಿ; ಶ್ರಾವಣಿ ಸುಬ್ರಹ್ಮಣ್ಯ

ರಿಜಿಸ್ಟ್ರರ್ ಆಫೀಸ್‌ನಲ್ಲಿ ಸತ್ಯ ಹೇಳುವ ಪ್ರಯತ್ನದಲ್ಲಿ ಸುಬ್ಬು; ಶ್ರಾವಣಿಗೆ ಗಾಬರಿ, ವಿಜಯಾಂಬಿಕಾಗೆ ಖುಷಿ; ಶ್ರಾವಣಿ ಸುಬ್ರಹ್ಮಣ್ಯ

ರಿಜಿಸ್ಟ್ರೇಷನ್‌ ಕೆಲಸ ಮುಗಿಸಿ ಊರಿಗೆ ಹೊರಡ್ತೀನಿ ಎಂದ ಲಲಿತಾದೇವಿ. ಸೊಸೆ ಬಗ್ಗೆ ಕಾಂತಮ್ಮ ಹೇಳಿದ ಮಾತಿಗೆ ಕೆರಳಿದ ವಿಶಾಲಾಕ್ಷಿ. ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲದೇ ಶ್ರಾವಣಿ ಬದುಕು ಅಲ್ಲೋಲ್ಲ ಕಲ್ಲೋಲ್ಲ ಆಗುತ್ತೆ ಎಂಬ ಕನಸು ಕಾಣುತ್ತಿದ್ದಾಳೆ ವಿಜಯಾಂಬಿಕಾ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 22ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 22ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 22ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 22ರ ಸಂಚಿಕೆಯಲ್ಲಿ ಶ್ರಾವಣಿ ಎಷ್ಟೇ ಬೇಡಿಕೊಂಡ್ರೂ ಸುಬ್ಬು ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸಹಿ ಹಾಕುವುದಿಲ್ಲ. ದುಃಖದಲ್ಲೇ ರಿಜಿಸ್ಟ್ರರ್ ಆಫೀಸ್ ಕಡೆ ಹೊರಡುತ್ತಾಳೆ ಶ್ರಾವಣಿ. ಇತ್ತ ಲಲಿತಾದೇವಿ ಅಳಿಯನ ಬಳಿ ತಾನು ರಿಜಿಸ್ಟ್ರೇಷನ್ ಆಫೀಸ್‌ನಿಂದ ನೇರವಾಗಿ ಊರಿಗೆ ಹೊರಡ್ತೇನೆ ಅಂತ ಹೇಳ್ತಾರೆ. ಇದ್ದಕ್ಕಿದ್ದ ಹಾಗೆ ಅತ್ತೆ ಊರಿಗೆ ಹೋಗ್ತೀನಿ ಅಂತಿರೋದು ವೀರೇಂದ್ರ ಸೇರಿ ಮನೆಯವರಿಗೆ ಶಾಕ್ ನೀಡುತ್ತೆ. ವೀರೇಂದ್ರ ‘ಯಾಕೆ ಅತ್ತೆ ಅವರೇ, ಇದ್ದಕ್ಕಿದ್ದ ಹಾಗೆ ಈ ನಿರ್ಧಾರ ತಗೊಂಡ್ರಿ, ನಮ್ಮಿಂದ ನಿಮಗೆ ಏನಾದ್ರೂ ತೊಂದರೆ ಆಗ್ತಿದ್ಯಾ‘ ಎಂದು ಪ್ರಶ್ನೆ ಮಾಡ್ತಾರೆ. ಆಗ ಲಲಿತಾದೇವಿ ‘ಅಯ್ಯೋ ಹಾಗೆಲ್ಲಾ ಏನಿಲ್ಲಾ, ನಾನು ಊರಿಗೆ ಹೋಗದೇ ತುಂಬಾ ದಿನ ಆಯ್ತು. ಅಲ್ಲಿ ಸಾಕಷ್ಟು ಕೆಲಸಗಳಿವೆ. ಈಗ ನನ್ನ ಯಜಮಾನರು ವಹಿಸಿದ ಕೆಲಸ ಕೂಡ ಮುಗಿಯುತ್ತೆ, ಶ್ರಾವಣಿ ಹೆಸರಿಗೆ ಆಸ್ತಿ ಎಲ್ಲಾ ಟ್ರಾನ್ಸ್‌ಫರ್ ಆಗುತ್ತೆ. ಹಾಗಾಗಿ ನಾನು ಹೊರಟು ಬಿಡುತ್ತೇನೆ‘ ಎನ್ನುತ್ತಾರೆ. ಈ ನಡುವೆ ವಂದನಾ ‘ಅಮ್ಮ ನೀವು ಈಗಲೇ ಹೊರಡುತ್ತೇನೆ ಅಂದ್ರೆ ಹೇಗೆ, ನಾವು ಒಮ್ಮೆ ಶ್ರಾವಣಿ ಮನೆಗೆ ಹೋಗಿ ಬರಬೇಕು‘ ಎಂದು ಹಿಂಜರಿಕೆಯಲ್ಲೇ ಹೇಳುತ್ತಾಳೆ. ಆಗ ಲಲಿತಾದೇವಿ ಅದು ಆಗುತ್ತೆ, ಸಮಯ ಬಂದಾಗ ಎಲ್ಲವೂ ಒಳಿತೇ ಆಗುತ್ತೆ‘ ಅಂತು ಅಭಯ ನೀಡುತ್ತಾರೆ.

ರಿಜಿಸ್ಟರ್ ಆಫೀಸ್‌ನಲ್ಲಿ ವಿಜಯಾಂಬಿಕಾ

ವೀರೇಂದ್ರ, ಸುರೇಂದ್ರ, ಲಲಿತಾದೇವಿ, ಸುಬ್ಬು, ಶ್ರಾವಣಿ ಬರುವ ಮೊದಲೇ ರಿಜಿಸ್ಟರ್ ಆಫೀಸ್‌ಗೆ ಹೋಗಿರುವ ವಿಜಯಾಂಬಿಕಾಗೆ ಶ್ರೀವಲ್ಲಿಯಿಂದ ಕಾಲ್ ಬರುತ್ತೆ. ‘ಮೇಡಂ ಎಲ್ಲವೂ ನಾವು ಅಂದುಕೊಂಡ ಹಾಗೆ ಆಗುತ್ತೆ ಅಲ್ವಾ, ಇವತ್ತು ಶ್ರಾವಣಿ–ಸುಬ್ಬು ಮದುವೆ ಆಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತಾಗುತ್ತೆ, ಆಮೇಲೆ ಸುಬ್ಬು ಜೊತೆ ನನ್ನ ಮದುವೆ ಆಗುತ್ತೆ, ಶ್ರಾವಣಿ ಜೊತೆ ಮದನ್ ಸರ್ ಮದುವೆ ಆಗುತ್ತೆ‘ ಅಂತ ಸಂಭ್ರಮ ಪಡ್ತಾಳೆ. ವಿಜಯಾಂಬಿಕಾ ಕೂಡ ಇನ್ನೊಮ್ಮೆ ಸುಬ್ಬು ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸೈನ್ ಮಾಡಿಲ್ಲ ಅಲ್ವಾ, ಶ್ರಾವಣಿ ಬಳಿ ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲ ಅಲ್ವಾ ಅಂತ ಕನ್ಫರ್ಮ್ ಮಾಡಿಕೊಳ್ಳುತ್ತಾಳೆ. ಶ್ರಾವಣಿ ಬದುಕು ಹಾಳು ಮಾಡಿ, ಮದನ್ ಜೊತೆ ಅವಳ ಮದುವೆ ಮಾಡಿ, ಆಸ್ತಿಯನ್ನೆಲ್ಲಾ ತನ್ನ ಹಾಗೂ ಮಗನ ಹೆಸರಿಗೆ ಮಾಡಿಕೊಳ್ಳುವ ಹಂಬಲದಲ್ಲಿರುತ್ತಾಳೆ ವಿಜಯಾಂಬಿಕಾ.

ಸತ್ಯ ಹೇಳೋಣ ಎಂದು ಹಟ ಮಾಡುವ ಸುಬ್ಬು

ಆಟೊದಲ್ಲಿ ಸುಬ್ಬು–ಶ್ರಾವಣಿ ಬಂದಿಳಿಯುವ ಹೊತ್ತಿಗೆ ಆ ಕಡೆಯಿಂದ ಕಾರಿನಲ್ಲಿ ವೀರೇಂದ್ರ, ಲಲಿತಾದೇವಿ ಹಾಗೂ ಸುರೇಂದ್ರ ಕೂಡ ಬರುತ್ತಾರೆ. ಶ್ರಾವಣಿಯನ್ನು ಪ್ರೀತಿಯಿಂದ ಮಾತನಾಡಿಸುವ ಅಜ್ಜಿ ಎಲ್ಲಾ ದಾಖಲೆಗಳನ್ನು ತಂದಿದ್ದೀಯಾ ಅಲ್ವಾ ಶ್ರಾವಣಿ ಎಂದು ಕೇಳುತ್ತಾರೆ. ಅದಕ್ಕೆ ಹುಂ ಎಂದು ತಲೆ ಅಲ್ಲಾಡಿಸುವ ಶ್ರಾವಣಿಗೆ ಮೇಡಂ ಈಗಲೇ ಎಲ್ಲಾ ಸತ್ಯ ಹೇಳಿ ಬಿಡೋಣ ಅಂತ ಹೇಳ್ತಾನೆ ಸುಬ್ಬು. ಆಗ ಶ್ರಾವಣಿ ಪ್ಲೀಸ್ ಸುಬ್ಬು ಸುಮ್ನೆ ಇರು ಎಂದು ಬೇಡಿಕೊಳ್ಳುತ್ತಾಳೆ. ಅಷ್ಟೊತ್ತಿಗೆ ಲಾಯರ್ ಕೂಡ ಬರುತ್ತಾರೆ. ಲಾಯರ್ ಬಂದವರೇ ನಾನು ಹೇಳಿದ ಎಲ್ಲಾ ಡಾಕ್ಯುಮೆಂಟ್ ತಂದಿದ್ದೀರಾ ಅಲ್ವಾ ಶ್ರಾವಣಿ ಮೇಡಂ, ಮುಖ್ಯವಾಗಿ ನಮಗೆ ಬೇಕಿರೋದು ನಿಮ್ಮ ಮ್ಯಾರೇಜ್ ಸರ್ಟಿಫಿಕೇಟ್ ಅಂತ ಹೇಳ್ತಾರೆ. ಆಗ ಶ್ರಾವಣಿ ಹೌದು ತಂದಿದ್ದೇವೆ ಎನ್ನುವಂತೆ ತಲೆ ಅಲ್ಲಾಡಿಸುತ್ತಾಳೆ. ಅದನ್ನು ನೋಡಿ ಸುಬ್ಬು ಅವಳನ್ನು ಬದಿಗೆ ಕರೆದುಕೊಂಡು ಹೋಗಿ ಮೇಡಂ ಈಗಲೇ ಸತ್ಯ ಹೇಳಿ ಬಿಡೋಣ, ಹೇಗೂ ನಿಮ್ಮ ಬಳಿ ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲ. ಯಾಕೆ ತಂದಿಲ್ಲ ಅಂದ್ರೆ ನೀವು ಸುಬ್ಬು ಸೈನ್ ಮಾಡಿಲ್ಲ ಅಂತೀರಾ, ನನ್ನ ಬಳಿ ಕೇಳಿದ್ರೆ ಆಗ ನಾನು ಇರೋ ಸತ್ಯ ಹೇಳಬೇಕಾಗುತ್ತೆ ಅದರ ಬದಲು ಈಗಲೇ ಹೇಳೋಣ ಬನ್ನಿ ಹೋಗಲು ತಿರುಗಿ ನೋಡಿದಾಗ ಅಲ್ಲಿ ಲಲಿತಾದೇವಿ ನಿಂತಿರುತ್ತಾರೆ. ಅವರನ್ನು ನೋಡಿ ಸುಬ್ಬು ಹಾಗೂ ಶ್ರಾವಣಿ ಇಬ್ಬರೂ ಗಾಬರಿಯಾಗುತ್ತಾರೆ. ಲಲಿತಾದೇವಿ ಮುಖ ನೋಡಿದ ಸುಬ್ಬುಗೆ ಸತ್ಯ ಹೇಳುವ ಧೈರ್ಯವೇ ಬರುವುದಿಲ್ಲ. ಇತ್ತ ಶ್ರಾವಣಿ ಅಜ್ಜಿ ಎಲ್ಲಾ ವಿಷಯ ಕೇಳಿಸಿಕೊಂಡ್ರು ಎನ್ನುವ ಗಾಬರಿಯಲ್ಲಿ ಇರುತ್ತಾಳೆ.

ಕೊನೆಯ ಕ್ಷಣದಲ್ಲೂ ಸುಬ್ಬು ಯಜಮಾನರಿಗೆ ವಿಷಯ ಹೇಳುವ ಪ್ರಯತ್ನ ಮಾಡುತ್ತಾನೆ. ಆದರೆ ಈಗ ಸಮಯ ಆಗಿದೆ, ರಿಜಿಸ್ಟ್ರೇಷನ್ ಕೆಲಸ ಮುಗಿಸಿದ ನಂತರ ಮಾತನಾಡೋಣ ಅಂತ ಹೇಳಿ ವೀರು ಸುಬ್ಬುವನ್ನು ತಡೆಯುತ್ತಾರೆ. ವಿಜಯಾಂಬಿಕಾ ಮಾತ್ರ ಶ್ರಾವಣಿ ಬಳಿ ಮ್ಯಾರೇಜ್ ಸರ್ಟಿಫಿಕೇಟ್ ಅಲ್ಲ, ಇನ್ನೇನು ಕೆಲ ಹೊತ್ತಿನಲ್ಲೇ ಎಲ್ಲರ ಎದುರು ಶ್ರಾವಣಿ ಮದುವೆ ಗುಟ್ಟು ರಟ್ಟಾಗುತ್ತೆ, ಅವಳ ಅಪ್ಪನಿಂದ ಇನ್ನಷ್ಟು ದೂರಾಗುತ್ತಾಳೆ. ಶ್ರಾವಣಿ ಬದುಕು ಅಲ್ಲೋಲ್ಲ ಕಲ್ಲೋಲ್ಲ ಆಗುತ್ತೆ ಅಂತ ಸಂಭ್ರಮ ಪಡುತ್ತಿರುತ್ತಾಳೆ.

ರಿಜಿಸ್ಟರ್ ಆಫೀಸ್‌ ಒಳಗೆ ಸುಬ್ಬು ಯಜಮಾನರಿಗೆ ಸತ್ಯ ಹೇಳ್ತಾಳಾ, ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲದೇ ಶ್ರಾವಣಿ ಹೆಸರಿಗೆ ಆಸ್ತಿ ರಿಜಿಸ್ಟ್ರೇಷನ್ ಆಗೋದು ಹೇಗೆ, ವಿಜಯಾಂಬಿಕಾ–ಶ್ರೀವಲ್ಲಿ ಅಂದುಕೊಂಡಂತೆ ಶ್ರಾವಣಿ ಬದುಕು ಅಲ್ಲೋಲ ಕಲ್ಲೋಲ ಆಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.