ಪಾರ್ಟಿ ಮಾಡಿ ಬೇಸರದಿಂದಲೇ ವಿದಾಯ ಹೇಳಿದ ಕಲರ್ಸ್‌ ಕನ್ನಡ ಅಂತರಪಟ ಧಾರಾವಾಹಿ ತಂಡ; ಫೋಟೋ ಹಂಚಿಕೊಂಡ ನಿರ್ಮಾಪಕಿ ಸ್ವಪ್ನಕೃಷ್ಣ-kannada television news colors kannada antarapata serial team get together before wind up the serial rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಪಾರ್ಟಿ ಮಾಡಿ ಬೇಸರದಿಂದಲೇ ವಿದಾಯ ಹೇಳಿದ ಕಲರ್ಸ್‌ ಕನ್ನಡ ಅಂತರಪಟ ಧಾರಾವಾಹಿ ತಂಡ; ಫೋಟೋ ಹಂಚಿಕೊಂಡ ನಿರ್ಮಾಪಕಿ ಸ್ವಪ್ನಕೃಷ್ಣ

ಪಾರ್ಟಿ ಮಾಡಿ ಬೇಸರದಿಂದಲೇ ವಿದಾಯ ಹೇಳಿದ ಕಲರ್ಸ್‌ ಕನ್ನಡ ಅಂತರಪಟ ಧಾರಾವಾಹಿ ತಂಡ; ಫೋಟೋ ಹಂಚಿಕೊಂಡ ನಿರ್ಮಾಪಕಿ ಸ್ವಪ್ನಕೃಷ್ಣ

ಬಿಗ್‌ ಬಾಸ್‌ ಕಾರ್ಯಕ್ರಮಕ್ಕಾಗಿ ಕಲರ್ಸ್‌ ಕನ್ನಡದಲ್ಲಿ 2 ಸೀರಿಯಲ್‌ಗಳೂ ಮುಕ್ತಾಯವಾಗುತ್ತಿದೆ. ಅದರಲ್ಲಿ ಅಂತರಪಟ ಧಾರಾವಾಹಿ ತಂಡ ಅಧಿಕೃತವಾಗಿ ವಿದಾಯ ಹೇಳಿದೆ. ಕಲಾವಿದರು ಒಟ್ಟಿಗೆ ಪಾರ್ಟಿ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದೆ.

ಪಾರ್ಟಿ ಮಾಡಿ ಬೇಸರದಿಂದಲೇ ವಿದಾಯ ಹೇಳಿದ ಕಲರ್ಸ್‌ ಕನ್ನಡ ಅಂತರಪಟ ಧಾರಾವಾಹಿ ತಂಡ
ಪಾರ್ಟಿ ಮಾಡಿ ಬೇಸರದಿಂದಲೇ ವಿದಾಯ ಹೇಳಿದ ಕಲರ್ಸ್‌ ಕನ್ನಡ ಅಂತರಪಟ ಧಾರಾವಾಹಿ ತಂಡ (PC: Swapna Krishna)

ಕಲರ್ಸ್‌ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಆರಂಭಕ್ಕೆ ಇನ್ನು 4 ದಿನಗಳಷ್ಟೇ ಬಾಕಿ ಇದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಬರಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದೆ. ಬಿಗ್‌ ಬಾಸ್‌ ಕಾರ್ಯಕ್ರಮ ಪ್ರಸಾರಕ್ಕಾಗಿ ಕಲರ್ಸ್‌ ಕನ್ನಡ ವಾಹಿನಿ 2 ಧಾರಾವಾಹಿಗಳ ಪ್ರಸಾರ ನಿಲ್ಲಿಸುತ್ತಿದೆ.

2 ಧಾರಾವಾಹಿಗಳು ಮುಕ್ತಾಯ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಂತರಪಟ ಧಾರಾವಾಹಿ ಹಾಗೂ ಕೆಂಡಸಂಪಿಗೆ ಮುಕ್ತಯವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಕೆಂಡ ಸಂಪಿಗೆ ಕೂಡಾ ಕ್ಲೈಮಾಕ್ಸ್‌ ಹಂತಕ್ಕೆ ಬಂದಿದೆ. ಈಗ ಅಂತರಪಟ ಧಾರಾವಾಹಿ ತಂಡ ಕೂಡಾ ಅಧಿಕೃತವಾಗಿ ವಿದಾಯ ಹೇಳಿದೆ. ಧಾರಾವಾಹಿ ತಂಡ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದೆ. ಧಾರಾವಾಹಿ ನಿರ್ಮಾಪಕಿ ಸ್ವಪ್ನಾ ಕೃಷ್ಣ ತಮ್ಮ‌ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡು ಈ ತಂಡದಿಂದ ನಾನು ಬಹಳ ಕಲಿತಿದ್ದೇನೆ. ಧಾರಾವಾಹಿಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಕಲಾವಿದರು, ತಂತ್ರಜ್ಞರು ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.‌

ಸ್ವಪ್ನಕೃಷ್ಣ ಹಂಚಿಕೊಂಡ ಫೋಟೋಗಳು

ಸ್ವಪ್ನಕೃಷ್ಣ ಹಂಚಿಕೊಂಡಿರುವ ಪೋಸ್ಟ್‌ಗೆ ಲಕ್ಷ್ಮೀ ಬಾರಮ್ಮ ನಟಿ ತನ್ವಿ ರಾವ್‌, ರಾಮಾಚಾರಿ ಧಾರಾವಾಹಿ ನಾಯಕಿ ಮೌನಾ ಗುಡ್ಡೆಮನೆ, ನಟಿ ಶರ್ಮಿಳಾ ಚಂದ್ರಶೇಖರ್‌ ಹಾಗೂ ಇನ್ನಿತರರು ಕಾಮೆಂಟ್‌ ಮಾಡಿದ್ದಾರೆ. ಧಾರಾವಾಹಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಧಾರಾವಾಹಿ ಸಂಪೂರ್ಣವಾಗಿಲ್ಲ. ಒಂದು ಒಳ್ಳೆ ಎಂಡಿಂಗ್‌ ನೀಡದೆ ಮುಗಿಸುತಿದ್ದೀರ, ಆರಾಧನಾ ಕನಸು ನನಸಾಗಲಿಲ್ಲ, ಅಮಲಾ ಕುತಂತ್ರ ಬಯಲಾಗಲಿಲ್ಲ, ಆದರೂ ಸೀರಿಯಲ್ ಮುಗಿಸುತ್ತಿದ್ದೀರ, ಬಹಳ ಬೇಸರವಾಯ್ತು, ಆರಾಧನಾ, ಸುಶಾಂತ್‌ ಎಲ್ಲರನ್ನೂ ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಧಾರಾವಾಹಿ ತಂಡ ಪಾರ್ಟಿ ಮುಗಿಸಿ, ನಂತರ ನಾಯಕ ಚಂದನ್‌ ಪತ್ನಿ ನಟಿ, ನೇಹಾಗೌಡ ಜೊತೆ ಡಿನ್ನರ್‌ ಮಾಡಿದೆ. ನೇಹಾ ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನೇಹಾ, ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಗಿಚ್ಚಿ ಗಿಲಿಗಿಲಿ ಶೋ ಫೈನಲ್‌ನಲ್ಲಿ ಸ್ಪರ್ಧಿಗಳ ಹೆಸರು ರಿವೀಲ್

ಬಿಗ್‌ ಬಾಸ್‌ ಬಗ್ಗೆ ಹೇಳುವುದಾದರೆ ಈ ಬಾರಿ ಕಾರ್ಯಕ್ರಮ ಅರಂಭವಾಗುವ ಮುನ್ನವೇ ಸ್ಪರ್ಧಿಗಳ ಹೆಸರು ರಿವೀಲ್‌ ಮಾಡುವುದಾಗಿ ತಂಡ ಹೇಳಿಕೊಂಡಿದೆ. ಗಿಚ್ಚಿ ಗಿಲಿಗಿಲಿ ಶೋ ಫೈನಲ್‌ ದಿನವೇ ಸ್ಪರ್ಧಿಗಳ ಹೆಸರು ಘೋಷಣೆ ಆಗಲಿದೆ. ದೊಡ್ಮನೆಯೊಳಗೆ ಯಾರೆಲ್ಲಾ ಹೋಗಬೇಕು ಅನ್ನೋದು ವೀಕ್ಷಕರ ಕೈಯಲ್ಲಿದೆ. ಹೆಚ್ಚು ಓಟು ಬಂದವರು ದೊಡ್ಮನೆಯೊಳಗೆ ಹೋಗುತ್ತಾರೆ. ಕಡಿಮೆ ಸಿಕ್ಕಿದವರು ಮನೆಗೆ ವಾಪಸ್‌ ಹೋಗಲಿದ್ದಾರೆ.

mysore-dasara_Entry_Point