ಕನ್ನಡ ಸುದ್ದಿ  /  Entertainment  /  Kannada Television News Akka Anu To Chaithra J Achar Gowri Nayak Zee Kannada Sthree Award 2024 Mnk

ಸಮಾಜ ಸೇವಕಿ ಅಕ್ಕ ಅನು, ನಟಿ ಚೈತ್ರಾ ಜೆ ಆಚಾರ್‌, ಶಿರಸಿಯ ಗೌರಿ ನಾಯಕ್‌ಗೆ ಚೊಚ್ಚಲ ‘ಜೀ ಕನ್ನಡ ಸ್ತ್ರೀ ಅವಾರ್ಡ್‌ 2024’ ಪ್ರಶಸ್ತಿ

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸುವ ಕೆಲಸ ಜೀ ಕನ್ನಡದಿಂದ ಆಗಿದೆ. ಕ್ರೀಡೆ, ಸಿನಿಮಾ, ಸಾಹಿತ್ಯ, ವಿಜ್ಞಾನ, ರಾಜಕೀಯ, ಸಾಮಾಜಿಕ ಹೀಗೆ ಹಲವು ವಿಭಾಗಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಚೊಚ್ಚಲ ಜೀ ಕನ್ನಡ ಸ್ತ್ರೀ 2024 ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ಸಮಾಜ ಸೇವಕಿ ಅಕ್ಕ ಅನು, ನಟಿ ಚೈತ್ರಾ ಜೆ ಆಚಾರ್‌, ಶಿರಸಿಯ ಗೌರಿ ನಾಯಕ್‌ಗೆ ಚೊಚ್ಚಲ ‘ಜೀ ಸ್ತ್ರೀ ಅವಾರ್ಡ್‌ 2024’ ಪ್ರಶಸ್ತಿ
ಸಮಾಜ ಸೇವಕಿ ಅಕ್ಕ ಅನು, ನಟಿ ಚೈತ್ರಾ ಜೆ ಆಚಾರ್‌, ಶಿರಸಿಯ ಗೌರಿ ನಾಯಕ್‌ಗೆ ಚೊಚ್ಚಲ ‘ಜೀ ಸ್ತ್ರೀ ಅವಾರ್ಡ್‌ 2024’ ಪ್ರಶಸ್ತಿ

Zee Kannada Sthree Award 2024: ಹೆಮ್ಮೆಯ ಕನ್ನಡಿಗ, ಜೀ ಕುಟುಂಬದಂತಹ ಪ್ರತಿಷ್ಟಿತ ಪ್ರಶಸ್ತಿಗಳನ್ನು ನೀಡುತ್ತ ಬಂದಿರುವ ನಾಡಿನ ನಂ.1 ಮನೋರಂಜನ ವಾಹಿನಿ ಜೀ ಕನ್ನಡ, ರಾಜ್ಯದ ನಾರಿ ಶಕ್ತಿಗೆ ನಮಿಸೋ ಜೀ ಸ್ತ್ರೀ ಅವಾರ್ಡ್‌ 2024ರನ್ನು ಇದೀಗ ಪ್ರಸ್ತುತ ಪಡಿಸಿದೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶದ‌ ಎಲ್ಲಾ ರಂಗದಲ್ಲೂ ಸಾಧನೆಯನ್ನು ಮಾಡುತ್ತಿರುವ, ಮಹಿಳಾ ಮಣಿಯರನ್ನು ಗುರುತಿಸಿ ಗೌರವಿಸುವ ಕೆಲಸವನ್ನ ಜೀ ಕನ್ನಡ ಮೊದಲಿನಿಂದಲೂ ಮಾಡುತ್ತ ಬಂದಿತ್ತು. ಇದೀಗ ಆ ವಿಭಾಗಕ್ಕೆ ಪ್ರತ್ಯೇಕ ಪ್ರಶಸ್ತಿ ಕಾರ್ಯಕ್ರಮವನ್ನು ಮಾಡುವ ಮುಖಾಂತರ ಜೀ ಕನ್ನಡ ಹೊಸ ಹೆಜ್ಜೆಯೊಂದನ್ನು ಇಟ್ಟಿದೆ.

ಕರುನಾಡಿನ ಕ್ರೀಡಾಕ್ಷೇತ್ರ, ಸಿನಿಮಾರಂಗ, ಸಾಹಿತ್ಯರಂಗ, ವಿಜ್ಞಾನ ರಂಗ, ರಾಜಕೀಯರಂಗ, ಸಮಾಜಿಕರಂಗ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಸಾಧನೆಗೈದ ವಿವಿಧ ಮಹಿಳಾ ಮಣಿಯರನ್ನು, ಮೊದಲ ವರ್ಷದ ಜೀ ಸ್ತ್ರೀ ಅವಾರ್ಡ್‌ಸಮಾರಂಭದಲ್ಲಿ ಹುಡುಕಿ ಗೌರವಿಸುವ ಕೆಲಸ ನಡೆಯಿತು.

ಯಾರಿಗೆಲ್ಲ ಚೊಚ್ಚಲ ಪ್ರಶಸ್ತಿ..

ಆಂಕರ್‌ ಅನುಶ್ರೀ ಮತ್ತು ಕುರಿಪ್ರತಾಪ್‌ ನಿರೂಪಣೆ ಮಾಡಿದ ಈ ಕಾರ್ಯಕ್ರಮದಲ್ಲಿ ಆಧುನಿಕ ಭಗೀರತಿ ಶಿರಸಿಯ ಗೌರಿ ನಾಯಕ್‌, ಇಸ್ರೋದಾ ಎಂ.ವಿ ರೂಪ, ಪ್ಯಾರ ಓಲಂಪಿಕ್‌ ಪಟು ಮಾಲತಿ ಕೃಷ್ಣ ಮೂರ್ತಿ ಹೊಳ್ಳಾ, ಪ್ರಿಯಾಂಕ ಉಪೇಂದ್ರ, ಸುಧಾರಾಣಿ, ಕಾಟೇರದ ನಾಯಕಿ ಆರಾಧನ, ಸುಮಲತಾ ಅಂಬರೀಷ್‌, ಸಮಾಜ ಸೇವಕಿ ಅನು ಅಕ್ಕ, ಹಿರಿಯ ಹಾಸ್ಯ ಕಲಾವಿದೆ ಲಕ್ಷ್ಮೀ ದೇವಮ್ಮ ಮತ್ತು ನಟಿ ಚೈತ್ರ ಜೆ ಆಚಾರ್‌ ಅವರಿಗೆ ಮೊದಲ ವರ್ಷದ ಗೌರವ ನೀಡಿ ಸನ್ಮಾನಿಸಲಾಯಿತು.

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಹಾಜರಿ

ಕಾರ್ಯಕ್ರಮದ ವೇದಿಕೆಯಲ್ಲಿ ರಮೇಶ್‌ ಅರವಿಂದ್‌, ಶ್ರೀನಗರ ಕಿಟ್ಟಿ, ವಿ.ನಾಗೇಂದ್ರ ಪ್ರಸಾದ್‌, ನಿರ್ದೇಶಕ ಗುರುಪ್ರಸಾದ್‌, ಯೋಗರಾಜ್‌ ಭಟ್‌, ನಾಗಾಭರಣ, ನಟ ಸುಂದರ್‌ ರಾಜ್‌, ನಾದಬ್ರಹ್ಮ ಹಂಸಲೇಖ ನಾಯಕ ನಟಿ ನಿಶ್ವಿಕಾ ನಾಯ್ಡು ಮತ್ತು ಕೃಷ್ಣ ಅಜಯ್‌ ರಾವ್‌ ಪ್ರಶಸ್ತಿ ಪುರಸ್ಕೃತರನ್ನ ಗೌರವಿಸಿದರು.

ಕಾರ್ಯಕ್ರಮ ಯಾವಾಗ?

ನೆರೆದ ಅಭಿಮಾನಿಗಳನ್ನು ಮನರಂಜಿಸುವ ನಿಟ್ಟಿನಲ್ಲಿ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಜೀ ಕನ್ನಡದ ಈ ಮೊದಲ ಪ್ರಯತ್ನ, ಇದೇ ಭಾನುವಾರ ಮಾರ್ಚ್‌ 10 ರ ಸಂಜೆ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

IPL_Entry_Point