ಭಾಗ್ಯಾಗೆ ಬಂದ ಲಕ್ಕಿ ಕೂಪನ್‌ ಕದ್ದು ಪ್ರೇಯಸಿ ಶ್ರೇಷ್ಠಾ ಜೊತೆ ಟ್ರಿಪ್‌ ಹೊರಟು ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾಗೆ ಬಂದ ಲಕ್ಕಿ ಕೂಪನ್‌ ಕದ್ದು ಪ್ರೇಯಸಿ ಶ್ರೇಷ್ಠಾ ಜೊತೆ ಟ್ರಿಪ್‌ ಹೊರಟು ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾಗೆ ಬಂದ ಲಕ್ಕಿ ಕೂಪನ್‌ ಕದ್ದು ಪ್ರೇಯಸಿ ಶ್ರೇಷ್ಠಾ ಜೊತೆ ಟ್ರಿಪ್‌ ಹೊರಟು ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 6ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಬಂದ ಲಕ್ಕಿ ಡಿಪ್‌ ಟಿಕೆಟನ್ನು ಯಾರಿಗೂ ಗೊತ್ತಾಗದಂತೆ ತನ್ನ ಬಳಿ ಇಟ್ಟುಕೊಳ್ಳುವ ತಾಂಡವ್, ಶ್ರೇಷ್ಠಾ ಜೊತೆ ಗಂಡ ಹೆಂಡತಿಯಂತೆ ಟ್ರಪ್‌ ಹೋಗುವ ಪ್ಲ್ಯಾನ್‌ ಮಾಡುತ್ತಾನೆ.

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 6ರ ಎಪಿಸೋಡ್‌ನಲ್ಲಿ ಮನೆಯವರಿಗೆ ತಿಳಿಯದೆ ಶ್ರೇಷ್ಠಾ ಜೊತೆ ಟ್ರಿಪ್‌ಗೆ ಹೊರಟ ತಾಂಡವ್‌
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 6ರ ಎಪಿಸೋಡ್‌ನಲ್ಲಿ ಮನೆಯವರಿಗೆ ತಿಳಿಯದೆ ಶ್ರೇಷ್ಠಾ ಜೊತೆ ಟ್ರಿಪ್‌ಗೆ ಹೊರಟ ತಾಂಡವ್‌ (PC: Jio Cinema)

Bhagyalakshmi Kannada Serial: ಭಾಗ್ಯಾ ಮನೆಗೆ ತಂದ ರೆಫ್ರಿಜಿರೇಟರ್‌ ಕಂಪನಿ ಕಡೆಯಿಂದ ಆಕೆಗೆ ಲಕ್ಕಿ ಡಿಪ್‌ನಲ್ಲಿ ಕಪಲ್‌ ಟ್ರಿಪ್‌ ಹೋಗುವ ಅವಕಾಶ ದೊರೆಯುತ್ತದೆ. ಆದರೆ ತಾಂಡವ್‌, ನಾನು ಯಾವುದೇ ಕಾರಣಕ್ಕೂ ಭಾಗ್ಯಾ ಜೊತೆ ಹೋಗುವುದಿಲ್ಲ ಎಂದು ಕಂಡಿಷನ್‌ ಮಾಡುತ್ತಾನೆ. ಇದು ಗೊತ್ತಿರುವ ವಿಚಾರ ತಾನೇ , ಅವರು ನನ್ನ ಜೊತೆ ಬರಲು ಒಪ್ಪುವುದಿಲ್ಲವೆಂದು ನನಗೆ ಮೊದಲೇ ಗೊತ್ತಿತ್ತು ಎಂದು ಸುಮ್ಮನಾಗುತ್ತಾಳೆ.

ಭಾಗ್ಯಾಗೆ ತಾಂಡವ್‌ ಸಹೋದ್ಯೋಗಿಗಳು ಕೊಟ್ಟ ಸೀರೆ ಸುಟ್ಟ ಶ್ರೇಷ್ಠಾ

ಭಾಗ್ಯಾಗೆ ಬಂದಿರುವ ಲಕ್ಕಿ ಕೂಪನ್‌ ಟಿಕೆಟನ್ನು ಬೇರೆ ಯಾರಿಗಾದರೂ ಕೊಟ್ಟರೆ ಅವರು ಹೋಗಿ ಬರುತ್ತಾರೆ. ಕೊಡಿ ನಾನು ಕಂಪನಿಯವರಿಗೆ ವಾಪಸ್‌ ಕೊಡುವೆ ಎಂದು ತಾಂಡವ್‌ ಅದನ್ನು ತನ್ನ ಬಳಿ ಇಟ್ಟುಕೊಳ್ಳುತ್ತಾನೆ. ಆಫೀಸಿನಲ್ಲಿ ತಾಂಡವ್‌ ಸಹೋದ್ಯೊಗಿಗಳು ಅವನ ಕ್ಯಾಬಿನ್‌ಗೆ ಬಂದು ನಿಮ್ಮ ಮನೆಯಲ್ಲಿ ನಮಗೆ ಒಳ್ಳೆ ಟ್ರೀಟ್‌ ದೊರೆಯಿತು. ಭಾಗ್ಯಾ ಮೇಡಂ ಅಂತೂ ಆಸಮ್‌, ಅವರಿಗೆ ನಾವು ಫ್ಯಾನ್‌ ಆಗಿ ಬಿಟ್ವಿ ಅವರಿಗಾಗಿ ಗಿಫ್ಟ್‌ ತಂದಿದ್ದೇವೆ ಎಂದು ಸೀರೆ ಕೊಡುತ್ತಾರೆ. ಅವರು ಹೋದ ನಂತರ ಅಲ್ಲಿಗೆ ಬರುವ ಶ್ರೇಷ್ಠಾ, ಆ ಸೀರೆಯನ್ನು ಸುಟ್ಟು ಕೋಪ ವ್ಯಕ್ತಪಡಿಸುತ್ತಾಳೆ. ಕೋಪಗೊಂಡ ಶ್ರೇಷ್ಠಾಳನ್ನು ಸಮಾಧಾನ ಮಾಡಲು ತಾಂಡವ್‌ ಆಕೆಯನ್ನು ಹೊರಗೆ ಟ್ರಿಪ್‌ ಕರೆದೊಯ್ಯುವುದಾಗಿ ಹೇಳುತ್ತಾನೆ. ಇದನ್ನು ಕೇಳಿ ಶ್ರೇಷ್ಠಾ ಖುಷಿಯಾಗುತ್ತಾಳೆ.

ಇತ್ತ ಭಾಗ್ಯಾ, ಹೋಟೆಲ್‌ನವರು ಕೊಟ್ಟ ಆಫರ್‌ಗೆ ಓಕೆ ಎನ್ನುತ್ತಾಳೆ. ನನಗಂತೂ ನನ್ನ ಗಂಡನ ಜೊತೆ ಹೋಗುವ ಅದೃಷ್ಟ ಇಲ್ಲ, ಅಲ್ಲಿಗೆ ಬಂದಿರುವ ಗಂಡ ಹೆಂಡತಿಯರನ್ನು ನೋಡಿಯಾದರೂ ಖುಷಿ ಪಡುತ್ತೇನೆ ಎಂದು ಹಿತಾ ಬಳಿ ಬೇಸರ ಹಂಚಿಕೊಳ್ಳುತ್ತಾಳೆ. ಮನೆಯಲ್ಲಿ ಈ ವಿಚಾರವನ್ನು ಭಾಗ್ಯಾ ಅತ್ತೆಗೆ ತಿಳಿಸುತ್ತಾಳೆ. ಕುಸುಮಾ ಕೂಡಾ ಸೊಸೆ ಹೊರಗೆ ಹೋಗಲು ಖುಷಿಯಿಂದ ಒಪ್ಪಿಕೊಳ್ಳುತ್ತಾಳೆ. ಆ ದಿನ ಬೆಳಗ್ಗೆ ಎಲ್ಲರೂ ಪೂಜೆ ಮಾಡುವಾಗ ಭಾಗ್ಯಾ ಆತುರವಾಗಿ ಸೂಟ್‌ಕೇಸ್‌ ಹಿಡಿದು ಕೆಳಗೆ ಓಡೋಡಿ ಬರುತ್ತಾನೆ. ಆಫೀಸ್‌ ಕಡೆಯಿಂದ ಕಾನ್ಫರೆನ್ಸ್‌ ಇದೆ 2 ದಿನಗಳಲ್ಲಿ ವಾಪಸ್‌ ಬರುತ್ತೇನೆ ಎಂದು ಅಲ್ಲಿಂದ ಹೋಗುತ್ತಾನೆ. ಭಾಗ್ಯಾ ಕೂಡಾ ಹೊರಡಲು ಸಿದ್ಧಳಾಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಾಬಾ ಬರುತ್ತಾರೆ.

ಸತ್ಯ ಹೊರ ಬರುವ ದಿನ ಬಂತು ಎಂದ ಬಾಬಾ

ಇಷ್ಟು ದಿನಗಳಿಂದ ಮುಚ್ಚುಮರೆಯಾಗಿದ್ದ ಸತ್ಯ ಇಂದು ನಿನಗೆ ತಿಳಿಯುತ್ತದೆ. ಹೋಗುವಾಗ ಇದ್ದ ಮನಸ್ಸುಗಳು ಬರುವಾಗ ಇರುವುದಿಲ್ಲ ಎಲ್ಲವೂ ಬದಲಾಗುತ್ತದೆ ಎನ್ನುತ್ತಾರೆ. ಇದನ್ನು ಕೇಳಿದ ಕುಸುಮಾ ಶಾಕ್‌ ಆಗುತ್ತಾಳೆ. ಭಾಗ್ಯಾಗೆ ಏನೂ ಅರ್ಥವಾಗುವುದಿಲ್ಲ. ಇತ್ತ ತಾಂಡವ್‌ ಜೊತೆ ಶ್ರೇಷ್ಠಾ ಶಾಪಿಂಗ್‌ ಬರುತ್ತಾನೆ. ಮಾಡ್ರನ್‌ ಡ್ರೆಸ್‌ಗಳನ್ನು ಶಾಪಿಂಗ್‌ ಮಾಡೋಣ ಎನ್ನುತ್ತಾಳೆ. ನನಗೆ ಇದೆಲ್ಲಾ ಇಷ್ಟವಾಗುವುದಿಲ್ಲ ಎನ್ನುತ್ತಾನೆ, ನೀನು ಹಾಕಿಕೊಳ್ಳಲೇಬೇಕು ಇಲ್ಲವಾದರೆ ನೀನು ಅಂಕಲ್‌ನಂತೆ ಕಾಣುವೆ ಎಂದಾಗ ತಾಂಡವ್‌ ಕೋಪಗೊಳ್ಳುತ್ತಾನೆ.

ಬಾಬಾ ಹೇಳಿದಂತೆ ಭಾಗ್ಯಾಗೆ ನಿಜ ಗೊತ್ತಾಗುವುದಾ? ಭಾಗ್ಯಾ ಹೇಗೆ ಪ್ರತಿಕ್ರಿಯಿಸುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner