‘ಅಣ್ಣ ನೀನು ಬೇರೆನೇ ಕಣಯ್ಯ, ನಿಜವಾದ ಮಣ್ಣಿನ ಮಗ ನೀನು’; ಡ್ರೋನ್ ಪ್ರತಾಪ್‌ಗೆ ನೆಟ್ಟಿಗರಿಂದ ಪ್ರತಿಕ್ರಿಯೆಯ ಮಹಾಪೂರ-kannada television news bigg boss kannada season 10 runner up drone pratap who had lunch in the farm with his father mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಅಣ್ಣ ನೀನು ಬೇರೆನೇ ಕಣಯ್ಯ, ನಿಜವಾದ ಮಣ್ಣಿನ ಮಗ ನೀನು’; ಡ್ರೋನ್ ಪ್ರತಾಪ್‌ಗೆ ನೆಟ್ಟಿಗರಿಂದ ಪ್ರತಿಕ್ರಿಯೆಯ ಮಹಾಪೂರ

‘ಅಣ್ಣ ನೀನು ಬೇರೆನೇ ಕಣಯ್ಯ, ನಿಜವಾದ ಮಣ್ಣಿನ ಮಗ ನೀನು’; ಡ್ರೋನ್ ಪ್ರತಾಪ್‌ಗೆ ನೆಟ್ಟಿಗರಿಂದ ಪ್ರತಿಕ್ರಿಯೆಯ ಮಹಾಪೂರ

ಅಪ್ಪ ಮರಿಮಾದಯ್ಯ ಅವರ ಜತೆಗೆ ಭತ್ತದ ಗದ್ದೆಯಲ್ಲಿ ಡ್ರೋನ್‌ ಪ್ರತಾಪ್‌ ಒಟ್ಟಿಗೆ ಕೂತು ಊಟ ಮಾಡಿದ್ದಾರೆ. ನನ್ನ ಪರಪಂಚ ನೀನೇ ಎಂಬ ಹಾಡಿನ ಜತೆಗಿರುವ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಈ ವಿಡಿಯೋಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಡ್ರೋನ್ ಪ್ರತಾಪ್‌ಗೆ ನೆಟ್ಟಿಗರಿಂದ ಪ್ರತಿಕ್ರಿಯೆಯ ಮಹಾಪೂರ
ಡ್ರೋನ್ ಪ್ರತಾಪ್‌ಗೆ ನೆಟ್ಟಿಗರಿಂದ ಪ್ರತಿಕ್ರಿಯೆಯ ಮಹಾಪೂರ (Instagram\ Drone prathap)

Drone Prathap: ಬಿಗ್‌ಬಾಸ್‌ಗೆ ಹೋಗುವುದಕ್ಕೂ ಮುನ್ನ ಬಹುದೊಡ್ಡ ಕಳಂಕವೊಂದನ್ನು ಹೊತ್ತುಕೊಂಡು, ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ, ಯಾವಾಗ ಬಿಗ್‌ಬಾಸ್‌ ಪ್ರವೇಶಿಸಿ, ಫಿನಾಲೆ ಹಂತಕ್ಕೂ ಬಂದು, ರನ್ನರ್‌ ಅಪ್‌ ಆದ ಮೇಲೆ ಅವರ ಮೇಲಿದ್ದ ಎಲ್ಲ ಕಳಂಕವೂ ದೂರವಾಯ್ತು. ನಿಜವಾದ ಪ್ರತಾಪ್‌ ಯಾರು, ಹೇಗಿದ್ದಾನೆ ಎಂಬುದು ಎಲ್ಲರಿಗೂ ಗೊತ್ತಾಯ್ತು. ಬಿಗ್‌ಬಾಸ್‌ ಮೂಲಕವೇ ಕರುನಾಡ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ಈ ಡ್ರೋನ್ ಪ್ರತಾಪ್‌, ಬಿಗ್‌ ಬಾಸ್‌ ಬಳಿಕವೂ ಒಂದಷ್ಟು ಮೆಚ್ಚುವ ಕೆಲಸ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಆಗೊಂದು ಈಗೊಂದು ವಿಡಿಯೋ ಪೋಸ್ಟ್‌ ಮಾಡುವ ಡ್ರೋನ್ ಪ್ರತಾಪ್‌, ಈಗ ಅಪ್ಪನ ಜತೆ ಭತ್ತದ ಗದ್ದೆಯಲ್ಲಿ ಒಂದಷ್ಟು ಕೆಲಸ ಮಾಡಿ, ಮಧ್ಯಾಹ್ನದ ಊಟ ಸವಿದಿದ್ದಾರೆ. ಎಲೆಯೊಳಗೆ ಅನ್ನ ಸಾರು ಬಡಸಿಕೊಂಡು, ಅಪ್ಪ ಮಗ ಊಟ ಮಾಡಿದ್ದಾರೆ. ಈ ಊಟದ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಪ್ರತಾಪ್‌, ನನ್ನ ದೇವರು ಅಪ್ಪಾ ಎಂಬ ಕ್ಯಾಪ್ಶನ್‌ ನೀಡಿದ್ದಾರೆ. ಹೀಗೆ ವಿಡಿಯೋ ಪೋಸ್ಟ್‌ ಮಾಡುತ್ತಿದ್ದಂತೆ, ಸಾವಿರಾರು ಕಾಮೆಂಟ್‌ಗಳು ಈ ವಿಡಿಯೋಕ್ಕೆ ಸಂದಾಯವಾಗಿವೆ.

ಕಿಚ್ಚನಿಗೆ ಬಹುಪರಾಕ್‌ ಹೇಳಿದ ನೆಟ್ಟಿಗರು

ಡ್ರೋನ್‌ ಪ್ರತಾಪ್‌ ಹೀಗೆ ಅಪ್ಪನ ಜತೆ ಗದ್ದೆಯಲ್ಲಿ ಕೆಲಸ ಮಾಡಿ, ಒಟ್ಟಿಗೆ ಕೂತು ಊಟ ಮಾಡಿದ ವಿಡಿಯೋ ನೋಡಿದ ಕೆಲವರು, ಇದೆಲ್ಲದರ ಪುಣ್ಯ ಕಿಚ್ಚ ಸುದೀಪ್‌ಗೆ ಸಲ್ಲಬೇಕು. ಅವರಿಂದಲೇ ತಂದೆ ಮಗ ಒಂದಾಗಿರುವುದು ಎಂದೂ ತರಹೇವಾರಿ ಕಾಮೆಂಟ್‌ ಹಾಕಿದ್ದಾರೆ. ಸುದೀಪ ಅಣ್ಣಗೆ ಮತ್ತು ಬಿಗ್ ಬಾಸ್ ತುಂಬಾ ಧನ್ಯವಾದಗಳು ಎಂದೂ ಕಾಮೆಂಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇಲ್ಲಿವೆ ನೋಡಿ, ಡ್ರೋನ್‌ ಪ್ರತಾಪ್‌ಗೆ ಸಿಕ್ಕ ಮೆಚ್ಚುಗೆ ಮಾತುಗಳು

ನೆಟ್ಟಿಗರ ಪ್ರತಿಕ್ರಿಯೆ ಹೀಗಿವೆ?

- ಈ ಪುಣ್ಯ ಬಿಗ್ ಬಾಸ್ ಅವರಿಗೆ ಮತ್ತು ಕಿಚ್ಚ ಸುದೀಪ್ ಅವರಿಗೆ ಸಲ್ಲಬೇಕು ಅನ್ನೋರು ಲೈಕ್ ಮಾಡಿ

- ಬಿಗ್ ಬಾಸ್ ಎಷ್ಟೇ ಸೀಸನ್ ಬಂದ್ರು ಪ್ರತಾಪ್ ಅಂತ ವ್ಯಕ್ತಿನಾ ಯಾವತ್ತೂ ಮರೆಯೋಕೆ ಸಾಧ್ಯ ಇಲ್ಲ....

- ಅಮ್ಮನ ಜೋಗುಳಕ್ಕಿಂತ ಅಪ್ಪನ ಬೈಗುಳನೇ ಶ್ರೇಷ್ಠ

- ಅಪ್ಪ ಮಗನ ದೂರವಾದ ಸಂಬಂಧ ಹತ್ತಿರವಾಯಿತು

- ನಿಜವಾದ ಮಣ್ಣಿನ ಮಗ

- ಆದ್ರೂ ಪ್ರತಾಪ್ ಗೆದಿದ್ರೆ ಆಟ್‌ಲೀಸ್ಟ್‌ ಇನ್ನು ಕೆಲವರಿಗೆ ಸಹಾಯ ಆಗಿರೋದು ಅನ್ನೋರು ಲೈಕ್ ಮಾಡಿ

- ಪ್ರತಾಪ್ ಅವ್ರೆ ನಿನಗೆ ಸರಿಸಾಟಿ ಯಾರು ಇಲ್ಲ ನಿಮ್ಮನ್ನ ಒಂದು ಮಾಡಿದ್ದು ಸುದೀಪ್ ಸರ್ ಅವರಿಗೆ ಹೃದಯಪೂರ್ವಕವಾಗಿ ಅಭಿನಂದನೆಗಳು

- ನೀವ್ ಬಿಗ್ ಬಾಸ್‌ಗೇ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೇ. ಇಂತ ಒಂದ್ ಅಪ್ಪ ಅಮ್ಮನ ಅದ್ಭುತವಾದ ಪ್ರಪಂಚವನ್ನ ಮತ್ತೆ ವಾಪಾಸ್ ಕೊಡಿಸಿದಂತ ವೇದಿಕೆ. ಚನ್ನಾಗಿ ಇರಿ ಲೈಫ್ ಇನ್ಮುಂದೆ ಆದ್ರೂ.

- ಅಪ್ಪ ಮಗನ ಬಾಂಧವ್ಯಕ್ಕೆ ಸುದೀಪ್ ಸರ್ ಕಾರಣ ಸುದೀಪ್ ಸರ್ ಕೋಟಿ ಕೋಟಿ ಧನ್ಯವಾದಗಳು

- ಸುದೀಪ ಅಣ್ಣಗೆ ಮತ್ತು ಬಿಗ್ ಬಾಸ್ ತುಂಬಾ ಧನ್ಯವಾದಗಳು.... ತಂದೆ ಮಗನ ಒಂದು ಮಾಡಿದ್ದಕ್ಕೆ

- ನಿಮಗೆ ತುಂಬಾ ಜನರು ಕೆಟ್ಟ ಕೆಟ್ಟದಾಗಿ ಬೈತಾರೆ ಕಾಮೆಂಟ್ಸ್ ಮಾಡ್ತಾರೆ, ಬಟ್ ನೀವು ಅದೆಲ್ಲ ಮಾತುಗಳನ್ನ ತಲೆ ಕೆಡಿಸಿ ಕೊಲ್ದೆ ನಿಮ್ಮ ಒಳ್ಳೆಯ ಕೆಲಸ ಮುಂದೆವರೆಸಿ ಬ್ರದರ್

- ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು ಎಂದೆಂದಿಗೂ ಗೌರವಿಸೋಣ

- ಅಣ್ಣ ನೀ ಬೇರೆನೇ ಕಣ್ಣಯ್ಯ

mysore-dasara_Entry_Point