ಭಾಗ್ಯಾಗೆ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್‌ ಕೊಟ್ಟ ತಾಂಡವ್‌, ಕುಸುಮಾ ವ್ರತ ಫಲ ನೀಡಿ ಒಂದಾಗೇ ಬಿಟ್ರಾ ಮಗ ಸೊಸೆ?; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾಗೆ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್‌ ಕೊಟ್ಟ ತಾಂಡವ್‌, ಕುಸುಮಾ ವ್ರತ ಫಲ ನೀಡಿ ಒಂದಾಗೇ ಬಿಟ್ರಾ ಮಗ ಸೊಸೆ?; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾಗೆ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್‌ ಕೊಟ್ಟ ತಾಂಡವ್‌, ಕುಸುಮಾ ವ್ರತ ಫಲ ನೀಡಿ ಒಂದಾಗೇ ಬಿಟ್ರಾ ಮಗ ಸೊಸೆ?; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 13ರ ಎಪಿಸೋಡ್‌ನಲ್ಲಿ ಕಪಲ್‌ ಟ್ರಿಪ್‌ಗೆ ತಾಂಡವ್-ಶ್ರೇಷ್ಠಾ ಬಂದು ಉಳಿದುಕೊಂಡ ಹೋಟೆಲ್‌ನಲ್ಲೇ ಭಾಗ್ಯಾ ಶೆಫ್‌ ಆಗಿ ಬಂದಿದ್ದಾಳೆ. ನಿಜ ವಿಚಾರ ಗೊತ್ತಿಲ್ಲದೆ, ಜೋಡಿಗಳಿಗಾಗಿ ಅವರು ಇಷ್ಟಪಡುವಂತೆ ಎಲ್ಲಾ ಅರೇಂಜ್‌ಮೆಂಟ್‌ ಮಾಡುತ್ತಾಳೆ. ಅದನ್ನು ನೋಡಿ ತಾಂಡವ್‌ ಇಂಪ್ರೆಸ್‌ ಆಗುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 13ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 13ರ ಎಪಿಸೋಡ್‌ (PC: Jio Cinema)

Bhagyalakshmi Kannada Serial: ಕಪಲ್‌ ಟ್ರಿಪ್‌ಗಾಗಿ ಬಂದಿದ್ದ ತಾಂಡವ್-ಶ್ರೇಷ್ಠಾ ಜಗಳ ಮಾಡಿಕೊಳ್ಳುತ್ತಾರೆ. ಈ ವಿಚಾರವನ್ನು ಸಹನಾ, ಭಾಗ್ಯಾ ಬಳಿ ಬಂದು ಹೇಳುತ್ತಾಳೆ. ನಮ್ಮ ಹೋಟೆಲ್‌ಗೆ ಅತಿಥಿಗಳಾಗಿ ಬಂದಿರುವವರು ಜಗಳವಾಡುವುದು ನನಗೆ ಇಷ್ಟವಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ ಎಂದು ಭಾಗ್ಯಾ ತಾಂಡವ್-ಶ್ರೇಷ್ಠಾ ರೂಮ್‌ಗೆ ಬರುತ್ತಾಳೆ.

ತಾಂಡವ್‌ಗೆ ಪತ್ರ ಬರೆದ ಭಾಗ್ಯಾ

ಈ ಸಮಯದಲ್ಲಿ ನೀವು ಅವರನ್ನು ಭೇಟಿ ಮಾಡುವುದು ಸರಿಯಲ್ಲ ಎಂದು ಸಹನಾ ಸಲಹೆ ನೀಡುತ್ತಾಳೆ. ಅದು ಭಾಗ್ಯಾಗೂ ಸರಿ ಎನಿಸಿ ನಿಮ್ಮ ಹೆಂಡತಿಗೆ ಸಮಯ ಕೊಡಿ, ಅವರಿಗಾಗಿ ಏನಾದರೂ ಸರ್ಪ್ರೈಸ್‌ ಪ್ಲ್ಯಾನ್‌ ಮಾಡಿ, ನಾಲ್ಕೈದು ಒಳ್ಳೆ ಮಾತನಾಡಿ ಎಂದು ಲೆಟರ್‌ ಬರೆದಿಟ್ಟು ಹೋಗುತ್ತಾಳೆ. ರೂಮ್‌ಗೆ ವಾಪಸ್‌ ಬರುವ ತಾಂಡವ್‌ ಆ ಲೆಟರ್‌ ನೋಡಿ ಇಂಪ್ರೆಸ್‌ ಆಗುತ್ತಾನೆ. ಅದನ್ನು ಬರೆದದ್ದು ಭಾಗ್ಯಾ ಎಂದು ತಿಳಿಯದೆ ತಾಂಡವ್‌, ಆ ಪತ್ರದಲ್ಲಿ ಬರೆದ ಸಾಲುಗಳ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾನೆ. ಅಲ್ಲಿ ಬರೆದಿರುವಂತೆ ಶ್ರೇಷ್ಠಾಗೆ ಡಿನ್ನರ್‌ ಆಯೋಜಿಸಬೇಕು, ಅವಳ ಜೊತೆ ಪ್ರೀತಿಯಿಂದ ಮಾತನಾಡಬೇಕು ಎಂದು ನಿರ್ಧರಿಸುತ್ತಾನೆ.

ಭಾಗ್ಯಾ, ತನ್ನ ತಂಡದ ಜೊತೆ ಸೇರಿ ಆ ದಿನದ ಡಿನ್ನರ್‌ಗೆ ಎಲ್ಲಾ ಅರೇಂಜ್‌ ಮಾಡುತ್ತಾಳೆ. ಆ ಕಪಲ್‌ ಟ್ರಿಪ್‌ ಬಗ್ಗೆ ಅವಳಿಗೆ ಏನೂ ಐಡಿಯಾ ಇಲ್ಲದಿದ್ದರೂ, ತನ್ನ ಗಂಡ ತಾಂಡವ್‌ ಯಾವ ರೀತಿಯ ಆಂಬಿಯನ್ಸ್‌ ಇಷ್ಟ ಪಡುತ್ತಾನೆ? ಯಾವ ರೀತಿಯ ಫುಡ್‌ ಇಷ್ಟಪಡುತ್ತಾನೆ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಅರೇಂಜ್‌ ಮಾಡುತ್ತಾಳೆ. ಅದನ್ನು ನೋಡಿ ಸ್ವತ: ಸಹನಾ ಖುಷಿಯಾಗುತ್ತಾಳೆ. ನೀವು ಇಷ್ಟು ಚೆನ್ನಾಗಿ ಡೆಕೊರೇಷನ್‌ ಮಾಡಿದ್ದೀರಿ, ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು ಎಂದು ಕೇಳುತ್ತಾಳೆ. ನನ್ನ ಗಂಡ ಯಾವ ರೀತಿ ಇಷ್ಟಪಡುತ್ತಾರೋ ಇಲ್ಲೂ ಅದೇ ರೀತಿ ಮಾಡಿದ್ದೇನೆ ಎನ್ನುತ್ತಾಳೆ. ಇತ್ತೀಚೆಗೆ ಪೂಜಾ ಜೊತೆ, ತನ್ನ ವೈವಾಹಿಕ ಜೀವನ ಹೇಗಿರಬೇಕು ಎಂದು ಹೇಳಿಕೊಂಡಿದ್ದಳೋ ಹಾಗೇ ಭಾಗ್ಯಾ ಕನಸು ಕಾಣುತ್ತಾಳೆ.

ಭಾಗ್ಯಾ ಕಂಡ ಕನಸಿನ ಮಾತುಗಳನ್ನು ಶ್ರೇಷ್ಠಾ ಮುಂದೆ ಹೇಳುವ ತಾಂಡವ್

ತಾಂಡವ್‌ ತನ್ನ ಕಣ್ಣಿಗೆ ಬಟ್ಟೆ ಕಟ್ಟಿ ಆ ಅರೇಂಜ್‌ಮೆಂಟ್‌ ಬಳಿ ತನ್ನನ್ನು ಕರೆತಂದು ಸರ್ಪ್ರೈಸ್‌ ನೀಡುವುದು, ಅವಳ ಕೈ ಹಿಡಿದು ನಡೆಸಿ ತರುವುದು, ಅವಳ ಮುಂಗುರುಳು ಸರಿಸುವುದು, ನೀನು ನನಗೆ ತಕ್ಕ ಹೆಂಡತಿ, ನಿನ್ನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಪ್ರೀತಿಯಿಂದ ತಾಂಡವ್‌ ಹೇಳುವಂತೆ, ಅವನ ಮಾತುಗಳನ್ನು ಕೇಳಿ ಭಾಗ್ಯಾ ಖುಷಿಯಾಗುವಂತೆ ಕನಸು ಕಾಣುತ್ತಾಳೆ. ಪದೇ ಪದೆ ಭಾಗ್ಯಾ, ಕನಸಿನಲ್ಲಿ ಕಳೆದುಹೋಗುವುದನ್ನು ನೋಡುವ ಸಹನಾ, ಮೇಡಂ ಈ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂದುಕೊಳ್ಳುತ್ತಾಳೆ. ಭಾಗ್ಯಾ ಅಲ್ಲಿಂದ ಹೋದ ನಂತರ ತಾಂಡವ್‌, ಶ್ರೇಷ್ಠಾಳನ್ನು ಕರೆತರುತ್ತಾನೆ. ಭಾಗ್ಯಾ ಕನಸಿನಲ್ಲಿ ಅಂದುಕೊಂಡದ್ದನೆಲ್ಲಾ ತಾಂಡವ್‌ ಶ್ರೇಷ್ಠಾಗೆ ಹೇಳುತ್ತಾನೆ. ಇದನ್ನೆಲ್ಲಾ ಅರೇಂಜ್‌ ಮಾಡಿರುವವರಿಗೆ ಥ್ಯಾಂಕ್ಸ್‌ ಹೇಳುವಂತೆ ಸಹನಾಗೆ ತಿಳಿಸುತ್ತಾನೆ.

ತಾಂಡವ್‌ ಹಾಗೂ ಶ್ರೇಷ್ಠಾ ಒಟ್ಟಿಗೆ ಇರೋದನ್ನು ಭಾಗ್ಯಾ ನೋಡುತ್ತಾಳಾ? ನಿಜ ತಿಳಿದ ನಂತರ ಭಾಗ್ಯಾ ಪ್ರತಿಕ್ರಿಯೆ ಹೇಗಿರುತ್ತದೆ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner