‘ನಿನ್ನನ್ನು ರೇಪ್‌ ಮಾಡ್ತೀನಿ, ನಾಳೆನೇ ಪ್ರಗ್ನೆಂಟ್‌ ಮಾಡ್ತೀನಿ ನೋಡ್ತಿಯಾ?’; ಬೃಂದಾವನ ನಟ ವರುಣ್‌ ಆರಾಧ್ಯ ವಾಟ್ಸಾಪ್‌ ಚಾಟ್‌ ಲೀಕ್‌-kannada television news brundavana serial actor varun aradya and varsha kaveri whatsapp chat leaked mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ನಿನ್ನನ್ನು ರೇಪ್‌ ಮಾಡ್ತೀನಿ, ನಾಳೆನೇ ಪ್ರಗ್ನೆಂಟ್‌ ಮಾಡ್ತೀನಿ ನೋಡ್ತಿಯಾ?’; ಬೃಂದಾವನ ನಟ ವರುಣ್‌ ಆರಾಧ್ಯ ವಾಟ್ಸಾಪ್‌ ಚಾಟ್‌ ಲೀಕ್‌

‘ನಿನ್ನನ್ನು ರೇಪ್‌ ಮಾಡ್ತೀನಿ, ನಾಳೆನೇ ಪ್ರಗ್ನೆಂಟ್‌ ಮಾಡ್ತೀನಿ ನೋಡ್ತಿಯಾ?’; ಬೃಂದಾವನ ನಟ ವರುಣ್‌ ಆರಾಧ್ಯ ವಾಟ್ಸಾಪ್‌ ಚಾಟ್‌ ಲೀಕ್‌

Varun Aradya Varsha Kaveri Whatsapp Chat Leak: ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ನಡುವಿನ ಕಿತ್ತಾಟ ಮತ್ತೆ ಇತ್ತೀಚೆಗಷ್ಟೇ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಈ ನಡುವೆ ಇಬ್ಬರೂ ಸ್ಪಷ್ಟನೆ ನೀಡಿದ್ದರು. ಇದೀಗ ಇದೆಲ್ಲದರ ನಡುವೆ ಈ ಜೋಡಿಯ ವಾಟ್ಸಾಪ್‌ ಚಾಟ್‌ ಜಾಲತಾಣದಲ್ಲಿ ಲೀಕ್‌ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವರುಣ್‌ ಆರಾಧ್ಯ ವರ್ಷಾ ಕಾವೇರಿ ವಾಟ್ಸಾಪ್‌ ಚಾಟ್‌
ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವರುಣ್‌ ಆರಾಧ್ಯ ವರ್ಷಾ ಕಾವೇರಿ ವಾಟ್ಸಾಪ್‌ ಚಾಟ್‌

Varun Aradya: ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮೂಲಕವೇ ಸಖತ್‌ ಮೋಡಿ ಮಾಡಿದ್ದ ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ಜೋಡಿ, ಇದೀಗ ದೂರ ದೂರ ಆಗಿದ್ದಾರೆ. ನಮ್ಮಿಬ್ಬರ ಮಧ್ಯೆ ಏನೂ ಇಲ್ಲ ಎಂಬುದನ್ನು ಹೇಳಿಕೊಂಡು, ಕೆಲ ತಿಂಗಳ ಹಿಂದೆಯೇ ಬ್ರೇಕಪ್‌ ಮಾಡಿಕೊಂಡಿತ್ತು ಈ ಜೋಡಿ. ಹೀಗಿದ್ದರೂ, ಆಗೊಮ್ಮೆ ಈಗೊಮ್ಮೆ ಒಂದಿಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತೆ ಈ ಜೋಡಿ. ಇತ್ತೀಚೆಗಷ್ಟೇ, ಇದೇ ವರುಣ್‌ ಆರಾಧ್ಯ ವಿರುದ್ಧ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ವರ್ಷ ಕಾವೇರಿ ದೂರು ನೀಡಿದ್ದರು. ಈ ಬೆನ್ನಲ್ಲೇ ಇದೀಗ ಮತ್ತಷ್ಟು ಕಾವು ಪಡೆದುಕೊಂಡಿದೆ. ಮಾಜಿ ಪ್ರೇಯಸಿ ವರ್ಷಾಗೆ, ವರುಣ್‌ ಕಳುಹಿಸಿದ್ದ ಕೆಟ್ಟ ಮೆಸೆಜ್‌ಗಳ ಸ್ಕ್ರೀನ್‌ಶಾಟ್‌ಗಳೀಗ ವೈರಲ್‌ ಆಗಿವೆ.

ವರುಣ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ, ಆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪುಕಾರು ಹಬ್ಬುತ್ತಿದ್ದಂತೆ, ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವರ್ಷಾ, "ಸಾಮಾಜಿಕ ಜಾಲತಾಣದಲ್ಲಿ ನೀವು ನೋಡುತ್ತಿರುವುದು ಸುಳ್ಳು ಸುದ್ದಿಯಾಗಿದೆ. ಇದು ಇನ್‌ಸ್ಟಾಗ್ರಾಂ ಫ್ರೊಫೈಲ್‌ ಮತ್ತು ಇತರ ಸಾಮಾಜಿಕ ಮಾಧ್ಯಮ ಫ್ಲಾಟ್‌ಫಾರ್ಮ್‌ಗಳಿಂದ ಎಲ್ಲ ರೀಲ್‌ಗಳನ್ನು ತೆಗೆದುಹಾಕುವುದರ ಕುರಿತು. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ" ಎಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಯೂಟ್ಯೂಬ್‌ನಲ್ಲಿ ಸುದೀರ್ಘ ವಿಡಿಯೋ ಶೇರ್‌ ಮಾಡಿದ್ದ ವರುಣ್ ಸ್ಪಷ್ಟನೆ ಕೊಟ್ಟಿದ್ದರು.

"ಸೋಷಿಯಲ್‌ ಮೀಡಿಯಾದಲ್ಲಿ ನನ್ನ ಮತ್ತು ಅವರ (ಮಾಜಿ ಪ್ರೇಯಸಿ) ಸಾಕಷ್ಟು ರೀಲ್ಸ್‌ಗಳಿವೆ. ಅವುಗಳನ್ನು ತೆಗೆಯುವಂತೆ ಪೊಲೀಸರ ಬಳಿ ಮನವಿ ಮಾಡಿದ್ದರು. ನನಗೆ ಅದು ಸಾಧ್ಯವಾಗಿರಲಿಲ್ಲ. ಇದರಿಂದ ಮುಂದೆ ಅವರು ಮದುವೆ ಆದಮೇಲೆ ಈ ರೀಲ್ಸ್‌ಗಳಿಂದ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇದೀಗ ಈ ಸಮಸ್ಯೆ ಬಗೆಹರಿದಿದೆ. ಡಿಲಿಟ್‌ ಮಾಡುವುದಾಗಿ ನಾನೂ ಒಪ್ಪಿಕೊಂಡಿದ್ದೇನೆ" ಎಂದಿದ್ದರು. ಇದಷ್ಟೇ ಅಲ್ಲ, "ನಾನು ಕೊಲೆ ಬೆದರಿಕೆ ಹಾಕಿದೆ, ಬ್ಲಾಕ್ ಮೇಲ್ ಮಾಡಿದೆ ಎಂದೆಲ್ಲಾ ಹೇಳಲಾಗಿದೆ. ಅಂಥದ್ದೆಲ್ಲಾ ಮಾಡಿ ಜೈಲಿಗೆ ಹೋಗುವಷ್ಟು ಮೀಟರ್ ನಂಗಿಲ್ಲ. ನಾನೊಬ್ಬ ಫ್ಯಾಮಿಲಿ ಬಾಯ್ ಅಷ್ಟೇ" ಎಂದೂ ಹೇಳಿದ್ದರು.

ವರುಣ್‌ ಕಡೆಯಿಂದ ಕೆಟ್ಟ ಸಂದೇಶಗಳು

ಹೀಗೆ ವರುಣ್‌ ಕಡೆಯಿಂದ ಬಣ್ಣ ಬಣ್ಣದ ಮಾತುಗಳು ಹೊರಬರುತ್ತಿದ್ದಂತೆ, ಇದೇ ವರ್ಷಾ ಕಾವೇರಿಗೆ ಕೆಟ್ಟದಾಗಿ ಸಂದೇಶ ಕಳುಹಿಸಿದ ವಾಟ್ಸಾಪ್‌ ಸ್ಕ್ರೀನ್‌ಶಾಟ್‌ಗಳಿಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸುದೀರ್ಘ ವಿಡಿಯೋದಲ್ಲಿ ನಾನೊಬ್ಬ ಫ್ಯಾಮಿಲಿ ಮ್ಯಾನ್‌ ಎಂದೆಲ್ಲ ಹೇಳಿಕೊಂಡಿದ್ದ ವರುಣ್‌ ಆರಾಧ್ಯ ಅವರ ಅಸಲಿ ಮುಖವಾಡ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಬಟಾ ಬಯಲಾಗಿದೆ. ಇವರಿಬ್ಬರ ಸ್ಕ್ರೀನ್‌ ಶಾಟ್‌ನಲ್ಲಿ ಏನೆಲ್ಲ ಮೆಸೆಜ್‌ ಮಾಡಿದ್ದಾರೆ. ಇಲ್ಲಿದೆ ನೋಡಿ.

ಇದಕ್ಕೆ ಉತ್ತರಿಸಿ ವರುಣ್‌ ಎಂದ ನೆಟ್ಟಿಗರು…

ಮೊನ್ನೆಯಷ್ಟೇ ನಾನು ಹಾಗೇ ಹೀಗೆ ಎಂದೆಲ್ಲ ಹೇಳಿಕೊಂಡಿದ್ದ ವರುಣ್‌ ಆರಾಧ್ಯಗೆ ಇದೀಗ ನೆಟ್ಟಿಗರು ಈ ವಾಟ್ಸಾಪ್‌ ಚಾಟ್‌ ಇಟ್ಟುಕೊಂಡು, ಇದಕ್ಕೆ ಉತ್ತರ ಕೊಡಿ ಎನ್ನುತ್ತಿದ್ದಾರೆ. ಈ ವಾಟ್ಸಾಪ್‌ ಚಾಟ್‌ನಲ್ಲಿ "ನೀನು ಲವ್ ಮಾಡಿದವನನ್ನು ಬೆಳಗ್ಗೆನೇ ಮರ್ಡರ್ ಮಾಡ್ತೀನಿ, ನಿನ್ನನ್ನು ನಾಳೆನೇ ಪ್ರಗ್ನೆಂಟ್‌ ಮಾಡ್ತೀನಿ, ರೇಪ್‌ ಮಾಡ್ತಿನಿ ಎಂದೆಲ್ಲ ಮೆಸೆಜ್‌ ಮಾಡಿದ್ದ ಪೊಲೀಸ್‌ ಕಂಪ್ಲೆಂಟ್‌ ನೀಡಿದ್ದ ಸ್ಕ್ರೀನ್‌ ಶಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿರುವ ವಾಟ್ಸಾಪ್‌ ಚಾಟ್‌

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವರುಣ್‌ ಆರಾಧ್ಯ ವರ್ಷಾ ಕಾವೇರಿ ವಾಟ್ಸಾಪ್‌ ಚಾಟ್‌
ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವರುಣ್‌ ಆರಾಧ್ಯ ವರ್ಷಾ ಕಾವೇರಿ ವಾಟ್ಸಾಪ್‌ ಚಾಟ್‌
mysore-dasara_Entry_Point