ಶ್ರಾವಣಿ ವಿರುದ್ಧ ಸುಂದರನನ್ನು ಬಳಸಿಕೊಳ್ಳಲು ವಿಜಯಾ ಪ್ಲಾನ್‌, ಅತ್ತೆ-ಸೊಸೆ ಒಂದಾಗಿದ್ದು ಸುಬ್ಬು ಮುಂದೆ ಬಯಲು; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ವಿರುದ್ಧ ಸುಂದರನನ್ನು ಬಳಸಿಕೊಳ್ಳಲು ವಿಜಯಾ ಪ್ಲಾನ್‌, ಅತ್ತೆ-ಸೊಸೆ ಒಂದಾಗಿದ್ದು ಸುಬ್ಬು ಮುಂದೆ ಬಯಲು; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿ ವಿರುದ್ಧ ಸುಂದರನನ್ನು ಬಳಸಿಕೊಳ್ಳಲು ವಿಜಯಾ ಪ್ಲಾನ್‌, ಅತ್ತೆ-ಸೊಸೆ ಒಂದಾಗಿದ್ದು ಸುಬ್ಬು ಮುಂದೆ ಬಯಲು; ಶ್ರಾವಣಿ ಸುಬ್ರಹ್ಮಣ್ಯ

ಸುಂದರನಿಗೆ ಶ್ರಾವಣಿ ಮೇಲಿರುವ ಕೋಪ, ಹಣದ ಆಸೆ ನೋಡಿ ಅವನನ್ನು ಶ್ರಾವಣಿ ವಿರುದ್ಧ ಸಂಚಿಗೆ ಬಳಸಿಕೊಳ್ಳಲು ವಿಜಯಾಂಬಿಕಾ ಪ್ಲಾನ್‌. ವಿಶಾಲಾಕ್ಷಿ- ಶ್ರಾವಣಿ ಒಂದಾದ ಸತ್ಯ ಸುಬ್ಬು ಕಣ್ಮುಂದೆ ಬಯಲು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮೇ 13ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 13ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 13ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 13ರ ಸಂಚಿಕೆಯಲ್ಲಿ ತಾನು ಡಿಕ್ಕಿ ಹೊಡೆದ ಕಾರು ವಿಜಯಾಂಬಿಕಾದು ಎಂದು ತಿಳಿದು ಗಾಬರಿಯಲ್ಲಿ ಎದ್ದು ನಿಂತು ಕ್ಷಮೆ ಕೇಳುತ್ತಾನೆ ಸುಂದರ. ತನ್ನ ಪರಿಚಯ ಹೇಳಿಕೊಂಡ ಸುಂದರನನ್ನು ನೋಡಿ ನಿಂಗೇನು ಬಂದಿರೋದು ರೋಗ, ಸಾಯೋಕೆ ನಿಂಗೆ ನನ್ನ ಕಾರೇ ಬೇಕಿತ್ತಾ, ಅಷ್ಟಕ್ಕೂ ಸಾಯೋವಂಥದ್ದು ನಿನಗೆ ಏನಾಗಿದೆ ಎಂದು ವಿಜಯಾಂಬಿಕಾ ಕೇಳುತ್ತಾಳೆ. ಆಗ ಸುಂದರ ಮೇಡಂ ನನ್ನ ಬಗ್ಗೆ ಏನು ಅಂತ ಹೇಳ್ಲಿ. ಮನೆಯಲ್ಲಿ ನೆಮ್ಮದಿಯಿಲ್ಲ, ನೆಮ್ಮದಿ ಬೇಕು ಅಂದ್ರೆ ಕೆಲಸ ಬೇಕು, ಕೆಲಸ ಹುಡುಕಿದ್ರೆ ಸಿಗ್ತಾ ಇಲ್ಲ. ಅದಕ್ಕೆ ಯಾರಾದ್ರೂ ಶ್ರೀಮಂತರ ಕಾರಿಗೆ ಡಿಕ್ಕಿ ಹೊಡೆದು ಅವರ ಕೈಕಾಲು ಹಿಡಿದು ಕೆಲಸ ಗಿಟ್ಟಿಸಿಕೊಳ್ಳುವ ಅಂತ ಹೀಗೆ ಮಾಡಿದೆ. ನಿಮ್ಮ ಮನೆಯ ಮಗಳು ನಮ್ಮ ಮನೆಗೆ ಬಂದ ಮೇಲೆ ನನಗೆ ನೆಮ್ಮದಿಯೇ ಇಲ್ಲದಂತಾಗಿದೆ. ಅವಳಿಂದ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ ಎಂದು ಶ್ರಾವಣಿಯನ್ನು ದೂರುತ್ತಾನೆ. ಇದನ್ನು ಕೇಳಿದ ರೌಡಿ ವಿಜಯಾಂಬಿಕಾ ಹಾಳು ತಲೆಯಲ್ಲಿ ಇಲ್ಲದ ಯೋಚನೆಗಳು ಓಡಿದರೂ ಅದರ ಬಗ್ಗೆ ಯೋಚಿಸಿದೇ ಸುಂದರನ ಕೈಗೆ ಒಂದಿಷ್ಟು ದುಡ್ಡು ಕೊಟ್ಟು ಇನ್ನು ಮುಂದೆ ಹೀಗೆಲ್ಲಾ ಮಾಡಬೇಡ ಎಂದು ಹೇಳಿ ಕಳುಹಿಸುತ್ತಾಳೆ.

ಸುಂದರನನ್ನು ಮುಂದಿಟ್ಟುಕೊಂಡು ಶ್ರಾವಣಿಗೆ ತೊಂದರೆ ಕೊಡಲು ವಿಜಯಾಂಬಿಕಾ ಸಂಚು

ಸುಂದರನಿಗೆ ಹಣದ ಮೇಲಿರುವ ದುರಾಸೆ, ಶ್ರಾವಣಿ ಮೇಲಿರುವ ಕೋಪ ಎಲ್ಲವನ್ನೂ ಎನ್‌ಕ್ಯಾಷ್ ಮಾಡಿಕೊಳ್ಳಲು ಪ್ಲಾನ್‌ ಮಾಡುತ್ತಾಳೆ ವಿಜಯಾಂಬಿಕಾ. ಇದರಿಂದ ತಮಗೇನು ಲಾಭ ಎನ್ನುವುದನ್ನು ಮಗನ ಮುಂದೆ ವಿವರಿಸುತ್ತಾಳೆ. ಸುಂದರನ ಮೂಲಕ ಆ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಂಡು ಶ್ರಾವಣಿಗೆ ತೊಂದರೆ ಕೊಡುವ ಪ್ಲಾನ್‌ ಮಾಡುತ್ತಾರೆ ವಿಜಯಾಂಬಿಕಾ-ಮದನ್‌. ಇತ್ತ ಸುಂದರ ಮತ್ತು ಕಾಂತಮ್ಮ ಹೇಗಾದ್ರೂ ಮಿನಿಸ್ಟರ್‌ ಜೊತೆಯಲ್ಲಿ ಕೆಲಸ ಮಾಡುವ ಹಾಗೆ ಒಂದು ಕೆಲಸ ತೆಗೆದುಕೊಂಡರೇ ಇದರಿಂದ ತಾವಿಬ್ಬರೂ ಮಾಡಿರುವ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಬಹುದು ಎಂದು ಪ್ಲಾನ್ ಮಾಡುತ್ತಿರುತ್ತಾರೆ. ವಿಜಯಾಂಬಿಕಾ ಹಾಗೂ ಸುಂದರ ಒಟ್ಟಾದರೆ ಶ್ರಾವಣಿಗೆ ನಿಜಕ್ಕೂ ತೊಂದರೆ ಎದುರಾಗುತ್ತಾ ಅನ್ನೋದು ಕಾದು ನೋಡಬೇಕಿದೆ.

ಅತ್ತೆ-ಸೊಸೆ ಒಂದಾದ ಸತ್ಯ ಸುಬ್ಬು ಕಣ್ಣ ಮುಂದೆ

ತನ್ನ ಗಂಡ ಕೆಲಸ ಹುಡುಕಲು ಹೋದ ಸುದ್ದಿ ಕೇಳಿ ಸಂತೋಷದಲ್ಲಿ ಕುಣಿದಾಡುತ್ತಿರುತ್ತಾಳೆ ಧನಲಕ್ಷ್ಮೀ. ತಮ್ಮ ಮಗಳ ಸಂತೋಷಕ್ಕೆ ಶ್ರಾವಣಿಯೇ ಕಾರಣ ಎಂದು ತಿಳಿದುಕೊಳ್ಳುವ ವಿಶಾಲಾಕ್ಷಿ-ಪದ್ಮನಾಭ ಅಡುಗೆಮನೆಯಲ್ಲಿ ಶ್ರಾವಣಿಗೆ ಧನ್ಯವಾದ ಹೇಳುತ್ತಾರೆ. ಆದರೆ ಶ್ರಾವಣಿ ಮಾತ್ರ ತಾನೇನು ಮಾಡೇ ಇಲ್ಲ ಎಂಬಂತೆ ಇರುತ್ತಾಳೆ. ಕೊನೆಗೆ ನಾನು ಕೂಡ ಈ ಮನೆಯವಳು, ಈ ಮನೆಯವರ ಖುಷಿಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ, ನನ್ನ ಜೀವ ಬೇಕಾದರೂ ಬಿಡುತ್ತೇನೆ, ಆದರೆ ಈ ಮನೆಯ ನೆಮ್ಮದಿ ಹಾಳು ಮಾಡೊಲ್ಲ. ಇದು ನನ್ನ ಮನೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ವಿಶಾಲಾಕ್ಷಿ ಶ್ರಾವಣಿ ಕೈ ಹಿಡಿದು ಕಣ್ಣೀರು ಹಾಕುತ್ತಾಳೆ. ಅಷ್ಟೊತ್ತಿಗೆ ಅಡುಗೆಮನೆಗೆ ಸುಬ್ಬು ಎಂಟ್ರಿ ಕೊಡುತ್ತಾನೆ. ಸುಬ್ಬುಗೆ ಶ್ರಾವಣಿ, ವಿಶಾಲಾಕ್ಷಿಯನ್ನು ನೋಡಿ ಶಾಕ್‌ ಆಗುತ್ತದೆ. ಆದರೆ ವಿಶಾಲು ಹಾಗೂ ಶ್ರಾವಣಿ ಮೊದಲಿನಂತೆ ನಾಟಕ ಮಾಡುತ್ತಾರೆ. ಆದರೆ ಸುಬ್ಬು ಆಣೆ ಮಾಡಿ ನೀವಿಬ್ಬರೂ ಜಗಳ ಮಾಡ್ತಾ ಇದ್ರಿ ಅಂತ ಹೇಳಿ ಎನ್ನುತ್ತಾನೆ. ಆಗ ವಿಧಿಯಿಲ್ಲದೇ ಶ್ರಾವಣಿ ಗಂಡನ ಮುಂದೆ ಎಲ್ಲವನ್ನೂ ಹೇಳುತ್ತಾಳೆ. ವಿಶಾಲಾಕ್ಷಿ ಕೂಡ ತಾನು ಶ್ರಾವಣಿಯನ್ನು ಒಪ್ಪಿಕೊಂಡಿದ್ದು, ಧನಲಕ್ಷ್ಮೀಗಾಗಿ ಎಲ್ಲರ ಮುಂದೆ ಜಗಳವಾಡುವುದು ಈ ಎಲ್ಲವನ್ನೂ ಹೇಳುತ್ತಾಳೆ. ಅತ್ತೆ-ಸೊಸೆ ಒಂದಾಗಿದ್ದು ಸುಬ್ಬುಗೆ ಬಹಳ ಖುಷಿ ನೀಡುತ್ತದೆ.

ವಿಜಯಾಂಬಿಕಾ ಅಂದುಕೊಂಡಂತೆ ಸುಂದರನನ್ನು ಮುಂದಿಟ್ಟುಕೊಂಡು ಶ್ರಾವಣಿಯನ್ನು ಆಟವಾಡಿಸಲು ಸಾಧ್ಯವಾಗುತ್ತಾ, ಶ್ರಾವಣಿ ಅಂದುಕೊಂಡಂತೆ ಸುಬ್ಬು ಪ್ರೀತಿಯನ್ನು ಗಳಿಸೋಕೆ ಸಾಧ್ಯವಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.