ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಜ್ಯೋತಿ ರೈಗೆ ಆಮಂತ್ರಣ; ಹಾಟ್‌ ಬ್ಯೂಟಿ ಕೊಟ್ಟ ಕಾರಣಕ್ಕೆ ಒಡೆಯಿತು ಅಭಿಮಾನಿಗಳ ಹೃದಯ!-kannada television news actress jyothi rai rejected bigg boss kannada season 11 offer bbk 11 latest update mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಜ್ಯೋತಿ ರೈಗೆ ಆಮಂತ್ರಣ; ಹಾಟ್‌ ಬ್ಯೂಟಿ ಕೊಟ್ಟ ಕಾರಣಕ್ಕೆ ಒಡೆಯಿತು ಅಭಿಮಾನಿಗಳ ಹೃದಯ!

ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಜ್ಯೋತಿ ರೈಗೆ ಆಮಂತ್ರಣ; ಹಾಟ್‌ ಬ್ಯೂಟಿ ಕೊಟ್ಟ ಕಾರಣಕ್ಕೆ ಒಡೆಯಿತು ಅಭಿಮಾನಿಗಳ ಹೃದಯ!

ಇನ್ನೇನು ಕನ್ನಡದ ಬಿಗ್‌ಬಾಸ್‌ ಸೀಸನ್‌ 11ಕ್ಕೆ ತಯಾರಿಗಳು ನಡೆಯುತ್ತಿವೆ. ಅದಕ್ಕೂ ಮೊದಲು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೂ ಬಿಗ್‌ಬಾಸ್‌ ತಂಡ ತೆರೆಮರೆಯಲ್ಲಿಯೇ ಕೆಲಸ ಮಾಡುತ್ತಿದೆ. ಹೀಗಿರುವಾಗಲೇ ಇದೇ ಶೋಗೆ ಆಗಮಿಸುವಂತೆ ನಟಿ ಜ್ಯೋತಿ ರೈ ಅವರಿಗೂ ಆಹ್ವಾನ ಹೋಗಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಜ್ಯೋತಿ ರೈಗೆ ಆಮಂತ್ರಣ; ಹಾಟ್‌ ಬ್ಯೂಟಿ ಕೊಟ್ಟ ಕಾರಣಕ್ಕೆ ಒಡೆಯಿತು ಅಭಿಮಾನಿಗಳ ಹೃದಯ!
ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಜ್ಯೋತಿ ರೈಗೆ ಆಮಂತ್ರಣ; ಹಾಟ್‌ ಬ್ಯೂಟಿ ಕೊಟ್ಟ ಕಾರಣಕ್ಕೆ ಒಡೆಯಿತು ಅಭಿಮಾನಿಗಳ ಹೃದಯ! (instagram\ Jyothi purvaj)

Bigg boss Kannada Season 11: ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ ಬಾಸ್‌ ಕನ್ನಡ, ಇದೀಗ ಹೊಸ ಸೀಸನ್‌ನ ಆರಂಭದ ಹಂತದಲ್ಲಿದೆ. ಈಗಾಗಲೇ ತೆರೆಮರೆಯಲ್ಲಿ ಕೆಲಸಗಳನ್ನು ಆರಂಭಿಸಿರುವ ಕಲರ್ಸ್‌ ಕನ್ನಡ ವಾಹಿನಿ, ಸ್ಪರ್ಧಿಗಳನ್ನೂ ಫೈನಲ್‌ ಮಾಡುತ್ತಿದೆ. ಆ ಪೈಕಿ ಒಂದಷ್ಟು ಸಿನಿಮಾ, ಸೀರಿಯಲ್‌ ಕಲಾವಿದರ ಹೆಸರುಗಳು ಮುನ್ನೆಲೆಗೆ ಬಂದಿವೆ. ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಕಂಟೆಸ್ಟಂಟ್‌ಗಳಿಗೂ ಮಣೆ ಹಾಕಲಾಗುತ್ತದೆ ಎನ್ನಲಾಗುತ್ತಿದೆ.

ಹೀಗೆ ಬಿಗ್‌ಬಾಸ್‌ ಸೀಸನ್‌ 11ರ ಕುರಿತು ಸೋಷಿಯಲ್‌ ಮೀಡಿಯಾದಲ್ಲಿಯೂ ಒಂದಾದ ಮೇಲೊಂದು ಗಾಸಿಪ್‌ಗಳು ಹರಿದಾಡುತ್ತಿವೆ. ಅವರು ಬರ್ತಾರೆ, ಇವರು ಬರ್ತಾರೆ ಅನ್ನೋ ಮಾತುಗಳು ಜೋರಾಗಿವೆ. ಆ ಪೈಕಿ ಎಲ್ಲರನ್ನು ಅಚ್ಚರಿಗೆ ದೂಡಿದ ಹೆಸರು, ನಟಿ ಜ್ಯೋತಿ ರೈ ಪೂರ್ವಜ್‌ ಅವರದ್ದು. ಜಾಲತಾಣದಲ್ಲಿ ಹಸಿಬಿಸಿ ಫೋಟೋಶೂಟ್‌ ಮೂಲಕವೇ ಗಮನ ಸೆಳೆಯುವ ಜ್ಯೋತಿ ರೈ ಸಹ ಈ ಸಲದ ಬಿಗ್‌ಬಾಸ್‌ ಶೋನಲ್ಲಿ ಇರಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಅಸಲಿ ವಿಷಯ ಮಾತ್ರ ಬೇರೆ ಇದೆ.

ಜ್ಯೋತಿ ರೈಗೆ ಬಿಗ್‌ಬಾಸ್‌ ಟೀಮ್‌ನಿಂದ ಆಹ್ವಾನ

ಬಿಗ್‌ ಬಾಸ್‌ ಸೀಸನ್‌ 11ರ ಬಗ್ಗೆ ತರಹೇವಾರಿ ಗಾಸಿಪ್‌ಗಳು ಚಾಲ್ತಿಯಲ್ಲಿವೆ. ಆ ಪೈಕಿ, ಕಿಚ್ಚ ಸುದೀಪ್‌ ಅವರು ನಿರೂಪಣೆಯಿಂದ ಹಿಂದೆ ಸರಿಯಲಿದ್ದಾರೆ ಎಂದೂ ಹೇಳಲಾಗಿತ್ತು. ಸುದೀಪ್‌ ಅವರ ಬದಲಿಗೆ ರಮೇಶ್‌ ಅರವಿಂದ್‌ ಅಥವಾ ರಿಷಬ್‌ ಶೆಟ್ಟಿ ಆಗಮಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಬಗ್ಗೆ ಯಾವುದೂ ಅಧಿಕೃತವಾಗಿಲ್ಲ. ಈ ನಡುವೆ ಈ ಸಲದ ಬಿಗ್‌ ಬಾಸ್‌ 11ನೇ ಸೀಸನ್‌ನಲ್ಲಿ ಜ್ಯೋತಿ ರೈ ಸಹ ಸ್ಪರ್ಧಿಯಾಗಿ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ಗಾಸಿಪ್‌ ಬಗ್ಗೆ ನಟಿ ಜ್ಯೋತಿ ಸ್ಪಷ್ಟನೆ ನೀಡಿದ್ದಾರೆ.

ಜ್ಯೋತಿ ರೈ ಪೋಸ್ಟ್‌..

ಬಿಗ್‌ಬಾಸ್‌ಗೆ ನಾನು ಬರುತ್ತಿಲ್ಲ ಎಂದು ನೇರವಾಗಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ ಜ್ಯೋತಿ ರೈ. "ನನಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಿಂದ ಆಫರ್‌ ಬಂದಿದ್ದು ನಿಜ. ಆದರೆ, ಹಾಗೆ ಬಂದ ಆ ಆಫರ್‌ಅನ್ನು ಅಷ್ಟೇ ಗೌರವ ಆದರಗಳಿಂದ ರಿಜೆಕ್ಟ್‌ ಮಾಡಿದ್ದೇನೆ. ಕೈಯಲ್ಲಿ ಈಗಾಗಲೇ ಒಪ್ಪಿಕೊಂಡ ಒಂದಷ್ಟು ಪ್ರಾಜೆಕ್ಟ್‌ಗಳಿವೆ. ಅವುಗಳನ್ನು ಮುಗಿಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ. ಈ ರೀತಿ ಬಿಗ್‌ ಬಾಸ್‌ ಶೋಗೆ ಆಹ್ವಾನಿಸಿದ್ದಕ್ಕೆ ಧನ್ಯವಾದ. ಈ ಮೂಲಕ ಅಭಿಮಾನಿಗಳ ಬೆಂಬಲಕ್ಕೂ ನಾನು ಕೃತಜ್ಞಳು" ಎಂದಿದ್ದಾರೆ ಜ್ಯೋತಿ ರೈ.

ಅಶ್ಲೀಲ ವಿಡಿಯೋ ಮೂಲಕ ಸಂಚಲನ

ನಟಿ ಜ್ಯೋತಿ ರೈ ಸದ್ಯ ಸಿನಿಮಾ, ವೆಬ್‌ಸಿರೀಸ್‌ಗಳತ್ತ ಗಮನ ಹರಿಸಿದ್ದಾರೆ. ಸೀರಿಯಲ್‌ಗಳಲ್ಲೂ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಜೋಗುಳ, ಕನ್ಯಾದಾನ, ಗೆಜ್ಜೆಪೂಜೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಅನುರಾಗ ಸಂಗಮ, ಕಸ್ತೂರಿ ನಿವಾಸ ಸೇರಿ ಹತ್ತಾರು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ತೆಲುಗಿನಲ್ಲಿಯೂ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಎರಡೂವರೆ ತಿಂಗಳ ಹಿಂದೆ ಅಂದರೆ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಹೊರಬಂದ ಬೆನ್ನಲ್ಲೇ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋಗಳೂ ಸಂಚಲನ ಸೃಷ್ಟಿಸಿದ್ದವು. ಕೆಲವು ಖಾಸಗಿ ವಿಡಿಯೋಗಳು ಹಲವು ಅನುಮಾನಗಳಿಗೂ ಕಾರಣವಾಗಿದ್ದವು.

ಜ್ಯೋತಿ ಪೂರ್ವಜ್‌ ಪೋಸ್ಟ್‌
ಜ್ಯೋತಿ ಪೂರ್ವಜ್‌ ಪೋಸ್ಟ್‌