ನಿಂತಲ್ಲೇ ಭಾಗ್ಯಾ ಡ್ಯಾನ್ಸ್-ಕಾರ್ ಡ್ರೈವಿಂಗ್ ಅಭ್ಯಾಸ, ಇತ್ತ ಮನೆಯವರ ಮುಂದೆ ಕಾಮಿಡಿ ಪೀಸ್ ಆದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 24ರ ಎಪಿಸೋಡ್‌ನಲ್ಲಿ ಭಾಗ್ಯಾ ಹೋಟೆಲ್‌ನಲ್ಲೂ ಕಾರ್ ಡ್ರೈವಿಂಗ್, ಡ್ಯಾನ್ಸ್ ಸ್ಟೆಪ್ಸ್‌ಗಳನ್ನು ನೆನಪಿಸಿಕೊಳ್ಳುತ್ತಾಳೆ. ಮತ್ತೊಂದೆಡೆ ತಾಂಡವ್ ಡ್ಯಾನ್ಸ್ ಮಾಡಲು ಹೋಗಿ ಮನೆಯವರ ಮುಂದೆ ನಗೆಪಾಟಲಿಗೆ ಒಳಗಾಗುತ್ತಾನೆ.
Bhagyalakshmi Kannada Serial: ಡ್ಯಾನ್ಸ್ ಮಾಡುವುದು ದೊಡ್ಡ ಕೆಲಸವಲ್ಲ, ಕೈ ಕಾಲು ಆಡಿಸಿದರೆ ಸಾಕು ಎಂದು ತಾಂಡವ್ , ಭಾಗ್ಯಾಳನ್ನು ವ್ಯಂಗ್ಯವಾಡುತ್ತಾನೆ. ಇದರಿಂದ ಕೋಪಗೊಳ್ಳುವ ಕುಸುಮಾ ಹಾಗಿದ್ರೆ ಇವತ್ತಿನಿಂದ ಭಾಗ್ಯಾ ಜೊತೆ ನೀನೂ ಡ್ಯಾನ್ಸ್ ಕ್ಲಾಸ್‌ಗೆ ಹೋಗು ಎನ್ನುತ್ತಾಳೆ. ಭಾಗ್ಯಾಳನ್ನು ಸೋಲಿಸಬೇಕೆಂದು ತಾಂಡವ್ ಚಾಲೆಂಜ್ ಸ್ವೀಕರಿಸುತ್ತಾನೆ.
ತಾಂಡವ್ ಕಾಲೆಳೆದ ಪೂಜಾ ಸುಂದ್ರಿ
ಡ್ಯಾನ್ಸ್ ಕ್ಲಾಸ್‌ನಲ್ಲಿ ನಾವಿಬ್ಬರೂ ಗಂಡ ಹೆಂಡತಿ ಎಂದು ಯಾರಿಗೂ ಗೊತ್ತಾಗಬಾರದು ಎಂದು ಭಾಗ್ಯಾಗೆ ಕಂಡಿಷನ್ ಮಾಡುವ ತಾಂಡವ್, ಎಲ್ಲರೆದುರು ಭಾಗ್ಯಾಳನ್ನು ದಡ್ಡಿ ಎಂದು ಕರೆದು ತಾನೇ ಕಷ್ಟಕ್ಕೆ ಸಿಲುಕುತ್ತಾನೆ. ಮಹಿಳೆಯರಿಗೆ ಗೌರವ ಕೊಡೋದನ್ನು ಕಲಿಯಿರಿ, ಇಲ್ಲಿ ಹೀಗೆ ವರ್ತಿಸುವ ನೀವು ಮನೆಯಲ್ಲಿ ನಿಮ್ಮ ಪತ್ನಿ ಜೊತೆ ಹೇಗಿರುತ್ತಿರೋ, ಭಾಗ್ಯಾಗೆ ದಡ್ಡಿ ಅಂತ ಏಕೆ ಹೇಳ್ತೀರ? ಅವರು ಎಷ್ಟು ಸಾಧನೆ ಮಾಡಿದ್ದಾರೆಂದು ನಿಮಗೆ ಗೊತ್ತಿಲ್ವಾ ಎಂದೆಲ್ಲಾ ಸ್ಟೂಡೆಂಟ್‌ಗಳು ತಾಂಡವ್‌ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತನಗಾದ ಅವಮಾನ ತಾಳಲಾರದೆ ನಾವಿಬ್ಬರೂ ಪರಿಚಯ ಎಂದು ಹೇಳುವಂತೆ ಭಾಗ್ಯಾಗೆ ಹೇಳುತ್ತಾನೆ. ಇಬ್ಬರೂ ಗಂಡ ಹೆಂಡತಿ, ಪರಿಚಯವಿಲ್ಲದಂತೆ ತಮಾಷೆ ಮಾಡುತ್ತಿದ್ದಾರೆ ಎಂದು ತಿಳಿದು ಎಲ್ಲರೂ ಸುಮ್ಮನಾಗುತ್ತಾರೆ.
ಭಾಗ್ಯಾ ಡ್ಯಾನ್ಸ್ ಸ್ಟೆಪ್ಸ್ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ತಾಂಡವ್ ಡ್ಯಾನ್ಸ್ ನೋಡಿ ಪೂಜಾ ಹಾಗೂ ಸುಂದ್ರಿ ನಗುತ್ತಾರೆ. ಕ್ಲಾಸ್ ಮುಗಿಸಿಕೊಂಡು ಹೊರಬರುವ ತಾಂಡವ್‌ಗೆ ಭಾವ ಡ್ಯಾನ್ಸ್ ಕ್ಲಾಸ್ ಹೇಗಿತ್ತು ಎಂದು ಪೂಜಾ ಕೇಳುತ್ತಾಳೆ. ಡ್ಯಾನ್ಸ್ ಅಂದ್ರೆ ಕೈ ಕಾಲು ಅಲ್ಲಾಡಿಸೋದು ಅಂತ ಹೇಳ್ತಿದ್ರಿ ನೀವು ಮಾಡ್ತಿದ್ದ ಡ್ಯಾನ್ಸ್ ನಾವು ನೋಡಿದ್ವಿ ಎಂದು ಕಾಲೆಳೆಯುತ್ತಾಳೆ. ಕಣ್ಣ ಎದುರೇ ಗಂಡನನ್ನು ತಂಗಿ ತಮಾಷೆ ಮಾಡುತ್ತಿರುವುದನ್ನು ಸಹಿಸದ ಭಾಗ್ಯಾ, ಅವರು ನಿನ್ನ ಭಾವ, ಅವರಿಗೆ ಗೌರವ ಕೊಡುವುದನ್ನು ಕಲಿ, ನೀನು ಈ ರೀತಿ ಅವರನ್ನು ವ್ಯಂಗ್ಯ ಮಾಡುತ್ತಿರುವುದು ನನಗೆ ಇಷ್ಟವಾಗುವುದಿಲ್ಲ ಎನ್ನುತ್ತಾಳೆ. ಅಲ್ಲಿಂದ ಭಾಗ್ಯಾ ನೇರವಾಗಿ ಕೆಲಸಕ್ಕೆ ಹೋಗುತ್ತಾಳೆ.
ಭಾಗ್ಯಾಳಲ್ಲಿ ಉಂಟಾದ ಬದಲಾವಣೆ ನೋಡಿ ಖುಷಿಯಾದ ಹಿತಾ
ಹೋಟೆಲ್‌ನಲ್ಲಿ ಕೂಡಾ ಭಾಗ್ಯಾ ಡ್ರೈವಿಂಗ್ ಕ್ಲಾಸ್, ಡ್ಯಾನ್ಸ್ ಸ್ಟೆಪ್ಸ್ ನೆನಪಿಸಿಕೊಳ್ಳುತ್ತಾಳೆ. ನಿಂತಲ್ಲೇ ಕಾರು ಓಡಿಸುವ ಹಂತಗಳನ್ನು ನೆನಪಿಸಿಕೊಳ್ಳುತ್ತಾಳೆ. ಇದನ್ನು ಹಿತಾ ದೂರದಿಂದ ಗಮಿನಿಸುತ್ತಾಳೆ. ಭಾಗ್ಯಾಳಲ್ಲಿ ಆದ ಬದಲಾವಣೆಯನ್ನು ನೋಡಿ ಹಿತಾ ಖುಷಿಯಾಗುತ್ತಾಳೆ. ಬೆಳಗ್ಗೆ ನೀವು ಹೋಟೆಲ್‌ಗೆ ಹಾಕಿ ಬಂದ ಸೀರೆ ಬಹಳ ಚೆನ್ನಾಗಿತ್ತು. ಹೊಸ ಲುಕ್ ಕೂಡಾ ನಿಮಗೆ ಬಹಳ ಚೆನ್ನಾಗಿ ಹೊಂದುತ್ತಿದೆ. ಇನ್ಮುಂದೆ ನೀವು ಇದೇ ರೀತಿ ಇರಬೇಕು ಎಂದು ಹಿತಾ ಭಾಗ್ಯಾಗೆ ಹೇಳುತ್ತಾಳೆ. ಭಾಗ್ಯಾ ಕೂಡಾ ಹಿತಾ ಮಾತಿಗೆ ತಲೆ ಆಡಿಸುತ್ತಾಳೆ.
ಇತ್ತ ತಾಂಡವ್, ಭಾಗ್ಯಾಳನ್ನು ನೆನಪಿಸಿಕೊಂಡು ಕೋಪಗೊಳ್ಳುತ್ತಾನೆ. ಭಾಗ್ಯಾ ಏನು ದೊಡ್ಡ ಸಾಧನೆ ಮಾಡಿದ್ದಾಳೆ ಎಂದು ಎಲ್ಲರೂ ಆಕೆಯನ್ನು ಹೊಗಳಿ ಅಟ್ಟಕ್ಕೆ ಏರಿಸುತ್ತಿದ್ದಾರೆ? ಇಲ್ಲ ನಾನು ಅವಳ ಮುಂದೆ ಸೋಲಬಾರದು, ಅವಳಿಗಿಂತ ಚೆನ್ನಾಗಿ ಡ್ಯಾನ್ಸ್ ಮಾಡಿ ಸೈ ಎನಿಸಿಕೊಳ್ಳಬೇಕು, ಡ್ಯಾನ್ಸ್ ಟೀಸರ್ ವಿಡಿಯೋ ಕಳಿಸಿದ್ದಾರೆ ಅದನ್ನು ನೋಡಿಕೊಂಡು ಅಭ್ಯಾಸ ಮಾಡುವೆ ಎಂದು ಮ್ಯೂಸಿಕ್ ಹಾಕಿ ಲ್ಯಾಪ್‌ಟಾಪ್ ನೋಡುತ್ತಾ ಡ್ಯಾನ್ಸ್ ಪ್ರಾಕ್ಟೀಸ್ ಶುರು ಮಾಡುತ್ತಾನೆ. ತನ್ವಿ ಹಾಗೂ ತನ್ಮಯ್ ಅಪ್ಪನ ಡ್ಯಾನ್ಸ್ ನೋಡಿ ಮುಸಿಮುಸಿ ನಗುತ್ತಾರೆ. ಅವರ ಜೊತೆ ಕುಸುಮಾ, ಸುಂದ್ರಿ, ಪೂಜಾ ಕೂಡಾ ಬರುತ್ತಾರೆ. ಎಲ್ಲರ ಮುಂದೆ ತಾಂಡವ್ ಕಾಮಿಡಿ ಪೀಸ್ ಆಗುತ್ತಾನೆ.
ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ತಾಂಡವ್, ಭಾಗ್ಯಾಗಿಂತ ಚೆನ್ನಾಗಿ ಡ್ಯಾನ್ಸ್ ಕಲಿಯುತ್ತಾನಾ? ಕುಸುಮಾ ಹೇಳಿದಂತೆ ತಾಂಡವ್ ಭಾಗ್ಯಾ ಕಡೆಗೆ ಆಕರ್ಷಿತನಾಗುತ್ತಾನಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ