ವರ್ಕ್‌ ಆಯ್ತು ವಿಜಯಾಂಬಿಕಾ ಪ್ಲಾನ್‌, ಸುಬ್ಬು ಬೇಡಿಕೆಗೆ ಅಸ್ತು ಎಂದ ವೀರು, ಶ್ರಾವಣಿಗೆ ಎದುರಾಗುತ್ತಾ ಆಪತ್ತು; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ವರ್ಕ್‌ ಆಯ್ತು ವಿಜಯಾಂಬಿಕಾ ಪ್ಲಾನ್‌, ಸುಬ್ಬು ಬೇಡಿಕೆಗೆ ಅಸ್ತು ಎಂದ ವೀರು, ಶ್ರಾವಣಿಗೆ ಎದುರಾಗುತ್ತಾ ಆಪತ್ತು; ಶ್ರಾವಣಿ ಸುಬ್ರಹ್ಮಣ್ಯ

ವರ್ಕ್‌ ಆಯ್ತು ವಿಜಯಾಂಬಿಕಾ ಪ್ಲಾನ್‌, ಸುಬ್ಬು ಬೇಡಿಕೆಗೆ ಅಸ್ತು ಎಂದ ವೀರು, ಶ್ರಾವಣಿಗೆ ಎದುರಾಗುತ್ತಾ ಆಪತ್ತು; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿ ವಿಚಾರದಲ್ಲಿ ಶ್ರೀವಲ್ಲಿಗೆ ಉಲ್ಟಾ ಹೊಡೆದ ಕಾಂತಮ್ಮ. ಭಾವನ ಪರವಾಗಿ ಯಜಮಾನರ ಬಳಿ ಕೆಲಸ ಕೇಳಿದ ಸುಬ್ಬು, ವರ್ಕ್‌ ಆಯ್ತು ವಿಜಯಾಂಬಿಕಾ ಪ್ಲಾನ್‌. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮೇ 16ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 16ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 16ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 16ರ ಸಂಚಿಕೆಯಲ್ಲಿ ಶ್ರಾವಣಿ ಮೇಲೆ ದ್ವೇಷದಿಂದ ಬುಸುಗುಟ್ಟುತ್ತಿರುವ ಶ್ರೀವಲ್ಲಿ ಕಾಂತಮ್ಮನನ್ನು ಭೇಟಿ ಮಾಡುವ ಸಲುವಾಗಿ ಸುಬ್ಬು ಮನೆಗೆ ಬರುತ್ತಾಳೆ. ಅಲ್ಲಿ ಅವಳಿಗೆ ಕಾಂತಮ್ಮ ಬಟ್ಟೆ ಒಗೆಯುತ್ತಿರುವುದು ಕಾಣಿಸುತ್ತದೆ. ʼಕಾಂತಮ್ಮಮ್ಮಿ, ನೀವೇನು ಬಟ್ಟೆ ವಾಶ್‌ ಮಾಡ್ತಾ ಇದೀರಾ, ಈ ಮನೆಯಲ್ಲಿ ಕೆಲಸ ಮಾಡಲು ಆ ಶ್ರಾವಣಿ ಇಲ್ವಾ, ನೀವ್ಯಾಕೆ ಕೆಲಸ ಮಾಡಬೇಕುʼ ಎನ್ನುತ್ತಾಳೆ. ಅಲ್ಲದೇ ನೀವು ಶ್ರಾವಣಿ ವಿರುದ್ಧ ಸೇಡು ತೀರಿಸಿಕೊಳ್ಳಲು ನನಗೆ ಸಹಾಯ ಮಾಡ್ತೀನಿ ಅಂತ ಹೇಳಿದ್ರಿ, ಅಲ್ಲದೇ ಸುಬ್ಬು ಜೊತೆ ಮದುವೆ ಮಾಡಿಸ್ತೀನಿ ಅಂತ ಹೇಳಿದ್ರಿ, ಆದರೆ ಈಗ ಎಲ್ಲಾ ಮರೆತು ಬಟ್ಟೆ ಒಗೆಯುತ್ತಾ ಕೂತಿದ್ದೀರಾ ಎಂದು ರೋಷದಲ್ಲಿ ಕೇಳುತ್ತಾಳೆ. ಆಗ ಕಾಂತಮ್ಮ ಸುಬ್ಬು ನಿನಗೆ ಯಾಕೆ ಸಿಗಬೇಕು, ಸುಬ್ಬುಗೆ ಶ್ರಾವಣಿ ಮೇಡಂ ಹೆಂಡತಿಯಾಗಿ ಆಗಿದೆ. ಈಗ ನೀನು ಸುಬ್ಬುವನ್ನು ಇಷ್ಟಪಟ್ಟರೆ ಮದುವೆಯಾಗುತ್ತೇನೆ ಎಂದರೆ ಪ್ರಯೋಜನವಿಲ್ಲ. ನೀನು ಸುಬ್ಬು ಆಸೆ ಬಿಡುʼ ಎಂದು ಉಲ್ಟಾ ಹೊಡೆಯುತ್ತಾಳೆ. ಕಾಂತಮ್ಮನ ಮಾತು ಕೇಳಿ ಶ್ರೀವಲ್ಲಿ ಕೋಪ ನೆತ್ತಿಗೇರುತ್ತದೆ. ಅವಳು ಕಾಂತಮ್ಮನಿಗೆ ಸರಿಯಾಗಿ ಬಯ್ಯುತ್ತಾಳೆ. ಇವರಿಬ್ಬರ ಮಾತನ್ನು ಕೇಳಿಸಿಕೊಂಡ ಶ್ರಾವಣಿಗೆ ಶ್ರೀವಲ್ಲಿಗೆ ಇಷ್ಟು ದಿನ ನಮ್ಮ ಮನೆಯ ವಿಚಾರ ಯಾರು ಹೇಳುತ್ತಿದ್ದರು ಎನ್ನುವುದು ಅರ್ಥವಾಗುತ್ತದೆ.

ಧನಲಕ್ಷ್ಮೀ ಬಳಿ ಶ್ರೀವಲ್ಲಿ ದೂರು, ಶ್ರಾವಣಿಗೆ ಅತ್ತೆಯ ಕೈ ತುತ್ತು

ಕಾಂತಮ್ಮ ಕೂಡ ತನಗೆ ವಿರುದ್ಧವಾಗಿ ನಿಂತಿದ್ದು ಸಹಿಸದ ಶ್ರೀವಲ್ಲಿ ಧನಲಕ್ಷ್ಮೀಯನ್ನು ಮನೆಯಿಂದ ಹೊರಗಡೆ ಕರೆಯುತ್ತಾಳೆ. ಅವಳ ಬಳಿ ಕಾಂತಮ್ಮ ಹೇಳಿದ್ದನ್ನೆಲ್ಲಾವೂ ಹೇಳಿ ಕಾಂತಮ್ಮ ಕೂಡ ಶ್ರಾವಣಿ ಪರವಾಗಿ ತಿರುಗಿದ್ದಾರೆ ಎಂದು ದೂರು ಹೇಳುತ್ತಾಳೆ. ಇತ್ತ ವಿಶಾಲಾಕ್ಷಿ ಪದ್ಮನಾಭ ಧನಲಕ್ಷ್ಮೀ ಮನೆಯಲ್ಲಿ ಇಲ್ಲದ್ದನ್ನು ನೋಡಿ ಶ್ರಾವಣಿಗೆ ಕೈ ತುತ್ತು ತಿನ್ನಿಸುವ ಪ್ಲಾನ್‌ ಮಾಡುತ್ತಾರೆ. ವಿಶಾಲಾಕ್ಷಿ ಶ್ರಾವಣಿಗೆ ಕೈ ತುತ್ತು ತಿನ್ನಿಸಿ ಸಂಭ್ರಮಿಸಿದರೆ ಶ್ರಾವಣಿ ಕಣ್ಣೀರು ಸುರಿಸುತ್ತಾಳೆ. ಆದರೆ ಧನಲಕ್ಷ್ಮೀ ಮಾತ್ರ ಶ್ರೀವಲ್ಲಿ ಬಳಿ ಯಾರು ಬದಲಾದ್ರೂ ನನ್ನ ಅಮ್ಮ ಬದಲಾಗುವುದಿಲ್ಲ. ಅವಳು ಶ್ರಾವಣಿಯನ್ನು ಕಂಡರೆ ದ್ವೇಷ ಮಾಡುತ್ತಾಳೆ. ನಾನು ಅಮ್ಮ ಯಾವಾಗಲೂ ನಿನ್ನ ಪರ ಎಂದು ಭರವಸೆ ನೀಡುತ್ತಾಳೆ.

ವಿಜಯಾಂಬಿಕಾ ಶಿಫಾರಸು, ಸುಬ್ಬು ಬೇಡಿಕೆ, ಸುಂದರನಿಗೆ ಸಿಕ್ತು ಕೆಲಸ

ಯಜಮಾನರ ಬಳಿ ನಮ್ಮ ಭಾವನಿಗೊಂದು ಕೆಲಸ ಕೊಡಿ ಎಂದು ಬೇಡಿಕೊಳ್ಳುತ್ತಾನೆ ಸುಬ್ಬು. ಅದಕ್ಕೆ ಸುರೇಂದ್ರ ಇಲ್ಲ ನಮ್ಮಲ್ಲಿ ಯಾವುದೇ ಕೆಲಸ ಇಲ್ಲ ಎನ್ನುತ್ತಾನೆ. ವೀರೇಂದ್ರ ಈ ಬಗ್ಗೆ ಯೋಚಿಸುತ್ತಿರುವಾಗ ಅವನನ್ನು ಕರೆಯುವ ವಿಜಯಾಂಬಿಕಾ ಅವನ ಮುಂದೆ ನಾಟಕವಾಡುತ್ತಾಳೆ. ಸುಬ್ಬು ಭಾವನಿಗೆ ಕೆಲಸ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ದಯವಿಟ್ಟು ಅವನಿಗೊಂದು ಕೆಲಸ ಕೊಡು, ಆದರೆ ನಾನು ಹೇಳಿದ್ದು ಅಂತ ಗೊತ್ತಾಗೋದು ಬೇಡ ಅಂತ ಮನವಿ ಮಾಡಿದಂತೆ ಕೇಳಿಕೊಳ್ಳುತ್ತಾಳೆ. ಅಕ್ಕನ ಮಾತು ಎಂದಿಗೂ ತೆಗೆದು ಹಾಕದ ವೀರೇಂದ್ರ ಸುಂದರನಿಗೆ ಕೆಲಸ ಕೊಡಿಸಲು ಒಪ್ಪಿಕೊಳ್ಳುತ್ತಾನೆ. ವಿಜಯಾಂಬಿಕಾ ಸುಂದರನನ್ನು ತನ್ನ ಅಸಿಸ್ಟೆಂಟ್‌ ಆಗಿ ಮಾಡಿಕೊಳ್ಳುತ್ತೇನೆ ಎಂದಿದ್ದಕ್ಕೂ ಒಕೆ ಎನ್ನುತ್ತಾನೆ. ಅಕ್ಕನ ಮೋಸದಾಟ ತಿಳಿಯದ ವೀರೇಂದ್ರ ಅವಳು ಕೆಲಸ ಕೊಡಿಸಿಯೂ ತನ್ನ ಹೆಸರು ಹೇಳಬಾರದು ಎಂದಿದ್ದು ಅವಳ ದೊಡ್ಡ ಗುಣ ಎಂದುಕೊಳ್ಳುತ್ತಾನೆ. ಇತ್ತ ವಿಜಯಾಂಬಿಕಾ ಸುಂದರನನ್ನು ಮುಂದಿಟ್ಟುಕೊಂಡು ಶ್ರಾವಣಿಯ ಬದುಕು ನಾಶ ಮಾಡಲು ಯೋಚಿಸುತ್ತಾಳೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.