ಭಾಗ್ಯಾಗೆ ಅವಮಾನ ಮಾಡಿದ ಶಿಕ್ಷಕಿಯನ್ನು ಮನೆಗೆ ಆಹ್ವಾನಿಸಿದ ಕುಸುಮಾ, ಮಾಸ್ಟರ್‌ ಪ್ಲ್ಯಾನ್‌ ಹಿಂದಿದೆ ಬೇರೆ ಉದ್ದೇಶ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾಗೆ ಅವಮಾನ ಮಾಡಿದ ಶಿಕ್ಷಕಿಯನ್ನು ಮನೆಗೆ ಆಹ್ವಾನಿಸಿದ ಕುಸುಮಾ, ಮಾಸ್ಟರ್‌ ಪ್ಲ್ಯಾನ್‌ ಹಿಂದಿದೆ ಬೇರೆ ಉದ್ದೇಶ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾಗೆ ಅವಮಾನ ಮಾಡಿದ ಶಿಕ್ಷಕಿಯನ್ನು ಮನೆಗೆ ಆಹ್ವಾನಿಸಿದ ಕುಸುಮಾ, ಮಾಸ್ಟರ್‌ ಪ್ಲ್ಯಾನ್‌ ಹಿಂದಿದೆ ಬೇರೆ ಉದ್ದೇಶ; ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 27ರ ಎಪಿಸೋಡ್‌ನಲ್ಲಿ ಭಾಗ್ಯಾ, ಧರ್ಮರಾಜ್‌ಗೆ ಡ್ಯಾನ್ಸ್‌‌ ಕ್ಲಾಸ್‌ನಲ್ಲಿ ಅವಮಾನವಾಗಿರುವುದು ಕುಸುಮಾಗೆ ಗೊತ್ತಾಗುತ್ತದೆ. ಶಿಕ್ಷಕಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಸುಮಾ, ಆಕೆಯನ್ನು ಮನೆಗೆ ಆಹ್ವಾನಿಸುತ್ತಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 27ರ ಎಪಿಸೋಡ್‌: ಭಾಗ್ಯಾಗೆ ಅವಮಾನ ಮಾಡಿದ ಶಿಕ್ಷಕಿಯನ್ನು ಬರ್ತ್‌ಡೇ ಪಾರ್ಟಿಗೆ ಮನೆಗೆ ಆಹ್ವಾನಿಸಿದ ಕುಸುಮಾ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 27ರ ಎಪಿಸೋಡ್‌: ಭಾಗ್ಯಾಗೆ ಅವಮಾನ ಮಾಡಿದ ಶಿಕ್ಷಕಿಯನ್ನು ಬರ್ತ್‌ಡೇ ಪಾರ್ಟಿಗೆ ಮನೆಗೆ ಆಹ್ವಾನಿಸಿದ ಕುಸುಮಾ (PC: jio Cinema)

Bhagyalakshmi Kannada Serial: ಭಾಗ್ಯಾಗೆ ಅವಮಾನ ಮಾಡಬೇಕೆಂದು ಶ್ರೇಷ್ಠಾ, ತನ್ನ ಗೆಳತಿಯ ಡ್ಯಾನ್ಸ್‌ ಕ್ಲಾಸ್‌ಗೆ ಬಂದು ಫೋಟೋ ತೋರಿಸುತ್ತಾಳೆ. ಹೊರಗೆ ನನಗೆ ಅವಮಾನ ಮಾಡಿದ್ದು ಇವಳೇ ಅಂತ ಗೊತ್ತಾದಾಗ ಡ್ಯಾನ್ಸ್‌ ಶಿಕ್ಷಕಿ ಭಾಗ್ಯಾಗೆ ಕೂಡಾ ಅವಮಾನ ಮಾಡಲು ನಿರ್ಧರಿಸುತ್ತಾಳೆ.

ಇವರು ಹೊಸದಾಗಿ ಕ್ಲಾಸ್‌ಗೆ ಸೇರಿದ್ದಾರೆ, ತುಂಬಾ ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಾರೆ ಎಂದು ಸಿಬ್ಬಂದಿ ಹೇಳಿದಾಗ, ಅವಳು ಹೇಗೆ ಡ್ಯಾನ್ಸ್ ಮಾಡ್ತಾಳೆ ಅಂತ ನಾನು ಹೇಳುವೆ ಎಂದು ಮ್ಯೂಸಿಕ್‌ ಹಾಕಲು ಹೇಳುತ್ತಾಳೆ. ಭಾಗ್ಯಾ ಡ್ಯಾನ್ಸ್‌ ಮಾಡುವಾಗ ಅರ್ಧಕ್ಕೆ ನಿಲ್ಲಿಸಿ ಅವಮಾನ ಮಾಡುತ್ತಾಳೆ. ಛೀ ಇದೂ ಒಂದೂ ಡ್ಯಾನ್ಸಾ? ಇದೇನಾ ನೀನು ಕಲಿತದ್ದು? ನಿಮ್ಮ ಗುರುಗಳು ಹೇಳಿಕೊಟ್ಟದ್ದು ಇದೇನಾ? ಎಂದು ಕೊಂಕು ಪ್ರಶ್ನೆ ಕೇಳುತ್ತಾಳೆ. ನನಗೆ ನಾನು ಮಾಡುವ ಡ್ಯಾನ್ಸ್‌ಗೆ ಏನು ಬೇಕಾದರೂ ಹೇಳಿ. ಆದರೆ ನನ್ನ ಗುರುಗಳ ಬಗ್ಗೆ ಏನೂ ಮಾತನಾಡಬೇಡಿ ಎಂದು ಭಾಗ್ಯಾ ಮನವಿ ಮಾಡುತ್ತಾಳೆ. ನೀನು ಡ್ಯಾನ್ಸ್‌ ಕಲಿಯಲು ಅರ್ಹಳಲ್ಲ, ಇಂದಿನಿಂದ ನೀನು ನನ್ನ ಡ್ಯಾನ್ಸ್‌ ಕ್ಲಾಸ್‌ನಲ್ಲಿ ಇರಬಾರದು ಎಂದು ಹೇಳಿ ಭಾಗ್ಯಾಳನ್ನು ಡ್ಯಾನ್ಸ್‌ ಕ್ಲಾಸ್‌ನಿಂದ ಹೊರ ಹಾಕುತ್ತಾಳೆ.

ಸೊಸೆಗೆ ಆದ ಅವಮಾನಕ್ಕ ಸೇಡು ತೀರಿಸಿಕೊಳ್ಳಲು ಮುಂದಾದ ಕುಸುಮಾ

ಭಾಗ್ಯಾ ಬೇಸರದಿಂದಲೇ ಅಲ್ಲಿಂದ ಹೊರ ಹೋಗುತ್ತಾಳೆ. ತಾಂಡವ್‌ ಖುಷಿಯಿಂದ ಮನೆಗೆ ವಾಸಪ್‌ ಬರುತ್ತಾನೆ. ನಿನ್ನ ಸೊಸೆ ಇನ್ಮುಂದೆ ಡ್ಯಾನ್ಸ್‌ ಕ್ಲಾಸ್‌ಗೆ ಹೋಗುವುದಿಲ್ಲ ಎಂದು ಅಲ್ಲಿ ನಡೆದ ಘಟನೆಯನ್ನು ಕುಸುಮಾಗೆ ಹೇಳುತ್ತಾನೆ. ಭಾಗ್ಯಾಗೆ ಅವಮಾನ ಆಗಿರುವುದಕ್ಕೆ ಖುಷಿ ಪಡುತ್ತಿರುವ ಮಗನನ್ನು ನೋಡಿ ಕುಸುಮಾ ಬೇಸರಪಡುತ್ತಾಳೆ. ಸೊಸೆಗೆ ಆಗಿರುವ ಅವಮಾನಕ್ಕೆ ತಕ್ಕ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸುವ ಕುಸುಮಾ ಡ್ಯಾನ್ಸ್‌ ಕ್ಲಾಸ್‌ ಬಳಿ ಹೋಗುತ್ತಾಳೆ. ಜೊತೆಗೆ ಧರ್ಮರಾಜ್‌ ಕೂಡಾ ಹೋಗುತ್ತಾರೆ. ಡ್ಯಾನ್ಸ್‌ ಟೀಚರ್‌ಗೆ ಕುಸುಮಾ ಹಿಗ್ಗಾ ಮುಗ್ಗಾ ಬೈಯ್ಯಬಹುದು ಎಂದು ಅಂದುಕೊಂಡ ಧರ್ಮರಾಜ್‌ಗೆ ನಂತರ ಶಾಕ್‌ ಆಗುತ್ತದೆ. ಏಕೆಂದರೆ ಕುಸುಮಾ ಡ್ಯಾನ್ಸ್‌ ಟೀಚರ್‌ ಜೊತೆ ನಗು ನಗುತ್ತಾ ಹೊರಗೆ ಬರುವುದನ್ನು ನೋಡಿ ಧರ್ಮರಾಜ್‌ಗೆ ಕನ್ಫ್ಯೂಸ್‌ ಆಗುತ್ತದೆ.

ನಿಮಗೆ ಮುಂದೆ ಎಲ್ಲಾ ಅರ್ಥವಾಗುತ್ತದೆ, ಅಲ್ಲಿವರೆಗೂ ಏನೂ ಕೇಳಬೇಡಿ, ಇವತ್ತು ನನ್ನ ಬರ್ತ್‌ಡೇ, ಡ್ಯಾನ್ಸ್‌ ಟೀಚರನ್ನು ಮನೆಗೆ ಆಹ್ವಾನಿಸದ್ದೇನೆ ಎನ್ನುತ್ತಾಳೆ. ಆದರೆ ಆ ದಿನ ಕುಸುಮಾ ಬರ್ತ್‌ಡೇ ಅಲ್ಲ, ಅವಳು ಏನು ಮಾಡುತ್ತಿದ್ದಾಳೆ ಎಂದು ಧರ್ಮರಾಜ್‌ಗೆ ತಿಳಿಯುವುದಿಲ್ಲ. ಮನೆಗೆ ಬರುತ್ತಿದ್ದಂತೆ ಪೂಜಾ, ಸುಂದ್ರಿ, ತಾಂಡವ್‌ಗೂ ಕುಸುಮಾ ತನ್ನ ಬರ್ತ್‌ಡೇ ಸೆಲಬ್ರೇಟ್‌ ಮಾಡುವಂತೆ ತಿಳಿಸುತ್ತಾಳೆ. ಕುಸುಮಾ ಮಾತಿಗೆ ಇಲ್ಲ ಎನ್ನಲಾಗದೆ ಎಲ್ಲರೂ ತಲೆ ಆಡಿಸುತ್ತಾರೆ. ಸಂಜೆ ಕೆಲಸದಿಂದ ಮನೆಗೆ ಬರುವ ಭಾಗ್ಯಾ ಕೂಡಾ ಡೆಕೊರೇಷನ್‌ ನೋಡಿ ಶಾಕ್‌ ಆಗುತ್ತಾಳೆ. ನಾವೆಲ್ಲಾ ತಯಾರಾಗಿದ್ದೇವೆ, ನೀನು ಭರತನಾಟ್ಯ ಕಾಸ್ಟ್ಯೂಮ್‌ ಧರಿಸಿ ಬಾ ಎಂದು ಕುಸುಮಾ, ಸೊಸೆಗೆ ಹೇಳುತ್ತಾಳೆ.

ಫೇಕ್‌ ಬರ್ತ್‌ಡೇ ಪಾರ್ಟಿಗೆ ಬಂದ ಶ್ರೇಷ್ಠಾ

ಅತ್ತೆ ಮಾತಿಗೆ ಭಾಗ್ಯಾ ಶಾಕ್‌ ಆಗುತ್ತಾಳೆ. ಈಗ ಭರತನಾಟ್ಯ ಡ್ರೆಸ್‌ ಏಕೆ ಎಂದು ಭಾಗ್ಯಾ ಕೇಳುತ್ತಾಳೆ. ನಾನು ಹೇಳಿದಂತೆ ಕೇಳು ಎಂದು ಕುಸುಮಾ ಹೇಳಿದಾಗ ಭಾಗ್ಯಾ ಸರಿ ಎಂದು ತಯಾರಾಗಲು ಹೊರಡುತ್ತಾಳೆ. ಕುಸುಮಾ ಶ್ರೇಷ್ಠಾಳನ್ನೂ ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಿರುತ್ತಾಳೆ. ಅವಳನ್ನು ಮನೆ ಬಳಿ ನೋಡಿ ತಾಂಡವ್‌ ಗಾಬರಿಯಾಗುತ್ತಾನೆ. ಆದರೆ ಸ್ವತ: ಅಮ್ಮನೇ ಅವಳನ್ನು ಇನ್ವೈಟ್‌ ಮಾಡಿರುವುದು ಎಂದು ತಿಳಿದು ಸುಮ್ಮನಾಗುತ್ತಾನೆ. ಡ್ಯಾನ್ಸ್‌ ಶಿಕ್ಷಕಿಯನ್ನು ಕುಸುಮಾ ಬರಮಾಡಿಕೊಳ್ಳುತ್ತಾಳೆ. ಆಕೆಯನ್ನು ನೋಡಿ, ಖಂಡಿತ ಅಮ್ಮ ಏನೋ ಪ್ಲ್ಯಾನ್‌ ಮಾಡಿದ್ದಾರೆ ಎಂದು ತಾಂಡವ್‌, ಶ್ರೇಷ್ಠಾಗೆ ಅನ್ನಿಸುತ್ತದೆ.

ಸೊಸೆಗೆ ಶಿಕ್ಷಕಿ ಮಾಡಿದ ಅವಮಾನಕ್ಕೆ ಕುಸುಮಾ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner