Bigg Boss Kannada Season 11 ಶುರುವಾಗೋ ಹೊತ್ತಲ್ಲಿ, ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ಕೈ ಸೇರಿತು ಬಿಗ್‌ ಬಾಸ್‌ ಕಾರು-kannada television news bigg boss kannada season 10 winner karthik mahesh gets bigg boss car bbk 11 updates mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada Season 11 ಶುರುವಾಗೋ ಹೊತ್ತಲ್ಲಿ, ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ಕೈ ಸೇರಿತು ಬಿಗ್‌ ಬಾಸ್‌ ಕಾರು

Bigg Boss Kannada Season 11 ಶುರುವಾಗೋ ಹೊತ್ತಲ್ಲಿ, ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ಕೈ ಸೇರಿತು ಬಿಗ್‌ ಬಾಸ್‌ ಕಾರು

ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಕಾರ್ತಿಕ್‌ ಮಹೇಶ್‌ ವಿನ್ನರ್‌ ಆಗಿ ಹೊರಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ ಆಗಿದ್ದರು. ವಿಜೇತ ಕಾರ್ತಿಕ್‌ ಮಹೇಶ್‌ಗೆ 50 ಲಕ್ಷ ನಗದು ಜತೆಗೆ ಟ್ರೋಫಿ, EV ಬೈಕ್‌ ಸಹ ನೀಡಲಾಗಿತ್ತು. ಸುಜುಕಿ ಬ್ರಿಝಾ ಕಾರು ನೀಡುವುದಾಗಿ ಹೇಳಿತ್ತು. ಅದರಂತೆ, ಸುದೀರ್ಘ 7 ತಿಂಗಳ ಬಳಿಕ ಬ್ರಿಝಾ ಕಾರು ಕಾರ್ತಿಕ್‌ ಕೈ ಸೇರಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ಗೆ ಸುದೀರ್ಘ 7 ತಿಂಗಳ ಬಳಿಕ ಬ್ರಿಝಾ ಕಾರು ಕೈ ಸೇರಿದೆ.
ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ಗೆ ಸುದೀರ್ಘ 7 ತಿಂಗಳ ಬಳಿಕ ಬ್ರಿಝಾ ಕಾರು ಕೈ ಸೇರಿದೆ. (Instagram\ Karthik Mahesh)

Karthik Mahesh: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ತಯಾರಿ ಶುರುವಾಗಿದೆ. ಇನ್ನೇನು ಅಕ್ಟೋಬರ್‌ನಲ್ಲಿ ಸೀಸನ್‌ 11ಕ್ಕೆ ಚಾಲನೆ ಸಿಗಲಿದೆ. ಇತ್ತ ಅವರು ಬರ್ತಾರೆ, ಇವರು ಬಿಗ್‌ ಮನೆಗೆ ಹೋಗ್ತಾರೆ ಅಂತ ಒಂದಿಷ್ಟು ಮಂದಿಯ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇನ್ನು ಕೆಲವರು ಕಡ್ಡಿ ಮುರಿದಂತೆ ನಾನು ಹೋಗ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಹೀಗೆ ಸೀಸನ್‌ 11ರ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದರೆ, ಇತ್ತ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಕಾರ್‌ ವಿಚಾರಕ್ಕೆ ಎಂಬುದು ವಿಶೇಷ.

ಹೌದು, ಕಳೆದ ಜನವರಿಯಲ್ಲಿ ಬಿಗ್‌ಬಾಸ್‌ ಸೀಸನ್‌ 10 ಮುಕ್ತಾಯವಾಗಿತ್ತು. ಕಾರ್ತಿಕ್‌ ಮಹೇಶ್‌ ವಿನ್ನರ್‌ ಆಗಿ ಹೊರಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ ಆಗಿದ್ದರು. ವಿಜೇತ ಕಾರ್ತಿಕ್‌ ಮಹೇಶ್‌ಗೆ 50 ಲಕ್ಷ ನಗದು ಬಹುಮಾನದ ಜತೆಗೆ ಟ್ರೋಫಿ, ಬೌನ್ಸ್‌ ಇನ್ಫಿನಿಟಿ ಎಲೆಕ್ಟ್ರಿಕ್‌ ಬೈಕ್‌ ಸಹ ನೀಡಲಾಗಿತ್ತು. ಇದಷ್ಟೇ ಅಲ್ಲದೇ ಮಾರುತಿ ಸುಜುಕಿ ಬ್ರಿಝಾ ಕಾರು ನೀಡುವುದಾಗಿ ಹೇಳಿತ್ತು. ಅದರಂತೆ, ಸುದೀರ್ಘ 7 ತಿಂಗಳ ಬಳಿಕ ಕಾರ್ತಿಕ್‌ ಮಹೇಶ್‌ ಅವರ ಕೈ ಸೇರಿದೆ ಮಾರುತಿ ಸುಜುಕಿ ಬ್ರಿಝಾ ಕಾರು. ಈ ವಿಚಾರವನ್ನು ಕಾರ್ತಿಕ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸ್ಟೋರಿ ಶೇರ್‌ ಮಾಡಿದ್ದಾರೆ.

ಅಂತೂ ಬಂತು ಬಿಗ್‌ಬಾಸ್‌ ಕಾರು

2023ರ ಅಕ್ಟೋಬರ್‌ನಲ್ಲಿ ಬಿಗ್‌ಬಾಸ್‌ ಸೀಸನ್‌ 10 ಶುರುವಾಗಿತ್ತು. ಅಂದಿನಿಂದ 2024ರ ಜನವರಿ 28ರ ವರೆಗೂ ಶೋ ನಡೆದಿತ್ತು. 112 ದಿನಗಳ ಕಾಲ ನಡೆದ ಈ ಶೋನಲ್ಲಿ ಕಾರ್ತಿಕ್‌ ಮಹೇಶ್‌ ಟ್ರೋಫಿ ಎತ್ತಿ ಹಿಡಿದು ವಿಜೇತ ಪಟ್ಟ ಅಲಂಕರಿಸಿದ್ದರು. ಅದರಂತೆ ಬಿಗ್‌ಬಾಸ್‌ ಕಡೆಯಿಂದ ಕಾರ್‌ ಉಡುಗೊರೆಯಾಗಿ ಸಿಗಲಿದೆ ಎಂದು ಹೇಳಿತ್ತಾದರೂ, ಅದು ಆ ಕ್ಷಣಕ್ಕೆ ನೆರವೇರಿರಲಿಲ್ಲ. ಇದೀಗ ಏಳು ತಿಂಗಳ ಬಳಿಕ ಕಾರ್ತಿಕ್‌ ಅವರಿಗೆ ಕಾರ್‌ ಸಿಕ್ಕಿದೆ. ಶೋರೂಮ್‌ಗೆ ಹೋಗಿ ಕಾರ್‌ ಪಡೆದ ಕಾರ್ತಿಕ್‌ ಮಹೇಶ್‌, ಕಾರ್‌ ಡೆಲಿವರಿಯ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಕಟಿಸಿ, ಅಂತೂ ಬಂತು ಬಿಗ್‌ಬಾಸ್‌ ಕಾರು ಎಂಬ ಕ್ಯಾಪ್ಷನ್‌ ನೀಡಿದ್ದಾರೆ.

ಯಾವಾಗ ಶೋ ಆರಂಭ?

ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ, ಈಗಾಗಲೇ ಸೀಸನ್‌ 11ರ ಪ್ರೋಮೋ ಶೂಟಿಂಗ್‌ ಮುಗಿಸಿಕೊಂಡಿರುವ ಕಲರ್ಸ್‌ ಕನ್ನಡ, ಸದ್ಯ ಅದರ ಎಡಿಟಿಂಗ್‌ ಕೆಲಸದಲ್ಲಿ ಬಿಜಿಯಾಗಿದೆ. ಕಳೆದ ಬಾರಿಗಿಂತ ಹೊಸದನ್ನೇ ನೋಡುಗನಿಗೆ ನೀಡಲು ಮುಂದಾಗಿರುವ ವಾಹಿನಿ, ಆ ನಿರೀಕ್ಷೆ ಮಟ್ಟವನ್ನು ಫುಲ್‌ಫಿಲ್‌ ಮಾಡುವ ಉಮೇದಿನಲ್ಲಿದೆ. ಅದರಂತೆ ಸೆಪ್ಟಂಬರ್‌ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆ ಆಗಲಿದೆ. ಅದಾದ ಮೇಲೆ ಅಂದರೆ, ಅಕ್ಟೋಬರ್‌ ಮೂರನೇ ವಾರದಲ್ಲಿ ಶೋ ಶುರುವಾಗಲಿದೆ.