ಕೆಲಸ ಪಡೆಯುವ ಆಸೆಗೆ ವಿಜಯಾಂಬಿಕಾ ಕಾರಿಗೆ ಡಿಕ್ಕಿ ಹೊಡೆದ ಸುಂದರ, ಮುಂದೇನಾಗಬಹುದು ಸುಬ್ಬು ಭಾವನ ಕಥೆ? ಶ್ರಾವಣಿ ಸುಬ್ರಹ್ಮಣ್ಯ‌
ಕನ್ನಡ ಸುದ್ದಿ  /  ಮನರಂಜನೆ  /  ಕೆಲಸ ಪಡೆಯುವ ಆಸೆಗೆ ವಿಜಯಾಂಬಿಕಾ ಕಾರಿಗೆ ಡಿಕ್ಕಿ ಹೊಡೆದ ಸುಂದರ, ಮುಂದೇನಾಗಬಹುದು ಸುಬ್ಬು ಭಾವನ ಕಥೆ? ಶ್ರಾವಣಿ ಸುಬ್ರಹ್ಮಣ್ಯ‌

ಕೆಲಸ ಪಡೆಯುವ ಆಸೆಗೆ ವಿಜಯಾಂಬಿಕಾ ಕಾರಿಗೆ ಡಿಕ್ಕಿ ಹೊಡೆದ ಸುಂದರ, ಮುಂದೇನಾಗಬಹುದು ಸುಬ್ಬು ಭಾವನ ಕಥೆ? ಶ್ರಾವಣಿ ಸುಬ್ರಹ್ಮಣ್ಯ‌

ಸುಂದರನಿಗೆ ಹೊರಗಡೆ ದುಡಿಯಲು ಹೋಗಬೇಕು ಎನ್ನುವ ಷರತ್ತಿನೊಂದಿಗೆ ಮನೆಯಲ್ಲಿ ಇರಲು ಅವಕಾಶ ನೀಡಿದ ಶ್ರಾವಣಿ, ವಂದನಾ ಮೇಲೆ ಹೆಚ್ಚಾಯ್ತು ವಿಜಯಾಂಬಿಕಾ ದರ್ಪ. ಕಾರೊಂದಕ್ಕೆ ಡಿಕ್ಕಿ ಹೊಡೆದ ಸುಂದರನಿಗೆ ಕಾದಿತ್ತು ಶಾಕ್.‌ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮೇ 9ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 12ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 12ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 9ರ ಸಂಚಿಕೆಯಲ್ಲಿ ಸುಂದರ-ಧನಲಕ್ಷ್ಮೀ ಮಗಳು ಐಶು ಹೇಳಿದ ಮಾತಿಗೆ ಕರಗುವ ಶ್ರಾವಣಿ ಮನೆಯಿಂದ ಹೊರಗಡೆ ಹೋಗಿ ಸುಂದರನಿಗೆ ಕಾಲ್‌ ಮಾಡುತ್ತಾಳೆ. ʼಐಶು ಪುಟ್ಟನನ್ನು ಬಿಟ್ಟು ಇರುವುದು ನನಗೂ ಕಷ್ಟವಾಗುತ್ತದೆ. ಅದಕ್ಕೆ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ, ನೀವು ಮನೆ ಬಿಟ್ಟು ಹೋಗೋದು ಬೇಕಾಗಿಲ್ಲ. ಆದರೆ ನೀವು ಇದೇ ಮನೆಯಲ್ಲಿ ಇದ್ದುಕೊಂಡು ಹೊರಗಡೆ ದುಡಿಯಲು ಹೋಗಿ ನಿಮ್ಮ ಹೆಂಡತಿ, ಮಗಳು ಹಾಗೂ ತಾಯಿಯನ್ನು ಸಲಹಬೇಕು. ಜೊತೆಗೆ ವಾರಾಂತ್ಯಗಳಲ್ಲಿ ನೀವು ಹಾಗೂ ನಿಮ್ಮ ತಾಯಿ ಮನೆಕೆಲಸಕ್ಕೆ ಸಹಾಯ ಮಾಡಬೇಕು. ಈ ಷರತ್ತಿಗೆ ನೀವು ಒಪ್ಪಿದ್ರೆ ಮಾತ್ರ ಮನೆಯಲ್ಲಿ ಇರಬಹುದು' ಎಂದು ಶ್ರಾವಣಿ ಹೇಳುತ್ತಾಳೆ. ಮನೆಯಲ್ಲಿ ಇರೋಕೆ ಒಪ್ಪಿದ್ದೆ ಹೆಚ್ಚು ಅಂತ ಶ್ರಾವಣಿಯ ಷರತ್ತಿಗೆ ಒಪ್ಪುವ ಸುಂದರ, ಮನೆಯವರೆಲ್ಲರ ಎದುರು ನಾಟಕ ಮಾಡುತ್ತಾನೆ. ನೀವೆಲ್ಲರೂ ಹೇಳಿದ್ದಕ್ಕೆ ನಾನು ಈ ಮನೆಯಲ್ಲಿ ಇರಲು ಒಪ್ಪಿದ್ದು ಎಂದು ಹೇಳೋದು ಮಾತ್ರವಲ್ಲ, ತಾನು ದುಡಿಯಲು ಹೋಗುತ್ತೇನೆ ಎಂದು ಮನೆಯವರ ಮುಂದೆ ಹೇಳುತ್ತಾನೆ. ಆದರೆ ಯಾರಿಗೂ ಶ್ರಾವಣಿ ಇವನನ್ನು ಆಡಿಸುತ್ತಿರುವುದು ಎನ್ನುವುದು ಅನುಮಾನ ಬರುವುದಿಲ್ಲ.

ವಂದನಾಳ ಬಾಳನ್ನು ನರಕ ಮಾಡುತ್ತಿರುವ ವಿಜಯಾಂಬಿಕಾ

ಅಮ್ಮನನ್ನು ನೋಡಬೇಕು ಎಂದು ಒಂದೇ ಸಮ ಅಳುತ್ತಿರುವ ಪಿಂಕಿಯನ್ನು ನೋಡಲಾಗದೇ ಸುರೇಂಂದ್ರ ತಾನೇ ವಂದನಾಳ ಕೋಣೆಗೆ ಹೋಗಿ ಅವಳನ್ನು ನೋಡಿ ಮಾತನಾಡಿ ಬರುತ್ತೇನೆ ಎಂದು ನಿರ್ಧಾರ ಮಾಡುತ್ತಾನೆ. ಅದನ್ನು ಅಕ್ಕನ ಬಳಿ ಹೇಳಿ ಕೋಣೆಯ ಬಳಿಯ ಹೋಗುತ್ತಾನೆ. ಆದರೆ ವಿಜಯಾಂಬಿಕಾ ಓಡಿ ಹೋಗಿ ಕೋಣೆಯ ಬಾಗಿಲಿಗೆ ಅಡ್ಡ ನಿಲ್ಲುತ್ತಾಳೆ. ವಂದನಾ ಈಗ ಯಾರ ಮಾತನ್ನೂ ಕೇಳುವುದಿಲ್ಲ. ಒಳಗಡೆ ಹೋದರೆ ಅವಳು ಪಿಂಕಿ ಪ್ರಾಣಕ್ಕೆ ಅಪಾಯ ಮಾಡುತ್ತಾಳೆ ಎಂದು ಹೇಳಿ ಅವನನ್ನು ತಡೆಯಲು ಪ್ರಯತ್ನಿಸುತ್ತಾಳೆ. ಆದರೆ ಸುರೇಂದ್ರ ಅಕ್ಕನ ಮಾತು ಕೇಳಲು ರೆಡಿ ಇರುವುದಿಲ್ಲ. ಆಗ ವಿಜಯಾಂಬಿಕಾ ನಾನೊಮ್ಮೆ ಒಳಗಡೆ ಹೋಗಿ ವಂದನಾ ಹೇಗಿದ್ದಾಳೆ ನೋಡಿ ಬರ್ತೀನಿ, ಆಮೇಲೆ ನೀವು ಹೋಗಬಹುದು ಎಂದು ಒಳಗಡೆ ಹೋಗುತ್ತಾಳೆ. ವಿಜಯಾಂಬಿಕಾ ಒಳಗಡೆ ಹೋದವಳೇ ವಂದನಾಳ ಬಳಿ ನಿನ್ನ ಮಗಳನ್ನು ನಿನ್ನನ್ನು ಶಾಶ್ವತವಾಗಿ ದೂರ ಮಾಡುತ್ತೇನೆ, ನಿನ್ನ ಮಗಳನ್ನು ಸಾಯಿಸುತ್ತೇನೆ ಎಂದು ಹೆದರಿಸುತ್ತಾಳೆ. ಆಗ ವಂದನಾ ವಿಜಯಾಂಬಿಕಾ ಎಂದು ಕಿರುಚಿ ಅವಳ ಕತ್ತು ಹಿಸುಕಲು ನೋಡುತ್ತಾಳೆ. ಅದನ್ನೇ ಬಂಡವಾಳ ಮಾಡಿಕೊಳ್ಳುವ ವಿಜಯಾಂಬಿಕಾ ನನ್ನನ್ನು ಬಿಡು, ನನ್ನುನ್ನು ಬಿಡು ಎಂದು ಕಿರುಚುತ್ತಾ ಹೊರಗೆ ಬರುತ್ತಾಳೆ. ಹೊರಗಡೆ ಬಂದು ವಂದನಾ ಸ್ಥಿತಿ ಹೇಗಿದೆ ನೋಡು, ಅವಳು ನನ್ನನ್ನೇ ಕೊಲ್ಲಲ್ಲು ಪ್ರಯತ್ನಿಸಿದ್ಲು, ಇನ್ನು ಆ ಮಗುವನ್ನು ಬಿಡುತ್ತಾಳಾ. ನಿನ್ನ ಮಗಳು ಸಾಯೋದು ನಿನಗೆ ಇಷ್ಟನಾ, ನೀವ್ಯಾರು ಒಳಗಡೆ ಹೋಗೋದು ಬೇಡ ಎಂದು ಹೇಳಿ ಸುರೇಂದ್ರನ ಮನವೊಲಿಸುತ್ತಾಳೆ. ವಂದನಾ ಮಾತ್ರ ನಾಲ್ಕು ಗೋಡೆಗಳ ಮಧ್ಯೆ ಸಿಲುಕಿ ಅಳುತ್ತಾ ದಿಕ್ಕು ತೋಚದಂತಿರುತ್ತಾಳೆ. ಪಿಂಕಿ ಅಮ್ಮನನ್ನು ಕಾಣದೇ ಅಳುತ್ತಿರುತ್ತಾಳೆ.

ಕೆಲಸದ ಆಸೆಗೆ ಕಾರಿಗೆ ಡಿಕ್ಕಿ ಹೊಡೆದ ಸುಂದರನಿಗೆ ಕಾದಿತ್ತು ಶಾಕ್‌

ಶ್ರಾವಣಿ ಮಾತಿನಂತೆ ಕೆಲಸ ಹುಡುಕಿ ಹೊರಟ ಸುಂದರನಿಗೆ ಎಲ್ಲೂ ಕೆಲಸ ಸಿಗುವುದಿಲ್ಲ. ಆಗ ಪೇಪರ್‌ ಓದುತ್ತಿದ್ದ ವ್ಯಕ್ತಿಯೊಬ್ಬರ ಪೇಪರ್‌ನಲ್ಲಿ ಬಂದ ಘಟನೆಯೊಂದನ್ನು ಓದಿ ಹೇಳುವುದನ್ನು ಕೇಳಿಸಿಕೊಳ್ಳುತ್ತಾನೆ. ಆಗ ಸುಂದರನಿಗೆ ತಾನು ಕೂಡ ಯಾರದ್ದಾದರೂ ಶ್ರೀಮಂತರ ಕಾರಿಗೆ ಅಡ್ಡ ಹೋಗಿ ಡಿಕ್ಕಿ ಹೊಡೆಸಿಕೊಂಡರೆ ನನಗೆ ಕೈ ತುಂಬಾ ಕಾಸು ಕೊಡುತ್ತಾರೆ, ಆಮೇಲೆ ಅವರ ಬಳಿ ಕೆಲಸ ಕೂಡ ಕೇಳಬಹುದು ಎಂದು ಪ್ಲಾನ್‌ ಮಾಡುತ್ತಾನೆ. ಅವನು ಈ ರೀತಿ ಯೋಚಿಸುತ್ತಿರುವಾಗಲೇ ದೂರದಿಂದಲೇ ಒಂದು ಕಾರು ಜೋರಾಗಿ ಬರುವುತ್ತಿರುವುದು ಕಾಣುತ್ತದೆ. ಅವನಿಗೆ ಅದು ಯಾರ ಕಾರು ಎಂಬುದು ಅರಿವಿರುವುದಿಲ್ಲ. ತಡ ಮಾಡದೇ ಆ ಕಾರಿಗೆ ಹೋಗಿ ಡಿಕ್ಕಿ ಹೊಡೆಯುತ್ತಾನೆ. ಕಾರ್‌ ನಿಲ್ಲಿಸಿ ಬರುವ ವ್ಯಕ್ತಿಯನ್ನು ನೋಡಿ ಸುಂದರ ಗಾಬರಿಯಾಗುತ್ತಾನೆ, ಯಾಕೆಂದರೆ ಅಲ್ಲಿ ವಿಜಯಾಂಬಿಕಾ ನಿಂತಿರುತ್ತಾಳೆ. ಸುಂದರ ಡಿಕ್ಕಿ ಹೊಡೆದಿರುವುದು ವಿಜಯಾಂಬಿಕಾ ಕಾರಿಗೆ ಆಗಿರುತ್ತದೆ.

ಸುಂದರ ವಿಜಯಾಂಬಿಕಾ ಬಳಿ ಕೆಲಸ ಕೇಳ್ತಾನಾ, ತನ್ನ ಸ್ವಾರ್ಥಕ್ಕೆ ಸುಂದರನನ್ನು ಬಳಸಿಕೊಳ್ತಾಳಾ ವಿಜಯಾಂಬಿಕಾ, ವಂದನಾಗೆ ಕೋಣೆಯಿಂದ ಹೊರ ಬರಲು ಸಾಧ್ಯವಾಗುವುದೇ ಇಲ್ವಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.