Suryavamsha Serial: ಸೂರ್ಯವಂಶ ಸೀರಿಯಲ್‌ನಿಂದ ಎಸ್ ನಾರಾಯಣ್ ಹಿಂದೆ ಸರಿದಿದ್ದೇಕೆ? ಅನಿರುದ್ಧ ಜತ್ಕರ್ ಸ್ಪಷ್ಟನೆ ಹೀಗಿದೆ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಸೂರ್ಯವಂಶ ಸೀರಿಯಲ್ ಪ್ರಸಾರ ಆರಂಭಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಮುಂದೂಡುತ್ತಲೇ ಬಂದಿತು. ಜೊತೆಜೊತೆಯಲಿ ಸೀರಿಯಲ್‌ನಿಂದ ಹೊರಬಂದ ಕೆಲ ದಿನಗಳಿಗೆ ಎಸ್ ನಾರಾಯಣ್ ಮತ್ತು ಅನಿರುದ್ಧ್ ಜತ್ಕರ್ ಈ ಪ್ರಾಜೆಕ್ಟ್‌ಗೆ ಕೈ ಜೋಡಿಸಿದ್ದರು. ಇದೀಗ ಎಸ್ ನಾರಾಯಣ್ ಈ ಸೀರಿಯಲ್‌ನಿಂದ ಹಿಂದೆ ಸರಿದಿದ್ದಾರೆ.
Suryavamsha Serial: ಜೊತೆ ಜೊತೆ ಸೀರಿಯಲ್‌ನಿಂದ ಒಂದಷ್ಟು ಕಾರಣಗಳಿಂದ ಹಿಂದೆ ಸರಿದಿದ್ದ ನಟ ಅನಿರುದ್ಧ ಜತ್ಕರ್ ಸದ್ಯ ಏನು ಮಾಡುತ್ತಿದ್ದಾರೆ? ಹೀಗೊಂದು ಪ್ರಶ್ನೆಗೆ ಉತ್ತರವೆಂಬಂತೆ, ಇತ್ತೀಚೆಗಷ್ಟೇ ಅವರ ಮುಂದಿನ ಧಾರಾವಾಹಿಯ ಕುರಿತಾದ ಹೊಸ ಪ್ರೋಮೋ ಬಿಡುಗಡೆ ಆಗಿತ್ತು. ಉದಯಟಿವಿಯಲ್ಲಿ ಪ್ರಸಾರ ಕಾಣಲಿರುವ ಸೂರ್ಯವಂಶ ಸೀರಿಯಲ್‌ನ ಟೀಸರ್ ಝಲಕ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಇದೇ ಸೀರಿಯಲ್ ಯಾವ ಹಂತದಲ್ಲಿದೆ? ಯಾವಾಗಿನಿಂದ ಪ್ರಸಾರ ಶುರು ಎಂಬಿತ್ಯಾದಿ ಮಾಹಿತಿಯನ್ನು HT ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಸೂರ್ಯವಂಶ ಸೀರಿಯಲ್ ಪ್ರಸಾರ ಆರಂಭಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಮುಂದೂಡುತ್ತಲೇ ಬಂದಿತು. ಜೊತೆಜೊತೆಯಲಿ ಸೀರಿಯಲ್‌ನಿಂದ ಹೊರಬಂದ ಕೆಲ ದಿನಗಳಿಗೆ ಕಲಾ ಸಾಮ್ರಾಟ್ ಎಸ್ ನಾರಾಯಣ್ ಮತ್ತು ಅನಿರುದ್ಧ್ ಈ ಪ್ರಾಜೆಕ್ಟ್‌ಗೆ ಕೈ ಜೋಡಿಸಿದ್ದರು. ಇದೀಗ ಎಸ್ ನಾರಾಯಣ್ ಅವರ ಅನುಪಸ್ಥಿತಿಯಲ್ಲಿಯೇ ಸೂರ್ಯವಂಶ ಸೆಟ್ಟೇರಿದೆ. ಬಿಡುಗಡೆಯಾದ ಪ್ರೋಮೋ ಸಹ ಮೆಚ್ಚುಗೆ ಪಡೆದಿದೆ.
ಅಪ್ಪಾವ್ರ (ವಿಷ್ಣುವರ್ಧನ್) ಟೈಟಲ್ ನಂಗೆ ಸಿಕ್ಕಿದ್ದು ಅವರ ಆಶೀರ್ವಾದದಿಂದ. ಈಗಾಗಲೇ ಎರಡು ಬಾರಿ ಈ ಸೀರಿಯಲ್ ನಿಂತು ಹೋಗಿತ್ತು. ಎಸ್ ನಾರಾಯಣ್ ಮತ್ತು ವಾಹಿನಿಯ ನಡುವಿನ ಕೆಲ ವಿಚಾರಗಳನ್ನು ಸರಿಪಡಿಸಲು ನಾನು ಪ್ರಯತ್ನ ಪಟ್ಟೆ ಆದ್ರೇ ಆಗಲಿಲ್ಲ. ಅದು ಬಹಳ ಬೇಸರವಾಯ್ತು. ಆ ಸಮಯದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಗಲಾಟೆ ಸಹ ಆಗಿತ್ತು. ಆ ಧಾರಾವಾಹಿ ಕೂಡ ನನ್ನಿಂದನೇ ನಿಂತು ಹೋಯ್ತು ಅಂತ ಅನೇಕರು ಭಾವಿಸಿದ್ದರು. ಏನೋ ಒಳ್ಳೆದು ಆಗುತ್ತೆ, ನಾನು ನಂಬಿದ ದೇವ್ರು ಮತ್ತು ಅಭಿಮಾನಿಗಳು ಕೈ ಬಿಡೋದಿಲ್ಲ ಅಂತ ಗಟ್ಟಿಯಾಗಿದ್ದೆ. ಕೊನೆಗೆ ಹೊಸ ನಿರ್ದೇಶಕರು ಬಂದರು. ಹೊಸ ಕತೆಯ ಜೊತೆಗೆ ಈಗ ಧಾರಾವಾಹಿ ಶುರುವಾಗಿದೆ" ಎಂದಿದ್ದಾರೆ ಅನಿರುದ್ಧ್.
ಇದು ಸೀರಿಯಲ್ ಪ್ರೋಮೋನಾ?
"ಸೂರ್ಯವಂಶ ಸೀರಿಯಲ್ ಪ್ರೋಮೋ ತುಂಬಾನೆ ಚೆನ್ನಾಗಿ ಮೂಡಿಬಂದಿದೆ ಎಂದು ಅದನ್ನು ನೋಡಿದ ನನ್ನ ಆಪ್ತರೆಲ್ಲರೂ ಹೇಳುತ್ತಿದ್ದಾರೆ. ನಾನು ಈ ವರೆಗೂ ಈ ಥರದ ಸೀರಿಯಲ್ ಪ್ರೋಮೋ ನೋಡಿಯೇ ಇಲ್ಲ ಎಂದೂ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಪ್ರೋಮೋದಲ್ಲಿ ನಾನು ಥೇಟ್ ಅಪ್ಪಾವ್ರ ರೀತಿಯೇ ಕಾಣಿಸುತ್ತಿದ್ದೇನೆ ಎಂದೂ ಕೆಲವರು ಹೇಳುತ್ತಿದ್ದಾರೆ. ವಿಷ್ಣುವರ್ಧನ್ ಪ್ರತಿರೂಪದಂತೆ ಕಂಡಿದ್ದೇನೆ ಎನ್ನುತ್ತಿದ್ದಾರೆ"
ಸೂರ್ಯವಂಶ ಪ್ರೋಮೋ ಮೂಡಿ ಬರಲು ಸಾಕಷ್ಟು ಖರ್ಚು ಮಾಡಲಾಗಿದೆ. ರವಿತೇಜ ಎಂಬುವವರು ಈ ಪ್ರೋಮೋವನ್ನು ಡೈರೆಕ್ಟ್ ಮಾಡಿದ್ದಾರೆ. ತುಂಬಾನೇ ಚೆನ್ನಾಗಿಯೂ ಬಂದಿದೆ. ಪ್ರೋಮೋಗೆ ಲಕ್ಷಾಂತರ ಹಣವನ್ನ ಖರ್ಚು ಮಾಡಿದ್ದಾರೆ. ಈ ಒಂದು ಪ್ರೋಮೋ ನೋಡಿ ಹೊರಗಡೆ ರಾಜ್ಯದ ಆತ್ಮೀಯರು ಫೋನ್ ಮಾಡುತ್ತಿದ್ದಾರೆ. ಯಾವ ಭಾಷೆಯಲ್ಲೂ ಧಾರಾವಾಹಿಯ ಪ್ರೋಮೋ ಈ ಮಟ್ಟಿಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ"
ಸೂರ್ಯವಂಶ ನಿರ್ದೇಶಕರು ಯಾರು?
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಎಸ್. ನಾರಾಯಣ್ ಸೂರ್ಯವಂಶ ಸೀರಿಯಲ್ ನಿರ್ದೇಶನ ಮಾಡಬೇಕಿತ್ತು. ಏಕೆಂದರೆ, ಕನ್ನಡದಕ್ಕೆ ಸೂರ್ಯವಂಶ ಸಿನಿಮಾ ನೀಡಿದ್ದೇ ಇದೇ ಎಸ್. ನಾರಾಯಣ್. ಆದರೆ, ಇಲ್ಲೊಂದು ಬದಲಾವಣೆ ಆಗಿದೆ. ಅವರ ಬದಲಿಗೆ ಹರಿ ಸಂತೋಷ್ ಆಗಮಿಸಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಅಲೆಮಾರಿ, ಬಿಚ್ಚುಗತ್ತಿ, ಕಾಲೇಜ್ ಕುಮಾರ್ ಸೇರಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ ಅನುಭವ ಇರುವ ಹರಿ ಸಂತೋಷ್, ಸೂರ್ಯವಂಶ ಸೀರಿಯಲ್ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಮೂಲಕ ಕಿರುತೆರೆಗೆ ಆಗಮಿಸಿದ್ದಾರೆ.
ಶೂಟಿಂಗ್ ಶುರು
ಈಗಾಗಲೇ ಸದ್ದಿಲ್ಲದೆ ಸೀರಿಯಲ್ ಶೂಟಿಂಗ್ ನಡೆಯುತ್ತಿದೆ. ಒಂದೆರಡು ಏಪಿಸೋಡ್‌ಗಳ ಚಿತ್ರೀಕರಣವೂ ನಡೆದಿದೆ. ಮಾರ್ಚ್ ವೇಳೆಗೆ ಈ ಸೀರಿಯಲ್ ಪ್ರಸಾರ ಕಾಣುವ ಸಾಧ್ಯತೆಗಳಿವೆ. ಸೀರಿಯಲ್‌ನಲ್ಲಿ ಯಾರೆಲ್ಲ ಇರಲಿದ್ದಾರೆ. ತಾಂತ್ರಿಕ ವರ್ಗವ ಮಾಹಿತಿ ಸೇರಿ ಎಲ್ಲ ವಿವರವನ್ನೂ ಮುಂದಿನ ದಿನಗಳಲ್ಲಿ ನೀಡಲಿದೆ ಸೀರಿಯಲ್ ಟೀಮ್.
ವರದಿ: ಮನೋಜ್ ಕುಮಾರ್