ಕನ್ನಡ ಸುದ್ದಿ  /  Entertainment  /  Kannada Television News Anchor Anushree Reels On Karimani Malika Nanalla Song Fans Reacts On Her Wedding Mnk

Anchor Anushree: ಕರಿಮಣಿ ಮಾಲೀಕ ಹಾಡಿಗೆ ಕುಣಿದೇ ಬಿಟ್ರು ಆಂಕರ್‌ ಅನುಶ್ರೀ; ನೆಟ್ಟಿಗರ ಪ್ರಶ್ನೆ ಮಾತ್ರ ನೆಕ್ಸ್ಟ್‌ ಲೆವೆಲ್‌ ಬಿಡಿ!

ಕರಿಮಣಿ ಮಾಲೀಕ ನೀನಲ್ಲ ಹಾಡು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹೀಗಿರುವಾಗಲೇ ಸದಾ ಮದುವೆ ವಿಚಾರಕ್ಕೆ ಸುದ್ದಿಯಾಗುವ ನಿರೂಪಕಿ ಅನುಶ್ರೀ, ಇದೇ ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಯಾರು ನಿಮ್ಮ ಕರಿಮಣಿ ಮಾಲೀಕ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Anchor Anushree: ಕರಿಮಣಿ ಮಾಲೀಕ ಹಾಡಿಗೆ ಕುಣಿದೇ ಬಿಟ್ರು ಆಂಕರ್‌ ಅನುಶ್ರೀ; ನೆಟ್ಟಿಗರ ಪ್ರಶ್ನೆ ಮಾತ್ರ ನೆಕ್ಸ್ಟ್‌ ಲೆವೆಲ್‌ ಬಿಡಿ!
Anchor Anushree: ಕರಿಮಣಿ ಮಾಲೀಕ ಹಾಡಿಗೆ ಕುಣಿದೇ ಬಿಟ್ರು ಆಂಕರ್‌ ಅನುಶ್ರೀ; ನೆಟ್ಟಿಗರ ಪ್ರಶ್ನೆ ಮಾತ್ರ ನೆಕ್ಸ್ಟ್‌ ಲೆವೆಲ್‌ ಬಿಡಿ!

Karimani Malika Ninnalla Song: ಓ ನಲ್ಲ ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ... ಉಪೇಂದ್ರ ಚಿತ್ರದ ಈ ಹಾಡು ಸದ್ಯ ಟಾಪ್‌ ಟ್ರೆಂಡಿಂಗ್‌ನಲ್ಲಿದೆ. ಸೋಷಿಯಲ್‌ ಮೀಡಿಯಾದಲ್ಲಿ ಇದೇ ಹಾಡಿನಲ್ಲಿ ಸಾವಿರಾರು ರೀಲ್ಸ್‌ಗಳಾಗಿವೆ. ಹಳೇ ಹಾಡನ್ನೇ ಇಂದಿಗೂ ಜನ ಗುನುಗುತ್ತಿದ್ದಾರೆ. 1999ರಲ್ಲಿ ರಿಲೀಸ್‌ ಆಗಿದ್ದ ಈ ಸಿನಿಮಾ ಹಾಡು ಆ ಸಮಯದಲ್ಲೂ ಕೇಳುಗರನ್ನು ಮೋಡಿ ಮಾಡಿತ್ತು. ಇದೀಗ 25 ವರ್ಷಗಳ ಬಳಿಕ ಅದೇ ಹಾಡು ವೈರಲ್‌ ಪಟ್ಟ ಪಡೆದುಕೊಂಡಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಟ್ರೆಂಡ್‌ ಸೃಷ್ಟಿಸಿದೆ. ಸೆಲೆಬ್ರಿಟಿ ವಲಯದಲ್ಲೂ ಈ ಹಾಡು ಸಂಚಲನ ಮೂಡಿಸಿದೆ. ಈಗ ಇದೇ ಹಾಡಿಗೆ ಆಂಕರ್‌ ಅನುಶ್ರೀ ಸಹ ಹೆಜ್ಜೆ ಹಾಕಿದ್ದಾರೆ.

ಕನ್ನಡದ ಸ್ಟಾರ್‌ ನಿರೂಪಕಿಯಾಗಿರುವ ಅನುಶ್ರೀ, ನಿರೂಪಣೆಗೆ ಸುದ್ದಿಯಾದಷ್ಟೇ ಅವರ ಮದುವೆ ವಿಚಾರವಾಗಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ವಯಸ್ಸು 36 ಆದರೂ ಇಂದಿಗೂ ಮದುವೆ ಬಗ್ಗೆ ಅವರು ಯೋಚಿಸಿಲ್ಲ. ಹಾಗಾಗಿ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ಬಗೆಬಗೆ ಕಾಮೆಂಟ್‌ಗಳೇ ಹರಿದು ಬರುತ್ತಿರುತ್ತವೆ. ಅಕ್ಕ ಮದುವೆ ಯಾವಾಗ ಎಂದೆಲ್ಲ ಪೋಸ್ಟ್‌ ಮಾಡುತ್ತಿರುತ್ತಾರೆ. ಇದೆಲ್ಲವನ್ನು ಗಮನಿಸಿ ಹಲವು ಬಾರಿ ಸ್ವತಃ ಅನುಶ್ರೀ ಮೌನ ಮುರಿದ ಉದಾಹರಣೆಗಳಿವೆ. ಇದೀಗ ಕರಿಮಣಿ ಹಾಡಿಗೆ ಡಾನ್ಸ್‌ ಮಾಡಿ, ಸುದ್ದಿಯಲ್ಲಿದ್ದಾರೆ.

ಸದ್ಯ ಅನುಶ್ರೀ ಜೀ ಕನ್ನಡದಲ್ಲಿ ಸರಿಗಮಪ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಅದೇ ಶೋನ ಗ್ಯಾಪ್‌ನಲ್ಲಿಯೇ ಶೋನ ಸ್ಪರ್ಧಿಗಳ ಜತೆ ಸೇರಿ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಈ ಹಾಡನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲೂ ಶೇರ್‌ ಮಾಡಿದ್ದಾರೆ. ಹಾಗೆ ಪೋಸ್ಟ್‌ ಮಾಡುತ್ತಿದ್ದಂತೆ, ಅನುಶ್ರೀ ಅವರ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅವರ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕವೇ ಅಕ್ಕ ಮದುವೆ ಯಾವಾಗ ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದಾರೆ.

ಹೀಗಿವೆ ನೆಟ್ಟಿಗರ ಪ್ರತಿಕ್ರಿಯೆ.

"ಮೇಡಮ್, ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು... ಅಷ್ಟೇ ಸಾಕು ಏನಂತೀರಾ!!!..... ತಾಯಿಗೆ ಕೈ ಮುಗ್ಸಿ ಅಷ್ಟೇ... ಕರಿಮಣಿ ಮಾಲಿಕ ಎಲ್ಲಾ ಯಾಕೇ? ಏನಂತೀರಾ?? ಎಂದರೆ, ಇನ್ನು ಕೆಲವರು, "ಕರಿಮಣಿ ಮಾಲೀಕ ಯಾರು ಅಂತರ ಹೇಳ್ರಿ ಅನುಶ್ರೀ ಅವರೇ ಮದುವೆ ಸೀಸನ್ ಐತಿ ನಿಮ್ದು ಮದುವೆ ಮಾಡೋಣ", "ಇದು ಮಿಲಿಯನ್‌ ಡಾಲರ್‌ ಪ್ರಶ್ನೆ" ಎಂದು ಕಾಮೆಂಟ್‌ ಹಾಕುತ್ತಿದ್ದಾರೆ.

ಇನ್ನು ಕೆಲವರು "ಈ ಅನುಶ್ರೀಯ ಕರಿ ಮಣಿ ಮಾಲೀಕ ಯಾರು...? ಇದಕ್ಕೆ ಉತ್ತರ 2025 ಫೆಬ್ರವರಿ 29 ಕ್ಕೆ ಸಿಗಲಿದೆ.." ಎಂದೂ ಕೆಲವರು ಭವಿಷ್ಯ ನುಡಿದಿದ್ದಾರೆ. "ಅನುಶ್ರೀ ಅವರೇ ನೀವೇ ಹೇಳ್ಬೇಕು ಯಾರು ಅಂತ ನಮಿಗೆ ಎನ್ ಗೊತ್ತು ಕರಿಮಣಿ ಮಾಲೀಕ ಯಾರು ಅಂತ..", "ಕರಿಮಣಿ ಮಾಲೀಕ ಯಾರು ಎನ್ನುವುದು ಪ್ರಶ್ನೆನೆ ಆಗಿದೆ" ಹೀಗೆ ಬಗೆ ಬಗೆಯ ನೂರಾರು ಕಾಮೆಂಟ್‌ಗಳು ಅನುಶ್ರೀ ಬಳಿ ಬಂದಿವೆ.

ಕರಿಮಣಿ ಮಾಲೀಕ ನೀನಲ್ಲ ಹಾಡಿನ ಪೂರ್ತಿ ಸಾಹಿತ್ಯ ಇಲ್ಲಿದೆ..

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ ಏನೇನಿಲ್ಲ

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ

ನಿಜದಂತಿರುವ ಸುಳ್ಳಲ್ಲ

ಸುಳ್ಳುಗಳೆಲ್ಲ ನಿಜವಲ್ಲ

ಸುಳ್ಳಿನ ನಿಜವು ಸುಳ್ಳಲ್ಲ

ಏನಿಲ್ಲ ಏನಿಲ್ಲ, ಏನೇನಿಲ್ಲ

ಕಳೆದ ದಿನಗಳಲೇನೂ ಇಲ್ಲ

ನೆನಪುಗಳಲಿ ಏನೇನಿಲ್ಲ

ಉತ್ತರ, ದಕ್ಷಿಣ

ಸೇರಿಸೋ ದಿಂಬಲಿ ನೀನಿಲ್ಲ

ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ

ಕೆದಕಿದರೆ ಏನೇನಿಲ್ಲ

ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ

ಏನಿಲ್ಲ, ಏನೇನಿಲ್ಲ

ಮನಸಿನೊಳಗೆ ಖಾಲಿ ಖಾಲಿ

ನೀ ಮನದೊಳಗೆ ಇದ್ದರೂ

ಮಲ್ಲಿಗೆ, ಸಂಪಿಗೆ

ತರದೆ ಹೋದರು ನೀ ನನಗೆ

ಓ ನಲ್ಲ, ನೀನಲ್ಲ

ಕರಿಮಣಿ ಮಾಲೀಕ ನೀನಲ್ಲ

ಕರಿಮಣಿ ಮಾಲೀಕ ನೀನಲ್ಲ

ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ

ನಿಜದಂತಿರುವ ಸುಳ್ಳಲ್ಲ

ಸುಳ್ಳುಗಳೆಲ್ಲ ನಿಜವಲ್ಲ

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ

IPL_Entry_Point