ಡ್ಯಾನ್ಸ್ ಕ್ಲಾಸ್‌ನಲ್ಲಿ ನಾವಿಬ್ರೂ ಗಂಡ-ಹೆಂಡತಿ ಅಂತ ಯಾರಿಗೂ ಗೊತ್ತಾಗಬಾರ್ದು: ಭಾಗ್ಯಾಗೆ ತಾಂಡವ್ ಕಂಡಿಷನ್; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 22ರ ಎಪಿಸೋಡ್‌ನಲ್ಲಿ ಅಮ್ಮನೊಂದಿಗೆ ಮಾಡಿದ ಚಾಲೆಂಜ್‌ಗಾಗಿ ತಾಂಡವ್, ಭಾಗ್ಯಾಳನ್ನು ಡ್ಯಾನ್ಸ್ ಕ್ಲಾಸ್‌ಗೆ ಕರೆದೊಯ್ಯುತ್ತಾನೆ. ಆದರೆ ಇಲ್ಲಿ ನಾವಿಬ್ರೂ ಗಂಡ-ಹೆಂಡತಿ ಅನ್ನೋದು ಯಾರಿಗೂ ಗೊತ್ತಾಗಬಾರದು ಅಂತ ಕಂಡಿಷನ್ ಮಾಡುತ್ತಾನೆ.
Bhagyalakshmi Kannada Serial: ಒಂದು ತಿಂಗಳಲ್ಲಿ ಭಾಗ್ಯಾ , ನೀನು ಮೆಚ್ಚುವಂತ ಬದಲಾಗುತ್ತಾಳೆ, ಇಲ್ಲದಿದ್ದರೆ ನಾನೇ ಅವಳಿಗೆ ಹೇಳಿ ಡಿವೋರ್ಸ್ ಕೊಡಿಸುತ್ತೇನೆ ಎಂದು ಕುಸುಮಾ, ಮಗ ತಾಂಡವ್ ಜೊತೆ ಚಾಲೆಂಜ್ ಮಾಡುತ್ತಾಳೆ. ಅದರಂತೆ ತಾಂಡವ್ ಕೂಡಾ ಒಂದು ತಿಂಗಳು ಹೇಗಾದರೂ ಕಾಲ ಕಳೆಯೋಣ. ಭಾಗ್ಯಾ ಪಕ್ಕಾ ಬದಲಾಗುವುದಿಲ್ಲ, ಆಗ ನಾನು ಶ್ರೇಷ್ಠಾ ಜೊತೆ ಮದುವೆ ಆಗಬಹುದು ಎಂದುಕೊಳ್ಳುತ್ತಾನೆ.
ಕಾರ್ ಡ್ರೈವಿಂಗ್ ಮುಗಿಸಿ ಡ್ಯಾನ್ಸ್ ಕ್ಲಾಸ್‌ಗೆ ಹೊರಟ ಭಾಗ್ಯಾ
ಡ್ಯಾನ್ಸ್ ಎಲ್ಲರೂ ಮಾಡ್ತಾರೆ, ಅದೇನು ದೊಡ್ಡ ವಿಚಾರ ಎಂದು ಅಮ್ಮನ ಮುಂದೆ ಮಾತನಾಡುವ ತಾಂಡವ್‌ಗೆ ಕುಸುಮಾ ಹಾಗಿದ್ರೆ ನೀನೂ ಡ್ಯಾನ್ಸ್ ಕ್ಲಾಸ್‌ಗೆ ಸೇರಿಕೋ, ಎಂದು ಸವಾಲು ಹಾಕುತ್ತಾಳೆ. ಇದಕ್ಕೆ ತಾಂಡವ್ ಕೂಡಾ ಒಪ್ಪುತ್ತಾನೆ. ಮತ್ತೊಂದೆಡೆ ಮಾವ ಧರ್ಮರಾಜ್, ಸೊಸೆಗೆ ಕಾರ್ ಡ್ರೈವಿಂಗ್ ಕಲಿಸಲು ಮುಂದಾಗುತ್ತಾರೆ. ಕೊನೆಗೂ ಭಾಗ್ಯಾ, ಭಯ ಭಕ್ತಿಯಿಂದ ಕಾರ್ ಡ್ರೈವಿಂಗ್ ಕಲಿಯಲು ಆರಂಭಿಸುತ್ತಾಳೆ. ಮಾವ ಹೇಳಿಕೊಟ್ಟ ಸೂಚನೆಗಳನ್ನು ಪಾಲಿಸಿ ಕಾರು ಓಡಿಸುತ್ತಾಳೆ. ಕ್ಲಾಸ್ ಮುಗಿಸಿ ಮನೆಗೆ ವಾಪಸ್ ಆಗುತ್ತಾಳೆ. ಸರಿ ಬೇಗ ರೆಡಿ ಆಗು ಎಂದು ಕುಸುಮಾ ಹೇಳಿದಾಗ ಮತ್ತೆ ಎಲ್ಲಿಗೆ ಎಂದು ಭಾಗ್ಯಾ ಕೇಳುತ್ತಾಳೆ. ನಿನ್ನ ಗಂಡ ನಿನ್ನನ್ನು ಡ್ಯಾನ್ಸ್ ಕ್ಲಾಸ್‌ಗೆ ಕರೆದೊಯ್ಯುತ್ತಾನೆ ಎಂದು ಕುಸುಮಾ ಹೇಳಿದಾಗ ಭಾಗ್ಯಾ ಆಶ್ಚರ್ಯಗೊಳ್ಳುತ್ತಾಳೆ.
ಭಾಗ್ಯಾ ಜೊತೆ ಡ್ಯಾನ್ಸ್ ಕ್ಲಾಸ್‌ಗೆ ಹೊರಟ ತಾಂಡವ್
ಅವರು ಇದಕ್ಕೆಲ್ಲಾ ಒಪ್ಪಿದ್ರಾ ಎಂದು ಭಾಗ್ಯಾ ಕೇಳುತ್ತಾಳೆ. ಏಕೆ ಒಪ್ಪಿಕೊಳ್ಳುವುದಿಲ್ಲ? ಅವನು ನನ್ನ ಮಗ ನಾನು ಹೇಳಿದಂತೆ ಕೇಳುತ್ತಾನೆ ಎಂದು ಕುಸುಮಾ ಹೇಳುತ್ತಾಳೆ. ಕೊನೆಗೆ ಭಾಗ್ಯಾ ತಾಂಡವ್ ಜೊತೆ ಹೋಗುತ್ತಾಳೆ. ನನಗೆ ಇಷ್ಟವಿಲ್ಲದಿದ್ರೂ ನಿನ್ನ ಜೊತೆ ಬರುತ್ತಿದ್ದೇನೆ. ಅಮ್ಮನಿಗೆ ನೀನು ಗೂಬೆ ಎಂದು ಗೊತ್ತಿದ್ದರೂ ಡ್ಯಾನ್ಸ್ ಕ್ಲಾಸ್‌ಗೆ ಕಳಿಸುತ್ತಲೇ ಇದ್ದಾಳೆ ಎಂದು ಬೈದುಕೊಂಡೇ ತಾಂಡವ್ ಡ್ಯಾನ್ಸ್ ಕ್ಲಾಸ್‌ಗೆ ಹೋಗುತ್ತಾನೆ. ಆ ಸ್ಥಳಕ್ಕೆ ಹೋಗುತ್ತಿದ್ದಂತೆ ಭಾಗ್ಯಾ, ಮೊದಲು ತಾನು ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಡ್ಯಾನ್ಸ್ ಕ್ಲಾಸ್ ಸಿಬ್ಬಂದಿ ಇಬ್ಬರನ್ನೂ ಒಳಗೆ ಕರೆದು ಕೂರಿಸುತ್ತಾರೆ. ಈ ವಯಸ್ಸಿನಲ್ಲೂ ಡ್ಯಾನ್ಸ್ ಕಲಿಯಲು ಬಂದಿದ್ದೀರ ಗ್ರೇಟ್ ಎಂದು ಭಾಗ್ಯಾಗೆ ಮೆಚ್ಚುಗೆ ಸೂಚಿಸುತ್ತಾರೆ.
ನಾವಿಬ್ರೂ ಗಂಡ ಹೆಂಡತಿ ಅಲ್ಲ ಎಂದು ಸಿಬ್ಬಂದಿಯೊಂದಿಗೆ ತಾಂಡವ್ ಸುಳ್ಳು
ನೀವಿಬ್ಬರೂ ಗಂಡ ಹೆಂಡತಿನಾ ಎಂದು ಸಿಬ್ಬಂದಿ ಕೇಳುತ್ತಾರೆ. ಹೌದು ಎಂದು ಹೇಳಲು ಹೊರಟ ಭಾಗ್ಯಾಳನ್ನು ತಡೆಯುವ ತಾಂಡವ್, ಇಲ್ಲ ನಾವಿಬ್ಬರೂ ಒಟ್ಟಿಗೆ ಒಳಗೆ ಬಂದ ಮಾತ್ರಕ್ಕೆ ಹೇಗೆ ಗಂಡ ಹೆಂಡತಿ ಆಗುತ್ತೇವೆ ಎನ್ನುತ್ತಾನೆ. ಇದನ್ನು ಕೇಳಿದ ಭಾಗ್ಯಾಗೆ ಶಾಕ್ ಆಗುತ್ತದೆ. ಸಾರಿ ಸರ್ ತಪ್ಪಾಯ್ತು, ಬನ್ನಿ ಡ್ಯಾನ್ಸ್ ಕ್ಲಾಸ್ ತೋರಿಸುತ್ತೇನೆ ಎಂದು ಸಿಬ್ಬಂದಿ ಹೊರಗೆ ಹೋಗುತ್ತಾರೆ. ನಾವಿಬ್ರೂ ಗಂಡ ಹೆಂಡತಿ ಅಲ್ಲ ಎಂದು ಏಕೆ ಹೇಳಿದಿರಿ ಎಂದು ಭಾಗ್ಯಾ ಕೇಳುತ್ತಾಳೆ. ನನಗೆ ನೀನು ಇಷ್ಟವಿಲ್ಲ ಎಂದು ಎಷ್ಟು ಸಾರಿ ಹೇಳಿದ್ದೇನೆ. ಅದು ನಿನಗೂ ಗೊತ್ತು. ಇಲ್ಲಾದರೂ ನನ್ನನ್ನು ಫ್ರೀ ಆಗಿ ಬಿಡು ಎಂದು ತಾಂಡವ್ ಹೇಳುತ್ತಾನೆ. ಅಷ್ಟರಲ್ಲಿ ಕುಸುಮಾ ಭಾಗ್ಯಾಗೆ ಕರೆ ಮಾಡಿ ಕಾರಿನ ಹಿಂಬದಿಯಲ್ಲಿ ನಿನಗಾಗಿ ಏನೋ ಇಟ್ಟಿದ್ದೇನೆ ತೆಗೆದುಕೋ ಎನ್ನುತ್ತಾಳೆ.
ಅತ್ತೆ ಇಟ್ಟಿದ್ದ ಡ್ರೆಸ್ ನೋಡಿ ಭಾಗ್ಯಾ ಆಶ್ಚರ್ಯಗೊಳ್ಳುತ್ತಾಳೆ. ಜೊತೆಗೆ ಅಲ್ಲಿ ಒಂದು ಪತ್ರವೂ ಇರುತ್ತದೆ. ನನ್ನ ಸೊಸೆ ಹಳೆಯದನ್ನು ಮರೆತು ಹೊಸ ಜೀವನಕ್ಕೆ ಕಾಲಿಡಬೇಕು ಅನ್ನೋದು ನನ್ನ ಆಸೆ, ಇದನ್ನು ನಾನು ಪ್ರೀತಿಯಿಂದ ಕೊಟ್ಟಿರುವುದು ಎಂದು ಅತ್ತೆ ಬರೆದಿರುವುದನ್ನು ನೋಡಿ ಭಾಗ್ಯಾ ಭಾವುಕಳಾಗುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ