BBK 11: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಶುರು; ಸ್ವರ್ಗ, ನರಕವಾಸಿಗಳ ಜಗಳದ ನಡುವೆ ಬಡವಾದ ಗೌತಮಿ ಜಾಧವ್‌-kannada television news bigg boss 11 hell heaven contestants clash because of gauthami jadav colors kannada show rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಶುರು; ಸ್ವರ್ಗ, ನರಕವಾಸಿಗಳ ಜಗಳದ ನಡುವೆ ಬಡವಾದ ಗೌತಮಿ ಜಾಧವ್‌

BBK 11: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಶುರು; ಸ್ವರ್ಗ, ನರಕವಾಸಿಗಳ ಜಗಳದ ನಡುವೆ ಬಡವಾದ ಗೌತಮಿ ಜಾಧವ್‌

ನಾಮಿನೇಶನ್‌ ವಿಚಾರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಗೌತಮಿ , ನರಕವಾಸಿಗಳ ಮೇಲೆ ಸಾಫ್ಟ್‌ ಕಾರ್ನರ್‌ ಹೊಂದಿದ್ದಾರೆ. ನಮಗಿಂತ ಹೆಚ್ಚಾಗಿ ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಭವ್ಯಾ ಗೌಡ , ಯಮುನಾ ಶ್ರೀನಿಧಿ ಆರೋಪಿಸುತ್ತಾರೆ. ಗೌತಮಿ ಹೆಸರು ಹೇಳಿದ್ದಕ್ಕೆ ಶಿಶಿರ್‌ ಶಾಸ್ತ್ರಿ ಕೋಪಗೊಳ್ಳುತ್ತಾರೆ.

BBK 11: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಶುರು; ಸ್ವರ್ಗ, ನರಕವಾಸಿಗಳ ಜಗಳದ ನಡುವೆ ಬಡವಾದ ಗೌತಮಿ ಜಾಧವ್‌
BBK 11: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಶುರು; ಸ್ವರ್ಗ, ನರಕವಾಸಿಗಳ ಜಗಳದ ನಡುವೆ ಬಡವಾದ ಗೌತಮಿ ಜಾಧವ್‌ (PC: Colors Kannada )

ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ಟಾಸ್ಕ್‌ ಆರಂಭವಾಗಿದೆ. ಜೊತೆಗೆ ಸ್ಪರ್ಧಿಗಳ ನಡುವೆ ವಾರ್‌ ಕೂಡಾ ಶುರುವಾಗಿದೆ. ಮೊದಲ ದಿನ ಸ್ವರ್ಗವಾಸಿಗಳೊಂದಿಗೆ ಚೈತ್ರಾ ಕುಂದಾಪುರ, ಹಣ್ಣಿನ ವಿಚಾರವಾಗಿ ಜಗಳವಾಡಿದ್ದರು. ಇದೀಗ ಶಿಶಿರ್‌ ಶಾಸ್ತ್ರಿ ಹಾಗೂ ಯಮುನಾ ಶ್ರೀನಿಧಿ ಮಧ್ಯೆ ಗೌತಮಿ ಜಾಧವ್‌ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.

ಗೌತಮಿ ವಿಚಾರವಾಗಿ ಶಿಶಿರ್‌ , ಯುಮನಾ ನಡುವೆ ಜಗಳ

ಸ್ವರ್ಗದಲ್ಲಿರುವವರು ನರಕವಾಸಿಗಳಿಂದ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಹಣ್ಣನ್ನು ತೊಳೆದು ಕತ್ತರಿಸಿಕೊಡುವಂತೆ ಉಗ್ರಂ ಮಂಜು ಹೇಳಿದ ಮಾತನ್ನು ಚೈತ್ರಾ ಕುಂದಾಪುರ ಉಲ್ಲಂಘಿಸಿದ್ದಾರೆ. ಹಣ್ಣು ತೊಳೆದುಕೊಂಡು ನೆಪದಲ್ಲಿ ಅದನ್ನು ಕಚ್ಚಿ, ಎಸೆದಿದ್ದಾರೆ. ರೂಲ್ಸ್‌ ಬ್ರೇಕ್‌ ಮಾಡಿದ ವಿಚಾರಕ್ಕೆ ಉಗ್ರಂ ಮಂಜು ಚೈತ್ರಾ ಮೇಲೆ ಗರಂ ಆಗಿದ್ದರು. ಇದೇ ವಿಚಾರಕ್ಕೆ ಚೈತ್ರಾ ಜೊತೆ ಸ್ವರ್ಗದ ನಿವಾಸಿಗಳಿಗೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ನಾಮಿನೇಶನ್‌ ವಿಚಾರವಾಗಿ ಶಿಶಿರ್‌ ಶಾಸ್ತ್ರಿ ಹಾಗೂ ಯುಮುನಾ ಶ್ರೀನಿಧಿ ನಡುವೆ ಯುದ್ಧವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಶಿಶಿರ್‌ ಹಾಗೂ ಯುಮನಾ ವೈಲೆಂಟ್‌ ನಡುವೆ ಗೌತಮಿ ಜಾಧವ್‌ ಸೈಲೆಂಟಾಗಿ ನಿಂತಿದ್ದಾರೆ.

ಮೊದಲ ನಾಮಿನೇಶನ್‌ ಪ್ರಕ್ರಿಯೆ ಆರಂಭ

ಟಾಸ್ಕ್‌ ಮೂಲಕ ನಾಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ. ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೆ ಈಗಾಗಲೇ ಚೈತ್ರಾ ಕುಂದಾಪುರ ನಾಮಿನೇಟ್‌ ಆಗಿದ್ದಾರೆ. ತ್ರಿವಿಕ್ರಮ್‌, ಭವ್ಯಾ ಗೌಡ ಅವರ ಹೆಸರು ಹೇಳುತ್ತಾರೆ. ಭವ್ಯಾ ಹಾಗೂ ಯಮುನಾ ಶ್ರೀನಿಧಿ, ಗೌತಮಿ ಫೋಟೋವನ್ನು ಬೆಂಕಿಗೆ ಹಾಕುವ ಮೂಲಕ ಅವರನ್ನು ನಾಮಿನೇಟ್‌ ಮಾಡುತ್ತಾರೆ. ಆದರೆ ಗೌತಮಿಯನ್ನು ಯಮುನಾ ನಾಮಿನೇಟ್‌ ಮಾಡುವುದು ಕೆಲವರಿಗೆ ಇಷ್ಟವಾಗಿಲ್ಲ, ಅದರಲ್ಲೂ ಅವರು ನೀಡಿದ ಕಾರಣ ನರಕವಾಸಿಗಳಿಗೆ ಇಷ್ಟವಾಗಲಿಲ್ಲ. ನರಕನಿವಾಸಿಗಳ ಮೇಲೆ ಅವರಿಗೆ ಸಾಫ್ಟ್‌ ಕಾರ್ನರ್‌ ಇದೆ ಎಂದು ಭವ್ಯಾ ಗೌಡ ದೂರಿದೆ, ಗೌತಮಿ, ಸ್ವರ್ಗದಲ್ಲಿದ್ದುಕೊಂಡು ನಮ್ಮ ಜೊತೆ ಇರುವುದು ಬಿಟ್ಟು ನರಕದಲ್ಲಿರುವವರ ಜೊತೆ ಹೆಚ್ಚು ಟೈಮ್‌ ಪಾಸ್‌ ಮಾಡುತ್ತಾರೆ ಎಂದು ಶ್ರೀನಿಧಿ ಹೇಳುತ್ತಾರೆ. ಇದು ಶಿಶಿರ್‌ಗೆ ಬೇಸರವಾಗುತ್ತದೆ. ಅವರು ನಮ್ಮೊಂದಿಗೆ ಮಾತನಾಡಿಸುವುದು ನಿಮಗೆ ಏನು ಸಮಸ್ಯೆ ಆಯ್ತು ಎಂದು ಪ್ರಶ್ನಿಸುತ್ತಾರೆ. ಹೀಗೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೆ ಏರುತ್ತದೆ.

ಮೊದಲ ವಾರ ಯಾರು ಮನೆಯಿಂದ ಹೊರ ಹೋಗಬಹುದು?

ಒಟ್ಟಿನಲ್ಲಿ ಮೊದಲ ವಾರ ಮನೆಯಿಂದ ಯಾರು ಹೊರ ಹೋಗಬಹುದು ಎಂಬುದನ್ನು ತಿಳಿಯಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನಂಜಯ್‌ ಆಚಾರ್‌, ಗೌತಮಿ ಜಾಧವ್‌, ಧರ್ಮ ಕೀರ್ತಿ ರಾಜ್‌, ಲಾಯರ್‌ ಜಗದೀಶ್‌, ತ್ರಿವಿಕ್ರಮ್‌, ಹಂಸಾ, ಐಶ್ವರ್ಯ, ಉಗ್ರಂ ಮಂಜು ಸ್ವರ್ಗದಲ್ಲಿದ್ದರೆ, ಅನುಷಾ ರೈ, ಶಿಶಿರ್‌ ಶಾಸ್ತ್ರಿ, ಮಾನಸಾ, ಗೋಲ್ಡ್‌ ಸುರೇಶ್‌, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ರಂಜಿತ್‌ ನರಕದಲ್ಲಿದ್ದಾರೆ.

mysore-dasara_Entry_Point