ಪಿಂಕಿಯಿಂದಾಗಿ ಶ್ರಾವಣಿಗೆ ತಿಳಿಯಿತು ವಂದನಾ ಬಂಧಿಯಾಗಿರುವ ವಿಚಾರ, ಬಯಲಾಗುತ್ತಾ ವಿಜಯಾಂಬಿಕಾ ಮೋಸದಾಟ; ಶ್ರಾವಣಿ ಸುಬ್ರಹ್ಮಣ್ಯ
ಸುಬ್ಬು ಮನೆಯವರೆಲ್ಲರೂ ಶ್ರಾವಣಿ ಜೊತೆ ಒಂದಾಗಿರುವುದು ನೋಡಿ ಶ್ರೀವಲ್ಲಿಗೆ ಹೊಟ್ಟೆ ಉರಿದು ಹೋಗಿದೆ. ಪಿಂಕಿ ಕಾಲ್ ಮಾಡಿ ವಂದನಾ ವಿಷ್ಯಾ ಶ್ರಾವಣಿಗೆ ಹೇಳುತ್ತಾಳೆ. ಮುಂದೇನು ಮಾಡಬಹುದು ವಿಜಯಾಂಬಿಕಾ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮೇ 26ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 26ರ ಸಂಚಿಕೆಯಲ್ಲಿ ಸುಬ್ಬು ಮನೆಯವರೆಲ್ಲಾ ಶ್ರಾವಣಿಯನ್ನು ಸೊಸೆ ಎಂದು ಒಪ್ಪಿಕೊಂಡಿರುವುದು ಮಾತ್ರವಲ್ಲ, ಪ್ರೀತಿಯ ಸುಧೆ ಹರಿಸುತ್ತಿರುತ್ತಾರೆ. ಶ್ರಾವಣಿ ಜೊತೆ ಮನೆಯ ಹೆಂಗಸರೆಲ್ಲಾ ಖುಷಿಯಿಂದ ಮಾತನಾಡುತ್ತಾ ಅಡುಗೆ ಕೆಲಸದಲ್ಲಿ ನಿರತರಾಗಿರುತ್ತಾರೆ. ಆ ಹೊತ್ತಿಗೆ ಸರಿಯಾಗಿ ಎಂಟ್ರಿ ಕೊಡ್ತಾಳೆ ಶ್ರೀವಲ್ಲಿ.
ಸುಬ್ಬು ಮನೆಯ ಖುಷಿ ಕಂಡು ಶ್ರೀವಲ್ಲಿಗೆ ಹೊಟ್ಟೆ ಉರಿ
ನಗು ನಗುತ್ತಾ ಸುಬ್ಬು ಮನೆಯ ಅಡುಗೆಮನೆ ಕಡೆ ಬರುವ ಶ್ರೀವಲ್ಲಿಗೆ ಅಲ್ಲಿನ ದೃಶ್ಯ ಕಂಡು ಉರಿದು ಹೋಗುತ್ತದೆ. ಅವಳಿಗೆ ಮನೆಯವರೆಲ್ಲಾ ಶ್ರಾವಣಿ ಜೊತೆ ಒಂದಾಗಿರುವುದು ತಿಳಿಯುತ್ತದೆ. ಧನಲಕ್ಷ್ಮೀ ಕೂಡ ಶ್ರಾವಣಿ ಪರವಾಗಿರುವುದು ಅವಳಿಗೆ ನುಂಗಲಾರದ ತುತ್ತಾಗಿರುತ್ತದೆ. ಅದನ್ನು ನೋಡಿ ಕೋಪದಿಂದ ಹೊರಡುವ ಶ್ರೀವಲ್ಲಿ ಹಿಂದೆ ಹೋಗುವ ಧನಲಕ್ಷ್ಮೀ ಅವಳನ್ನು ಸಮಾಧಾನ ಮಾಡಲು ನೋಡುತ್ತಾಳೆ. ಶ್ರೀವಲ್ಲಿಗೆ ಪರಿಸ್ಥಿತಿ ಅರ್ಥ ಮಾಡಿಸಲು ಪ್ರಯತ್ನಿಸಿದರೂ ಅರ್ಥ ಮಾಡಿಕೊಳ್ಳದೇ ಇದ್ದಾಗ ಧನಲಕ್ಷ್ಮೀ ‘ತನ್ನ ತಮ್ಮ ಯಾವತ್ತಿದ್ದರೂ ಶ್ರಾವಣಿ ಮೇಡಂಗೆ ಸ್ವತಃ, ಅವರನ್ನು ದೂರು ಮಾಡಲು ಪ್ರಯತ್ನ ಮಾಡಬೇಡ‘ ಎಂದು ವಾರ್ನಿಂಗ್ ಕೊಡುತ್ತಾಳೆ. ಆ ಮಾತು ಕೇಳಿ ಶ್ರೀವಲ್ಲಿ ಕೋಪ ನೆತ್ತಿಗೇರುತ್ತದೆ.
ಶ್ರಾವಣಿಗೆ ಅಮ್ಮನ ಪರಿಸ್ಥಿತಿ ಹೇಳುವ ಪಿಂಕಿ
ಅಮ್ಮನ ಪರಿಸ್ಥಿತಿಯನ್ನು ನೆನೆದು ಬೇಸರ ಮಾಡಿಕೊಳ್ಳುವ ಪಿಂಕಿ ಹೇಗಾದ್ರೂ ಈ ವಿಚಾರವನ್ನು ಶ್ರಾವಣಿ ಅಕ್ಕನಿಗೆ ಹೇಳಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾಳೆ. ನಿಧಾನಕ್ಕೆ ಅಮ್ಮನ ಕೋಣೆಯ ಕೀ ಜೊತೆಗೆ ಫೋನ್ ಹಿಡಿದು ಕೋಣೆಗೆ ಬರುತ್ತಾಳೆ. ಕೋಣೆಯೊಳಗೆ ಬಂದ ಮಗಳನ್ನು ತಬ್ಬಿಕೊಂಡು ಅಳುವ ವಂದನಾ ಬಳಿ ಶ್ರಾವಣಿ ಅಕ್ಕನಿಗೆ ಎಲ್ಲಾ ವಿಚಾರ ಹೇಳೋಣ ಅಮ್ಮ, ಅದಕ್ಕಾಗಿ ನಾನು ಫೋನ್ ತಂದಿದ್ದೇನೆ ಎಂದು ಶ್ರಾವಣಿಗೆ ಫೋನ್ ಮಾಡುತ್ತಾಳೆ. ಇರುವ ವಿಚಾರವನ್ನೆಲ್ಲಾ ಮೇಲೆ ಮೇಲೆ ಹೇಳುವ ಪಿಂಕಿ ತನಗೆ ಅಮ್ಮನನ್ನು ನೋಡಲು ಬಿಡುತ್ತಿಲ್ಲ ಎಂಬ ದೂರು ಹೇಳುತ್ತಾಳೆ. ವಂದನಾ ಫೋನ್ ತೆಗೆದುಕೊಂಡು ಹಲೋ ಶ್ರಾವಣಿ ಎಂದು ಹೇಳಿದ್ದೆ ತಡ ಆ ಕಡೆಯಿಂದ ಸುರೇಂದ್ರ ಬಂದು ಫೋನ್ ಕಿತ್ತುಕೊಂಡು ಪಿಂಕಿಯನ್ನು ಎಳೆದುಕೊಂಡು ಹೊರ ಹೋಗುತ್ತಾರೆ. ವಂದನಾ ನನ್ನನ್ನು, ನನ್ನ ಮಗಳನ್ನು ದೂರ ಮಾಡ್ಬೇಡಿ ಎಂದು ಅಳುತ್ತಾ ಕೂಗುತ್ತಿದ್ದರೂ ಕೇಳಿಸಿಕೊಳ್ಳದವಳಂತೆ ಪಿಂಕಿಗೆ ಹೆದರಿಸಿ ಕರೆದುಕೊಂಡು ಹೋಗುತ್ತಾನೆ.
ಶ್ರೀವಲ್ಲಿಗೆ ಕಣ್ಣೀರಿಗೆ ಕರಗಿದ ಇಂದ್ರಮ್ಮ, ವಿಜಯಾಂಬಿಕಾಗೆ ಗೊತ್ತಾಯ್ತು ಪಿಂಕಿ ಆಟ
ಸುಬ್ಬು ಮನೆಯಲ್ಲಿ ಎಲ್ಲರೂ ಒಂದಾಗಿದ್ದು ಶ್ರೀವಲ್ಲಿಗೆ ತಡೆಯಲಾರದಷ್ಟು ಕೋಪ, ದುಃಖ ಬಂದಿರುತ್ತದೆ. ಮನೆಗೆ ಬಂದವಳೇ ಬೆಡ್‌ಶೀಟ್‌ನೆಲ್ಲಾ ಎತ್ತಿ ಹಾಕಿ ಅಳುತ್ತಾ ಕೂರುತ್ತಾಳೆ. ಅವಳ ಕೋಣೆಗೆ ಬಂದು ಮಗಳು ಅಳೋದು ನೋಡಿದ ಇಂದ್ರಮ್ಮ ಕೋಪದಲ್ಲಿ ಸುಬ್ಬು ಮನೆಯವರ ಮೇಲೆ ಕಿರುಚುಡುತ್ತಾಳೆ. ಮಾತ್ರವಲ್ಲ ತನ್ನ ಮಗಳ ಕಣ್ಣಲ್ಲಿ ನೀರು ಹಾಕಿಸಿದ ಅವರ ಕಣ್ಣಲ್ಲೂ ನೀರು ಬರಬೇಕು, ಅದಕ್ಕೆ ವರಲಕ್ಷ್ಮೀ ಕಣ್ಣೀರು ಹಾಕಬೇಕು ಎಂದು ಅವಳಿಗೆ ಕಣ್ಣೀರು ಹಾಕಿಸಲು ಸಿದ್ಧಳಾಗುತ್ತಾಳೆ. ಇತ್ತ ವಿಜಯಾಂಬಿಕಾ ಮುಂದೆ ಪಿಂಕಿಯನ್ನು ಬೈಯುವ ಸುರೇಂದ್ರ ಕಾರಣ ಏನು ಅನ್ನೋದನ್ನೂ ಹೇಳುತ್ತಾನೆ. ಅದನ್ನು ಕೇಳಿ ವಿಜಯಾಂಬಿಕಾ ಶಾಕ್ ಆಗ್ತಾಳೆ. ಅವಳಿಗೆ ಪಿಂಕಿ ಕೋಣೆಯ ಕೀ ತೆಗೆದು ವಂದನಾ ಜೊತೆ ಮಾತನಾಡಿದ್ದು, ಶ್ರಾವಣಿಗೆ ಪಿಂಕಿ ಕಾಲ್ ಮಾಡಿದ್ದು ಎಲ್ಲವೂ ತಿಳಿಯುತ್ತದೆ. ಅದಕ್ಕಾಗಿ ಕೂಡಲೇ ವಂದನಾಗೆ ಏನಾದ್ರೂ ಮಾಡ್ಬೇಕು ಅಂತ ಪ್ಲಾನ್ ಮಾಡ್ತಾಳೆ.
ಶ್ರಾವಣಿಗೆ ವಂದನಾ ಅಪಾಯದಲ್ಲಿರೋದು ಅರ್ಥ ಆಗುತ್ತಾ, ಅವಳಿಂದ ವಂದನಾಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಾ, ವಿಜಯಾಂಬಿಕಾ ವಂದನಾಗೆ ಏನು ಮಾಡಬಹುದು, ಸುಬ್ಬು ಮನೆಯವರ ಮೇಲಿನ ಸಿಟ್ಟಿನಿಂದ ಇಂದ್ರಮ್ಮ ವರಲಕ್ಷ್ಮೀಗೆ ಯಾವ ರೀತಿ ಟಾರ್ಚರ್ ಕೊಡಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್