Bigg Boss Kannada 11: ಬಿಗ್‌ ಬಾಸ್‌ಗೆ ಒಂದಾದ ಮೇಲೊಂದು ಸಂಕಷ್ಟ! ತುರ್ತು ಶೋ ಸ್ಥಗಿತಕ್ಕೆ ಕೋರ್ಟ್ ನೋಟಿಸ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಬಿಗ್‌ ಬಾಸ್‌ಗೆ ಒಂದಾದ ಮೇಲೊಂದು ಸಂಕಷ್ಟ! ತುರ್ತು ಶೋ ಸ್ಥಗಿತಕ್ಕೆ ಕೋರ್ಟ್ ನೋಟಿಸ್‌

Bigg Boss Kannada 11: ಬಿಗ್‌ ಬಾಸ್‌ಗೆ ಒಂದಾದ ಮೇಲೊಂದು ಸಂಕಷ್ಟ! ತುರ್ತು ಶೋ ಸ್ಥಗಿತಕ್ಕೆ ಕೋರ್ಟ್ ನೋಟಿಸ್‌

ಕಳೆದ ಮೂರು ವಾರಗಳ ಹಿಂದೆ ಆರಂಭವಾಗಿರುವ ಬಿಗ್‌ ಬಾಸ್‌ ಕನ್ನಡ 11ರ ಶೋವನ್ನು ಖಾಯಂ ಆಗಿ ನಿಲ್ಲಿಸುವಂತೆ ಶಿವಮೊಗ್ಗದ ಸಾಗರ ನ್ಯಾಯಾಲಯದಿಂದ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ.

ಬಿಗ್‌ ಬಾಸ್‌ ಶೋ ತುರ್ತು ಶೋ ಸ್ಥಗಿತಕ್ಕೆ ನೋಟಿಸ್‌
ಬಿಗ್‌ ಬಾಸ್‌ ಶೋ ತುರ್ತು ಶೋ ಸ್ಥಗಿತಕ್ಕೆ ನೋಟಿಸ್‌

Bigg Boss Kannada 11: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿಚ್ಚ ಸುದೀಪ್ ಹೋಸ್ಟ್‌ ಮಾಡುತ್ತಿರುವ ಬಿಗ್‌ ಬಾಸ್‌ ಕನ್ನಡ 11 ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಕಾಂಟ್ರವರ್ಸಿ, ಜಗಳ ಕಿತ್ತಾಟದ ಮೂಲಕವೇ ಸುದ್ದಿಯಲ್ಲಿದೆ. ಇದೀಗ ಇದೇ ರಿಯಾಲಿಟಿ ಶೋಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರದ ವಕೀಲರೊಬ್ಬರು ರಿಯಾಲಿಟಿ ಶೋ ಮೇಕರ್ಸ್‌ಗೆ ನೋಟಿಸ್‌ ನೀಡಿದ್ದು, ಈ ಕೂಡಲೇ ಈ ಶೋ ನಿಲ್ಲಿಸುವಂತೆ ನೋಟಿಸ್‌ನಲ್ಲಿ ನಮೂದಿಸಿದ್ದಾರೆ.

ಕನ್ನಡದ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಸೀಸನ್ 11ರ ಪ್ರಸಾರವನ್ನು ಶಾಶ್ವತವಾಗಿ ನಿಲ್ಲಿಸುವಂತೆ ಕೋರಿ ಸಾಗರದ ವಕೀಲ ಕೆಎಲ್ ಭೋಜರಾಜ್ ಅರ್ಜಿ ಸಲ್ಲಿಸಿದ್ದಾರೆ. ವ್ಯವಹಾರ ಕಾರ್ಯವಿಧಾನದ ಸಂಹಿತೆಯ ಆದೇಶ 39 ನಿಯಮ 1 ಮತ್ತು 2 ವಿಭಾಗದ ಮತ್ತು ಸೆಕ್ಷನ್‌ 151ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸಿವಿಲ್ ಪ್ರೊಸೀಜರ್ ಆಕ್ಟ್ ಯು/ಸೆಕೆಂಡ್ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದೆ.

ಶೋ ಆಯೋಜಕರಿಗೆ ನೋಟಿಸ್‌

26, ಆದೇಶ 7, ನಿಯಮ 1ಎ ಪ್ರಕಾರ ಬಿಗ್‌ಬಾಸ್‌ ಕಾರ್ಯಕ್ರಮ ಪ್ರಸಾರವಾಗುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಹೆಡ್‌, ಮತ್ತು ಬಿಗ್‌ ಬಾಸ್‌ ಆಯೋಜಕರಿಗೆ ಶೋ ನಿಲ್ಲಿಸುವಂತೆ ತುರ್ತು ಸೂಚನೆ ನೀಡಲಾಗಿದೆ. ಮುಂದುವರಿದು ಅಕ್ಟೋಬರ್ 28ರಂದು ಇದರ ಅರ್ಜಿ ವಿಚಾರಣೆ ನಡೆಯಲಿದೆ.

ಮಹಿಳಾ ಆಯೋಗ, ಮಾನವ ಆಯೋಗದಿಂದಲೂ ದೂರು

ಈಗಾಗಲೇ 19 ದಿನ ಪೂರೈಸಿರುವ ಬಿಗ್ ಬಾಸ್ ಕನ್ನಡ 11ನೇ ಸೀಸನ್ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಆದರೆ, ಕಾರ್ಯಕ್ರಮದ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಕಳೆದ ವಾರ ವಕೀಲರು ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ದೂರು ನೀಡಿದ್ದರು. ಇದೇ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.

ಸ್ವರ್ಗ ನರಕ ಪರಿಕಲ್ಪನೆ ಅಂತ್ಯ

ಈ ಕಾರಣದಿಂದಾಗಿ, ಬಿಗ್ ಬಾಸ್ ನರಕ- ಸ್ವರ್ಗ ಪರಿಕಲ್ಪನೆಯನ್ನು ನಿಲ್ಲಿಸಿದರು. ಎಲ್ಲಾ ಸ್ಪರ್ಧಿಗಳಿಗೆ ಒಂದೇ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು. ಇತ್ತೀಚೆಗೆ, ಶೋನಲ್ಲಿ ಮಹಿಳಾ ಸ್ಪರ್ಧಿಗಳ ಗೌಪ್ಯತೆಯ ಉಲ್ಲಂಘನೆಯ ಬಗ್ಗೆ ಕಾರ್ಯಕ್ರಮಕ್ಕೆ ಪೊಲೀಸ್ ನೋಟಿಸ್ ಕೂಡ ಬಂದಿತ್ತು. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮನೆಯಲ್ಲಿ ವಿವಾದಾತ್ಮಕ ಟಾಸ್ಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಕುಂಬಳಗೋಡು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.