ಅನಿಷ್ಟ ಎಂದು ಸೊಸೆಯನ್ನು ಬೈದ ಜವರೇಗೌಡ, ಭಾವನಾಗೆ ಸಮಾಧಾನ ಮಾಡಲು ಖುಷಿಯನ್ನು ಮನೆಗೆ ಕರೆತಂದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅನಿಷ್ಟ ಎಂದು ಸೊಸೆಯನ್ನು ಬೈದ ಜವರೇಗೌಡ, ಭಾವನಾಗೆ ಸಮಾಧಾನ ಮಾಡಲು ಖುಷಿಯನ್ನು ಮನೆಗೆ ಕರೆತಂದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

ಅನಿಷ್ಟ ಎಂದು ಸೊಸೆಯನ್ನು ಬೈದ ಜವರೇಗೌಡ, ಭಾವನಾಗೆ ಸಮಾಧಾನ ಮಾಡಲು ಖುಷಿಯನ್ನು ಮನೆಗೆ ಕರೆತಂದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್‌ 22ರ ಸಂಚಿಕೆಯಲ್ಲಿ ಜವರೇಗೌಡ ಸೊಸೆಯನ್ನು ಅನಿಷ್ಟ ಎಂದು ಬೈಯ್ಯುತ್ತಾನೆ. ಹೆಂಡತಿಯನ್ನು ಸಮಧಾನಪಡಿಸಲು ಸಿದ್ದೇಗೌಡ ಖುಷಿಯನ್ನು ಮನೆಗೆ ಕರೆತರುತ್ತಾನೆ. ಇದರಿಂದ ಖುಷಿಯನ್ನು ಕಿಡ್ನಾಪ್‌ ಮಾಡುವ ಶ್ರೀಕಾಂತ್‌ ಭಾವನ ಪ್ಲ್ಯಾನ್‌ ಫ್ಲಾಪ್‌ ಆಗುತ್ತದೆ.

ಲಕ್ಷ್ಮೀ ನಿವಾಸ 360ನೇ ಎಪಿಸೋಡ್‌:  ಭಾವನಾಳನ್ನು ತಂದೆ ಬೈದದ್ದಕ್ಕೆ ಅವಳನ್ನು ಸಮಾಧಾನ ಮಾಡಲು ಖುಷಿಯನ್ನು ಮನೆಗೆ ಕರೆತಂದ ಸಿದ್ದೇಗೌಡ
ಲಕ್ಷ್ಮೀ ನಿವಾಸ 360ನೇ ಎಪಿಸೋಡ್‌: ಭಾವನಾಳನ್ನು ತಂದೆ ಬೈದದ್ದಕ್ಕೆ ಅವಳನ್ನು ಸಮಾಧಾನ ಮಾಡಲು ಖುಷಿಯನ್ನು ಮನೆಗೆ ಕರೆತಂದ ಸಿದ್ದೇಗೌಡ (PC: Zee Kannada Facebook)

ಭಾವನಾಗೆ ತಾನೇ ತಾಳಿ ಕಟ್ಟಿದ್ದು ಎಂದು ಹೇಳಲು ಹೆದರುತ್ತಿದ್ದ ಸಿದ್ದೇಗೌಡ ಕೊನೆಗೂ ಕಾರ್ಯಕ್ರಮವೊಂದರಲ್ಲಿ ಎಲ್ಲರ ಮುಂದೆ ತಾನೇ ತಾಳಿ ಕಟ್ಟಿದ್ದು ಎಂದು ಒಪ್ಪಿಕೊಳ್ಳುತ್ತಾನೆ. ಭಾವನಾ ಮನೆಗೆ ಬಂದು ಅವಳನ್ನು ಮನೆಗೆ ಕಳಿಸಿಕೊಡುವಂತೆ ಕೇಳುತ್ತಾನೆ. ಇಷ್ಟವಿಲ್ಲದಿದ್ರೂ ವಿಧಿ ಇಲ್ಲದೆ ಮನೆಯವರು ಒಪ್ಪಿಕೊಳ್ಳುತ್ತಾರೆ. ಭಾವನಾ ಕೂಡಾ ಒಲ್ಲದ ಮನಸ್ಸಿನಿಂದ ಸಿದ್ದೇಗೌಡನ ಜೊತೆ ಬರುತ್ತಾಳೆ.

ಸೊಸೆಯನ್ನು ಅನಿಷ್ಟ ಎಂದು ಬೈಯ್ಯುವ ಜವರೇಗೌಡ

ದೊಡ್ಡ ಸಂಬಂಧ ತಪ್ಪಿತಲ್ಲಾ ಎಂಬ ಕೋಪ ಸಿದ್ದೇಗೌಡನ ತಂದೆ ಜವರೇಗೌಡನಿಗೆ ಕೋಪ. ಭಾವನಾಳನ್ನು ಸೊಸೆ ಎಂದು ಒಪ್ಪಿಕೊಳ್ಳಲು ಆತನಿಗೆ ಇಷ್ಟವಿಲ್ಲ. ನೀನು ಇಷ್ಟಪಟ್ಟ ಹುಡುಗಿ ಬೇಕಾ, ನಾನು ಬೇಕಾ ಎಂದು ಜವರೇಗೌಡ ಕೇಳಿದಾಗ ನನಗೆ ಇಬ್ಬರೂ ಬೇಕು ಎಂದು ಸಿದ್ದೇಗೌಡ ಹೇಳುತ್ತಾನೆ. ಮಂಗಳವಾರದ ಎಪಿಸೋಡ್‌ನಲ್ಲಿ ಸಿದ್ದೇಗೌಡ ಭಾವನಾಗೆ ಅರೋಗ್ಯ ಸರಿ ಇಲ್ಲ ಎಂದು ಮನೆಗೆ ಡಾಕ್ಟರ್‌ ಕರೆಸುತ್ತಾನೆ. ಮನೆಗೆ ವೈದ್ಯರು ಬಂದಿರುವ ವಿಚಾರ ತಿಳಿದ ಜವರೇಗೌಡ, ಇದೆಲ್ಲಾ ಬೇಕಿತ್ತಾ? ನಮಗೆ ಇಷ್ಟವಿಲ್ಲದಿದ್ದರೂ ಆ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿರುವೆ, ಏನಾದರೂ ಹೆಚ್ಚು ಕಡಿಮೆ ಆದರೆ ಎಲ್ಲಾ ನನ್ನ ಮೇಲೆ ಬರುತ್ತದೆ. ಅದು ಎಂಥಾ ಅನಿಷ್ಟ ಹೆಣ್ಣೋ ಏನೋ, ಮನೆಗೆ ಬಂದಾಗಿನಿಂದ ಮನೆಯಲ್ಲಿ ಆಗಬಾರದ್ದು ಆಗುತ್ತಿದೆ ಎಂದು ಬೈಯ್ಯುತ್ತಾನೆ. ಅಪ್ಪನ ಮಾತಿಗೆ ಬೇಸರಗೊಳ್ಳುವ ಸಿದ್ದೇಗೌಡ ಏನೂ ಮಾತನಾಡದೆ ಅಲ್ಲಿಂದ ಹೋಗುತ್ತಾನೆ.

ಭಾವನಾಳನ್ನು ಸಮಧಾನ ಮಾಡಲು ಖುಷಿಯನ್ನು ಮನೆಗೆ ಕರೆತಂದ ಸಿದ್ದೇಗೌಡ

ಭಾವನಾ, ಮಾವ ಮಾತಾಡಿದ್ದನ್ನು ಕೇಳಿಸಿಕೊಳ್ಳುತ್ತಾಳೆ. ಸಿದ್ದೇಗೌಡ , ಅವಳನ್ನು ಸಮಾಧಾನ ಮಾಡಲು ಯತ್ನಿಸುತ್ತಾನೆ. ಈಗಲಾದರೂ ಸ್ವಲ್ಪ ಊಟ ಮಾಡಿ ಎಂದು ಮನವಿ ಮಾಡುತ್ತಾನೆ. ಅದರೆ ಭಾವನಾ ಅವನ ಮಾತನ್ನು ಕೇಳುವುದಿಲ್ಲ. ಬಹುಶ: ಖುಷಿಯನ್ನು ನೋಡಿದರೆ ಭಾವನಾ ಸಮಾಧಾನವಾಗಬಹುದು ಎಂದು ಸಿದ್ದೇಗೌಡ ಖುಷಿಯನ್ನು ಕರೆತರಲು ಸ್ಕೂಲ್‌ಗೆ ಹೊರಡುತ್ತಾನೆ. ಅದರೆ ಅತ್ತ ಖುಷಿಯನ್ನು ಕಿಡ್ನಾಪ್‌ ಮಾಡುವ ಪ್ಲ್ಯಾನ್‌ ನಡೆಯುತ್ತಿರುತ್ತದೆ. ಶ್ರೀಕಾಂತ್‌ ಭಾವ, ಖುಷಿಯನ್ನು ಕಿಡ್ನಾಪ್‌ ಮಾಡಲು ರೌಡಿಗಳನ್ನು ಕಳಿಸುತ್ತಾನೆ. ಅಷ್ಟರಲ್ಲಿ ಸಿದ್ದೇಗೌಡ ಬಂದು ಖುಷಿಯನ್ನು ಕಾಪಾಡಿ ಮನೆಗೆ ಕರೆತರುತ್ತಾನೆ. ಖುಷಿಯನ್ನು ನೋಡಿ ಭಾವನಾ ಖುಷಿಯಾಗುತ್ತಾಳೆ. ಖುಷಿಯನ್ನು ಕರೆತಂದದ್ದು ಸಿದ್ದೇಗೌಡ ಅನ್ನೋದು ಭಾವನಾಗೆ ತಿಳಿಯುತ್ತದೆ.

ಭಾವನಾ-ಸಿದ್ದೇಗೌಡ ಮನೆಗೆ ಬರುತ್ತಿರುವುದಕ್ಕೆ ಕೋಪಗೊಂಡ ಸಿಂಚನಾ

ಮತ್ತೊಂದೆಡೆ ಜಾಹ್ನವಿ, ಅಮ್ಮನ ಮನೆಗೆ ಬಂದು ಭಾವನಾ ಹಾಗೂ ಸಿದ್ದೇಗೌಡರನ್ನು ಮನೆಗೆ ಊಟಕ್ಕೆ ಕರೆಯುವಂತೆ ಮನವಿ ಮಾಡುತ್ತಾಳೆ. ಇಷ್ಟವಿಲ್ಲದಿದ್ದರೂ ಲಕ್ಷ್ಮೀ ಹಾಗೂ ಶ್ರೀನಿವಾಸ್‌ ಒಪ್ಪುತ್ತಾರೆ. ಸಿದ್ದು ಹಾಗೂ ಭಾವನಾ ಮನೆಗೆ ಬರುತ್ತಿದ್ದಾರೆ ಎಂದು ತಿಳಿದು ಸಿಂಚನಾ ಕೋಪಗೊಳ್ಳುತ್ತಾಳೆ. ನಿಮ್ಮ ಮನೆಯವರು ಹೀಗೆ ಅಂತ ನನಗೆ ಗೊತ್ತಿರಲಿಲ್ಲ. ಸಿದ್ದುವನ್ನು ಎಲ್ಲರೂ ಏಮಾರಿಸಿದ್ದಾರೆ. ನೀನು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯ ಎಂದು ನಿನ್ನನ್ನು ಮದುವೆ ಆಗಿದ್ದು, ಆದರೆ ನಿನ್ನನ್ನು ಮದುವೆಯೇ ಆಗಬಾರದಿತ್ತು ಎಂದು ಹೇಳುತ್ತಾಳೆ. ಹೆಂಡತಿ ಮಾತು ಕೇಳಿ ಹರೀಶ್‌ ಗಾಬರಿ ಆಗುತ್ತಾನೆ.

ಮನೆಗೆ ಬಂದ ಖುಷಿಯನ್ನು ನೋಡಿ ಜವರೇಗೌಡ ಹೇಗೆ ಪ್ರತಿಕ್ರಿಯಿಸುತ್ತಾನೆ? ಮಾವನ ಮಾತನ್ನು ಧಿಕ್ಕರಿಸಿ ಭಾವನಾ ಕೆಲಸಕ್ಕೆ ಹೋಗುತ್ತಾಳಾ ಅಥವಾ ಮನೆಯಲ್ಲಿ ಉಳಿಯುತ್ತಾಳಾ? ಮನೆಗೆ ಬಂದ ತಮ್ಮ ಸಿದ್ದೇಗೌಡ-ಭಾವನಾಳನ್ನು ಸಿಂಚನ ಹೇಗೆ ಸ್ವೀಕರಿಸುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಪೂರ್ವಿ- ನಟಿ ಪ್ರಕೃತಿ ಪ್ರಸಾದ್

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

Whats_app_banner