ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪ್ರೋಮೋ ಬಿಡುಗಡೆ; ಇಲ್ಲೇ ಸ್ವರ್ಗ, ಇಲ್ಲೇ ನರಕ.. ಹೊಸ ಅಧ್ಯಾಯ ಆದ್ರೆ ಅದೇ ಕಿಚ್ಚು-kannada television news bigg boss kannada season 11 second promo released bbk 11 grand opening from sept 29 mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪ್ರೋಮೋ ಬಿಡುಗಡೆ; ಇಲ್ಲೇ ಸ್ವರ್ಗ, ಇಲ್ಲೇ ನರಕ.. ಹೊಸ ಅಧ್ಯಾಯ ಆದ್ರೆ ಅದೇ ಕಿಚ್ಚು

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪ್ರೋಮೋ ಬಿಡುಗಡೆ; ಇಲ್ಲೇ ಸ್ವರ್ಗ, ಇಲ್ಲೇ ನರಕ.. ಹೊಸ ಅಧ್ಯಾಯ ಆದ್ರೆ ಅದೇ ಕಿಚ್ಚು

Bigg boss Kannada Season 11 Promo: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಇನ್ನೊಂದೇ ವಾರ ಬಾಕಿ ಉಳಿದಿದೆ. ಹೀಗಿರುವಾಗಲೇ ಸ್ವರ್ಗ ನರಕದ ಪಾಠ ಮಾಡಿ ಹೊಸ ಅಧ್ಯಾಯ ಹೇಗಿರಲಿದೆ ಎಂಬ ಬಗ್ಗೆ ಸುಳಿವು ನೀಡಿದ್ದಾರೆ ಕಿಚ್ಚ ಸುದೀಪ್.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪ್ರೋಮೋ ಬಿಡುಗಡೆ; ಇಲ್ಲೇ ಸ್ವರ್ಗ, ಇಲ್ಲೇ ನರಕ.. ಹೊಸ ಅಧ್ಯಾಯ ಆದ್ರೆ ಅದೇ ಕಿಚ್ಚು
ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪ್ರೋಮೋ ಬಿಡುಗಡೆ; ಇಲ್ಲೇ ಸ್ವರ್ಗ, ಇಲ್ಲೇ ನರಕ.. ಹೊಸ ಅಧ್ಯಾಯ ಆದ್ರೆ ಅದೇ ಕಿಚ್ಚು

Bigg Boss Kannada Season 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಮೊದಲ ಪ್ರೋಮೋ ಮೂಲಕ ಕುತೂಹಲ ಮೂಡಿಸಿದ್ದ ಕಲರ್ಸ್‌ ಕನ್ನಡ, ಇದೀಗ ಎರಡನೇ ಪ್ರೋಮೋ ಹೊರಬಂದಿದೆ. ಈ ಮೂಲಕ ಈ ಸಲದ ಶೋನಲ್ಲಿ ಏನೆಲ್ಲ ಇರಬಹುದು ಎಂಬ ಬಗ್ಗೆ ಕಿರಿದಾಗಿ ಹಿಂಟ್‌ ನೀಡಿದ್ದಾರೆ ಕಿಚ್ಚ ಸುದೀಪ್. ಇಲ್ಲೇ ಸ್ವರ್ಗ, ಇಲ್ಲಿಯೇ ನರಕ ಮೇಲೇನಿಲ್ಲ ಸುಳ್ಳು ಅನ್ನೋ ಹಾಡನ್ನು ನೆನಪಿಸುವಂತಿದೆ ಎರಡನೇ ಪ್ರೋಮೋದ ಕಾನ್ಸೆಪ್ಟ್.‌

ಸೀಸನ್‌ 11ರ ಬಿಗ್‌ಬಾಸ್‌ ಒಂದಷ್ಟು ಕಾರಣಕ್ಕೆ ಕುತೂಹಲ ಮೂಡಿಸಿತ್ತು. ಕಿಚ್ಚ ಸುದೀಪ್‌ ಈ ಸಲದ ಶೋನಲ್ಲಿ ಇರ್ತಾರಾ ಇಲ್ವಾ? ನಿರೂಪಣೆ ಮಾಡ್ತಾರಾ, ಇಲ್ವಾ ಎಂಬ ಅನುಮಾನಗಳಿದ್ದವು. ಇದೆಲ್ಲದಕ್ಕೂ ಮೊದಲ ಪ್ರೋಮೋ ಉತ್ತರ ನೀಡಿತ್ತು. ಮಹಾಭಾರತಕ್ಕೆ ಒಬ್ಬನೇ ಕೃಷ್ಣ ಹೇಗೋ, ಬಿಗ್‌ಬಾಸ್‌ಗೆ ಒಬ್ಬರೇ ಕಿಚ್ಚ ಎಂಬರ್ಥದ ಪ್ರೋಮೋ ಬಿಡುಗಡೆ ಮಾಡಿ, ಕಿಚ್ಚ ಸುದೀಪ್‌ ಅವರೇ ಮುಂದುವರಿಯಲಿದ್ದಾರೆ ಎಂದಿತ್ತು.

ಪ್ರೋಮೋದಲ್ಲಿ ಏನಿದೆ?

ಇದೀಗ ಎರಡನೇ ಪ್ರೋಮೋ ಸಹ ಬಿಡುಗಡೆಯಾಗಿದ್ದು, ಈ ಸಲದ ಹೊಸ ಅಧ್ಯಾಯದ ಪರಿಕಲ್ಪನೆ ಹೇಗಿರಲಿದೆ ಎಂಬ ಬಗ್ಗೆ ಸುಳಿವು ನೀಡಿದೆ. ಬೆಳಕು, ಸಂತೋಷ, ಸುಖ, ನೆಮ್ಮದಿ ಇದೇ ಸ್ವರ್ಗ. ಕತ್ತಲು, ನೋವು, ಹಿಂಸೆ ಇದು ನರಕ. ಸ್ವರ್ಗದಲ್ಲಿ ಇರಬೇಕಾದವರು ನರಕದಲ್ಲಿರಬಹುದು, ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿರಬಹುದು. ಬೆನ್ನಿಗೆ ಚೂರಿ ಹಾಕ್ತಾರೆ ಅನ್ಕೊಂಡು, ಮುಂದೆ ನಿಮ್ಮ ಸ್ನೇಹಿತರಾಗಬಹುದು. ಸ್ನೇಹಿತರಾಗಿದ್ದುಕೊಂಡು ಮುಂದೆ ಹೋಗಿ ಬೆನ್ನಿಗೆ ಚೂರಿ ಹಾಕಬಹುದು. ಇದು ಬಿಗ್‌ ಬಾಸ್‌ನ ಹೊಸ ಅಧ್ಯಾಯ. ಸ್ವರ್ಗ ನರಕ ಎರಡೂ ಇದೆ. ಎರಡರಲ್ಲೂ ಕಿಚ್ಚು ಅಷ್ಟೇ ಇದೆ.. ಎಂದು ಸುದೀಪ್‌ ಪರಿಚಯಿಸಿಕೊಟ್ಟಿದ್ದಾರೆ.

ಸೆಪ್ಟೆಂಬರ್‌ 29ರಿಂದ ಗ್ರ್ಯಾಂಡ್‌ ಓಪನಿಂಗ್‌

ಇನ್ನು ಇದೇ ಸೆಪ್ಟೆಂಬರ್‌ 29ರಿಂದ ಬಿಗ್‌ಬಾಸ್‌ ಸೀಸನ್‌ 11 ಶುರುವಾಗಲಿದೆ. ಸಂಜೆ 6 ಗಂಟೆಗೆ ಗ್ರ್ಯಾಂಡ್‌ ಓಪನಿಂಗ್‌ ಆಗಲಿದೆ. ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಈ ಬಾರಿಯ ಬಿಗ್‌ಬಾಸ್‌ ಆರಂಭವಾಗಲಿರುವುದು ಅಧಿಕೃತವಾಗಿದೆ. ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ದಂಡೇ ಇರಲಿದೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ಒಂದಷ್ಟು ಹೆಸರುಗಳು ಜಾಲತಾಣದಲ್ಲಿಯೂ ಹರಿದಾಡುತ್ತಿವೆ. ಈ ಬಗ್ಗೆ ಇನ್ನೊಂದು ವಾರದಲ್ಲಿ ಉತ್ತರ ದಕ್ಕಲಿದೆ.

ದಾಖಲೆ ಬರೆದಿತ್ತು ಕಳೆದ ಸೀಸನ್‌

ಕಳೆದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕಾರ್ತಿಕ್‌ ಮಹೇಶ್‌ ವಿಜೇತರಾಗಿ ಹೊರಹೊಮ್ಮಿದರೆ, ಡ್ರೋಣ್‌ ಪ್ರತಾಪ್‌ ರನ್ನರ್‌ಅಪ್‌ ಆಗಿದ್ದರು. ಸಂಗೀತಾ ಶೃಂಗೇರಿ ಮತ್ತು ವಿನಯ್‌ ಗೌಡ ಅವರ ನಡುವಿನ ಕಿತ್ತಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೆಲ್ಲದರ ಫಲವಾಗಿ ಒಟ್ಟಾರೆ ಈ ಹಿಂದಿನ ಎಲ್ಲ ಸೀಸನ್‌ಗಳಿಗೆ ಹೋಲಿಕೆ ಮಾಡಿದರೆ, ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡಿತ್ತು ಹತ್ತನೇ ಸೀಸನ್‌. ಇದೀಗ ಅದೇ ಉತ್ಸಾಹದಲ್ಲಿ ಸೀಸನ್‌ 11 ಶುರುವಾಗಲಿದೆ. ಈ ಸಲ ಏನೆಲ್ಲ ವಿಶೇಷಗಳಿರಲಿವೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ.

mysore-dasara_Entry_Point