Annayya Lyrics: ಬೆಲ್ದಚ್ಚಂಗೆ ನೀನು ಪಾರು ನಂಗೆ, ಶ್ಯಾನೆ ಪ್ರೀತಿ ಐತೆ ಎದೆಯಾ ಒಳಗೆ.. ಹೀಗಿದೆ ಅಣ್ಣಯ್ಯ ಸೀರಿಯಲ್ ಟೈಟಲ್ ಟ್ರ್ಯಾಕ್
Annayya Serial Title Track Lyrics: ಅಣ್ಣಯ್ಯ ಸೀರಿಯಲ್‌ನ ಶೀರ್ಷಿಕೆ ಗೀತೆಯ ಲಿರಿಕಲ್ ಹಾಡನ್ನು ಜೀ ಕನ್ನಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಶೇರ್ ಮಾಡಿಕೊಂಡಿದೆ. ಇದೇ ಹಾಡೀಗ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

Annayya Serial Lyrics: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್ ಗಟ್ಟಿ ಕಥೆಯ ಮೂಲಕ ನೋಡುಗರನ್ನು ಸೆಳೆಯುತ್ತಿದೆ. ಅಣ್ಣ ಮತ್ತು ನಾಲ್ವರು ತಂಗಿಯರ ಕಥೆಗೆ ವೀಕ್ಷಕ ಫಿದಾ ಆಗಿದ್ದಾನೆ. ಬರೀ ಈ ಸೀರಿಯಲ್ ಮಾತ್ರವಲ್ಲದೆ, ಅದರಲ್ಲಿನ ಪ್ರತಿ ಪಾತ್ರವನ್ನೂ ಇಷ್ಟಪಟ್ಟಿದ್ದಾನೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಇದೇ ಸೀರಿಯಲ್‌ನ ಶೀರ್ಷಿಕೆ ಗೀತೆಗೂ ಮಾರುಹೋದವರಿದ್ದಾರೆ. ಇದೀಗ ಇದೇ ಅಣ್ಣಯ್ಯ ಸೀರಿಯಲ್‌ನ ಶೀರ್ಷಿಕೆ ಗೀತೆಯ ಲಿರಿಕಲ್ ಹಾಡನ್ನು ಜೀ ಕನ್ನಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಶೇರ್ ಮಾಡಿಕೊಂಡಿದೆ. ಇದೇ ಹಾಡೀಗ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಹೀಗಿದೆ ಟೈಟಲ್ ಟ್ರ್ಯಾಕ್‌ನ ಸಾಹಿತ್ಯ.
ಅಣ್ಣಯ್ಯ ಸೀರಿಯಲ್‌ನ ಬೆಲ್ದಚ್ಚಂಗೆ ಹಾಡನ್ನು ಸೀರಿಯಲ್‌ನ ನಾಯಕಿ ನಿಶಾ ರವಿಕೃಷ್ಣನ್ ಧ್ವನಿ ನೀಡಿದ್ದಾರೆ. ಅವರ ಜತೆಗೆ ರಜತ್ ಹೆಗಡೆ ಸಾಥ್ ನೀಡಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿರುವ ಈ ಹಾಡಿಗೆ ಚೇತನ್ ಸೊಲಗಿ ಸಾಹಿತ್ಯ ಬರೆದಿದ್ದಾರೆ. ಸುಮಂತ್ ಈ ಲಿರಿಕಲ್ ವಿಡಿಯೋವನ್ನು ಚೆಂದಗಾಣಿಸಿದ್ದಾರೆ.
ಏನಿದು ಅಣ್ಣಯ್ಯ ಕಥೆ?
ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಶೀರ್ಷಿಕೆ ಗೀತೆಯ ಸಾಹಿತ್ಯ ಹೀಗಿದೆ..
ಬೆಲ್ದಚ್ಚಂಗೆ ಪಾರು ನೀನು ನಂಗೆ
ಶಾನೇ ಪ್ರೀತಿ ಐತೆ ಎದೆಯಾ ಒಳಗೆ
ಬೆಳದಿಂಗಳೇ ಭೂಮಿ ತಬ್ಬಿದಂಗೆ
ನೀನೆ ನಂಗೆ ಬೆಳ್ಳಿ ಚುಕ್ಕಿ ಹಂಗೆ
ನಿನ್ನ ನಗು ಹೊನ್ನ ಸಿರಿ
ಪ್ರೀತಿಯ ನವಿಲು ಗರಿ
ಕಾದಿದೆ ಮನದಂಗಳ
ನೀ ಸಿಕ್ಕರೆ ಶುಭಮಂಗಳ
ನಿನ್ನುಸಿರ ಸೋಕೋ ಹಾಡು
ಇಂಪು ಸೋಬಾನೆ ಹಂಗೆ
ಕಣ್ ಹೊಳಪಲಿ ಖುಸಿ ನೀಡೋ
ದ್ಯಾವತೆ ನೀನೇನೆ
ಈ ಶಿವನಿಗೆ ಬೆಳಕಾಗೋ
ಪಾರ್ವತಿ ನೀನೆ
ಕಣ್ ಹೊಳಪಲಿ ಖುಸಿ ನೀಡೋ
ದ್ಯಾವತೆ ನೀನೇನೆ
ಈ ಶಿವನಿಗೆ ಬೆಳಕಾಗೋ
ಪಾರ್ವತಿ ನೀನೆ
ಬೆಲ್ದಚ್ಚಂಗೆ ಪಾರು ನೀನು ನಂಗೆ
ಶಾನೇ ಪ್ರೀತಿ ಐತೆ ಎದೆಯಾ ಒಳಗೆ
ಕವಿದ ಮೋಡ ಕರಗಿ ಮಳೆಯಾದಂಗೆ
ಕಾದ ನೆಲವು ಅರಳಿ ಹೂವಾದಂಗೆ
ಒಲವು ಚಿಗುರಿ ಹಸಿರ ಹೊನ್ನಾದಂಗೆ
ನಿನ್ನ ಉಸಿರೆ ನನ್ನಾ ಉಸಿರಾದಂಗೇ...!
ನಿನ್ನ ನಗು ನನ್ನ ಸಿರಿ
ಪ್ರೀತಿಯ ನವಿಲು ಗರಿ
ಹೊಂಗಿರಣದ ಹೊಂಬಣ್ಣವು
ನಮ್ಮೊಲುಮೆಯ ಆರಂಭವು !
ಬಿದಿಗೆ ಚಂದ್ರನ ಹಂಗೆ.....
ನೀನು ಬಂದೆ ನನ್ ಹಿಂದೇ....
ಬಾಳೊಂದು ಚೆಂದದ ಕವಿತೆ
ಅದರೊಳಗೆ ನೀ ಅವಿತೆ!
ಈ ಪಾರ್ವತಿಗೆ ಪರಶಿವನು
ನೀನೆ ಆದೆ !
ಬಾಳೊಂದು ಚೆಂದದ ಕವಿತೆ
ಅದರೊಳಗೆ ನೀ ಅವಿತೆ!
ಈ ಪಾರ್ವತಿಗೆ ಪರಶಿವನು
ನೀನೆ ಆದೆ !
ಕವಿದ ಮೋಡ ಕರಗಿ ಮಳೆಯಾದಂಗೆ
ಕಾದ ನೆಲವು ಅರಳಿ ಹೂವಾದಂಗೆ

ವಿಭಾಗ