BBK 10: ಬಿಗ್ ಬಾಸ್ ಫಿನಾಲೆ ಅಂಚಿನಿಂದ ನಮ್ರತಾ ಗೌಡ ಎಲಿಮಿನೇಟ್! ಹಿನ್ನಡೆಗೆ ಅಡ್ಡಿಯಾದ್ವಾ ಈ ಕಾರಣಗಳು?
ಆರಂಭದಿಂದಲೂ ನಮ್ರತಾ ಗೌಡ ತಾವೇನು ಎಂಬುದನ್ನು ತೋರಿಸುವಲ್ಲಿಯೇ ವಿಫಲರಾದರು. ವಿನಯ್ ಗೌಡ, ಸ್ನೇಹಿತ್, ಮೈಕಲ್ ಅವರ ನೆರಳಿನಲ್ಲಿಯೇ ಸೇಫ್ ಗೇಮ್ ಆಟದಲ್ಲಿದ್ದರು. ಆ ಕಾರಣಕ್ಕೋ ಏನೋ ಅವರೊಳಗಿನ ಸ್ಪರ್ಧಿ ಎಲ್ಲಿಯೂ ಕಾಣಲಿಲ್ಲ.
Bigg Boss Kannada Season 10 Week 15 Elimination:: ನಾಗಿಣಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ನಮ್ರತಾ ಗೌಡ, ಬಿಗ್ ಬಾಸ್ ಕನ್ನಡದ ಸೀಸನ್ 10ರ ಫಿನಾಲೆ ಅಂಚಿನಿಂದ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ. 15ನೇ ವಾರದ ಕಿಚ್ಚನ ಕೊನೆಯ ಪಂಚಾಯ್ತಿಯಲ್ಲಿ ಕೊನೆಗೆ ಉಳಿದವರಲ್ಲಿ ಕಾರ್ತಿಕ್ ಮತ್ತು ನಮ್ರತಾ ಮಾತ್ರ. ಈ ಇಬ್ಬರಲ್ಲಿ ನಮ್ರತಾ ಅವರ ಆಟ ಇಲ್ಲಿಗೆ ಮುಗಿದಿದೆ ಎಂದು ಅವರನ್ನು ವೇದಿಕೆಗೆ ಕರೆದಿದ್ದಾರೆ ಸುದೀಪ್. ಈ ಮೂಲಕ ಕಡೆಯ ಹಂತದಲ್ಲಿ ಫಿನಾಲೆ ವೇದಿಕೆ ಮಿಸ್ ಮಾಡಿಕೊಂಡಿದ್ದಾರೆ.
ಫಿನಾಲೆಗೆ ಐವರಲ್ಲ ಆರು ಸ್ಪರ್ಧಿಗಳು
ಈ ಮೊದಲು ಹೇಳಿದಂತೆ, ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಒಟ್ಟು ಐವರು ಇರಲಿದ್ದಾರೆ ಎನ್ನಲಾಗಿತ್ತು. ಆದರೆ, ಭಾನುವಾರದ ಏಪಿಸೋಡ್‌ನಲ್ಲಿ ಐವರ ಬದಲು ಆರು ಜನ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿರಲಿದ್ದಾರೆ ಎಂಬ ವಿಚಾರವನ್ನು ತಿಳಿಸಿದ ಸುದೀಪ್, ಆರನೇ ಸ್ಪರ್ಧಿಯಾಗಿ ಕಾರ್ತಿಕ್ ಅವರನ್ನು ಉಳಿಸಿಕೊಂಡು, ನಮ್ರತಾ ಎಲಿಮಿನೇಟ್ ಆದರು. ಸದ್ಯ ಆ ಆರು ಜನ ಯಾರೆಂದರೆ, ಈಗಾಗಲೇ ಸಂಗೀತಾ ಫಿನಾಲೆ ತಲುಪಿದ ಮೊದಲ ಸ್ಪರ್ಧಿ. ನಾಮಿನೇಷನ್ ಆಗದೇ ಉಳಿದಿದ್ದ ತುಕಾಲಿ ಸಂತೋಷ್ ಸಹ ಫಿನಾಲೆ ತಲುಪಿದ್ದರು.
ಇತ್ತ ವರ್ತೂರು ಸಂತೋಷ್ ಮೂರನೇ ಸ್ಪರ್ಧಿಯಾಗಿ ಫಿನಾಲೆ ತಲುಪಿದರೆ, ವಿನಯ್ ಗೌಡ, ಡ್ರೋಣ್ ಪ್ರತಾಪ್ ಸಹ ಫಿನಾಲೆ ವೇದಿಕೆ ಹತ್ತಲು ವೋಟಿಂಗ್ ಆಧಾರದ ಮೇಲೆ ಸೇಫ್ ಆದರು. ಇತ್ತ ನಮ್ರತಾ ಗೌಡ ಮಾತ್ರ ಕಡಿಮೆ ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಎಲಿಮಿನೇಟ್ ಆಗಿ, ಬೇಸರದಲ್ಲಿಯೇ ಕಣ್ಣೀರಾಗುತ್ತ ಹೊರ ನಡೆದರು. ಕೊನೆಯದಾಗಿ ಹೊರಡುವ ಮುನ್ನ, ನೀವು ಈ ಹಂತದಲಿ ಇರೋದಕ್ಕೆ ಅರ್ಹತೆ ಪಡೆದಿದ್ದೀರಿ. ಎಲ್ಲರೂ ನಿಮ್ಮ ಆಟ ಆಡುತ್ತ, ಕಷ್ಟ ಪಟ್ಟೇ ಇಲ್ಲಿಯವರೆಗೂ ಬಂದಿದ್ದೀರಾ. ಹೆಚ್ಚೇನಿಲ್ಲ ಇನ್ನೊಂದು ವಾರದಲ್ಲಿ ನಿಮ್ಮನ್ನೆಲ್ಲ ಭೇಟಿ ಮಾಡ್ತಿನಿ. ಬೇಗ ಮತ್ತೆ ಸಿಗ್ತಿನಿ, ನಿಜಕ್ಕೂ ನೀವೆಲ್ಲರೂ ತುಂಬಾ ಅದೃಷ್ಟವಂತರು. ಎಂದು ಬಿಗ್ ಬಾಸ್ ವೇದಿಕೆಗೆ ನಮಿಸಿ ಹೊರನಡೆದರು ನಮ್ರತಾ.
ನಮ್ರತಾ ಎಲಿಮಿನೇಟ್‌ಗೆ ಇವೇ ಕಾರಣಗಳಿರಬಹುದಾ?
ಆರಂಭದಿಂದಲೂ ನಮ್ರತಾ ತಾವೇನು ಎಂಬುದನ್ನು ತೋರಿಸುವಲ್ಲಿಯೇ ವಿಫಲರಾದರು. ವಿನಯ್ ಗೌಡ, ಸ್ನೇಹಿತ್, ಮೈಕಲ್ ಅವರ ನೆರಳಿನಲ್ಲಿಯೇ ಸೇಫ್ ಗೇಮ್ ಆಟದಲ್ಲಿದ್ದರು. ಆ ಕಾರಣಕ್ಕೋ ಏನೋ ಅವರೊಳಗಿನ ಸ್ಪರ್ಧಿ ಎಲ್ಲಿಯೂ ಕಾಣಲಿಲ್ಲ. ಎಲ್ಲದರಲ್ಲೂ ಕೊಂಚ ಹಿಂದೆಯೇ ಉಳಿದುಬಿಟ್ಟರು. ವಿನಯ್ ಪಟಾಲಂನಲ್ಲಿ ಗುರುತಿಸಿಕೊಂಡಿದ್ದಕ್ಕಾಗಿ, ವಿನಯ್ ಪರವಾಗಿ ಮಾತನಾಡಿದ್ದಕ್ಕೆ ಚಮಚ ಅನ್ನೋ ಪಟ್ಟವನ್ನೂ ಪಡೆದುಕೊಂಡರು.
ತಮಗಾಗಿ ನಮ್ರತಾ ಏನೂ ಆಡ್ತಿಲ್ಲ, ಅವರದ್ದು ಬೇರೆಯವರಿಗಾಗಿಯೇ ಆಟ, ಇನ್ನೊಬ್ಬರಿಗೆ ಶ್ಯಾಡೋ ಆಗಿದ್ದಾರೆ, ಸೇಫ್ ಗೇಮ್ ಆಡ್ತಿದ್ದಾರೆ. ಇನ್‌ಫ್ಲುಯೆನ್ಸ್ಡ್ ಆಗಿದ್ದಾರೆ ಎಂದೆಲ್ಲ ಕಾಮೆಂಟ್‌ಗಳನ್ನೇ ನಮ್ರತಾ ಹೆಚ್ಚು ಪಡೆದುಕೊಂಡಿದ್ದಾರೆ. ಫಿನಾಲೆ ವೇದಿಕೆ ಸನಿಹದಲ್ಲಿ ಮುಗ್ಗರಿಸಲು ಇದೂ ಕಾರಣ ಎದ್ದು ಕಾಣುತ್ತದೆ.
ಆರಂಭದಲ್ಲಿ ಟಾಸ್ಕ್ ವಿಚಾರದಲ್ಲಿ ಅಷ್ಟೆನೂ ಭಾಗವಹಿಸುವಿಕೆ ನಮ್ರತಾ ಅವರಲ್ಲಿ ಕಾಣಲಿಲ್ಲ. ತಮ್ಮ ವೈಯಕ್ತಿಕ ಆಟಗಳಲ್ಲೂ ಅವರು ಮುನ್ನುಗ್ಗಲಿಲ್ಲ. ಅದೂ ಅವರ ಹಿನ್ನಡೆಗೆ ಕಾರಣವಾಯ್ತು. ಇನ್ನೇನು ಶೋ ಫಿನಾಲೆ ಹಂತಕ್ಕೆ ಬರ್ತಿದ್ದಂತೆ, ಇಂಡಿವಿಶ್ಯುವಲ್ ಆಟದಲ್ಲಿ ಭಾಗವಹಿಸಿ ಜಯಗಳಿಸಿದ್ರು. ಮನೆಯಲ್ಲಿ ಉತ್ತಮ, ಕಿಚ್ಚನ ಚಪ್ಪಾಳೆ ಸಿಕ್ಕಲ್ಲವೆಂದು ಮತ್ತು ಕ್ಯಾಪ್ಟನ್ ಆಗಿಲ್ಲ ಎಂಬ ಬೇಸರ ಅವರಲ್ಲಿತ್ತು. ತಮ್ಮ ಸಾಮರ್ಥ್ಯ ತೋರಿಸಿ ಈ ಮೂರನ್ನೂ ಪಡೆದರು.