ಅಮ್ಮನ ಕೋಣೆಯ ಬೀಗ ಪಿಂಕಿ ಕೈಯಲ್ಲಿ, ವಂದನಾಗೆ ಸಿಗುತ್ತಾ ಬಿಡುಗಡೆ; ಕಾಂತಮ್ಮ-ಸುಂದರನಿಗೆ ಶ್ರಾವಣಿ ಕ್ಲಾಸ್; ಶ್ರಾವಣಿ ಸುಬ್ರಹ್ಮಣ್ಯ
ಮಿನಿಸ್ಟರ್ ಇನ್ಲ್ಫುಯೆನ್ಸ್‌ನಲ್ಲಿ ಕೆಲಸ ಕೊಡಿಸು ಎಂದು ಸುಬ್ಬುಗೆ ದಂಬಾಲು ಬಿದ್ದ ಸುಂದರ. ಶ್ರಾವಣಿ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟ ಧನಲಕ್ಷ್ಮೀ. ಅಮ್ಮನನ್ನು ನೋಡಲು ಯೋಚಿಸಿದ ಪಿಂಕಿ ಕೈಗೆ ಸಿಕ್ಕಿದೆ ಕೋಣೆಯ ಬೀಗ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮೇ 14ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 14ರ ಸಂಚಿಕೆಯಲ್ಲಿ ಕಾಂತಮ್ಮ-ಸುಂದರ ಸೇರಿ ಹೇಗಾದರೂ ಸುಬ್ಬು ಬಳಿ ಮಿನಿಸ್ಟರ್ ಇನ್ಲ್ಫುಯೆನ್ಸ್‌ನಲ್ಲಿ ಅಥವಾ ಮಿನಿಸ್ಟರ್ ಮನೆಯಲ್ಲಿ ಕೆಲಸ ಕೊಡಿಸುವಂತೆ ಕೇಳಬೇಕು ಎಂದು ನಿರ್ಧಾರ ಮಾಡುತ್ತಾರೆ. ಅದಕ್ಕೆ ಮತ್ತೆ ಸುಬ್ಬುವನ್ನು ಹಾಲ್‌ಗೆ ಕರೆಯುತ್ತಾರೆ. ಮನೆಯವರೆಲ್ಲಾ ಹಾಲ್‌ಗೆ ಬಂದಾಗ ಸುಂದರ ಸುಬ್ಬು ಮುಂದೆ ತನ್ನ ಬೇಡಿಕೆ ಇಡುತ್ತಾನೆ. ಹೇಗಾದರೂ ನೀವು ಮಿನಿಸ್ಟರ್ ಜೊತೆ ಮಾತನಾಡಿ ನನಗೊಂದು ಕೆಲಸ ಕೊಡಿಸು ಎಂದು ಕೇಳಿಕೊಳ್ಳುತ್ತಾನೆ. ಆರಂಭದಲ್ಲಿ ಇದಕ್ಕೆ ವಿರೋಧಿಸುವ ಧನಲಕ್ಷ್ಮೀ ಆಮೇಲೆ ಆ ದಿಸೆಯಿಂದಲಾದ್ರೂ ತನ್ನ ಗಂಡನಿಗೆ ಒಂದು ಕೆಲಸ ಸಿಗಲಿ ಎಂದು ಬಯಸುತ್ತಾಳೆ. ಆದರೆ ಶ್ರಾವಣಿ ಇಲ್ಲ ಆಗೊಲ್ಲ, ಅಪ್ಪನ ಜೊತೆ ನಿಮಗೆ ಕೆಲಸ ಸಿಗೊಲ್ಲ ಎಂದು ಕೋಪದಲ್ಲಿ ಹೇಳುತ್ತಾಳೆ. ಅವಳ ಮಾತು ಕೇಳಿ ಧನಲಕ್ಷ್ಮೀ ಸಿಡಿದೇಳುತ್ತಾಳೆ.
ಶ್ರಾವಣಿಯನ್ನು ಮತ್ತೆ ಹಂಗಿಸುವ ಧನಲಕ್ಷ್ಮೀ
ತನ್ನ ಅಪ್ಪನ ಮನೆಯಲ್ಲಿ ಸುಂದರ ಕೆಲಸ ಬೇಕು ಎಂದು ಹೇಳುತ್ತಿರುವುದು ಶ್ರಾವಣಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಸುಂದರ ಬುದ್ಧಿ ಗೊತ್ತಿರುವ ಶ್ರಾವಣಿ ಇಲ್ಲ, ಈ ರೀತಿ ಆಗಬಾರದು ಎಂದು ಯೋಚಿಸಿ ಇಲ್ಲ ನಮ್ಮ ಅಪ್ಪನ ಬಳಿ ನಿಮಗೆ ಕೆಲಸ ಸಿಗುವುದಿಲ್ಲ ಎಂದು ಹೇಳಿ ಬಿಡುತ್ತಾಳೆ. ಇದನ್ನು ಕೇಳಿಸಿಕೊಂಡ ಧನಲಕ್ಷ್ಮಿ ಸಿಡಿದೇಳುತ್ತಾಳೆ. ತನ್ನ ಗಂಡನಿಗೆ ಕೆಲಸ ಮಾಡುವ ಆಸೆ ಇದ್ದರು, ಸುಬ್ಬು ಕೆಲಸ ಕೊಡಿಸುವ ನಿರ್ಧಾರ ಮಾಡಿದರೂ ಅದಕ್ಕೆ ಶ್ರಾವಣಿ ಅಡ್ಡಿಯಾಗುತ್ತಿದ್ದಾಳೆ ಎಂದು ಭಾವಿಸುವ ಅವಳು ಶ್ರಾವಣಿ ಮೇಲೆ ರೇಗುತ್ತಾಳೆ. ದೇವರು ಕೊಟ್ಟರು ಪೂಜಾರಿ ಬಿಡ ಅನ್ನುವ ಹಾಗೆ ತನ್ನ ಗಂಡ ಕೆಲಸಕ್ಕೆ ಹೋಗುತ್ತೇನೆ ಎಂಬ ಆಸೆಗೆ ಶ್ರಾವಣಿ ಅಡ್ಡಿಯಾಗುತ್ತಿದ್ದಾಳೆ ಎಂದು ಅವಳ ಮೇಲೆ ರೇಗುತ್ತಾಳೆ. ಗತಿ ಇಲ್ಲದವಳು ಎಂದೆಲ್ಲಾ ಶ್ರಾವಣಿಯನ್ನು ಹಂಗಿಸಿ ಮಾತನಾಡುತ್ತಾಳೆ. ಆಗ ಕೋಪಗೊಳ್ಳುವ ಪದ್ಮನಾಭ ಧನಲಕ್ಷ್ಮೀಗೆ ಸರಿಯಾಗಿ ಬೈದು ಇನ್ನೊಂದು ಮಾತನಾಡಬಾರದು ಎಂದು ಹೆದರಿಸುತ್ತಾರೆ. ಇತ್ತ ಇವರ ಜಗಳ ನೋಡಿ ಬೇಸತ್ತ ಸುಬ್ಬು ಭಾವನಿಗೆ ಮಿನಿಸ್ಟರ್ ಬಳಿ ಕೆಲಸ ಕೊಡಿಸುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ ಶ್ರಾವಣಿ ಮಾತ್ರ ಕಾಂತಮ್ಮ-ಸುಂದರನನ್ನು ಹೊರಗಡೆ ಕರೆದು ಧಮ್ಕಿ ಹಾಕುತ್ತಾಳೆ. ಅಲ್ಲದೇ ಅವಳಿಗೆ ತಿಳಿಸದೇ ಸುಬ್ಬು ಬಳಿ ಈ ರೀತಿ ಹೇಳಿದ್ದಕ್ಕೆ ಕೋಪಗೊಳ್ಳುವ ಶ್ರಾವಣಿ ಕಾಂತಮ್ಮ-ಸುಂದರನಿಗೆ ಪ್ರತಿದಿನ ಮನೆಗೆಲಸ ಮಾಡುವ ಶಿಕ್ಷೆ ನೀಡುತ್ತಾಳೆ.
ಪಿಂಕಿ ಕೈಗೆ ಸಿಕ್ತು ವಂದನಾ ಕೋಣೆ ಬೀಗ
ರಾತ್ರಿ ಅಪ್ಪನ ಜೊತೆ ಮಲಗಿರುವ ಪಿಂಕಿಗೆ ನಿದ್ದೆ ಬಂದಿರುವುದಿಲ್ಲ. ಹೇಗಾದರೂ ಅಮ್ಮನನ್ನು ನೋಡಬೇಕು ಎಂದು ಅವಳು ಬಯಸುತ್ತಾಳೆ. ನಿಧಾನಕ್ಕೆ ಎದ್ದು ಹೋಗಿ ಅಮ್ಮ ಕೋಣೆಯ ಬಾಗಿಲು ಬಡಿಯುತ್ತಾಳೆ. ಬಾಗಿಲು ತೆಗೆಯಲು ಪ್ರಯತ್ನಿಸುತ್ತಾಳೆ. ಆಗ ಎಚ್ಚರವಾಗಿಯೇ ಇರುವ ವಂದನಾ ಎದ್ದು ಬರುತ್ತಾಳೆ. ಅವಳ ಬಳಿ ಪಿಂಕಿ ನಾನಮ್ಮ ಪಿಂಕಿ, ಬಾಗಿಲು ತೆಗೆಯಲು ಬರ್ತಿಲ್ಲ ಎಂದು ಹೇಳುತ್ತಾಳೆ. ಆಗ ವಂದನಾ ಒಳಗಿಂದ ʼಪಿಂಕಿ ಪುಟ್ಟ ರೂಮ್ ಹೊರಗಿಂದ ಲಾಕ್ ಆಗಿದೆ. ಕೀ ಆ ವಿಜಯಾಂಬಿಕಾ ಬಳಿ ಇದೆ, ಆದರೆ ನೀನು ಯಾವುದೇ ಕಾರಣಕ್ಕೂ ಅವಳ ಕೋಣೆಗೆ ಹೋಗಬೇಡ. ಆ ವಿಜಯಾಂಬಿಕಾ ನರರೂಪದಲ್ಲಿರುವ ರಾಕ್ಷಸಿ. ಅವಳು ನಿನಗೆ ಏನಾದ್ರೂ ಮಾಡ್ತಾಳೆ. ದಯವಿಟ್ಟು ನೀನು ಹೋಗಬೇಡ ಎನ್ನುತ್ತಿರುತ್ತಾಳೆ. ಆದರೆ ಪಿಂಕಿ ಕೀ ವಿಜಯಾಂಬಿಕಾ ಬಳಿ ಇದೆ ಎನ್ನುವುದನ್ನಷ್ಟೇ ಕೇಳಿಸಿಕೊಂಡು ವಿಜಯಾಂಬಿಕಾ ಕೋಣೆಗೆ ಮೆಲ್ಲಗೆ ಕದ್ದು ಹೋಗುತ್ತಾಳೆ. ಕೀಗಾಗಿ ರೂಮ್‌ನಲ್ಲಿ ಹುಡುಕುತ್ತಾಳೆ. ಮಧ್ಯೆ ವಿಜಯಾಂಬಿಕಾಗೆ ಎಚ್ಚರವಾದ್ರೂ ಪಿಂಕಿ ಅವಳ ಕೈಗೆ ಸಿಕ್ಕಿ ಬೀಳುವುದಿಲ್ಲ. ಕೊನೆಗೂ ಪಿಂಕಿ ಕೀ ಎಲ್ಲಿದೆ ಎಂದು ಕಂಡುಹಿಡಿಯುತ್ತಾಳೆ. ನಿಧಾನಕ್ಕೆ ಅದನ್ನು ಎತ್ತಿಕೊಂಡು ಹೊರ ಬರುತ್ತಾಳೆ. ಯಾರೂ ನೋಡಿಲ್ಲ ಎಂದುಕೊಂಡು ಗಾಬರಿಯಲ್ಲಿ ಬರುತ್ತಿರುವ ಪಿಂಕಿಗೆ ಮದನ್ ಅಡ್ಡ ಸಿಗುತ್ತಾನೆ. ಕುಡಿದ ಮತ್ತಿನಲ್ಲಿರುವ ಮದನ್‌ಗೆ ತಾನು ಏನು ಮಾಡುತ್ತಿದ್ದೇನೆ, ಮಾತನಾಡುತ್ತಿದ್ದೇನೆ ಎನ್ನುವುದು ಅರಿವಿರುವುದಿಲ್ಲ. ಅವನು ಪಿಂಕಿ ಬಳಿ ನೀನೇನು ಮಾಡ್ತಾ ಇದೀಯಾ ಇಷ್ಟೊತ್ತಲ್ಲಿ ಎನ್ನುತ್ತಾಳೆ. ಅದಕ್ಕೆ ಅವಳು ನಿದ್ದೆ ಬರ್ತಿಲ್ಲ ಅದಕ್ಕೆ ಆಟ ಆಡ್ತಿದ್ದೆ ಅಂತಾಳೆ. ಆಗ ಮದನ್ ಮಕ್ಕಳು ಇಷ್ಟೊತ್ತಲ್ಲೆಲ್ಲಾ ಆಟ ಆಡಬಾರದು, ನೀನು ರೂಮ್‌ಗೆ ಹೋಗು ಎಂದು ಹೇಳಿ ಕಳುಹಿಸುತ್ತಾನೆ. ಅಬ್ಬಾ ತಪ್ಪಿಸಿಕೊಂಡೆ ಎಂದುಕೊಳ್ಳುವ ಪಿಂಕಿ ಕೈ ಹಿಡಿಯುವ ಮದನ್ ನಾನೇ ರೂಮ್‌ವರೆಗೂ ಬಿಟ್ಟು ಬರ್ತಿನಿ ಬಾ ಎನ್ನುತ್ತಾನೆ. ಪಿಂಕಿ ಕೈಯಲ್ಲಿ ವಂದನಾ ಕೋಣೆಯ ಬೀಗ ಇರುತ್ತದೆ.
ಪಿಂಕಿ ಕೈಯಲ್ಲಿ ಬೀಗ ಇರೋದು ಮದನ್‌ಗೆ ಗೊತ್ತಾಗುತ್ತಾ, ವಂದನಾ ಕೋಣೆ ಬೀಗ ತೆಗೆದು ಒಳ ಹೋಗುವಲ್ಲಿ ಪಿಂಕಿ ಯಶಸ್ವಿಯಾಗ್ತಾಳಾ, ಇನ್ನಾದ್ರೂ ವಂದನಾಗೆ ಬಿಡುಗಡೆ ಸಿಗುತ್ತಾ, ಸುಬ್ಬು ಹೇಳಿದಂತೆ ಸುಂದರನಿಗೆ ಮಿನಿಸ್ಟರ್ ಬಳಿ ಕೆಲಸ ಕೊಡಿಸ್ತಾನಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಿಭಾಗ