ನಿನ್ನಂಥ ಕಲಾ ಸರಸ್ವತಿಗೆ ಅವಮಾನ ಮಾಡಬಾರದಿತ್ತು, ಭಾಗ್ಯಾಗೆ ಕೈ ಮುಗಿದು ಕ್ಷಮೆ ಕೇಳಿದ ಡ್ಯಾನ್ಸ್ ಟೀಚರ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 29ರ ಎಪಿಸೋಡ್‌ನಲ್ಲಿ ಭಾಗ್ಯ ಡ್ಯಾನ್ಸ್ ನೋಡಿ ಡ್ಯಾನ್ಸ್ ಟೀಚರ್‌ಗೆ ಆಶ್ಚರ್ಯವಾಗುತ್ತದೆ. ತನ್ನ ತಪ್ಪಿನ ಅರಿವಾಗಿ ಭಾಗ್ಯಾ ಬಳಿ ಕ್ಷಮೆ ಕೇಳುತ್ತಾಳೆ. ಇದನ್ನು ಕಂಡು ತಾಂಡವ್, ಶ್ರೇಷ್ಠಾಗೆ ನಿರಾಸೆಯಾಗುತ್ತದೆ.
Bhagyalakshmi Kannada Serial: ಭಾಗ್ಯಾ ಡ್ಯಾನ್ಸ್ ನೋಡಲೇಬೇಕು, ಅವಳು ಏನು ತಪ್ಪು ಮಾಡುತ್ತಾಳೆ ಅನ್ನೋದನ್ನು ನೀವು ಹೇಳಬೇಕು ಎಂದು ಕುಸುಮಾ ಡ್ಯಾನ್ಸ್ ಟೀಚರ್‌ಗೆ ಕಂಡಿಷನ್ ಮಾಡುತ್ತಾಳೆ. ನನ್ನ ಸೊಸೆಗೆ ಹೇಗೆ ಡ್ಯಾನ್ಸ್ ಮಾಡ್ತಾಳೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ನೀವು ನಿಜವಾಗಿಯೂ ಕಲಾದೇವತೆಗೆ ಗೌರವ ಕೊಡುವಂಥವರಾದರೆ ನನ್ನ ಸೊಸೆ ಡ್ಯಾನ್ಸ್ ಮಾಡುವುದನ್ನು ನೋಡಿ ಎಂದು ಕುಸುಮಾ ಹೇಳುತ್ತಾಳೆ. ಆಕೆಯ ಒತ್ತಾಯಕ್ಕೆ ಡ್ಯಾನ್ಸ್ ಟೀಚರ್ ಸರಿ ಡ್ಯಾನ್ಸ್ ಶುರು ಮಾಡು ಎಂದು ಭಾಗ್ಯಾಗೆ ಹೇಳುತ್ತಾರೆ.
ನಂದ ನಂದನ ನೀನು ಶ್ರೀಕೃಷ್ಣ ಹಾಡಿಗೆ ಭಾಗ್ಯಾ ನೃತ್ಯ ಪ್ರದರ್ಶನ
ಭಜರಂಗಿ ಚಿತ್ರದ ಅನುರಾಧಾ ಭಟ್ ಹಾಡಿರುವ ನಂದ ನಂದನ ನೀನು ಶ್ರೀಕೃಷ್ಣ ಹಾಡಿಗೆ ಭಾಗ್ಯಾ ಡ್ಯಾನ್ಸ್ ಮಾಡುತ್ತಾಳೆ. ಆರಂಭದಲ್ಲಿ ಮುಖ ಸಿಂಡರಿಸಿಕೊಂಡು ಕೂರುವ ಡ್ಯಾನ್ಸ್ ಟೀಚರ್ ನಂತರ ಭಾಗ್ಯಾ ಮುಖಭಾವ, ಡ್ಯಾನ್ಸ್ ಸ್ಟೆಪ್ಸ್ ನೋಡಿ ಶಾಕ್ ಆಗುತ್ತಾಳೆ. ಮೊದಲು ಆಕೆಯ ಮುಖದಲ್ಲಿ ಇದ್ದ ಅಹಂ ಮಾಯವಾಗುತ್ತದೆ. ಭಾಗ್ಯಾ ನೃತ್ಯ ನೋಡಿ ಆಕೆ ಸಂಪೂರ್ಣ ಬದಲಾಗುತ್ತಾಳೆ. ಆಕೆ ಎಂಥ ಒಳ್ಳೆ ಡ್ಯಾನ್ಸರ್ ಅನ್ನೋದು ಗೊತ್ತಾಗುತ್ತದೆ. ಡ್ಯಾನ್ಸ್ ಮುಗಿದ ನಂತರ ಧರ್ಮರಾಜ್, ಕುಸುಮಾ, ಪೂಜಾ, ಮಕ್ಕಳು ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ಒಲ್ಲದ ಮನಸಿನಿಂದ ತಾಂಡವ್ ಕೂಡಾ ಚಪ್ಪಾಳೆ ತಟ್ಟುತ್ತಾನೆ. ಏನಾಯ್ತು ಮೇಡಂ, ನನ್ನ ಸೊಸೆ ಡ್ಯಾನ್ಸ್ ನೋಡಿ ನಿಮಗೆ ಏನು ಅನ್ನಿಸಿತು ಎಂದು ಕುಸುಮಾ ಡ್ಯಾನ್ಸ್ ಟೀಚರ್‌ಗೆ ಕೇಳುತ್ತಾಳೆ.
ಡ್ಯಾನ್ಸ್ ಟೀಚರ್ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾಳೆ. ಇದರಿಂದ ಕುಸುಮಾ, ಧರ್ಮರಾಜ್‌ಗೆ ಖುಷಿ ಆದರೆ ತಾಂಡವ್, ಶ್ರೇಷ್ಠಾ ನಿರಾಸೆಯಾಗುತ್ತಾರೆ. ನನ್ನನ್ನು ದಯವಿಟ್ಟು ಕ್ಷಮಿಸು ಭಾಗ್ಯಾ, ನಾನು ನಿನಗೆ ತುಂಬಾ ಅವಮಾನ ಮಾಡಿದೆ. ನಿನ್ನಂಥ ಒಳ್ಳೆ ಕಲಾವಿದೆಗೆ, ನಿನ್ನ ಗುರುಗಳಿಗೂ ನಾನು ಅವಮಾನ ಮಾಡಿಬಿಟ್ಟೆ, ನನಗೆ ನೀನು ನನ್ನ ತಾಯಿ ನೆನಪು ಮಾಡಿದೆ. ನಿನಗೆ ಅವಮಾನ ಮಾಡಿದ್ದು ನನ್ನ ತಾಯಿಯನ್ನೇ ಅವಮಾನ ಮಾಡಿದಂತೆ ಆಯ್ತು, ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಕೈ ಮುಗಿದು ಕ್ಷಮೆ ಕೇಳುತ್ತಾಳೆ. ದಯವಿಟ್ಟು ಹಾಗೆಲ್ಲಾ ಮಾತನಾಡಬೇಡಿ, ನೀವೂ ನನ್ನ ಗುರುಗಳಿದ್ದಂತೆ ಎಂದು ಭಾಗ್ಯಾ ಹೇಳುತ್ತಾಳೆ. ಅವತ್ತು ಆಗಿದ್ದನ್ನು ಮರೆತುಬಿಡು, ನಾಳೆಯಿಂದ ಡ್ಯಾನ್ಸ್ ಕ್ಲಾಸ್‌ಗೆ ಬಾ ಎಂದು ಡ್ಯಾನ್ಸ್ ಟೀಚರ್ ಹೇಳಿದಾಗ ಭಾಗ್ಯಾ, ಕುಸುಮಾ ಖುಷಿಯಾಗುತ್ತಾರೆ.
ಭಾಗ್ಯಾಗೆ ಗೌರವ ನೀಡುವಂತೆ ಶ್ರೇಷ್ಠಾಗೆ ಸಲಹೆ ನೀಡಿದ ಗೆಳತಿ
ಎಲ್ಲರ ಬಳಿ ಕ್ಷಮೆ ಕೇಳಿ ಹೊರಟ ಡ್ಯಾನ್ಸ್ ಟೀಚರನ್ನು ಶ್ರೇಷ್ಠಾ ಹಿಂಬಾಲಿಸುತ್ತಾಳೆ. ನಾನು ಹೇಳಿದ್ದೇನು ನೀನು ಮಾಡಿದ್ದೇನು? ಡ್ಯಾನ್ಸ್ ಕ್ಲಾಸ್‌ನಲ್ಲಿ ಆಕೆಯನ್ನು ಅವಮಾನ ಮಾಡಿ ಇಲ್ಲಿಗೆ ಬಂದು ಹೊಸ ನಾಟಕ ಏಕೆ ಮಾಡುತ್ತಿದ್ದೀಯ? ಎಂದು ಕೋಪದಿಂದ ಕೇಳುತ್ತಾಳೆ. ಭಾಗ್ಯಾ ಒಳ್ಳೆ ಹುಡುಗಿ, ಆಕೆಯನ್ನು ಅವಮಾನ ಮಾಡಿದರೆ ಕಲಾ ಸರಸ್ವತಿಯನ್ನೇ ಅವಮಾನ ಮಾಡಿದಂತೆ. ಆ ತಾಯಿ ಆಶೀರ್ವಾದ ಭಾಗ್ಯಾ ಮೇಲಿದೆ, ಆಕೆ ಕಲಾ ಸರಸ್ವತಿ. ಅವಳಿಗೆ ಅವಮಾನ ಮಾಡಿದರೆ ನಾನು ಕಲಿತ ವಿದ್ಯೆಗೆ ಅವಮಾನ ಮಾಡಿದಂತೆ, ನಿನ್ನ ಸ್ವಾರ್ಥಕ್ಕೆ ನನ್ನ ಕಲೆಯನ್ನು ಬಳಸಿಕೊಳ್ಳಬೇಡ. ಭಾಗ್ಯಾ ಬಹಳ ಪ್ರತಿಭಾವಂತೆ, ಆಕೆಯನ್ನು ಗೌರವಿಸುವುದನ್ನು ಕಲಿ, ಅದರನ್ನು ಬಿಟ್ಟು ಮನೆಹಾಳು ಕೆಲಸ ಮಾಡಬೇಡ, ಅದರಿಂದ ನೀನು ಉದ್ಧಾರವೂ ಆಗುವುದಿಲ್ಲ ಎಂದು ಬುದ್ಧಿ ಹೇಳುವುದಿಲ್ಲ.
ಶ್ರೇಷ್ಠಾ ಕೋಪದಿಂದ ಮೇಲೆ ಬರುತ್ತಾಳೆ. ಅಷ್ಟರಲ್ಲಿ ತಾಂಡವ್ ಹೊಸ ನಾಟಕ ಶುರು ಮಾಡುತ್ತಾನೆ. ಚೆನ್ನಾಗಿ ಡ್ಯಾನ್ಸ್ ಮಾಡಿದೆ ಎಂದು ಭಾಗ್ಯಾಳನ್ನು ಹೊಗಳುತ್ತಾನೆ. ಅವನ ಹೊಗಳಿಕೆ ಕಂಡು ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಆದರೆ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ನೀವು ಭಾಗ್ಯಾಳನ್ನು ಹೊಗಳುತ್ತಿದ್ದೀರಲ್ಲ ಸರ್ ಎಂದು ಶ್ರೇಷ್ಠಾ ಕೇಳುತ್ತಾಳೆ. ಹೌದು ಆಕೆ ಒಳ್ಳೆ ಡ್ಯಾನ್ಸರ್ ಅದಕ್ಕೆ ಹೊಗಳಿದೆ, ಈ ಖುಷಿಗೆ ನಾಳೆ ನಾನು ದೊಡ್ಡ ಪಾರ್ಟಿ ಕೊಡುವೆ ಶ್ರೇಷ್ಠಾ ನೀನು ಕೂಡಾ ಬಾ ಎನ್ನುತ್ತಾನೆ. ಅದನ್ನು ಕೇಳಿ ಆಕೆಗೆ ಸಹಿಸಿಕೊಳ್ಳಲಾಗುವುದಿಲ್ಲ. ಸರಿ ಎನ್ನುತ್ತಾ ಕೋಪಗೊಂಡು ಅಲ್ಲಿಂದ ಹೊರಡುತ್ತಾಳೆ. ತಾಂಡವ್ ಇದ್ದಕ್ಕಿದ್ದಂತೆ ಹೊಸ ವರಸೆ ಶುರು ಮಾಡಿದ್ದನ್ನು ಕುಸುಮಾ ನಿಜ ಎಂದು ನಂಬಿದರೂ ಭಾಗ್ಯಾ ನಂಬುವುದಿಲ್ಲ.
ತಾಂಡವ್ ಹೊಸ ಪ್ಲ್ಯಾನ್ ಏನು? ಭಾಗ್ಯಾಗೆ ಮತ್ತೆ ಅವಮಾನ ಮಾಡಲು ತಾಂಡವ್ ಸಂಚು ಮಾಡುತ್ತಿರಬಹುದಾ? ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ