BBK 10: ಇದು ಬಿಗ್‌ ಬಾಸ್‌, ಎಲ್ಲರೂ ಹೇಗಿದ್ದೀರಿ; ಕಾರ್ಯಕ್ರಮದಲ್ಲಿ ನೀವು ಕೇಳಿರುವ, ಕೇಳುತ್ತಿರುವ ಧ್ವನಿ ಇವರದ್ದೇ
ಕನ್ನಡ ಸುದ್ದಿ  /  ಮನರಂಜನೆ  /  Bbk 10: ಇದು ಬಿಗ್‌ ಬಾಸ್‌, ಎಲ್ಲರೂ ಹೇಗಿದ್ದೀರಿ; ಕಾರ್ಯಕ್ರಮದಲ್ಲಿ ನೀವು ಕೇಳಿರುವ, ಕೇಳುತ್ತಿರುವ ಧ್ವನಿ ಇವರದ್ದೇ

BBK 10: ಇದು ಬಿಗ್‌ ಬಾಸ್‌, ಎಲ್ಲರೂ ಹೇಗಿದ್ದೀರಿ; ಕಾರ್ಯಕ್ರಮದಲ್ಲಿ ನೀವು ಕೇಳಿರುವ, ಕೇಳುತ್ತಿರುವ ಧ್ವನಿ ಇವರದ್ದೇ

Bigg Boss Kannada 10: ಇದು ಬಿಗ್‌ ಬಾಸ್‌, ಮನೆಯ ಮೊದಲ ನಾಮಿನೇಷನ್‌ ನಿನ್ನೆಯಷ್ಟೇ ಮುಗಿದಿದೆ. ಈಗ ಮನೆಯ ಮೊದಲ ಕ್ಯಾಪ್ಟನ್‌ ಆಯ್ಕೆಯ ಸಮಯ. ಹೀಗೆ ಬಿಗ್‌ ಬಾಸ್‌ ಮಾತನಾಡುತ್ತಿದ್ರೆ ಆ ಧ್ವನಿಯನ್ನು ಮತ್ತೆ ಮತ್ತೆ ಕೇಳಬೇಕು ಎನಿಸದೆ ಇರದು. ಪ್ರತಿಬಾರಿ ಬಿಗ್‌ ಬಾಸ್‌ ನೋಡುವವರಿಗೆ ಆ ಧ್ವನಿ ಯಾರದ್ದಾಗಿರಬಹುದು ಎಂಬ ಅನುಮಾನ ಕಾಡದೆ ಇರದು.

ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ಸೀಸನ್‌ 1,2 ಹಾಗೂ 3ನೇ ಸೀಸನ್‌ಗೆ ಧ್ವನಿ ನೀಡಿದ್ದ ಬಿಎಂ ವೆಂಕಟೇಶ್‌, ಅಮಿತ್‌ ಭಾರ್ಗವ್‌
ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ಸೀಸನ್‌ 1,2 ಹಾಗೂ 3ನೇ ಸೀಸನ್‌ಗೆ ಧ್ವನಿ ನೀಡಿದ್ದ ಬಿಎಂ ವೆಂಕಟೇಶ್‌, ಅಮಿತ್‌ ಭಾರ್ಗವ್‌ (PC: Instagram)

Bigg Boss Kannada 10: ಇದುವರೆಗೂ ಕನ್ನಡದಲ್ಲಿ 9 ಸೀಸನ್‌ಗಳು ಪ್ರಸಾರವಾಗಿದೆ. ಈಗ 10ನೇ ಸೀಸನ್‌ ನಡೆಯುತ್ತಿದೆ. ಮೊದಲ ಸೀಸನ್‌ನಿಂದ ಈ ಸೀಸನ್‌ವರೆಗೂ 3 ಮಂದಿ, ಬಿಗ್‌ ಬಾಸ್‌ ಆಗಿ ಕಾರ್ಯಕ್ರಮಕ್ಕೆ ದನಿ ನೀಡಿದ್ದಾರೆ. ಆದರೆ ಪ್ರತಿದಿನ ಎಲ್ಲರೂ ಇವರ ದನಿ ಕೇಳುತ್ತಿದ್ದರೇ ಹೊರತು ಇವರ ಬಗ್ಗೆ ಮಾಹಿತಿ ಇರಲಿಲ್ಲ. ವೀಕ್ಷಕರಿಗಾಗಿ ಬಿಗ್‌ ಬಾಸ್‌ ಹಿನ್ನೆಲೆ ಧ್ವನಿ ನೀಡಿದ್ದ, ನೀಡುತ್ತಿರುವ ಕಲಾವಿದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಅಮಿತ್‌ ಭಾರ್ಗವ್‌
ಅಮಿತ್‌ ಭಾರ್ಗವ್‌ (PC: Amith Bhargav Facebook)

ಅಮಿತ್‌ ಭಾರ್ಗವ್‌

ಅಮಿತ್‌ ಭಾರ್ಗವ್‌ ಬೆಂಗಳೂರಿನ ಪ್ರತಿಭೆ. ಹುಟ್ಟಿ ಬೆಳೆದದ್ದು ಸಿಲಿಕಾನ್‌ ಸಿಟಿಯಾದ್ರೂ ಕನ್ನಡಕ್ಕಿಂತ ಹೆಚ್ಚಾಗಿ ತಮಿಳಿನಲ್ಲಿ ಗುರುತಿಸಿಕೊಂಡಿದ್ದಾರೆ. ಅಮಿತ್‌ ಮೊದಲ ಬಾರಿಗೆ 2010ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ 'ಸೀತೆ' ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದರು. 2013ರಲ್ಲಿ ಈ ಟಿವಿಯಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 1 ಹಾಗೂ 2014 ರಲ್ಲಿ ಏಷ್ಯಾನೆಟ್‌ ಸುವರ್ಣದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 2 ಕ್ಕೆ ಅಮಿತ್‌ ಭಾರ್ಗವ್‌ ಬಿಗ್‌ ಬಾಸ್‌ ಆಗಿ ಧ್ವನಿ ನೀಡಿದ್ದರು.

ತಮಿಳಿನ ಅನೇಕ ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ಅಮಿತ್‌ ಭಾರ್ಗವ್‌ ನಟಿಸಿದ್ದಾರೆ. ಕಂಠದಾನ ಕಲಾವಿದರಾಗಿ ತಮಿಳು ಹೀರೋಗಳಿಗೆ ಧ್ವನಿ ನೀಡಿದ್ದಾರೆ. ಇತ್ತೀಚೆಗೆ ತೆರೆ ಕಂಡ ತಮಿಳಿನ 'ರಂಗೋಲಿ' ಸಿನಿಮಾದಲ್ಲಿ ಅಮಿತ್‌, ರಾವಣನ್‌ ಪಾತ್ರದಲ್ಲಿ ನಟಿಸಿದ್ದರು.

ಬಿಎಂ ವೆಂಕಟೇಶ್‌
ಬಿಎಂ ವೆಂಕಟೇಶ್‌ (PC: BM Venkatesh Instagram)

ಬಿಎಂ ವೆಂಕಟೇಶ್‌

2015ರಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 3ಕ್ಕೆ ಬಿಎಂ ವೆಂಕಟೇಶ್‌ ಬಿಗ್‌ ಬಾಸ್‌ ಆಗಿ ಧ್ವನಿ ನೀಡಿದ್ದರು. ವೆಂಕಟೇಶ್‌ ಅವರನ್ನು ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನೋಡಿದ್ದೇವೆ. ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ವೆಂಕಟೇಶ್‌ ಝೇಂಡೆ ಪಾತ್ರದಲ್ಲಿ ನಟಿಸಿದ್ದರು. ವೆಂಕಟೇಶ್‌ ಡಡ್ಬಿಂಗ್‌ ಕಲಾವಿದರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

ಬಡೆಕ್ಕೆಲ ಪ್ರದೀಪ್‌
ಬಡೆಕ್ಕೆಲ ಪ್ರದೀಪ್‌ (PC: Badekkela Pradeep Instagram)

ಬಡೆಕ್ಕೆಲ ಪ್ರದೀಪ್‌

ವೀಕ್ಷಕರಿಗೆ ಬಡೆಕ್ಕೆಲ ಪ್ರದೀಪ್‌ ಧ್ವನಿ ಹಾಗೂ ಮುಖ ಪರಿಚಯವಿದೆ. ಪ್ರದೀಪ್‌ ಪುತ್ತೂರಿಗೆ ಸೇರಿದವರು. ನಟನಾಗಿ, ಮಾಡೆಲ್‌ ಹಾಗೂ ಕಂಠದಾನ ಕಲಾವಿದನಾಗಿ ಪ್ರದೀಪ್‌ ಗುರುತಿಸಿಕೊಂಡಿದ್ದಾರೆ. ಟಿವಿ 9 ವಾಹಿನಿಯಲ್ಲಿ ವಾರ್ತಾ ವಾಚಕರಾಗಿ ಕರಿಯರ್‌ ಆರಂಭಿಸಿದ್ದ ಪ್ರದೀಪ್‌, ನಂತರ ತಮಿಳು, ಕನ್ನಡ ಧಾರಾವಾಹಿಗಳಲ್ಲಿ ನಟನೆ ಆರಂಭಿಸಿದರು. ಬೆಂಗಳೂರು ಮೆಟ್ರೋದಲ್ಲಿ ಕೂಡಾ ಪ್ರದೀಪ್‌ ಅವರ ಧ್ವನಿಯನ್ನು ಕೇಳಬಹುದು. ಪ್ರದೀಪ್‌ ಬಿಗ್‌ ಬಾಸ್‌ ಶೋಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ, ಆದರೆ ಬಿಗ್‌ ಬಾಸ್‌ ಆಗಿ ಅಲ್ಲ. ಬಿಗ್‌ ಬಾಸ್‌ ಶೋನಲ್ಲಿ ನೀವು ಕೇಳುವ ಸಮಯದ ಧ್ವನಿ ಪ್ರದೀಪ್‌ ಅವರದ್ದೇ. ಅಂತ್ಯದಲ್ಲಿ ವೈಂಡ್‌ ಅಪ್‌ ಮಾಡುವುದು ಕೂಡಾ ಪ್ರದೀಪ್‌ ಅವರ ಧ್ವನಿ ಮೂಲಕವೇ.

ಶ್ರೀನಿವಾಸ್‌ ಪ್ರಸಾದ್‌

2016ರಲ್ಲಿ ಆರಂಭವಾದ ಸೀಸನ್‌ 4 ರಿಂದ ಇದುವರೆಗೂ ಬಿಗ್‌ ಬಾಸ್‌ ಆಗಿ ಧ್ವನಿ ನೀಡುತ್ತಿರುವುದು ಶ್ರೀನಿವಾಸ್‌ ಪ್ರಸಾದ್.‌ ಇವರು ಕೂಡಾ ಡಬ್ಬಿಂಗ್‌ ಆರ್ಟಿಸ್ಟ್.‌ ಅನೇಕ ಕಾರ್ಯಕ್ರಮಗಳಿಗೆ ಇವರು ಧ್ವನಿ ನೀಡಿದ್ದಾರೆ. ಆದರೆ ವಾಹಿನಿ ಇದುವರೆಗೂ ಇವರ ಮುಖ ಪರಿಚಯ ರಿವೀಲ್‌ ಮಾಡಿಲ್ಲ.

Whats_app_banner