Tanisha Kuppanda: ನವಿಲಿನಂತೆ ನಲಿದ ಬೆಂಕಿ ತನಿಷಾ ಕುಪ್ಪಂಡ; ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ VIDEO
- Tanisha Kuppanda Latest Photos: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಟ್ರಾಂಗ್ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಏರಿಸಿದ್ದಾರೆ. ನವಿಲಿನ ಕಾನ್ಸೆಪ್ಟ್‌ನಲ್ಲಿ ಹಾಟ್ ಫೋಟೋಗಳ ಮೂಲಕ ಆಗಮಿಸಿದ್ದಾರೆ. ನಟಿಯ ಈ ಫೋಟೋಗಳಿಗೆ ಮೆಚ್ಚುಗೆ ಜತೆಗೆ ಕಟು ಟೀಕೆಗಳೂ ಕೇಳಿಬಂದಿವೆ. ಬಾಡಿ ಶೇಮಿಂಗ್ ಮೂಲಕ ಅಪಹಾಸ್ಯ ಮಾಡಿದ್ದಾರೆ ನೆಟ್ಟಿಗರು. ನವಿಲಿನ ಕಾನ್ಸೆಪ್ಟ್‌ನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ಕೊಂಚ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗಿವೆ. ಮೆಚ್ಚುಗೆ ಜತೆಗೆ ನೆಗೆಟಿವ್ ಕಾಮೆಂಟ್‌ಗಳೂ ಹರಿದು ಬಂದಿವೆ. ಕೆಲವರು ಸೂಪರ್ ಎಂದು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದಾರೆ. ನಟಿಯ ಫೋಟೋಗಳನ್ನು ನೋಡಿದ ನೆಟ್ಟಿಗರು ಬಾಡಿ ಶೇಮಿಂಗ್ ಮಾಡಿದ್ದಾರೆ. ಅಪಹಾಸ್ಯದ ಕಾಮೆಂಟ್‌ಗಳ ಮೂಲಕ ನಟಿಯನ್ನು ಟೀಕೆ ಮಾಡಿ ಕಾಲೆಳೆದಿದ್ದಾರೆ. ನಗು ಮುಖದ ಚೆಲುವೆ, ನಮ್ಮ ಬೆಂಕಿ ತನಿಷಾ ಎಂದು ಕೆಲವರು ಹೇಳಿದರೆ, ಮೇಕಪ್ ಮತ್ತು ಮೈ ತೋರಿಸುವುದು ಕಡಿಮೆ ಆದರೆ ಚೆಂದ ಅನ್ಸುತ್ತೆ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.