ಆಡಿದ ಮಾತಂತೆ ಯುವಕನಿಗೆ ಫ್ರೀಯಾಗಿ ಬೈಕ್‌ ನೀಡಿದ ಡ್ರೋಣ್‌ ಪ್ರತಾಪ್‌; ವೋಟ್‌ ಮಾಡಿದ್ದೂ ಸಾರ್ಥಕವಾಯ್ತೆಂದ ನೆಟ್ಟಿಗರು-kannada television news bbk 10 runner up drone prathap gave a free electric bike to a food delivery boy mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಆಡಿದ ಮಾತಂತೆ ಯುವಕನಿಗೆ ಫ್ರೀಯಾಗಿ ಬೈಕ್‌ ನೀಡಿದ ಡ್ರೋಣ್‌ ಪ್ರತಾಪ್‌; ವೋಟ್‌ ಮಾಡಿದ್ದೂ ಸಾರ್ಥಕವಾಯ್ತೆಂದ ನೆಟ್ಟಿಗರು

ಆಡಿದ ಮಾತಂತೆ ಯುವಕನಿಗೆ ಫ್ರೀಯಾಗಿ ಬೈಕ್‌ ನೀಡಿದ ಡ್ರೋಣ್‌ ಪ್ರತಾಪ್‌; ವೋಟ್‌ ಮಾಡಿದ್ದೂ ಸಾರ್ಥಕವಾಯ್ತೆಂದ ನೆಟ್ಟಿಗರು

ಬಿಗ್​ಬಾಸ್​ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್, ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ ಮತ್ತು ಇತರೆ ಬಹುಮಾನಗಳನ್ನು ದಾನ ಮಾಡುವುದಾಗಿ ಹೇಳಿದ್ದರು. ಇದೀಗ ಕೊಟ್ಟ ಮಾತಂತೆ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ನೀಡಿದ್ದಾರೆ.

ಆಡಿದ ಮಾತಂತೆ ಯುವಕನಿಗೆ ಫ್ರೀಯಾಗಿ ಬೈಕ್‌ ನೀಡಿದ ಡ್ರೋಣ್‌ ಪ್ರತಾಪ್‌; ವೋಟ್‌ ಮಾಡಿದ್ದೂ ಸಾರ್ಥಕವಾಯ್ತೆಂದ ನೆಟ್ಟಿಗರು
ಆಡಿದ ಮಾತಂತೆ ಯುವಕನಿಗೆ ಫ್ರೀಯಾಗಿ ಬೈಕ್‌ ನೀಡಿದ ಡ್ರೋಣ್‌ ಪ್ರತಾಪ್‌; ವೋಟ್‌ ಮಾಡಿದ್ದೂ ಸಾರ್ಥಕವಾಯ್ತೆಂದ ನೆಟ್ಟಿಗರು

Drone Prathap: ಬಿಗ್​ಬಾಸ್ ಕನ್ನಡ ಸೀಸನ್ 10ರ ಫಿನಾಲೆವರೆಗೂ ಬಂದು ರನ್ನರ್ ಅಪ್ ಆದ ಡ್ರೋನ್ ಪ್ರತಾಪ್, ಬಿಗ್​ಬಾಸ್ ವೇದಿಕೆ ಮೇಲೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಬಿಗ್​ಬಾಸ್​ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್, ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ ಮತ್ತು ಇತರೆ ಬಹುಮಾನಗಳನ್ನು ದಾನ ಮಾಡುವುದಾಗಿ ಹೇಳಿದ್ದರು. ಆ ಮಾತಿನಂತೆ ಬಿಗ್​ಬಾಸ್​ ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ಬಹುಮಾನದ ಮೊತ್ತ ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ.

ಬೆಂಗಳೂರಿನ ರಾಜು ಅನ್ನೋ ಯುವಕ ತಮ್ಮ ಗೆಳೆಯನ ಹೆಸರಿನಲ್ಲಿ ಬೈಕ್ ತೆಗೆದುಕೊಂಡು ತಿಂಗಳ ಕಂತು ಕಟ್ಟುತ್ತಾ ಫುಡ್ ಡಿಲೆವರಿ ಮಾಡುತ್ತಿದ್ದರು. ಗೆಳೆಯ ಮೋಸ ಮಾಡಿದ್ದಕ್ಕೆ ಬೈಕ್ ಅನ್ನು ಬ್ಯಾಂಕ್‌ನವರು ಸೀಸ್ ಮಾಡಿದ್ದರು. ಅಂತಹ ರಾಜುವಿಗೆ ತಮಗೆ ಬಹುಮಾನವಾಗಿ ಬಂದಿದ್ದ ಬೈಕ್ ಅನ್ನು ಡ್ರೋನ್ ಪ್ರತಾಪ್ ನೀಡಿದ್ದಾರೆ. ಬೈಕ್ ನೀಡುವುದಷ್ಟೇ ಅಲ್ಲ, ರಾಜು ಅವರ ಮನೆಗೂ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಮತ್ತಷ್ಟು ನೆರವಿನ ಅಗತ್ಯವಿದ್ದರೆ ಸಹಾಯ ಮಾಡೋದಾಗಿ ಪ್ರತಾಪ್ ಹೇಳಿದ್ದಾರೆ. ಈ ಮೂಲಕ ಡ್ರೋನ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಡ್ರೋಣ್‌ ಪ್ರತಾಪ್‌ ಪೋಸ್ಟ್‌ ಹೀಗಿದೆ..

"ಬಿಗ್‌ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ.. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ‌ ಹಾಗೂ ಸಂಜೆಯ ಮೇಲೆ ಫುಡ್‌ ಡೆಲಿವರಿ ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು ಸೀಜ್‌ ಮಾಡಿದರು. ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಈ ಹುಡುಗನಿಗೆ ನೀಡಿದ್ದು ನನಗೆ ತುಂಬಾ ಖುಷಿ ತಂದಿದೆ" ಎಂದಿದ್ದಾರೆ.

ಪ್ರತಾಪ್‌ ನಡೆಗೆ ವ್ಯಾಪಕ ಮೆಚ್ಚುಗೆ..

ಡ್ರೋನ್ ಪ್ರತಾಪ್​ರ ಈ ಕಾರ್ಯಕ್ಕೆ ಮೆಚ್ಚಿ ಹಲವರು ಕಾಮೆಂಟ್ ಮಾಡಿದ್ದಾರೆ. ‘ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ’, ‘ನಿಮಗೆ ಮತ ಹಾಕಿದ್ದಕ್ಕೂ ಸಾರ್ಥವಾಯ್ತು’, ‘ನಿಮ್ಮ ಈ ಗುಣವೇ ನಿಮ್ಮನ್ನು ಬಿಗ್​ಬಾಸ್ ಫಿನಾಲೆ ವರೆಗೂ ಕರೆತಂದಿತು’ ಇನ್ನೂ ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ. ಪ್ರತಾಪ್​ರ ಈ ಕಾರ್ಯಕ್ಕೆ ಅತೀವ ಮೆಚ್ಚುಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ಬಿಗ್​ಬಾಸ್ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್​ಗೆ 10 ಲಕ್ಷ ನಗದು ಬಹುಮಾನ, ಒಂದು ಎಲೆಕ್ಟ್ರಿಕ್ ಬೈಕ್ ಬಹುಮಾನವಾಗಿ ನೀಡಲಾಗಿತ್ತು. ತನಗೆ ಬಹುಮಾನವಾಗಿ ಬಂದ 10 ಲಕ್ಷ ಹಣವನ್ನು ಸಹ ತಾವು ಬಡವರಿಗೆ ದಾನ ನೀಡುವುದಾಗಿ ಡ್ರೋನ್ ಪ್ರತಾಪ್ ಘೋಷಣೆ ಮಾಡಿದ್ದರು. ಆದರೆ ಆ ಹಣವನ್ನು ಪ್ರತಾಪ್ ಯಾರಿಗೆ ನೀಡಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ. ಒಟ್ಟಿನಲ್ಲಿ ಕೊಟ್ಟ ಮಾತಿನಂತೆ ಪ್ರತಾಪ್ ನಡೆದುಕೊಂಡಿರೋದು ಜನರ ಮೆಚ್ಚುಗೆಗೆ ಕಾರಣವಾಗಿದೆ.

ವರದಿ: ಮನೋಜ್‌ ವಿಜಯೀಂದ್ರ

mysore-dasara_Entry_Point