ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತಿನೋ ಅನಿಸ್ತಿತ್ತು; ಬಿಗ್‌ಬಾಸ್‌ ನೀತು ವನಜಾಕ್ಷಿ
ಕನ್ನಡ ಸುದ್ದಿ  /  ಮನರಂಜನೆ  /  ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತಿನೋ ಅನಿಸ್ತಿತ್ತು; ಬಿಗ್‌ಬಾಸ್‌ ನೀತು ವನಜಾಕ್ಷಿ

ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತಿನೋ ಅನಿಸ್ತಿತ್ತು; ಬಿಗ್‌ಬಾಸ್‌ ನೀತು ವನಜಾಕ್ಷಿ

ಬಿಗ್‌ ಬಾಸ್‌ ಖ್ಯಾತಿಯ ನೀತು ವನಜಾಕ್ಷಿ ಟ್ರಾನ್ಸ್‌ವುಮೆನ್‌ ಆಗಿ ಬದಲಾಗಿದ್ದಾರೆ. ದೈಹಿಕವಾಗಿ ಆ ಬದಲಾವಣೆ ಅವರಲ್ಲಿ ಯಾವಾಗಿನಿಂದ ಶುರುವಾಯ್ತು, ಮನೆಯವರ ಮನವೊಲಿಸಿದ್ದು ಹೇಗೆ? ಕೊನೆಗೆ ಹೆಣ್ಣಾಗಿ ಬದಲಾಗಲು ಎಷ್ಟು ಖರ್ಚಾಯ್ತು? ಎಂಬ ವಿವರನ್ನು ಸ್ವತಃ ನೀತು ಸಂದರ್ಶನದಲ್ಲಿ ವಿವರಿಸಿದ್ದಾರೆ.

ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತೀನೋ ಅನಿಸ್ತಿತ್ತು; ಬಿಗ್‌ಬಾಸ್‌ ನೀತು ವನಜಾಕ್ಷಿ
ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತೀನೋ ಅನಿಸ್ತಿತ್ತು; ಬಿಗ್‌ಬಾಸ್‌ ನೀತು ವನಜಾಕ್ಷಿ

Neetu Vajanakshi: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮೂಲಕ ನಾಡಿನ ತುಂಬೆಲ್ಲ ಖ್ಯಾತಿ ಪಡೆದವರು ತೃತೀಯ ಲಿಂಗಿ ನೀತು ವನಜಾಕ್ಷಿ. ಟ್ಯಾಟೂ ಕಲಾವಿದೆಯಾಗಿ ತಮ್ಮದೇ ಸ್ವಂತ ಉದ್ಯಮ ನಡೆಸುತ್ತಿದ್ದಾರೆ ನೀತು. ಒಂದಷ್ಟು ಜನಕ್ಕೆ ಕೆಲಸವನ್ನೂ ನೀಡಿ, ಹೆಮ್ಮೆ ಮತ್ತು ಅಷ್ಟೇ ಗರ್ವದಿಂದ ಜೀವನ ಸಾಗಿಸುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣು ಗಂಡು ಹೇಗೆ ಸಮಾನರೋ, ನಮ್ಮ ಸಮುದಾಯವನ್ನೂ ಅದೇ ರೀತಿ ಎಲ್ಲರೂ ಸಮನಾಗಿಯೇ ನೋಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಬಿಗ್‌ಬಾಸ್‌ಗೆ ತೆರಳಿದ್ದರು ನೀತು ವನಜಾಕ್ಷಿ.

ಬಿಗ್‌ ಬಾಸ್‌ ಮನೆಯಲ್ಲಿದ್ದಷ್ಟು ದಿನ ಎಲ್ಲರಿಗೂ ಪ್ರಿಯರಾಗಿ, ಆಪ್ತರಾಗಿ ಒಂದಷ್ಟು ದಿನಗಳ ಕಾಲ ಸ್ಪರ್ಧೆ ನೀಡಿ ಎಲಿಮಿನೇಟ್‌ ಆಗಿದ್ದರು. ಈಗ ಇದೇ ನೀತು ತಮ್ಮ ಜೀವನದ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಮೂಲತಃ ಗದಗದವರಾದ ನೀತು ಮೂಲ ಹೆಸರು ಮಂಜುನಾಥ್.‌ ಏಳನೇ ತರಗತಿ ಓದುತ್ತಿರುವಾಗಲೇ ತಮ್ಮಲ್ಲಾದ ಒಂದಷ್ಟು ಬದಲಾವಣೆಗಳನ್ನು ಅರಿತು, ಹೆಣ್ಣಾಗುವ ನಿರ್ಧಾರ ಮಾಡಿದ್ದರು. ಈ ವಿಚಾರವನ್ನು ಅಮ್ಮನ ಬಳಿಯೂ ಹೇಳಿಕೊಂಡಿದ್ದರು. ಮಗನ ಈ ನಿರ್ಧಾರಕ್ಕೆ ಅಮ್ಮನಿಂದಲೂ ಒಪ್ಪಿಗೆ ಸಿಕ್ಕಿತ್ತು.

ಹೀಗೆ ಮುಂದುವರಿದ ನೀತು ಅವರ ಪಯಣ ಬೇರೆಯದೇ ಹಾದಿ ಹಿಡಿದಿತ್ತು. ತೃತೀಯ ಲಿಂಗಿಯಾಗಿ ಬದಲಾಗಿ, 2019ರಲ್ಲಿ ಸೂಪರ್‌ ಕ್ವೀನ್‌ ಮಿಸ್‌ ಟ್ರಾನ್ಸ್‌ಕ್ವೀನ್‌ ಪಟ್ಟವನ್ನೂ ಪಡೆದಿದ್ದರು. 2020ರಲ್ಲಿ ಮಿಸ್‌ ಇಂಟರ್‌ನ್ಯಾಶನಲ್‌ ಕ್ವೀನ್‌ ಕಿರೀಟ ಮುಡಿಗೇರಿಸಿಕೊಂಡು, ಭಾರತದ ಮೊದಲ ಟ್ರಾನ್ಸ್‌ ಟ್ಯಾಟೂ ಆರ್ಟಿಸ್ಟ್‌ ಆಗಿಯೂ ಗುರುತಿಸಿಕೊಂಡು, ಮೊದಲ ಸಲ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಯಾಗಿದ್ದರು. ಹೀಗೆ ಒಂದಷ್ಟು ರೋಚಕ ಜರ್ನಿ ಹೊಂದಿರುವ ನೀತು ವನಜಾಕ್ಷಿ, ಗಂಡು ಹೆಣ್ಣಾಗುವ ಪ್ರಕ್ರಿಯೆ ಹೇಗಿತ್ತು ಎಂಬುದನ್ನು ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ನನ್ನ ಖಾಸಗಿ ನೋಡಲು ಮುಜುಗರ ಆಗ್ತಿತ್ತು..

"ಏನೇ ಆಗಲಿ ನಾನು ಹೆಣ್ಣು ಆಗಲೇ ಬೇಕು ಎಂದು ನಿರ್ಧರಿಸಿದ್ದೆ. ನಾನು ಅವನಲ್ಲ ಅವಳು ಸಿನಿಮಾ ನನಗೆ ತುಂಬ ಸ್ಫೂರ್ತಿ ನೀಡಿತು. ಅಮ್ಮನಿಗೂ ತೋರಿಸಿದೆ. ಅವರನ್ನೂ ಮನವೊಲಿಸಿದೆ. ಅವರಿಂದಲೂ ಒಪ್ಪಿಗೆ ಸಿಕ್ತು. ವೈದ್ಯರ ಬಳಿ ಹೆಣ್ಣಾಗುವ ಪ್ರೊಸೆಸ್‌ ಆಗುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ. ಹಾರ್ಮೋನ್ಸ್‌ ತೆಗೆದುಕೊಳ್ಳುತ್ತಿದ್ದೆ. ಅದರಿಂದ ತುಂಬ ಸಮಸ್ಯೆ ಎದುರಿಸುತ್ತಿದ್ದೆ. ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ನನಗೇ ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತೀನೋ ಅನಿಸ್ತಿತ್ತು. ಹೇಳಿಕೊಳ್ಳಲಾಗದ ನೋವು ಅನುಭವಿಸಿ, ಈಗ ಗೆದ್ದ ಖುಷಿಯಲ್ಲಿದ್ದೇನೆ" ಎಂದಿದ್ದಾರೆ ನೀತು ವನಜಾಕ್ಷಿ.

ಹೇಗಿತ್ತು ಶಸ್ತ್ರ ಚಿಕಿತ್ಸೆ ಪ್ರೊಸೆಸ್

"ಮೊದಲಿಗೆ ದೆಹಲಿಗೆ ಹೋದೆ. ವೈದ್ಯರು ಕೌನ್ಸಲಿಂಗ್‌ ಮಾಡಿದ್ರು. ಫಾರ್ಮ್‌ ಫಿಲ್‌ ಮಾಡಬೇಕು. ಸತ್ತೋದರೆ ನಾವು ಹೊಣೆಯಲ್ಲ ಎಂದು ನಮ್ಮ ಬಳಿ ಸಹಿ ಮಾಡಿಸಿಕೊಂಡರು. ಸರ್ಜರಿ ವೇಳೆ ಏನೇ ಹೆಚ್ಚು ಕಡಿಮೆ ಆದರೂ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಅಗ್ರಿಮೆಂಟ್‌ನಲ್ಲಿ ಬರೆಸಿಕೊಳ್ಳುತ್ತಾರೆ. ಸಹಿ ಮಾಡುವಾಗ ಕಣ್ಣಲ್ಲಿ ನೀರು ತುಂಬಿತ್ತು. ಅದು ದುಃಖದ ಕಣ್ಣೀರಲ್ಲ. ಸಂತೋಷದ ಕಣ್ಣೀರು. ಅಷ್ಟೊಂದು ಖುಷಿಯಾಗ್ತಿತ್ತು. ಹೇಳಿದ್ರೆ ಫನ್ನಿ ಅನಿಸುತ್ತೆ. ಯಾವಾಗ ಹೆಣ್ಣಾಗ್ತಿನೋ ಅನ್ನೋ ಫೀಲ್‌ ಇತ್ತು. ಅಷ್ಟೇ ಖುಷಿಯಲ್ಲಿ ಸಹಿ ಮಾಡಿದ್ದೆ" ‌

ಹೆಣ್ಣಾಗಲು 10 ಲಕ್ಷ ಖರ್ಚಾಯ್ತು

"ಬಂದ ತಕ್ಷಣ ಮಲಗಿರುತ್ತೇವೆ. ಅದೇನೋ ಒಂದು ನಿರಾಳತೆ ಮೂಡಿರುತ್ತೆ. ಇದು ಐದು ಗಂಟೆಯ ಸರ್ಜರಿ. ಇದಕ್ಕೆ ಸಿಗ್ಮಾ ಸರ್ಜರಿ ಅಂತಾರೆ. ದಿನಕ್ಕೆ ಒಂದೇ ಸರ್ಜರಿ ಆಗುತ್ತೆ. ತುಂಬ ಅಡ್ವಾನ್ಸ್‌ ಟೆಕ್ನಾಲಜಿ ಇದೆ. ಅನೇಸ್ತೆಷಿಯಾ ಕಡಿಮೆ ಆದಂಗೆ ನೋವು ಜಾಸ್ತಿ ಆಗುತ್ತ ಹೋಗುತ್ತದೆ. ಡಾಕ್ಟರ್‌ ಬಂದು ಆಪರೇಷನ್‌ ಆದ ಭಾಗಕ್ಕೆ ಡ್ರೆಸ್ಸಿಂಗ್‌ ಮಾಡುವಾಗ ಜೀವ ಹೋದ ಹಾಗೆ ಆಗುತ್ತೆ. ಆದರೂ ಆ ನೋವಲ್ಲೂ ಒಂದು ಖುಷಿ ಸಿಗುತ್ತಿರುತ್ತದೆ. ಎಲ್ಲ ಟಾನ್ಸ್‌ಗಳಿಗೂ ಇದೇ ಫೀಲ್‌ ಆಗುತ್ತದೆ. ಒಂದು ರೀತಿ ನಮಗಿದು ಮರುಹುಟ್ಟು ಇದ್ದಂತೆ. ನಾವಾಗಿಯೇ ಪಡೆದುಕೊಂಡ ಜನ್ಮ ಇದು. ಈ ಸರ್ಜರಿಗಾಗಿ 10 ಲಕ್ಷ ಖರ್ಚಾಯಿತು" ಎಂದಿದ್ದಾರೆ.

"ಸರ್ಜರಿ ಯಾವಾಗ ಪಾಸ್‌ ಆಯ್ತೋ ಆ ಕ್ಷಣವೇ ನಾನು ಗೆದ್ದೆ. ಟ್ರಾನ್ಸ್‌ಜೆಂಡರ್‌ಗೆ ಸಮಾಜದಲ್ಲಿ ಒಂದು ಸಿಂಪತಿ ಇದೆ. ಅದನ್ನೇಕೆ ಬೇರೆ ರೀತಿ ಬಳಸಿಕೊಳ್ಳಬಾರದು? ಎಂದು ನನಗೆ ವಿಚಾರ ಬಂತು. ಅದೇ ರೀತಿ ನಾನು ನನ್ನದೇ ಆದ ಉದ್ಯಮ ಶುರು ಮಾಡಿದ್ದೇನೆ. ಅದರಲ್ಲಿಯೇ ಖುಷಿ ಕಾಣುತ್ತಿದ್ದೇನೆ" ಎಂದಿದ್ದಾರೆ ನೀತು ವನಜಾಕ್ಷಿ.

Whats_app_banner