ಈ ಮನೆ ನಂದು, ಭಾಗ್ಯಾಳನ್ನು ಹೊರ ಹಾಕ್ತೀನಿ ಎಂದ ಶ್ರೇಷ್ಠಾಗೆ ಪೊರಕೆ ಏಟು ಕೊಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 31ರ ಎಪಿಸೋಡ್‌ನಲ್ಲಿ ಪಾರ್ಟಿಗೆ ಬಂದ ಶ್ರೇಷ್ಠಾಳನ್ನು ಕುಸುಮಾ ತಡೆಯುತ್ತಾಳೆ. ಈ ಮನೆ ನಂದು, ಕೆಲವೇ ದಿನಗಳಲ್ಲಿ ಭಾಗ್ಯಾಳನ್ನು ಹೊರ ಹಾಕುತ್ತೇನೆ ಎಂದಾಗ ಕುಸುಮಾ ಅವಳಿಗೆ ಪೊರಕೆ ಏಟು ಕೊಡುತ್ತಾಳೆ.
Bhagyalakshmi Kannada Serial: ಭಾಗ್ಯಾ ಡ್ಯಾನ್ಸ್ ನೋಡಿ ನಾನು ಬದಲಾದಂತೆ ತಾಂಡವ್ ನಟಿಸುತ್ತಾನೆ. ಇದೇ ಖುಷಿಯಲ್ಲಿ ಪಾರ್ಟಿ ನೀಡುವುದಾಗಿ ಅನೌನ್ಸ್ ಮಾಡುತ್ತಾನೆ. ಸಹೋದ್ಯೋಗಿಗಳನ್ನು ಆಹ್ವಾನಿಸುತ್ತಾನೆ. ತಂದೆ ತಾಯಿ ಸೇರಿದಂತೆ ಎಲ್ಲರಿಗೂ ಹೊಸ ಬಟ್ಟೆ ತಂದುಕೊಡುತ್ತಾನೆ.
ಭಾಗ್ಯಾಗೆ ತಾಂಡವ್ ತಂದ ಡ್ರೆಸ್ ನೋಡಿ ಕುಸುಮಾ ಶಾಕ್ ಆಗುತ್ತಾಳೆ. ಇದೇನು ಈ ರೀತಿಯ ಡ್ರೆಸ್ ತಂದಿದ್ದೀಯ ಎಂದಾಗ ಭಾಗ್ಯಾ ಈಗ ಬದಲಾಗುತ್ತಿದ್ದಾಳೆ. ಅದಕ್ಕೆ ತಕ್ಕಂತೆ ಅವಳು ಡ್ರೆಸ್ ಬದಲಿಸಬೇಕು. ಅವಳು ಪಾರ್ಟಿಯಲ್ಲಿ ಎಲ್ಲರೆದುರು ಗುಗ್ಗು ರೀತಿ ಇರುವುದು ನನಗೆ ಇಷ್ಟವಿಲ್ಲ ಎನ್ನುತ್ತಾನೆ. ಮೊದಲು ನಿರಾಕರಿಸಿದರೂ ಕುಸುಮಾ ನಂತರ ಭಾಗ್ಯಾ ಆ ತುಂಡುಬಟ್ಟೆ ಧರಿಸಲು ಒಪ್ಪುತ್ತಾಳೆ. ತಾಂಡವ್, ಎಲ್ಲವೂ ತಾನು ಅಂದುಕೊಂಡಂತೆ ನಡೆಯುತ್ತಿದೆ ಎಂಬ ಖುಷಿಯಲ್ಲಿದ್ದಾನೆ. ಎಲ್ಲರ ಮುಂದೆ ಭಾಗ್ಯಾಗೆ ಅವಮಾನ ಮಾಡಬೇಕೆಂದು ಕಾಯುತ್ತಿದ್ದಾನೆ.
ತಾಂಡವ್ ತನಗೆ ತಂದ ಡ್ರೆಸ್ ನೋಡಿ ಗಾಬರಿಯಾದ ಭಾಗ್ಯಾ
ಅಷ್ಟರಲ್ಲಿ ಭಾಗ್ಯಾ ಮನೆಗೆ ಹೊಸ ರೆಫ್ರಿಜರೇಟರ್ ತರುತ್ತಾಳೆ. ಹಳೆಯ ಫ್ರಿಡ್ಜ್ ರೀತಿಯಲ್ಲೇ ಹೊಸ ಫ್ರಿಡ್ಜ್ ನೋಡಿ ಎಲ್ಲರೂ ಖುಷಿಯಾಗುತ್ತಾರೆ. ಇದು ಗುಂಡಣ್ಣನ ಫೇವರೆಟ್ ಫ್ರಿಡ್ಜ್ ಅದಕ್ಕೆ ತಂದೆ ಎನ್ನುತ್ತಾಳೆ. ಭಾಗ್ಯಾ ಹೀಗೆ ಬೆಳೆಯುತ್ತಿರುವುದನ್ನು ನೋಡಿ ಕುಸುಮಾ, ಧರ್ಮರಾಜ್ ಸಂತೋಷ ವ್ಯಕ್ತಪಡಿಸುತ್ತಾರೆ. ಮೊದಲೆಲ್ಲಾ ಒಂದು ಕರಿಬೇವು ತರಲೂ ಗಂಡನ ಬಳಿ ಕೈ ಚಾಚುತ್ತಿದ್ದೆ, ಆದರೆ ಈ ನನ್ನ ಸ್ವಂತ ಸಂಪಾದನೆಯಿಂದ ಇದನ್ನು ತಂದಿದ್ದೇನೆ. ಬಹಳ ಖುಷಿಯಾಗುತ್ತಿದೆ ಎಂದು ಭಾಗ್ಯಾ ಹೇಳುತ್ತಾಳೆ. ಅಷ್ಟರಲ್ಲಿ ಒಬ್ಬೊಬ್ಬರಾಗೇ ಪಾರ್ಟಿಗೆ ಬರುತ್ತಾರೆ. ಬೇಗ ರೆಡಿ ಆಗಿ ಬರುವಂತೆ ಕುಸುಮಾ ಭಾಗ್ಯಾಗೆ ಹೇಳುತ್ತಾಳೆ. ಭಾಗ್ಯಾ ಜೊತೆ ರೂಮ್‌ಗೆ ಬರುವ ಕುಸುಮಾ, ನಿನಗಾಗಿ ತಾಂಡವ್ ಈ ಡ್ರೆಸ್ ತಂದಿದ್ದಾನೆ, ಹಾಕು ಎನ್ನುತ್ತಾಳೆ. ಅದನ್ನು ನೋಡಿ ಭಾಗ್ಯಾ ಬೇಸರಗೊಳ್ಳುತ್ತಾಳೆ. ಮೊದಲೆಲ್ಲಾ ಕುರ್ತಾ ಹಾಕಿಕೊಳ್ಳಲೂ ಒಪ್ಪಿಗೆ ಕೊಡದ ಅತ್ತೆ ಈಗ ಇಂಥ ಬಟ್ಟೆ ಹಾಕಿಕೊಳ್ಳಲು ಹೇಳುತ್ತಿರುವುದು ಭಾಗ್ಯಾಗೆ ಇಷ್ಟ ಆಗುತ್ತಿಲ್ಲ. ಅದರೂ ಅತ್ತೆ ಮಾತಿಗೆ ಇಲ್ಲ ಎನ್ನಲಾಗದೆ ಸರಿ ಎನ್ನುತ್ತಾಳೆ.
ಶ್ರೇಷ್ಠಾಗೆ ಕುಸುಮಾ ಪೊರಕೆ ಸೇವೆ
ಇತ್ತ ಪಾರ್ಟಿಗೆ ಬಂದ ಶ್ರೇಷ್ಠಾಳನ್ನು ನೋಡಿ ಸುಂದ್ರಿ ತಡೆಯುತ್ತಾಳೆ. ಮಕ್ಕಳು ಕೂಡಾ ನೀವು ಇಲ್ಲಿಗೆ ಬರಬೇಡಿ ಹೊರ ಹೋಗಿ ಎನ್ನುತ್ತಾರೆ. ಕೋಪದಿಂದ ಮಕ್ಕಳಿಗೆ ಹೊಡೆಯಲು ಬಂದ ಶ್ರೇಷ್ಠಾಳನ್ನು ಕುಸುಮಾ ತಡೆಯುತ್ತಾಳೆ. ಅವಳನ್ನು ಕೆಳಗೆ ಎಳೆದೊಯ್ದು ನೀನು ಏಕೆ ಬಂದೆ? ನನ್ನ ಸೊಸೆ ಡ್ಯಾನ್ಸ್ ಮಾಡುವುದನ್ನು ನೀನು ನೋಡಬೇಕಿತ್ತು, ಅದಕ್ಕೆ ಕರೆದೆ, ಇಂದು ನಿನ್ನ ಅವಶ್ಯಕತೆ ಇಲ್ಲ ಎಂದು ಕುಸುಮಾ ಹೇಳುತ್ತಾಳೆ. ಈ ಮನೆ ನಂದು, ನನ್ನನ್ನು ಬರಬೇಡ ಎನ್ನಲು ನೀವು ಯಾರು? ಕೆಲವೇ ದಿನಗಳಲ್ಲಿ ನಾನು ಈ ಮನೆಗೆ ಬರುತ್ತೇನೆ. ಎಲ್ಲವನ್ನೂ ನನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳುತ್ತೇನೆ, ಭಾಗ್ಯಾಳನ್ನು ಹೊರ ಹಾಕುತ್ತೇನೆ ಎನ್ನುತ್ತಾಳೆ. ಇದರಿಂದ ಕೋಪಗೊಳ್ಳುವ ಕುಸುಮಾ ಪೊರಕೆಯಿಂದ ಶ್ರೇಷ್ಠಾಗೆ ಬಾರಿಸುತ್ತಾಳೆ.
ಕುಸುಮಾ ತನಗೆ ಹೊಡೆದಿದ್ದನ್ನು ಶ್ರೇಷ್ಠಾ ತಾಂಡವ್‌ಗೆ ಹೇಳುತ್ತಾಳಾ? ತಾಂಡವ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಕಾದು ನೋಡಬೇಕು.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ