ದೈವದ ಇಚ್ಚೆಯೇ ಬೇರೆ, ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಕೊರಳಿಗೆ ಚಿರು ಹಾಕಿದ ಮೂರು ಗಂಟು! ನಿಗಿ ನಿಗಿ ಕೆಂಡದಂತಾದ ಸೌಂದರ್ಯ
Bramhagantu Serial July 10 Episode: ಬ್ರಹ್ಮಗಂಟು ಸೀರಿಯಲ್‌ನಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ರೂಪಾ ಬದಲು ದೀಪಾ ಕೊರಳಿಗೆ ತಾಳಿ ಕಟ್ಟಿದ್ದಾನೆ ಚಿರಾಗ್. ಇತ್ತ ಅತ್ತಿಗೆ ಸೌಂದರ್ಯ ಮಾತ್ರ ಈ ದೀಪಾಳನ್ನು ನೋಡಿ ನಿಗಿ ನಿಗಿ ಕೆಂಡದಂತಾಗಿದ್ದಾಳೆ.

Bramhagantu Serial: ಋಣಾನುಬಂಧ ರೂಪೇನ ಪಶು, ಪತ್ನಿ, ಸುತಾಲಯ.. ಋಣವಿಲ್ಲದೆ ಯಾವ ಬಂಧಗಳೂ ಬೆಸೆಯಲಾರವು. ಮನುಷ್ಯರು ಎಷ್ಟೇ ದೂರವಿದ್ದರೂ ಕೂಡ, ಮನಸ್ಸುಗಳು ಹತ್ತಿರವಾಗಿ ಬದುಕಲು ಋಣ ಇರಬೇಕು. ಇದೀಗ ಇದೇ ಋಣಾನುಬಂಧ ಕೊನೆಗೂ ಒಂದಾಗಿದೆ. ಅಂದರೆ ಬ್ರಹ್ಮಗಂಟು ಧಾರಾವಾಹಿಯಲ್ಲಿ ದೈವದ ಇಚ್ಛೆಯೇ ಮೇಲುಗೈ ಸಾಧಿಸಿದೆ. ಅನಿರೀಕ್ಷಿತ ತಿರುವಿನಲ್ಲಿ ರೂಪಾ ಬದಲು ದೀಪಾ ಕೊರಳಿಗೆ ಚಿರು ತಾಳಿ ಕಟ್ಟಿದ್ದಾನೆ!
ಬ್ರಹ್ಮಗಂಟು ಸೀರಿಯಲ್ ಈಗಷ್ಟೇ ಶುರುವಾಗಿದೆ. ನೋಡುಗರಿಂದಲೂ ಕಥೆಯ ಎಳೆಯ ವಿಚಾರವಾಗಿ ಒಂದಷ್ಟು ಕುತೂಹಲವನ್ನೂ ಮೂಡಿಸುತ್ತಿದೆ. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಚಿರಾಗ್‌ಗೆ, ತಾನು ಇಷ್ಟ ಪಟ್ಟ ಹುಡುಗಿಯನ್ನೇ ಚಿರಾಗ್ ಮದುವೆ ಆಗಬೇಕೆಂಬುದು ಅತ್ತಿಗೆ ಸೌಂದರ್ಯಳ ಬಯಕೆ. ಅದರಂತೆ, ವಂಶದ ಕುಡಿ ಬೆಳೆಯದ, ಮಗುವಾಗದ ಹುಡುಗಿ ರೂಪಾಳ ಜತೆಗೆ ಬೇಕು ಅಂತಲೇ ದಿಢೀರ್ ಮದುವೆಯನ್ನೂ ನಿಶ್ಚಯಿಸುತ್ತಾಳೆ. ಆದರೆ ದೇವರ ಆಟ ಮಾತ್ರ ಬೇರೆಯದೇ ಆಗಿದೆ.
ಜಾತಕದಲ್ಲಿ ಮಕ್ಕಳಾಗದ ರೂಪಾ ಜತೆಗೆ ಚಿರು ಮದುವೆ ನಿಶ್ಚಯವಾಗುತ್ತದೆ. ಇನ್ನೇನು ಹಸೆ ಮಣೆ ಏರುವ ಸಮಯದಲ್ಲಿ ಪತ್ರಬರೆದಿಟ್ಟ ರೂಪಾ, ತಾನು ಇಷ್ಟಪಟ್ಟ ಹುಡುಗನ ಜತೆಗೆ ಕನಸಿನ ಬೆನ್ನತ್ತಿ ಓಡಿಹೋಗುತ್ತಾಳೆ. ಆ ಪತ್ರ ಚಿರು ಕೈಗೂ ಸೇರುತ್ತದೆ. ರೂಪಾ ಓಡಿ ಹೋದ ವಿಚಾರ ಜಯರಾಮ್ ಕುಟುಂಬಕ್ಕೂ ಗೊತ್ತಾಗುತ್ತದೆ. ಎಲ್ಲರ ಮುಂದೆ ಅವಮಾನದಿಂದ ತಲೆತಗ್ಗಿಸುವ ಜಯರಾಮ್ ಮತ್ತವರ ಕುಟುಂಬ, ಮುಂದೇನು ಎಂಬ ಚಿಂತೆ ಹೊತ್ತು ಕೂತಿದೆ. ಮತ್ತೊಂದು ಕಡೆ, ಹೇಗಾದರೂ ಮಾಡಿ ಸೌಂದರ್ಯ ಮದುವೆ ಮಂಟಪಕ್ಕೆ ಬಾರದಂತೆ ತಡೆಯಲು ಅಣ್ಣ ಪ್ರಭಾಕರ್ ಪ್ಲಾನ್ ಮಾಡಿದ್ದಾನೆ.
ಮನೆಯಿಂದ ಓಡಿಹೋದ ರೂಪಾ
ಇನ್ನೊಂದು ಕಡೆಗೆ ತಾನು ಪ್ರೀತಿಸುವ ಹುಡುಗ ಅರವಿಂದನ ಜತೆಗೆ ರೂಪಾ ಓಡಿಬಂದಿದ್ದಾಳೆ. ಮದುವೆಗೆಂದು ಗಂಡಿನ ಕಡೆಯವರು ಮಾಡಿಸಿದ ಎಲ್ಲ ಒಡೆವೆಗಳನ್ನು, ಅಪ್ಪ ಅಮ್ಮ ಮಾಡಿಸಿದ ಎಲ್ಲ ಆಭರಣಗಳ ಜತೆಗೆ ಮನೆಯಿಂದ ಕಾಲ್ಕಿತ್ತಿದ್ದಾಳೆ. ಊರವರು ತಲೆಗೊಂದರಂತೆ ಮಾತನಾಡುತ್ತಿದ್ದಾರೆ. ಸೌಂದರ್ಯ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ. ಜಯರಾಮ್ ಕುಟುಂಬಕ್ಕೆ ಅನ್ಯಾಯವಾಗಿದೆ, ಈಗ ದೀಪಾಳನ್ನು ಯಾರು ಮದುವೆ ಆಗ್ತಾರೆ? ಎಂದಿದ್ದಾರೆ. ದೀಪಾಳನ್ನು ಇದೇ ಚಿರು ಮದುವೆ ಆಗಲಿ ಎಂದು ಪಟ್ಟು ಹಿಡಿದಿದ್ದಾರೆ.
ದೀಪಾಳನ್ನು ಮದುವೆಯಾಗುವಂತೆ ಒತ್ತಾಯ
ಅಪ್ಪನ ಬಗ್ಗೆ ತನ್ನ ಕುಟುಂಬಕ್ಕೆ ಈ ಸ್ಥಿತಿ ಬರಲು ಆ ಸೌಂದರ್ಯ ಕುಟುಂಬವೇ ಕಾರಣ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಇದರಿಂದ ಕುಪಿತನಾದ ಜಯರಾಮ್‌ನ ಮಗ ನರಸಿಂಹ, ನೇರವಾಗಿ ಚಿರು ಕೊರಳಿಗೆ ಮಚ್ಚು ಹಿಡಿದು ತನ್ನ ತಂಗಿ ದೀಪಾಳನ್ನು ಮದುವೆ ಆಗುವಂತೆ ಹೇಳಿದ್ದಾನೆ. ಇದೇ ವಿಚಾರವಾಗಿ ಅತ್ತಿಗೆ ಸೌಂದರ್ಯಗೆ ಫೋನ್ ಮಾಡುವ ಚಿರಾಗ್, ಇರೋ ವಿಷ್ಯವನ್ನು ಹೇಳುತ್ತಾನೆ. ಆದರೆ, ಪಟಾಕಿ ಸದ್ದಿನಲ್ಲಿ ಚಿರಾಗ್ ಮಾತು ಕೇಳಿಸಿಕೊಳ್ಳದ ಸೌಂದರ್ಯ, ಏನೇ ಆಗಲಿ ನೀನು ಆ ಹುಡುಗಿ ಕೊರಳಿಗೆ ತಾಳಿ ಕಟ್ಟಲೇಬೇಕು ಎನ್ನುತ್ತಾಳೆ.
ವರ್ಕೌಟ್ ಆಯ್ತು ಪ್ರಭಾಕರನ ಪ್ಲಾನ್
ಅತ್ತಿಗೆಯ ಮಾತಂತೆ ದೀಪಾ ಕೊರಳಿಗೆ ಮೂರು ಗಂಟು ಕಟ್ಟಿಯೇ ಬಿಡುತ್ತಾನೆ ಚಿರಾಗ್. ಅಲ್ಲಿಗೆ ತನ್ನ ಮಗಳ ಸಾವಿಗೆ ಕಾರಣವಾದ ತಂಗಿ ಸೌಂದರ್ಯಗೆ ಕೇಡು ಬಯಸುವ ಪ್ರಭಾಕರ್‌ನ ಪ್ಲಾನ್ ವರ್ಕೌಟ್ ಆಗಿದೆ. ಮದುಮಗಳು ದೀಪಾಳನ್ನು ಕರೆದು ಮನೆಗೂ ಮರಳಿದ್ದಾನೆ ಚಿರಾಗ್. ಈ ಜೋಡಿಯನ್ನು ನೋಡಿದ ಸೌಂದರ್ಯ ಬೆಂಕಿಯಂತೆ ನಿಗಿ ನಿಗಿ ಕೆಂಡದಂತಾಗಿದ್ದಾಳೆ. ಹಾಗಾದರೆ, ಸೊಸೆ ದೀಪಾಳನ್ನು ಮನೆತುಂಬಿಸಿಕೊಳ್ತಾಳಾ ಸೌಂದರ್ಯ? ಚಿರುವಿನ ಮುಂದಿನ ನಡೆ ಏನು? ಇದೆಲ್ಲದಕ್ಕೂ ಇಂದಿನ ಏಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.
