ಶ್ರೇಷ್ಠಾ-ತಾಂಡವ್‌ ಪ್ರೀತಿಯನ್ನು ಕಣ್ಣಾರೆ ಕಂಡು ಮಳೆನೀರಿಗಿಂತ ಕಣ್ಣೀರ ಧಾರೆಯಲ್ಲಿ ಮಿಂದು ನೊಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾ-ತಾಂಡವ್‌ ಪ್ರೀತಿಯನ್ನು ಕಣ್ಣಾರೆ ಕಂಡು ಮಳೆನೀರಿಗಿಂತ ಕಣ್ಣೀರ ಧಾರೆಯಲ್ಲಿ ಮಿಂದು ನೊಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ-ತಾಂಡವ್‌ ಪ್ರೀತಿಯನ್ನು ಕಣ್ಣಾರೆ ಕಂಡು ಮಳೆನೀರಿಗಿಂತ ಕಣ್ಣೀರ ಧಾರೆಯಲ್ಲಿ ಮಿಂದು ನೊಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 17ರ ಎಪಿಸೋಡ್‌ನಲ್ಲಿ ತನ್ನ ಮುಂದೆ ಶ್ರೇಷ್ಠಾಗೆ ಐ ಲವ್‌ ಯೂ ಹೇಳಿದ್ದಲ್ಲದೆ, ತನ್ನನ್ನು ದಡ್ಡಿ ಎಂದು ಹೀಯಾಳಿಸುವುದನ್ನು ನೋಡಿ ಭಾಗ್ಯಾಗೆ ದುಃಖವಾಗುತ್ತದೆ. ಆ ನೋವಿನಿಂದಲೇ ಭಾಗ್ಯಾ ಅಲ್ಲಿಂದ ಹೋಗುತ್ತಾಳೆ. ಇಷ್ಟು ದಿನ ಕಣ್ಮುಂದೆ ಇಷ್ಟೆಲ್ಲಾ ನಡೆದರೂ ನನಗೆ ಯಾರೂ ಏನೂ ಹೇಳಲಿಲ್ಲ ಎಂದು ಅಳುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 17ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 17ರ ಎಪಿಸೋಡ್‌ (PC: Jio Cinema)

Bhagyalakshmi Kannada Serial: ಇಷ್ಟು ದಿನಗಳು ಬಚ್ಚಿಟ್ಟ ವಿಷಯ ಭಾಗ್ಯಾಗೆ ಗೊತ್ತಾಗಿ ಅವಳ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕಪಲ್‌ ಟ್ರಿಪ್‌ ಬಂದ ತಾಂಡವ್‌ ಹಾಗೂ ಶ್ರೇಷ್ಠಾಳನ್ನು ನೋಡಿ ಭಾಗ್ಯಾ ಶಾಕ್‌ ಆಗಿದ್ದಾಳೆ. ತಾನು ಅನುಮಾನಪಟ್ಟಂತೆ ಎಲ್ಲವೂ ನಿಜವೇ ಆಗಿದೆ. ಆದರೆ ನನ್ನ ಕಣ್ಣ ಮುಂದೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಇಷ್ಟು ದಿನ ಏನೂ ಗೊತ್ತಾಗಲಿಲ್ಲ ಎಂಬ ನೋವು ಭಾಗ್ಯಾಗೆ ಕಾಡುತ್ತಿದೆ.

ಭಾಗ್ಯಾ ದಡ್ಡಿ ಎಂದು ಶ್ರೇಷ್ಠಾ ಮುಂದೆ ಹೀಯಾಳಿಸಿದ ತಾಂಡವ್

ತಾಂಡವ್‌, ಶ್ರೇಷ್ಠಾಗೆ ಐ ಲವ್‌ ಯೂ ಹೆಂಡ್ತಿ ಎಂದು ಅರಚುವುದನ್ನು ಕಂಡು ಭಾಗ್ಯಾಗೆ ಆಘಾತವಾಗಿದೆ. ಭಾಗ್ಯಾ ಹಾಗೂ ತಾಂಡವ ಮಾತನಾಡುವ ಪ್ರತಿಯೊಂದು ಮಾತನ್ನೂ ಭಾಗ್ಯಾ ಕೇಳಿಸಿಕೊಳ್ಳುತ್ತಾಳೆ. ನಾನು ಪ್ರೀತಿಸಿದ್ದು ನಿನ್ನನ್ನು. ನೀನೇ ನನ್ನ ನಿಜವಾದ ಹೆಂಡತಿ. ಅದಕ್ಕೆ ತಾನೇ ನಾನು ಅವಳಿಗೆ ಡಿವೋರ್ಸ್‌ ಕೊಟ್ಟು ನಿನ್ನನ್ನು ಮದುವೆ ಆಗುತ್ತಿರುವುದು. ನನಗೆ ಅವಳ ಜೊತೆ ಒಂದು ಕ್ಷಣ ಕೂಡಾ ಬದಕುಲು ಆಗುವುದಿಲ್ಲ. ಆದಷ್ಟು ಬೇಗ ಅವಳನ್ನು ಬಿಟ್ಟು ನಿನ್ನ ಬಳಿ ಬರುತ್ತೇನೆ. ಅಲ್ಲ, ಅವಳನ್ನು ಮನೆಯಿಂದ ಓಡಿಸಿ, ಅವಳ ಜಾಗಕ್ಕೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ತಾಂಡವ್‌ ಹೇಳುವ ಮಾತುಗಳನ್ನು ಕೇಳಿ ಭಾಗ್ಯಾ ದುಃಖದ ಕಟ್ಟೆ ಒಡೆಯುತ್ತದೆ.

ನೋವು ಭರಿಸಲಾಗದೆ ಭಾಗ್ಯಾ ಕೆಳಗೆ ಕುಸಿದು ಬೀಳುತ್ತಾಳೆ. ಅಷ್ಟರಲ್ಲಿ ಸಹನಾ ಭಾಗ್ಯಾ ಬಳಿ ಬಂದು ಏನಾಯ್ತು ಎಂದು ಕೇಳುತ್ತಾಳೆ. ತಾಳಿಯನ್ನು ಕೈಯಲ್ಲಿ ಹಿಡಿದು ಅಳುತ್ತಿರುವ ಭಾಗ್ಯಾಳನ್ನು ಕಂಡು ಸಹನಾ ಗಾಬರಿ ಆಗುತ್ತಾಳೆ. ಆದರೆ ಭಾಗ್ಯಾ ಮಾತ್ರ ಅವಳ ಮಾತನ್ನು ಕೇಳಿಸಿಕೊಳ್ಳದೆ, ಅವಳಿಗೂ ಉತ್ತರವನ್ನೂ ಕೊಡದೆ ಸುಮ್ಮನೆ ಅಲ್ಲಿಂದ ಹೊರಡುತ್ತಾಳೆ. ರಸ್ತೆಯಲ್ಲಿ ದೊಡ್ಡ ಕಲ್ಲಿಗೆ ಕಾಲು ತಾಕಿ ಭಾಗ್ಯಾ ಎಡವಿ ಬೀಳುತ್ತಾಳೆ. ಅಷ್ಟರಲ್ಲಿ ಜೋರು ಮಳೆ ಶುರುವಾಗುತ್ತದೆ. ಭಾಗ್ಯಾ ನೋವಿನಿಂದ ತನ್ನ ದಡ್ಡತನವನ್ನು ತಾನೇ ಬೈಯ್ದುಕೊಳ್ಳುತ್ತಾಳೆ.‌

ತನ್ನ ದಡ್ಡತನಕ್ಕೆ ಶಪಿಸಿಕೊಂಡ ಭಾಗ್ಯಾ

ಅವರಿಬ್ಬರನ್ನೂ ಒಳ್ಳೆ ಫ್ರೆಂಡ್‌ ಅಂತ ತಿಳಿದಿದ್ದೆ, ಆದರೆ ಅವರ ನಡುವೆ ಇಷ್ಟೆಲ್ಲಾ ಇದೆ ಅಂತ ನನಗೆ ಗೊತ್ತಿರಲಿಲ್ಲ, ಎಂಥ ದಡ್ಡಿ ನಾನು. ಅವಳು ನನ್ನ ಮನೆಗೆ ಬಂದಾಗ ಕೈಯಾರೆ ಅಡುಗೆ ಮಾಡಿ ಬಡಿಸಿದ್ದೆ. ಮನೆಯ ಗೃಹಪ್ರವೇಶ ಆದಾಗ ಎಲ್ಲವನ್ನೂ ನಿರ್ಧಿರಿಸಿದ್ದೂ ಅವಳೇ. ನನ್ನ ಮನೆ ಗೋಡೆಗೆ ಯಾವ ಬಣ್ಣ ಬಳಿಯಬೇಕು ಅಂತ ಹೇಳಿದ್ದೂ ಅವಳೇ. ಅವರ ನಡುವೆ ಇಷ್ಟೆಲ್ಲಾ ಇದ್ದರೂ ಅವರಿಬ್ಬರೂ ಸ್ನೇಹಿತರು ಅಂತ ನಂಬಿದ್ದು ನಿಜಕ್ಕೂ ನನ್ನ ದಡ್ಡತನ, ಅವರು ನನಗೆ ಒಳ್ಳೆ ಬಿರುದನ್ನೇ ಕೊಟ್ಟಿದ್ದಾರೆ ಎಂದು ಅಳುತ್ತಾಳೆ.

ಇತ್ತ, ವ್ರತ ಅರ್ಧದಲ್ಲೇ ನಿಂತಿದ್ದಕ್ಕೆ ಕುಸುಮಾ ಗಾಬರಿ ಆಗುತ್ತಾಳೆ. ನೀವು ನಿಮ್ಮ ಮಗನ ಜೀವನ ಹಾಳಾಗಬಾರದು ಎಂದು ಈ ವ್ರತ ಮಾಡುತ್ತಿದ್ದೀರಿ, ಆದರೆ ನಿಮಗೆ ನಿಮ್ಮ ಸೊಸೆಯ ಚಿಂತೆಯೇ ಇಲ್ಲ ಎಂದು ಸುಂದ್ರಿ ಹೇಳುತ್ತಾಳೆ. ಧರ್ಮರಾಜ್‌ ಕೂಡಾ ಸುಂದ್ರಿ ಮಾತಿಗೆ ದನಿಗೂಡಿಸುತ್ತಾರೆ. ಅವರಿಬ್ಬರ ಮಾತು ಕೇಳಿ ಕುಸುಮಾ ಕೋಪಗೊಳ್ಳುತ್ತಾಳೆ. ನಿನಗೆ ನಿಜವಾಗಿಯೂ ಸೊಸೆ ಬಗ್ಗೆ ಕಾಳಜಿ ಇದ್ದರೆ, ಅವಳಿಗೆ ಸತ್ಯ ತಿಳಿದುಕೊಳ್ಳಲು ಬಿಡು. ಮುಂದೆ ಏನು ಮಾಡಬೇಕು ಎಂದು ಅವಳೇ ನಿರ್ಧರಿಸಲಿ , ನೀನು ಯಾವುದಕ್ಕೂ ಮಧ್ಯೆ ಹೋಗದೆ ಸುಮ್ಮನಿರು ಎಂದು ಧರ್ಮರಾಜ್‌ ಕುಸುಮಾಗೆ ಸಲಹೆ ನೀಡುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner