Zee Kannada Serials: ಪಾರು, ಹಿಟ್ಲರ್ ಕಲ್ಯಾಣ, ಅಮೃತಧಾರೆ ಸೀರಿಯಲ್ ವೀಕ್ಷಕರಿಗೆ ಬಂಪರ್! ವಾರದ ಏಳು ದಿನವೂ ಪ್ರಸಾರ
ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು, ಹಿಟ್ಲರ್ ಕಲ್ಯಾಣ ಮತತು ಅಮೃತಧಾರೆ ಸೀರಿಯಲ್‌ಗಳು ಇನ್ನು ಮುಂದೆ ವಾರದ ಏಳೂ ದಿನವೂ ವೀಕ್ಷಕರನ್ನು ಮನರಂಜಿಸಲಿವೆ. ಈ ಮೂಲಕ ಈ ಧಾರಾವಾಹಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ ವಾಹಿನಿ.
Zee Kannada Serials: ಜೀ ಕನ್ನಡ ವಾಹಿನಿ ತನ್ನ ವೀಕ್ಷಕರಿಗೆ ವಾರಾಂತ್ಯದಲ್ಲಿ ಬಿಗ್ ಸರ್ಪ್ರೈಸ್ ನೀಡಿದೆ. ಒಂದಲ್ಲ ಎರಡಲ್ಲ ಒಟ್ಟು ಮೂರು ಸೀರಿಯಲ್‌ಗಳು ವಾರದ ಏಳೂ ದಿನವೂ ಪ್ರಸಾರ ಕಾಣಲಿದೆ. ಈ ಮೊದಲು ವಾರಾಂತ್ಯ ಶುರುವಾಗುತ್ತಿದ್ದಂತೆ, ಕಲರ್‌ಫುಲ್ ಶೋಗಳ ಸುಗ್ಗಿ ಶುರುವಾಗುತ್ತಿತ್ತು. ಆದರೆ, ಕಳೆದ ವಾರವಷ್ಟೇ ಜೋಡಿ ನಂಬರ್ 1 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆದಿತ್ತು. ಅದಾದ ಬಳಿಕ ಅದೇ ಟೈಮ್ ಸ್ಲಾಟ್‌ನಲ್ಲಿ ಮುಂದೇ ಯಾವ ಶೋ?
ಪ್ರತಿ ದಿನ ಸಂಜೆಯಾಗುತ್ತಲೆ ಮನೆಮಂದಿಯೆಲ್ಲ ಒಟ್ಟಾಗಿ ಟಿವಿ ಮುಂದೆ ಕೂತು ಮನರಂಜನೆ ಬಯಸುವ ಪ್ರತಿ ಕನ್ನಡಿಗನ, ಬಯಸಿದ ಬಾಗಿಲನ್ನ ತೆರೆಯುವ ಮುಖಾಂತರ ಮನರಂಜನೆಯನ್ನು ಪ್ರತಿ ಮನೆಗೆ ತಪ್ಪದೆ ತಲುಪಿಸುತ್ತಿದೆ ಜೀ ಕನ್ನಡ ವಾಹಿನಿ. ಈಗ ತನ್ನ ಮನೋರಂಜನೆಯ ಸಮಯವನ್ನು ವಿಸ್ತಾರ ಮಾಡುತ್ತಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗು ಸಂಜೆ 6 ಗಂಟೆಯಿಂದ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ಇನ್ನು ಮುಂದೆ ವಾರದ 7 ದಿನುವು ಪ್ರಸಾರವಾಗಲಿದೆ.
ಯಾವ್ಯಾವ ಸೀರಿಯಲ್?
ಇನ್ನು ಮುಂದೆ ಸೋಮವಾರದಿಂದ ಭಾನುವಾರದವರೆಗೆ ಪಾರು, ಹಿಟ್ಲರ್ ಕಲ್ಯಾಣ ಮತ್ತು ಅಮೃತಧಾರೆ ಧಾರಾವಾಹಿಗಳು ವಾರದ 7 ದಿನವೂ ಮನರಂಜನೆಯ ಹೂರಣವನ್ನು ಬಡಿಸಲಿವೆ ವೀಕೆಂಡ್ ಬಂತು ಅಂದರೆ ರಿಯಾಲಿಟಿ ಶೋಗಳ ಮೂಲಕ ನೋಡುಗರನ್ನು ಕಟ್ಟಿಹಾಕುತ್ತಿದ್ದ ಜೀ ಕನ್ನಡ, ಈಗ ಜೋಡಿ ನಂ.1 ಸೀಸನ್ 2 ಯಶಸ್ವಿಯಾಗಿ ಮುಗಿದಿರುವ ಹಿನ್ನಲೆಯಲ್ಲಿ ಈ ಹೊಸ ಹೆಜ್ಜೆಯನ್ನು ಇರಿಸಿದೆ. ಮುಂದೆ ಕಥೆ ಏನಾಯ್ತು ಅಂತ ಸೋಮವಾರದವರೆಗೆ ಕಾಯುವ ಅವಶ್ಯಕತೆ ಬೇಡ ಎಂಬ ಕಾರಣಕ್ಕೆ ವಾರದ 7 ದಿನವು ಈ ಮೂರು ಸೀರಿಯಲ್‌ಗಳು ಪ್ರಸಾರಕಾಣಲಿವೆ.
ಯಾಕೆ ಈ ಬದಲಾವಣೆ?
ಸದ್ಯ ಜೀ ಕನ್ನಡ ಮಹಾನಟಿ ಶೋವನ್ನು ಕನ್ನಡಿಗರಿಗೆ ಪರಿಚಯಿಸುತ್ತಿದೆ. ಈಗಾಗಲೇ ಇದರ ಆಡಿಷನ್ ಸಹ ನಡೆಯುತ್ತಿದ್ದು, ಸಿನಿಮಾ ನಾಯಕಿ ಆಗ ಬಯಸುವ ತರುಣಿಯರಿಗಾಗಿಯೇ ಇದನ್ನು ರೂಪಿಸಿದೆ ಜೀ ಕನ್ನಡ. ಆ ಶೋ ಶುರುವಾಗುವುದಕ್ಕೆ ಇನ್ನೂ ಸಮಯ ಇರೋದ್ರಿಂದ, ವಾರಾಂತ್ಯಕ್ಕೆ ಮೂರು ಧಾರಾವಾಹಿಗಳ ಪ್ರಸಾರವನ್ನು ವಿಸ್ತರಿಸಿದೆ. ಸದ್ಯಕ್ಕೆ ಕೆಲ ದಿನಗಳ ಕಾಲವಷ್ಟೇ ಈ ಕಾನ್ಸೆಪ್ಟ್ ಇರಲಿದೆ. ಅದಾದ ಬಳಿಕ ವಾರಾಂತ್ಯದ ಹೊಸ ಶೋ ಶುರುವಾದ ಬಳಿಕ ಎಂದಿನಂತೆ ವಾರದ ಐದು ದಿನಗಳಷ್ಟೇ ಸೀರಿಯಲ್‌ಗಳು ಪ್ರಸಾರವಾಗಲಿವೆ.
ಏನಿದು ಮಹಾನಟಿ ರಿಯಾಲಿಟಿ ಶೋ
ಚಂದನವನಕ್ಕೆ ಹೊಸ ನಟಿಯರನ್ನು ಪರಿಚಯಿಸುವ ಪ್ರಯತ್ನವಾಗಿ ಜೀ ಕನ್ನಡವು ಮಹಾನಟಿ ಎಂಬ ಹೊಸ ರಿಯಾಲಿಟಿ ಶೋ ಆರಂಭಿಸುತ್ತಿದೆ. ಇತ್ತೀಚೆಗೆ ಇದರ ಪ್ರೋಮೋವನ್ನು ಬಿಡುಗಡೆ ಮಾಡಲಾಗಿತ್ತು. ಅಡಿಷನ್‌ನಲ್ಲಿ ಭಾಗವಹಿಸಲು ಆಸಕ್ತಿ ಇರುವ 18-28 ವಯೋಮಿತಿಯ ಕಲಾಸಕ್ತ ಯುವತಿಯರು ತಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಅಡ್ರೆಸ್ ಪ್ರೂಫ್ ಜತೆಗೆ ಬರಬೇಕು. ಅದಕ್ಕಿಂತ ಮೊದಲು ನಿಮ್ಮ ಆಕ್ಟಿಂಗ್ ವಿಡಿಯೋಗಳನ್ನು 9513516200 ಸಂಖ್ಯೆಗೆ ವಾಟ್ಸಪ್ ಮಾಡಬೇಕೆಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಝೀ ಕನ್ನಡ ಪ್ರಕಟಿಸಿದೆ. ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಈ ಶೋನ ಆಡಿಷನ್ ನಡೆಯಲಿದೆ.