ಬಿಕ್ಕಳಿಸುತ್ತಿದ್ದ ಗಂಡನಿಗೆ ನೀರು ಕೊಟ್ಟ ಭಾವನಾ, ಜಯಂತ್‌ ಕುರ್ಚಿ ಟೇಬಲ್‌ನೊಂದಿಗೆ ಮಾತನಾಡುವುದನ್ನು ನೋಡಿದ ಜಾನು; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಕ್ಕಳಿಸುತ್ತಿದ್ದ ಗಂಡನಿಗೆ ನೀರು ಕೊಟ್ಟ ಭಾವನಾ, ಜಯಂತ್‌ ಕುರ್ಚಿ ಟೇಬಲ್‌ನೊಂದಿಗೆ ಮಾತನಾಡುವುದನ್ನು ನೋಡಿದ ಜಾನು; ಲಕ್ಷ್ಮೀ ನಿವಾಸ ಧಾರಾವಾಹಿ

ಬಿಕ್ಕಳಿಸುತ್ತಿದ್ದ ಗಂಡನಿಗೆ ನೀರು ಕೊಟ್ಟ ಭಾವನಾ, ಜಯಂತ್‌ ಕುರ್ಚಿ ಟೇಬಲ್‌ನೊಂದಿಗೆ ಮಾತನಾಡುವುದನ್ನು ನೋಡಿದ ಜಾನು; ಲಕ್ಷ್ಮೀ ನಿವಾಸ ಧಾರಾವಾಹಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 8ರ ಎಪಿಸೋಡ್‌ನಲ್ಲಿ ಊಟ ಮಾಡುವಾಗ ಬಿಕ್ಕಳಿಸುವ ಗಂಡ ಸಿದ್ದೇಗೌಡನಿಗೆ ನೀರು ಕೊಡುವ ಭಾವನಾ ನಿಧಾನವಾಗಿ ಊಟ ಮಾಡಿ ಎನ್ನುತ್ತಾಳೆ. ಮತ್ತೊಂದೆಡೆ ಜಾಹ್ನವಿ, ತನ್ನ ಗಂಡ ಗಿಡಗಳು, ಕುರ್ಚಿ, ಟೇಬಲ್‌ ಜೊತೆ ಮಾತನಾಡುವುದನ್ನು ನೋಡಿ ಗಾಬರಿಯಾಗುತ್ತಾಳೆ.

 Lakshmi Nivasa Serial: ಗಂಡ ಮಧ್ಯರಾತ್ರಿ ಎದ್ದು ಕುರ್ಚಿ,ಟೇಬಲ್‌ ಕ್ಲೀನ್‌ ಮಾಡಿ ಅವುಗಳೊಂದಿಗೆ ಮಾತನಾಡುವುದನ್ನು ನೋಡಿದ ಜಾಹ್ನವಿ, ಊಟ ನೆತ್ತಿಗೆ ಏರಿ ಬಿಕ್ಕಳಿಸುತ್ತಿದ್ದ ಗಂಡನಿಗೆ ನೀರು ಕೊಟ್ಟು ಉಪಚರಿಸಿದ ಭಾವನಾ,
Lakshmi Nivasa Serial: ಗಂಡ ಮಧ್ಯರಾತ್ರಿ ಎದ್ದು ಕುರ್ಚಿ,ಟೇಬಲ್‌ ಕ್ಲೀನ್‌ ಮಾಡಿ ಅವುಗಳೊಂದಿಗೆ ಮಾತನಾಡುವುದನ್ನು ನೋಡಿದ ಜಾಹ್ನವಿ, ಊಟ ನೆತ್ತಿಗೆ ಏರಿ ಬಿಕ್ಕಳಿಸುತ್ತಿದ್ದ ಗಂಡನಿಗೆ ನೀರು ಕೊಟ್ಟು ಉಪಚರಿಸಿದ ಭಾವನಾ, (PC: Zee Kannada Serial)

Lakshmi Nivasa Serial: ಸಿದ್ದೇಗೌಡನನ್ನು ಮನೆಯವರು ಕಡೆಗಣಿಸುತ್ತಿರುವುದಕ್ಕೆ ನಾನೇ ಕಾರಣವಾಗಿಬಿಟ್ನಾ ಎಂಬ ಬೇಸರ ಭಾವನಾಗೆ ಕಾಡುತ್ತದೆ. ಈ ಬೇಸರವನ್ನು ಗೌಡ್ರ ಬಳಿ ಹಂಚಿಕೊಳ್ಳುತ್ತಾಳೆ. ಆ ಹುಡುಗ ನಿಮಗಾಗಿ ಮನೆಯವರನ್ನೆಲ್ಲಾ ಎದುರು ಹಾಕಿಕೊಂಡಿದ್ದಾನೆ ಎಂದರೆ ಅವನಿಗೆ ನಿಮ್ಮ ಮೇಲೆ ಎಷ್ಟು ಪ್ರೀತಿ ಇದೆ ನೋಡಿ, ಯಾರೂ ಅವನ ಜೊತೆ ಇಲ್ಲವೆಂದಾಗ ನೀವಾದರೂ ಇರಿ ಎನ್ನುತ್ತಾನೆ. ಇದು ಭಾವನಾಗೂ ಸರಿ ಎನಿಸುತ್ತದೆ.

ನಿಧಾನವಾಗಿ ಊಟ ಮಾಡಿ ಎಂದು ಗಂಡನ ಬಗ್ಗೆ ಕಾಳಜಿ ತೋರಿದ ಭಾವನಾ

ಸಿದ್ದೇಗೌಡ ರಾತ್ರಿ ಮನೆಗೆ ಬಂದವನೇ ಯಾರಿಗೂ ತೊಂದರೆ ಕೊಡಬಾರದೆಂಬ ಕಾರಣಕ್ಕೆ ತಾನೇ ತಟ್ಟೆಗೆ ಊಟ ಹಾಕಿಕೊಂಡು ತಿನ್ನುತ್ತಾನೆ. ಭಾವನಾ, ಗಂಡನನ್ನು ಗಮನಿಸುತ್ತಾಳೆ. ಮುದುವೆ ಏನೋ ಮಾಡಿಕೊಂಡೆ, ಆದರೆ ನಾನೇ ಊಟ ಬಡಿಸಿಕೊಂಡು ತಿನ್ನಬೇಕು ಎಂದು ಸಿದ್ದೇಗೌಡ ಗೊಣಗಿಗೊಂಡು ಊಟ ಮಾಡುತ್ತಾನೆ. ಒಂದೇ ಸಮಯ ಊಟ ಮಾಡುವಾಗ ನೆತ್ತಿ ಹತ್ತುತ್ತದೆ. ಸಿದ್ದೇಗೌಡ ನೀರಿಗಾಗಿ ಹುಡುಕಾಡುತ್ತಾನೆ. ಡೈನಿಂಗ್‌ ಟೇಬಲ್‌ ಮೇಲೆ ನೀರು ಇರುವುದಿಲ್ಲ. ಭಾವನಾ ಗಂಡನ ಕಷ್ಟ ನೋಡಲಾಗದೆ ತನ್ನ ರೂಮ್‌ನಿಂದ ನೀರು ತಂದುಕೊಡುತ್ತಾಳೆ. ಸಿದ್ದೇಗೌಡ ನೀರು ಕುಡಿಯುತ್ತಾನೆ. ನಿಧಾನವಾಗಿ ತಿನ್ನಿ, ಏಕೆ ಅಷ್ಟು ಆತುರವಾಗಿ ಊಟ ಮಾಡುತ್ತಿದ್ದೀರಿ ಎಂದು ಭಾವನಾ ಕೇಳುತ್ತಾಳೆ.

ಸಿದ್ದು-ಭಾವನಾ ಮಾತನಾಡುವುದನ್ನು ನೋಡಿದ ರೇಣುಕಾ

ಈ ಮನೆಯವರಿಗೆ ನಾನು ಬೇಡವಾಗಿದ್ದೇನೆ, ಎಲ್ಲರೂ ಬರುವ ಮುನ್ನ ಯಾರಿಗೂ ಕಾಣಿಸಿಕೊಳ್ಳದಂತೆ ಊಟ ಮಾಡೋಣ ಅಂತ ಹೀಗೆ ಮಾಡಿದೆ, ಇಲ್ಲವೆಂದರೆ ನಾನು ಊಟಕ್ಕೂ ದಂಡ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ ಎಂದು ಸಿದ್ದೇಗೌಡ ಹೇಳುತ್ತಾನೆ. ನೀವು ತಪ್ಪು ಮಾಡುವ ಮುನ್ನ ಒಂದು ಕ್ಷಣ ಯೋಚಿಸಿದ್ದರೆ ಎಲ್ಲವೂ ಸರಿ ಆಗುತ್ತಿತ್ತು ಎಂದು ಭಾವನಾ ಹೇಳುತ್ತಾನೆ. ಸಿದ್ದೇಗೌಡ ಮತ್ತೆ ಬಿಕ್ಕಳಿಸುತ್ತಾನೆ. ಆಗಲೂ ಭಾವನಾ ನೀರು ಕೊಡುತ್ತಾಳೆ. ಆಕೆ ಸಿದ್ದುವಿಗೆ ನೀರು ಕೊಡುವಾಗ ಸಿದ್ದೇಗೌಡನ ತಾಯಿ ರೇಣುಕಾ ಅದನ್ನು ನೋಡುತ್ತಾಳೆ. ಅವಳಿಗೆ ಅಡುಗೆ ಮನೆಗೆ ಹೋಗಬೇಡ ಅಂತ ಹೇಳಿದ್ದೆ ಎನ್ನುತ್ತಾಳೆ. ಅವ್ವ ಅವರಿಗೆ ಏನೂ ಹೇಳಬೇಡ, ಇದರಲ್ಲಿ ಅವರ ತಪ್ಪು ಏನೂ ಇಲ್ಲ ಅವರು ಅಡುಗೆ ಮನೆಗೆ ಹೋಗಲಿಲ್ಲ, ಒಂದು ವೇಳೆ ಹೋದರೂ ಏನು ತಪ್ಪು, ಅವರು ನನ್ನ ಹೆಂಡತಿ, ಅವರು ಮಗುವಿನಂಥ ಮನಸ್ಸು ಇರುವವರು ಎನ್ನುತ್ತಾನೆ. ಇದರಿಂದ ರೇಣುಕಾ ಕೋಪಗೊಂಡು ಒಳಗೆ ಹೋಗುತ್ತಾಳೆ. ಭಾವನಾ ಕೂಡಾ ರೂಮ್‌ಗೆ ಹೋಗುತ್ತಾಳೆ. ನಂತರ ರೂಮ್‌ಗೆ ಬರುವ ಸಿದ್ದು, ಹೆಂಡತಿ ಬಳಿ ಕ್ಷಮೆ ಕೇಳುತ್ತಾನೆ.

ಪತಿ ಜಯಂತ್‌ ಗಿಡಗಳು, ಕುರ್ಚಿಗಳ ಜೊತೆ ಮಾತನಾಡುವುದನ್ನು ನೋಡಿ ಗಾಬರಿಯಾದ ಜಾನು

ಇತ್ತ ಜಾಹ್ನವಿ, ತನಗೆ ಮಾಚ್‌ಮ್ಯಾನ್‌ ಸಿಕ್ಕ ವಿಚಾರವನ್ನು ಗಂಡನಿಗೆ ತಿಳಿಸುತ್ತಾಳೆ. ಅದು ಗೊತ್ತಾಗುತ್ತಿದ್ದಂತೆ ಜಯಂತನಿಗೆ ಭಯವಾಗುತ್ತದೆ. ವಾಚ್‌ಮ್ಯಾನ್‌ ಜಾಹ್ನವಿಗೆ ಏನು ಹೇಳಿರಬಹುದು ಎಂದು ಯೋಚನೆ ಮಾಡುತ್ತಾನೆ. ಮಧ್ಯರಾತ್ರಿ ಮಲಗಿರುವಾಗ ಜಾಹ್ನವಿ ನಿದ್ರೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡ ಜಯಂತ್‌ ಹಾಲ್‌ಗೆ ಬಂದು ಸೋಫಾ, ಚೇರ್‌ ಎಲ್ಲವನ್ನೂ ಕ್ಲೀನ್‌ ಮಾಡುತ್ತಾನೆ. ಗಿಡಗಳೊಂದಿಗೆ ಮಾತನಾಡುತ್ತಾನೆ. ಇಷ್ಟು ದಿನಗಳು ನಿಮ್ಮನ್ನು ನೋಡಿಕೊಂಡಿದ್ದು ನಾನು, ಆ ವಾಚ್‌ಮ್ಯಾನ್‌, ಜಾಹ್ನವಿಗೆ ಏನು ಹೇಳಿದ್ದು ಅಂತ ಈಗ ನೀವು ನನ್ನೊಂದಿಗೆ ಹೇಳಲೇಬೇಕು ಎನ್ನುತ್ತಾನೆ. ಗಂಡ ಹೀಗೆ ಗಿಡಗಳು, ಚೇರ್‌, ಟೇಬಲ್‌ ಜೊತೆ ಮಾತನಾಡುವುದನ್ನು ನೋಡುವ ಜಾಹ್ನವಿ ಗಾಬರಿ ಆಗುತ್ತಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner