ಇಂಗ್ಲೀಷ್‌ನಲ್ಲಿ ಪಟ ಪಟ ಮಾತನಾಡಿ ಆಡಿಕೊಂಡವರ ಬಾಯಿ ಮುಚ್ಚಿಸಿದ ಭಾಗ್ಯಾ, ಪೆಚ್ಚುಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಇಂಗ್ಲೀಷ್‌ನಲ್ಲಿ ಪಟ ಪಟ ಮಾತನಾಡಿ ಆಡಿಕೊಂಡವರ ಬಾಯಿ ಮುಚ್ಚಿಸಿದ ಭಾಗ್ಯಾ, ಪೆಚ್ಚುಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಇಂಗ್ಲೀಷ್‌ನಲ್ಲಿ ಪಟ ಪಟ ಮಾತನಾಡಿ ಆಡಿಕೊಂಡವರ ಬಾಯಿ ಮುಚ್ಚಿಸಿದ ಭಾಗ್ಯಾ, ಪೆಚ್ಚುಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 4ರ ಎಪಿಸೋಡ್‌ನಲ್ಲಿ ಭಾಗ್ಯಾ ಪಟ ಪಟ ಇಂಗ್ಲೀಷ್‌ನಲ್ಲಿ ಮಾತನಾಡಿ ತನ್ನನ್ನು ಆಡಿಕೊಂಡವರ ಬಾಯಿ ಮುಚ್ಚಿಸುತ್ತಾಳೆ. ಹೆಂಡತಿ ಇಷ್ಟು ಚೆನ್ನಾಗಿ ಇಂಗ್ಲೀಷ್‌ ಮಾತನಾಡುವುದನ್ನು ನೋಡಿದ ತಾಂಡವ್‌ ಪೆಚ್ಚುಮೋರೆ ಹಾಕಿ ನಿಲ್ಲುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 4ರ ಎಪಿಸೋಡ್‌ನಲ್ಲಿ ಭಾಗ್ಯಾ ಇಂಗ್ಲೀಷ್‌ನಲ್ಲಿ ಮಾತನಾಡುವುದನ್ನು ಕಂಡು ಪೆಚ್ಚು ಮೋರಿ ಹಾಕಿ ನಿಂತ ತಾಂಡವ್‌
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 4ರ ಎಪಿಸೋಡ್‌ನಲ್ಲಿ ಭಾಗ್ಯಾ ಇಂಗ್ಲೀಷ್‌ನಲ್ಲಿ ಮಾತನಾಡುವುದನ್ನು ಕಂಡು ಪೆಚ್ಚು ಮೋರಿ ಹಾಕಿ ನಿಂತ ತಾಂಡವ್‌ (PC: Jio Cinema)

Bhagyalakshmi Kannada Serial: ಭಾಗ್ಯಾ , ತನಗೆ ತಕ್ಕ ಹೆಂಡತಿ ಅಲ್ಲ ಅವಳಿಗೆ ಎಲ್ಲರೆದುರು ಅವಮಾನ ಮಾಡಬೇಕು, ಪಾಠ ಕಲಿಸಬೇಕು ಎಂದು ತಾಂಡವ್‌ ಬಹಳ ಪ್ರಯತ್ನ ಮಾಡುತ್ತಿದ್ದಾನೆ. ಅದಕ್ಕಾಗಿ ಪಾರ್ಟಿ ಕೂಡಾ ಅರೇಂಜ್‌ ಮಾಡಿ ತುಂಡು ಬಟ್ಟೆ ತಂದುಕೊಡುತ್ತಾನೆ. ಇವತ್ತು ಭಾಗ್ಯಾಗೆ ಅವಮಾನ ಆಗೋದು ಖಂಡಿತ ಎಂದು ತಾಂಡವ್‌ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾನೆ. ಆದರೆ ತಾಂಡವ್‌ ಅಂದುಕೊಳ್ಳುವುದೇ ಒಂದು, ಅಲ್ಲಿ ನಡೆಯುತ್ತಿರುವುದೇ ಮತ್ತೊಂದು.

ಸೀರೆಯುಟ್ಟು ಬಂದ ಭಾಗ್ಯಾಳನ್ನು ನೋಡಿ ತಾಂಡವ್‌ ಶಾಕ್

ನಿಮ್ಮ ಪತ್ನಿ ಎಲ್ಲಿ ಎಂದು ಎಲ್ಲರೂ ಕೇಳುತ್ತಾರೆ. ಭಾಗ್ಯಾಳನ್ನು ಕರೆಯುವಂತೆ ಪೂಜಾಗೆ ಹೇಳುತ್ತಾನೆ. ಈಗ ಎಲ್ಲರೂ ಭಾಗ್ಯಾ ಬಟ್ಟ ನೋಡಿ ಇವಳಿಗೆ ಈ ಶೋಕಿ ಬೇಕಾ ಎಂದು ಅಪಹಾಸ್ಯ ಮಾಡುತ್ತಾರೆ, ಆಗ ನನಗೆ ಬಹಳ ಖುಷಿಯಾಗುತ್ತದೆ ಎಂದು ತಾಂಡವ್‌ ಅಂದುಕೊಳ್ಳುತ್ತಿರುವಾಗಲೇ ಭಾಗ್ಯಾ, ಕೆಳಗೆ ಇಳಿದು ಬರುತ್ತಾಳೆ. ಭಾಗ್ಯಾ ನೋಡಿ ತಾಂಡವ್‌ ಶಾಕ್‌ ಆಗುತ್ತಾನೆ. ಭಾಗ್ಯಾ ತಾನು ಕೊಟ್ಟ ಡ್ರೆಸ್‌ ಧರಿಸದೆ ಸೀರೆ ಉಟ್ಟು ಬರುತ್ತಾಳೆ. ಕುಸುಮಾ, ಪೂಜಾ ಕೂಡಾ ಭಾಗ್ಯಾ ಮಾಡ್ರನ್‌ ಡ್ರೆಸ್‌ ಹಾಕದೆ ಸೀರೆ ಧರಿಸಿ ಬಂದಿದ್ದಕ್ಕೆ ಬೇಸರವಾಗುತ್ತದೆ. ನಾನು ಹೇಳಿದ್ದೇನು? ನೀನು ಮಾಡಿದ್ದೇನು ಎಂದು ಕುಸುಮಾ ಕೇಳುತ್ತಾಳೆ. ರೂಮ್‌ನಲ್ಲಿ ತಾನು ತುಂಡುಡುಗೆ ಧರಿಸಿದ್ದಾಗ ತನಗೆ ಆದ ಮಾನಸಿಕ ಹಿಂಸೆಯನ್ನು ಭಾಗ್ಯಾ ನೆನಪಿಸಿಕೊಳ್ಳುತ್ತಾಳೆ.

ನನ್ನ ಗುರುತು ಈ ಸೀರೆ, ಮೊದಲೆಲ್ಲಾ ನಾನು ಸೀರೆ ಬಿಟ್ಟು ಬೇರೆ ಡ್ರೆಸ್‌ ಧರಿಸಿದಾಗ ನೀವು ಬೈಯ್ಯುತ್ತಿದ್ದಿರಿ, ಆದರೆ ಈಗ ನೀವೇ ಆ ರೀತಿಯ ಬಟ್ಟೆ ಧರಿಸುವಂತೆ ಹೇಳುತ್ತಿದ್ದೀರಿ. ನಾನು ನಾನಾಗಿರಲು ಇಷ್ಟಪಡುತ್ತೇನೆ. ನನಗೆ ಆ ರೀತಿಯ ಡ್ರೆಸ್‌ ಧರಿಸಲು ಇಷ್ಟವಾಗುವುದಿಲ್ಲ. ಸೀರೆ ಉಟ್ಟಾಗ ಆಗುವ ಖುಷಿಯೇ ಬೇರೆ ಎನ್ನುತ್ತಾಳೆ. ಸೊಸೆ ಮಾತು ಸರಿ ಎಂದು ಕುಸುಮಾ ಸುಮ್ಮನಾಗುತ್ತಾಳೆ. ಪಾರ್ಟಿಗೆ ಬಂದವರನ್ನು ಭಾಗ್ಯಾ ಮಾತನಾಡಿಸುತ್ತಾಳೆ. ತಾಂಡವ್‌ ಮನಸ್ಸಿನಲ್ಲಿ ಇವಳು ಡವ್‌ ರಾಣಿ ಎಂದು ಬೈದುಕೊಳ್ಳುತ್ತಾನೆ. ಭಾಗ್ಯಾಳನ್ನು ನೋಡಿ ತಾಂಡವ್‌ ಸಹೋದ್ಯೋಗಿಗಳು ಇವರು ನಿಮ್ಮ ಹೆಂಡತಿನಾ ನಿಮ್ಮ ಲೆವೆಲ್‌ ಏನು ಇವರು ಇರೋ ರೀತಿ ಏನು? ಈಕೆಯನ್ನು ಮದುವೆ ಆಗಲು ನೀವು ಹೇಗೆ ಒಪ್ಪಿದಿರಿ ಎಂದು ಕೇಳುತ್ತಾರೆ. ಅದನ್ನು ಇನ್ನೊಮ್ಮೆ ಭಾಗ್ಯಾ, ಕುಸುಮಾ ಮುಂದೆ ಹೇಳುವಂತೆ ತಾಂಡವ್‌ ಹೇಳುತ್ತಾನೆ.‌

ಇಂಗ್ಲೀಷ್‌ನಲ್ಲಿ ಮಾತನಾಡಿ ಆಡಿಕೊಂಡವರ ಬಾಯಿ ಮುಚ್ಚಿಸಿದ ಭಾಗ್ಯಾ

ತಾಂಡವ್‌ ಸಹೋದ್ಯೋಗಿ ಹೇಳಿದ ಮಾತಿಗೆ ಬೇಸರವಾಗುವ ಕುಸುಮಾ, ಇಷ್ಟು ವರ್ಷಗಳ ಕಾಲ ಭಾಗ್ಯಾ ನಿನ್ನ ಜೊತೆ ಇದ್ದಾಳೆ. ಈಗ ಯಾರೋ ಹೇಳಿದರು ಎಂಬ ಕಾರಣಕ್ಕೆ ಇವಳು ನಿನಗೆ ತಕ್ಕ ಹೆಂಡತಿ ಅಲ್ಲ ಎಂದು ಹೇಗೆ ಹೇಳುವೆ ಎಂದು ಕುಸುಮಾ ಕೇಳುತ್ತಾಳೆ. ಆಗ ಭಾಗ್ಯಾ ತಾಂಡವ್‌ ಸಹೊದ್ಯೋಗಿಗಳ ಬಳಿ ಬರುತ್ತಾಳೆ. ಅವರು ಭಾಗ್ಯಾ ಮಾಡಿರುವ ಬರ್ಗರ್‌ ಎಂದು ತಿಳಿಯದೆ ಅದನ್ನು ಹೊಗಳುತ್ತಾರೆ. ಭಾಗ್ಯಾಳನ್ನು ನೋಡುತ್ತಿದ್ದಂತೆ ಆಕೆಗೆ ಇಂಗ್ಲೀಷ್‌ ಅರ್ಥವಾಗುವುದಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಆಗ ಭಾಗ್ಯಾ ಯು ಆರ್‌ ರಾಂಗ್‌, ಐ ನೋ ಇಂಗ್ಲೀಷ್‌ ಎಂದು ಮಾತು ಆರಂಭಿಸುತ್ತಾಳೆ. ನಾನು ಸೀರೆ ಉಟ್ಟ ಮಾತ್ರಕ್ಕೆ , ನಾನು ಓದಿರುವುದು ಕಡಿಮೆ ಎಂದ ಮಾತ್ರಕ್ಕೆ ನನಗೆ ಇಂಗ್ಲೀಷ್‌ ಬರುವುದಿಲ್ಲ ಎಂದು ಹೇಗೆ ನಿರ್ಧಾರ ಮಾಡಿದಿರಿ? ಎನ್ನುತ್ತಾಳೆ. ಅಷ್ಟರಲ್ಲಿ ತನ್ವಿ ಬಂದು ನೀವು ಇಷ್ಟೆಲ್ಲಾ ಹೊಗಳುತ್ತಿರುವ ಬರ್ಗರನ್ನು ತಯಾರಿಸಿದ್ದು ನನ್ನ ಅಮ್ಮ ಎನ್ನುತ್ತಾಳೆ.

ಭಾಗ್ಯಾ ಇಂಗ್ಲೀಷ್ ನೋಡಿ ತಾಂಡವ್‌ಗೆ ಶಾಕ್‌ ಆಗುತ್ತದೆ. ಈ ಎಮ್ಮೆ ಏನು ಮ್ಯಾಜಿಕ್‌ ಮಾಡುತ್ತಾಳೋ ಏನೋ. ಎಲ್ಲಿ ಹೋದರೂ ಗೆಲ್ಲುತ್ತಾಳೆ. ನಾನು ಅಂದುಕೊಂಡದ್ದೇ ಒಂದು ಇಲ್ಲಿ ಆಗಿದ್ದು ಮತ್ತೊಂದು ಎಂದುಕೊಳ್ಳುತ್ತಾನೆ. ಭಾಗ್ಯಾಗೆ ಇಂಗ್ಲೀಷ್‌ ಬರುತ್ತದೆ, ಅವಳು ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಹೆಡ್‌ಕುಕ್‌ ಎಂದು ತಿಳಿದಾಗ ತಾಂಡವ್‌ ಸಹೋದ್ಯೋಗಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಭಾಗ್ಯಾ ಬಗ್ಗೆ ಏನೋ ತಿಳಿದುಕೊಂಡಿದ್ದೆವು. ಆದರೆ ಈಗ ಅವರ ಅಭಿಮಾನಿ ಆಗಿಬಿಟ್ಟೆವು, ನಿಜವಾಗಲೂ ಇಂಥ ಹೆಂಡತಿ ಪಡೆಯಲು ನೀವು ಅದೃಷ್ಟ ಮಾಡಿದ್ದಿರಿ ಎಂದು ಸಹೋದ್ಯೋಗಿಗಳು ಹೇಳಿದಾಗ ತಾಂಡವ್‌ ನಗುತ್ತಾ ತಲೆ ಆಡಿಸುತ್ತಾನೆ. ನೀನು ಎಷ್ಟೇ ಇಂಗ್ಲೀಷ್‌ನಲ್ಲಿ ಮಾತನಾಡಿದರೂ ನಿನ್ನನು ಒಪ್ಪಿಕೊಳ್ಳುವುದಿಲ್ಲ ಎಂದು ಮನಸ್ಸಿನಲ್ಲೇ ನಿರ್ಧರಿಸುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner