ಕನ್ನಡ ಸುದ್ದಿ  /  Entertainment  /  Kannada Small Screen Dk Shivakumar Will Be Next Guest In Zee Kannada Weekend With Ramesh 5 Episode Ramesh Aravind Rsm

Weekend with Ramesh 5: ವೀಕೆಂಡ್‌ ವಿತ್‌ ರಮೇಶ್‌ ಡಿಕೆ ಶಿವಕುಮಾರ್‌ ಪ್ರೋಮೊ ರಿಲೀಸ್‌; ಅಪ್ಪನೇ ನನ್ನ ಹೀರೋ ಎಂದ ಡಿಸಿಎಂ ಪುತ್ರಿ ಆಭರಣ

ಜೀ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋ ನೋಡಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬೆಂಬಲಿಗರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈ ವಾರದ ಎಪಿಸೋಡ್‌ ನೋಡಲು ಕಾಯತ್ತಿದ್ದಾರೆ.

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಈ ವಾರದ ಅತಿಥಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌
ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಈ ವಾರದ ಅತಿಥಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (PC: Zee Kannada official Facebook)

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ 5ನೇ ಸೀಸನ್‌ನಲ್ಲಿ ಇದುವರೆಗೂ ಅನೇಕ ಸೆಲಬ್ರಿಟಿಗಳು ಭಾಗವಹಿಸಿದ್ದಾರೆ. ತಮ್ಮ ಜೀವನದ ನೋವು ನಲಿವಿನ ದಿನಗಳನ್ನು ನೆನೆದಿದ್ದಾರೆ. ವೀಕ್ಷಕರು ಕೂಡಾ ತಮ್ಮ ಮೆಚ್ಚಿನ ಸೆಲೆಬ್ರಿಟಿಗಳ ಎಪಿಸೋಡ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಶನಿವಾರ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಾಧಕರ ಸೀಟ್‌ನಲ್ಲಿ ಕೂರಲಿದ್ದಾರೆ. ವಾಹಿನಿಯು ಈ ವಾರದ ಪ್ರೋಮೋವನ್ನು ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ. ಪ್ರೋಮೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಡಿಕೆಶಿ ಟೀಚರ್‌, ತಾಯಿ, ಪತ್ನಿ ಉಷಾ, ಮಗಳು ಆಭರಣ, ಸಿಹಿ ಕಹಿ ಚಂದ್ರು, ಸ್ನೇಹಿತರು ಸೇರಿದಂತೆ ಅನೇಕರು ಭಾಗವಹಿಸಿ ಡಿಕೆಶಿ ಬಗ್ಗೆ ಮಾತನಾಡಿದ್ದಾರೆ.

ಡಿಕೆಶಿ ಬೆಂಬಲಿಗರು ಈ ಪ್ರೋಮೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ನಿಜವಾಗಿಯೂ ಕಳೆ ಬಂತು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಈ ಶನಿವಾರದ ಎಪಿಸೋಡ್‌ ನೋಡಲು, ಡಿಕೆಶಿ ಜೀವನದ ಮತ್ತಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಡಿಕೆಶಿ ಪೂರ್ತಿ ಹೆಸರು ದೊಡ್ಡಹಳ್ಳಿ ಕೆಂಪೇಗೌಡ ಶಿವಕುಮಾರ್‌. ರಾಮನಗರ ಜಿಲ್ಲೆ ಕನಕಪುರದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಮಗನಾಗಿ 15 ಮೇ 1962ರಲ್ಲಿ ಡಿಕೆಶಿ ಜನಿಸಿದರು. ಡಿ.ಕೆ. ಸುರೇಶ್‌, ಡಿಕೆಶಿ ಅವರ ಕಿರಿಯ ಸಹೋದರ. ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾದಲ್ಲಿ ಎಂಎ ಸ್ನಾತಕೋತ್ತರ ಪದವಿ ಗಳಿಸಿರುವ ಡಿಕೆ ಶಿವಕುಮಾರ್‌ 1993ರಲ್ಲಿ ಉಷಾ ಎಂಬುವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾರೆ. ಹಿರಿಯ ಪುತ್ರಿ ಹೆಸರು ಐಶ್ವರ್ಯ, ಎರಡನೇ ಮಗಳ ಹೆಸರು ಆಭರಣ. ಮಗನ ಹೆಸರು ಆಕಾಶ್.‌

ವೀಕೆಂಡ್‌ ವಿತ್‌ ರಮೇಶ್‌ ಕುರಿತಾದ ಮತ್ತಷ್ಟು ಸುದ್ದಿಗಳು

ಅಂಬರೀಶ್‌ಗೆ ಗಾಂಚಲಿ ಇತ್ತು, ಭಯ ಹುಟ್ಟಿಸಲು ಒಂದು ಪ್ಲಾನ್‌ ಮಾಡಿದ್ದೆ, ಅಂಬಿ ಜೊತೆಗಿನ ಒಡನಾಟ ನೆನೆದ ಜೈ ಜಗದೀಶ್‌; ವಿಡಿಯೋ

ಪ್ರತಿ ಶನಿವಾರ ಹಾಗೂ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 5 ಕಾರ್ಯಕ್ರಮದ 19ನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್‌ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಾಲ್ಯದಿಂದ ಇದುವರೆಗಿನ ಅನೇಕ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಡಾ ವಿಷ್ಣುವರ್ಧನ್‌ ಅಭಿಮಾನಿಯಾದ್ರೂ ಅವರ ಮಗನ ಪಾತ್ರದಲ್ಲಿ ನಟಿಸುವ ಅವಕಾಶ ಬಿಟ್ಟ ಕಾರಣ ವಿವರಿಸಿದ ನೆನಪಿರಲಿ ಪ್ರೇಮ್‌

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ 14ನೇ ಎಪಿಸೋಡ್‌ನಲ್ಲಿ ಪೇಮ್‌ ಅತಿಥಿಯಾಗಿ ಭಾಗವಹಿಸಿದ್ದರು. ತಾವು ವಿಷ್ಣುವರ್ಧನ್‌ ಅವರ ದೊಡ್ಡ ಅಭಿಮಾನಿಯಾದರೂ ಅವರ ಮಗನ ಪಾತ್ರದಲ್ಲಿ ನಟಿಸುವ ಅವಕಾಶವನ್ನು ಬಿಟ್ಟಿದ್ದ ಆಸಕ್ತಿಕರ ವಿಚಾರವೊಂದನ್ನು ಪ್ರೇಮ್‌ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಪ್ರೇಮ್‌ ಬಗ್ಗೆ ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ