Seetha Rama Serial: ಟಿಆರ್‌ಪಿಯಲ್ಲಿ ಪಾತಾಳಕ್ಕೆ ಕುಸಿದ ಸೀತಾ ರಾಮ ಸೀರಿಯಲ್‌ನಿಂದ ವೀಕ್ಷಕರಿಗೆ ಸಿಹಿ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಟಿಆರ್‌ಪಿಯಲ್ಲಿ ಪಾತಾಳಕ್ಕೆ ಕುಸಿದ ಸೀತಾ ರಾಮ ಸೀರಿಯಲ್‌ನಿಂದ ವೀಕ್ಷಕರಿಗೆ ಸಿಹಿ ಸುದ್ದಿ

Seetha Rama Serial: ಟಿಆರ್‌ಪಿಯಲ್ಲಿ ಪಾತಾಳಕ್ಕೆ ಕುಸಿದ ಸೀತಾ ರಾಮ ಸೀರಿಯಲ್‌ನಿಂದ ವೀಕ್ಷಕರಿಗೆ ಸಿಹಿ ಸುದ್ದಿ

Seetha Rama serial: ಸೀತಾ ರಾಮ ಸೀರಿಯಲ್‌, ಕಳೆದ ವಾರದಿಂದ 9:30ರ ಬದಲಿಗೆ ಸಂಜೆ 5:30ಕ್ಕೆ ಪ್ರಸಾರ ಕಾಣುತ್ತಿದೆ. ಇತ್ತ 9:30ಕ್ಕೆ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ ಪ್ರಸಾರ ಕಾಣುತ್ತಿದೆ. ವಾಹಿನಿಯ ಈ ನಿರ್ಧಾರಕ್ಕೆ ವೀಕ್ಷಕರೂ ಕೊಂಚ ಬೇಸರ ಹೊರಹಾಕಿದ್ದರು. ಇದೀಗ ಇದೇ ಧಾರಾವಾಹಿ ರಾತ್ರಿ 11ಕ್ಕೂ ಪ್ರಸಾರವಾಗಲಿದೆ.

ಟಿಆರ್‌ಪಿಯಲ್ಲಿ ಪಾತಾಳಕ್ಕೆ ಕುಸಿದ ಸೀತಾ ರಾಮ ಸೀರಿಯಲ್‌ನಿಂದ ವೀಕ್ಷಕರಿಗೆ ಸಿಹಿ ಸುದ್ದಿ
ಟಿಆರ್‌ಪಿಯಲ್ಲಿ ಪಾತಾಳಕ್ಕೆ ಕುಸಿದ ಸೀತಾ ರಾಮ ಸೀರಿಯಲ್‌ನಿಂದ ವೀಕ್ಷಕರಿಗೆ ಸಿಹಿ ಸುದ್ದಿ (Zee5)

Seetha Rama Serial: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ರ ಪ್ರೈಂ ಟೈಮ್‌ ಸ್ಲಾಟ್‌ಗೆ ಪ್ರಸಾರ ಕಾಣುತ್ತಿದ್ದ ಸೀತಾ ರಾಮ ಸೀರಿಯಲ್‌, ವೀಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ. ಆದರೆ, ಈಗ ಇದೇ ಸೀರಿಯಲ್‌ ಸಂಜೆ 5:30ಕ್ಕೆ ಪ್ರಸಾರ ಕಾಣುತ್ತಿದೆ. 400ಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿರುವ, ಈ ಸೀರಿಯಲ್‌ ಸದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಸಿಹಿ ಜಾಗಕ್ಕೆ ಸುಬ್ಬಿಯ ಆಗಮನವಾಗಿದೆ. ಅಂತೂ ಇಂತೂ ಸುಬ್ಬಿಯ ಮನವೊಲಿಸಿ, ಸಿಹಿಯ ರೂಪ ನೀಡಲಾಗಿದೆ. ಇನ್ನೇನು ಸೀತಾ ಬಾಳಿಗೂ ಸಿಹಿಯಾಗಿ ಸುಬ್ಬಿಯ ಪ್ರವೇಶವಾಗಲಿದೆ.

ಇಂತಿಪ್ಪ ಹಾದಿಯಲ್ಲಿ ಸಾಗುತ್ತಿರುವ ಸೀತಾ ರಾಮ ಸೀರಿಯಲ್‌, ಕಳೆದ ವಾರದಿಂದ 9:30ರ ಬದಲಿಗೆ ಸಂಜೆ 5:30ಕ್ಕೆ ಪ್ರಸಾರ ಕಾಣುತ್ತಿದೆ. ಇತ್ತ 9:30ಕ್ಕೆ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ ಪ್ರಸಾರ ಕಾಣುತ್ತಿದೆ. ವಾಹಿನಿಯ ಈ ನಿರ್ಧಾರಕ್ಕೆ ವೀಕ್ಷಕರೂ ಕೊಂಚ ಬೇಸರ ಹೊರಹಾಕಿದ್ದರು. ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿದ್ದ ಸೀರಿಯಲ್‌ಅನ್ನು ಬದಲಿಸಿದ್ದಕ್ಕೆ ವಾಹಿನಿಯ ನಡೆಯನ್ನು ಖಂಡಿಸಿದ್ದರು. ಇದೀಗ ಹೀಗೆ ಬೇಸರದಲ್ಲಿದ್ದ ಸೀತಾ ರಾಮ ಸೀರಿಯಲ್‌ ವೀಕ್ಷಕರಿಗೆ ಇದೇ ಜೀ ಕನ್ನಡ ವಾಹಿನಿ ಸಿಹಿ ಸುದ್ದಿಯೊಂದನ್ನು ನೀಡಿದೆ.

ಒಂದೇ ದಿನ ಎರಡು ಸಲ ಟೆಲಿಕಾಸ್ಟ್‌

ಜೀ ಕನ್ನಡ ವಾಹಿನಿ ಇದೀಗ ಮೊದಲ ಸಲ ಒಂದೇ ಧಾರಾವಾಹಿಯನ್ನು ಒಂದೇ ದಿನದ ಅವಧಿಯಲ್ಲಿ ಎರಡು ಬಾರಿ ಟೆಲಿಕಾಸ್ಟ್‌ ಮಾಡುತ್ತಿದೆ. ಸೀತಾ ರಾಮ ಸೀರಿಯಲ್‌ ಸಂಜೆ 5:30ಕ್ಕೆ ಮೊದಲಿಗೆ ಪ್ರಸಾರವಾಗಲಿದೆ. ಅದಾದ ಬಳಿಕ ರಾತ್ರಿ 11 ಗಂಟೆಗೂ ಸಂಜೆ ಏಪಿಸೋಡ್‌ ರಿಪೀಟ್‌ ಆಗಲಿದೆ. ಸಂಜೆ ಮಿಸ್‌ ಮಾಡಿಕೊಂಡವರು ರಾತ್ರಿಯೂ ವೀಕ್ಷಣೆ ಮಾಡಬಹುದು. ಈ ಮೂಲಕ ಸೀತಾ ರಾಮ ಸೀರಿಯಲ್‌ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದೆ.

ಟಿಆರ್‌ಪಿಯಲ್ಲಿ ಮಹಾಕುಸಿತ

ಸೀರಿಯಲ್‌ಗಳ ಪ್ರಸಾರದಲ್ಲಿ ಸಮಯ ಬದಲಾಗಿದ್ದೇ ತಡ, ಅವುಗಳ ಟಿಆರ್‌ಪಿ ಕುಸಿಯುವುದು ಸಹಜ. ಆದರೆ, ಪ್ರೈಂ ಟೈಮ್‌ ಸೀರಿಯಲ್‌ ಸೀತಾ ರಾಮ 9:30ರ ಬದಲು ನೇರವಾಗಿ ಸಂಜೆ 5:30ಕ್ಕೆ ಟೆಲಿಕಾಸ್ಟ್‌ ಆಗುತ್ತಿದ್ದಂತೆ, ಟಿಆರ್‌ಪಿಯಲ್ಲಿ ಮಹಾ ಕುಸಿತ ಕಂಡಿದೆ. ನಾಲ್ಕನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದ್ದು, ಇಲ್ಲಿಯವರೆಗೂ ಟಾಪ್‌ 10ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದ ಸೀತಾ ರಾಮ, ಇದೀಗ ಆ ಲಿಸ್ಟ್‌ನಲ್ಲಿಯೂ ಇಲ್ಲವಾಗಿದೆ. ನಾಲ್ಕನೇ ವಾರದಲ್ಲಿ ಕೇವಲ 2.5 ಟಿಆರ್‌ಪಿ ಪಡೆದು ಮಹಾ ಕುಸಿತ ಕಂಡಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner