ಕನ್ನಡ ಸುದ್ದಿ  /  Entertainment  /  Kannada Television News Bigg Boss Kannada Season 10 Finalist Tukali Star Santhosh Bought A New Car Mnk

ಬಿಗ್‌ಬಾಸ್‌ ಸ್ಪರ್ಧಿ ತುಕಾಲಿ ಸಂತೋಷನ ಗೋಲ್ಡನ್‌ ಟೈಮ್‌ ಶುರು; ಚಿನ್ನದ ಚೈನ್‌ ಬಳಿಕ, ಮನೆಗೆ ಬಂತು ಹೊಸ ಕಾಸ್ಟ್ಲೀ ಕಾರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ನಗು ಉಕ್ಕಿಸುವ ಕೆಲಸ ಮಾಡುತ್ತಲೇ ಫಿನಾಲೆ ಹಂತದ ವರೆಗೂ ಬಂದಿದ್ದರು ತುಕಾಲಿ ಸಂತೋಷ್.‌ ಇದೀಗ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಅದೇ ನಗಿಸುವ ಕಾಯಕ ಮುಂದುವರಿಸಿದ್ದಾರೆ. ಗ್ಯಾಪ್‌ನಲ್ಲೇ ಹೊಸ ಕಾರ್‌ ಖರೀದಿಸಿ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

ಬಿಗ್‌ಬಾಸ್‌ ಸ್ಪರ್ಧಿ ತುಕಾಲಿ ಸಂತೋಷನ ಗೋಲ್ಡನ್‌ ಟೈಮ್‌ ಶುರು; ಚಿನ್ನದ ಚೈನ್‌ ಬಳಿಕ, ಮನೆಗೆ ಬಂತು ಹೊಸ ಕಾಸ್ಟ್ಲೀ ಕಾರು
ಬಿಗ್‌ಬಾಸ್‌ ಸ್ಪರ್ಧಿ ತುಕಾಲಿ ಸಂತೋಷನ ಗೋಲ್ಡನ್‌ ಟೈಮ್‌ ಶುರು; ಚಿನ್ನದ ಚೈನ್‌ ಬಳಿಕ, ಮನೆಗೆ ಬಂತು ಹೊಸ ಕಾಸ್ಟ್ಲೀ ಕಾರು

Tukali santhosh New Car: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ತುಕಾಲಿ ಸಂತೋಷ್‌ ಅವರೀಗ ಬ್ಯಾಕ್‌ ಟು ಬ್ಯಾಕ್‌ ಸುದ್ದಿಯ ಜತೆಗೆ ಸದ್ದು ಮಾಡುತ್ತಿದ್ದಾರೆ. ಬಿಗ್‌ ಬಾಸ್‌ನಲ್ಲಿ ತಮ್ಮ ಕಾಮಿಡಿಯ ಮೂಲಕವೇ ಫಿನಾಲೆ ತಲುಪಿದ್ದ ಸಂತೋಷ್‌, ಹೊರ ಬಂದ ಬಳಿಕ ಸಾಕಷ್ಟು ನೇಮು ಫೇಮು ಸಹ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಚಿನ್ನದ ಲಾಕೆಟ್‌ ಮತ್ತು ಬಂಗಾರದ ಸರವೂ ಕೊರಳಿಗೇರಿದೆ. ಈಗ ಹೊಸ ಕಾರ್‌ ಆಗಮನವಾಗಿದೆ.

ಎಲ್ಲರಿಗೂ ಗೊತ್ತಿರುವಂತೆ, ತುಕಾಲಿ ಸಂತೋಷ್‌ ಕಡು ಬಡತನದಿಂದಲೇ ತಮ್ಮ ಪ್ರತಿಭೆಯ ಮೂಲಕವೇ ಈ ಹಂತಕ್ಕೆ ಬಂದಿದ್ದಾರೆ. ಎಲ್ಲರನ್ನೂ ನಗಿಸುತ್ತಲೇ, ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡು, ನಾಡಿನ ಜನರ ಮನಗೆದ್ದಿದ್ದಾರೆ. ಈಗ ತಮ್ಮ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ ತುಕಾಲಿ ಸಂತೋಷ್ ಮತ್ತು ಮಾನಸಾ ಸಂತೋಷ್‌. ಈ ಜೋಡಿಯ ಖುಷಿಗೆ ನೆಟ್ಟಿಗ ವಲಯದಿಂದಲೂ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. 

ಮನೆಗೆ ಬಂತು ಕಾಸ್ಲ್ಟೀ ಕಾರು

ತುಕಾಲಿ ಸಂತೋಷ್‌ ಕಾಮಿಡಿಯಿಂದ ಎಲ್ಲರನ್ನೂ ನಗಿಸುತ್ತಲೇ ಬಂದಿದ್ದಾರೆ. ಹಾಗೇ ನಗಿಸುವ ಅವರ ಹಿಂದೆ ಕಾಣದ ಎಷ್ಟೋ ನೋವುಗಳಿವೆ. ಆ ವಿಚಾರಗಳನ್ನು ಬಿಗ್‌ ಬಾಸ್‌ ಮನೆಯಲ್ಲಿದ್ದಾ ಹೇಳಿಕೊಳ್ಳುತ್ತಲೇ ಬರುತ್ತಿದ್ದರು ಸಂತೋಷ್.‌ ಪತ್ನಿ ಮಾನಸಾಗೆ ಹೊರಗಡೆ ಕರೆದುಕೊಂಡು ಹೋಗಿ ಒಂದೊಳ್ಳೆ ಊಟ ಕೊಡಿಸಿಲ್ಲ ಎಂದಿದ್ದರು. ಇದೀಗ ಅವರ ಗೋಲ್ಡನ್‌ ಟೈಮ್‌ ಶುರುವಾಗಿದೆ. ಕನಸೊಂದು ನೆರವೇರಿದೆ. ಟಾಪ್‌ ಎಂಡ್‌ ಮಾಡೆಲ್‌ ಕಿಯಾ ಕಂಪನಿಯ ಕಾರನ್ನು ಖರೀದಿಸಿದ್ದಾರೆ.

ಚಿನ್ನದ ಸರ, ಚಿನ್ನದ ಪೆಂಡೆಂಟ್‌ ಗಿಫ್ಟ್‌

ಬಿಗ್‌ಬಾಸ್‌ ಮನೆಯಲ್ಲಿದ್ದಷ್ಟು ದಿನ ವರ್ತೂರು ಸಂತೋಷ್‌ ಮತ್ತು ವರ್ತೂರು ಸಂತೋಷ್‌ ತುಂಬ ಆತ್ಮೀಯರಾಗಿದ್ದರು. ಬಿಗ್‌ ಬಾಸ್‌ ಶೋ ಮುಗಿದ ಬಳಿಕವೂ ಅದು ಮುಂದುವರಿದಿತ್ತು. ಅದರಂತೆ, ಪ್ರೀತಿಯ ಗೆಳೆಯನಿಗೆ ಉಡುಗೊರೆ ರೂಪದಲ್ಲಿ ಚಿನ್ನದ ಪೆಂಡೆಂಟ್‌ ಸಹ ಗಿಫ್ಟ್‌ ನೀಡಿದ್ದರು ವರ್ತೂರು ಸಂತೋಷ್‌. ಅದರಲ್ಲಿ ಸಂತೂ ಪಂತು ಎಂದು ಬರೆಯಲಾಗಿತ್ತು. ಅದಾದ ಮೇಲೆ ನಿರ್ಮಾಪಕರೊಬ್ಬರಿಂದ ಚಿನ್ನಸರವೂ ಸಿಕ್ಕಿತ್ತು. ಇದೇ ವಿಚಾರವನ್ನು ಗಿಚ್ಚಿ ಗಿಲಿಗಿಲಿ ಶೋನಲ್ಲಿ ಅಣಕ ಮಾಡಿದ್ದರು ತುಕಾಲಿ ಅವರ ಪತ್ನಿ ಮಾನಸಾ.

ಸಂತೂ ಒಂದು ರೀತಿ ಹೈಟೆಕ್‌ ಭಿಕ್ಷುಕ ಎಂದು ಪತಿಯ ಕಾಲೆಳೆದರು ಮಾನಸಾ. ಮುಂದುವರಿದು, "ಎಲ್ಲರೂ ಒಂದು ರೂಪಾಯಿ, ಎರಡು ರೂಪಾಯಿ ಕೇಳಿದರೆ, ಅವನು ಚಿನ್ನ ಬೆಳ್ಳಿ ಕೇಳ್ತಾನೆ. ಚಿನ್ನದ ಸರ ಪ್ರಡ್ಯೂಸರ್‌ ಕೊಟ್ಟವ್ರೇ, ಅದರಲ್ಲಿರುವ ಡಾಲರ್‌ ವರ್ತೂರ್‌ ಸಂತೋಷಣ್ಣ ಕೊಟ್ಟವ್ರೇ. ಉಂಗುರವನ್ನೂ ಒಬ್ಬರು ಕೊಟ್ಟವ್ರೇ. ಅದನ್ನ ಬಿಚ್ಚಿಟ್ಟು ಬಂದವ್ರೇ. ಹಾಗಾಗಿ ಸಂತೂ ಒಂದು ರೀತಿ ಹೈಟೆಕ್‌ ಭಿಕ್ಷುಕ" ಎಂದು ಕಾಲೆಳೆದಿದ್ದರು ಮಾನಸಾ.

ಮಾತಿನಲ್ಲೇ ಮನೆಯ ಕಟ್ಟುವ ಮಲ್ಲ

ತುಕಾಲಿ ಸಂತೋಷ್ ಅವರು ಮೈಕಟ್ಟಿನಲ್ಲಂತೂ ‘ಮಲ್ಲ’ನಲ್ಲ. ಆದರೆ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೆಯೇ ಮಾತಲ್ಲೇ ಮಹಡಿ ಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲವು ದಿನಗಳಲ್ಲಿಯೇ ಮನೆಮಂದಿಗೆಲ್ಲ ಪರಿಚಯವಾಗಿತ್ತು. ‘ನನ್ನ ತಾಯಿ ಗರ್ಭಿಣಿಯಾಗಿದ್ದಾಗ, ನಿನ್ನ ಹೊಟ್ಟೆಯಲ್ಲಿ ಮಹಾತ್ಮ ಹುಟ್ತಾನೆ ಅಂತ ಹೇಳಿದ್ರಂತೆ ದೊಡ್ಡವರೊಬ್ಬರು. ನಾನು ಹುಟ್ಟುವಾಗ ಗುಡುಗು ಸಿಡಿಲು ಎಲ್ಲ ಇತ್ತು. ಮಳೆ ಬರ್ತಿತ್ತು. ಆಗ ನಾನು ಹುಟ್ಟಿದೆ…’ ಎಂದು ತಮ್ಮ ಜನ್ಮವೃತ್ತಾಂತವನ್ನು ಈ ಹಿಂದೆ ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಹೇಳಿಕೊಂಡಿದ್ದರು ತುಕಾಲಿ ಸಂತೋಷ್. ಅವರ ಮಾತು ಕೇಳುತ್ತಿದ್ದ ಮನೆಯವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು.

IPL_Entry_Point