Bhagyalakshmi Serial: ಡಿವೋರ್ಸ್‌ ಕೊಡಲು ತಾಂಡವ್‌ಗೆ 1 ವಾರ ಮನೆ ನಿಭಾಯಿಸುವ ಕಂಡಿಷನ್‌ ಹಾಕಿದ ಭಾಗ್ಯಾ;‌ ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಡಿವೋರ್ಸ್‌ ಕೊಡಲು ತಾಂಡವ್‌ಗೆ 1 ವಾರ ಮನೆ ನಿಭಾಯಿಸುವ ಕಂಡಿಷನ್‌ ಹಾಕಿದ ಭಾಗ್ಯಾ;‌ ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಡಿವೋರ್ಸ್‌ ಕೊಡಲು ತಾಂಡವ್‌ಗೆ 1 ವಾರ ಮನೆ ನಿಭಾಯಿಸುವ ಕಂಡಿಷನ್‌ ಹಾಕಿದ ಭಾಗ್ಯಾ;‌ ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 10ರ ಸಂಚಿಕೆ ಹೀಗಿದೆ. ನಿಮಗೆ ಡಿವೋರ್ಸ್‌ ನೀಡಬೇಕೆಂದರೆ ನೀವು ಒಂದು ವಾರದ ಕಾಲ ಮನೆ ನಿಭಾಯಿಸಬೇಕು ಎಂದು ಭಾಗ್ಯಾ, ತಾಂಡವ್‌ಗೆ ಕಂಡಿಷನ್‌ ಹಾಕುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Kannada Serial: ಇಷ್ಟು ವರ್ಷಗಳ ಕಾಲ ಭಾಗ್ಯಾಳನ್ನು ಮನಸಿನಲ್ಲೇ ದ್ವೇಷಿಸುತ್ತಿದ್ದ ತಾಂಡವ್‌ ಈಗ ಭಾಗ್ಯಾ ನನಗೆ ಇಷ್ಟವಿಲ್ಲವೆಂದು ಅಪ್ಪ ಅಮ್ಮನ ಎದುರು ಹೇಳಿದ್ದಾನೆ. ಅಷ್ಟೇ ಅಲ್ಲ ಡಿವೋರ್ಸ್‌ ಕೊಟ್ಟು ನಮ್ಮೆಲ್ಲರನ್ನು ಬಿಟ್ಟು ಎಲ್ಲಾದರೂ ಹೊರಟು ಹೋಗು ಎನ್ನುತ್ತಿದ್ದಾನೆ.

ತಾಂಡವ್‌ಗೆ ಮನೆ ನಿಭಾಯಿಸುವ ಚಾಲೆಂಜ್‌

ನೀನೆಂದರೆ ನನಗೆ ಇಷ್ಟವಿಲ್ಲ. ನಾನು ಮದುವೆ ಆಗುವಾಗ ಯಾರೂ ನನ್ನ ಅಭಿಪ್ರಾಯ ಕೇಳಲಿಲ್ಲ. ಇಷ್ಟು ವರ್ಷಗಳ ಕಾಲ ಎಲ್ಲಾ ನೋವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ ಆದರೆ ಇನ್ನು ಸಹಿಸಲು ಸಾಧ್ಯವಿಲ್ಲ. ನನಗೆ ನನ್ನ ಅಪ್ಪ ಅಮ್ಮ ಬೇಕು, ಮಕ್ಕಳು ಬೇಕು. ನಿನಗೆ ಜೀವನಾಂಶ ಕೊಡುತ್ತೇನೆ. ನಮ್ಮಿಂದ ದೂರ ಹೋಗು ಎಂದು ಮನವಿ ಮಾಡುತ್ತಾನೆ. ತಾಂಡವ್‌, ನನ್ನನ್ನು ಪ್ರೀತಿಸುತ್ತಿಲ್ಲ ಎಂದು ಗೊತ್ತಿದ್ದರೂ ಎಲ್ಲವನ್ನೂ ಮರೆತು ಇಷ್ಟು ದಿನಗಳ ಕಾಲ ಸಂಸಾರ ನಡೆಸುತ್ತಿದ್ದ ಭಾಗ್ಯಾಗೆ ತಾಂಡವ್‌ ಮಾತುಗಳು ನೋವುಂಟು ಮಾಡುತ್ತದೆ. ಆದರೆ ನಾನು ಡಿವೋರ್ಸ್‌ ಕೊಡಬೇಕೆಂದರೆ ನೀವು ಒಂದು ಕಂಡಿಷನ್‌ಗೆ ಒಪ್ಪಿಕೊಳ್ಳಬೇಕು ಎಂದು ಭಾಗ್ಯಾ ಹೇಳುತ್ತಾಳೆ.

ಏನು ಕಂಡಿಷನ್‌? ನಿನಗೆ ಪ್ರತಿ ತಿಂಗಳು ಹಣ ಕಳಿಸಬೇಕು ಅಲ್ವಾ? ಅದರ ಬಗ್ಗೆ ನೀನು ಚಿಂತೆ ಮಾಡಬೇಡ. ನಿನಗೆ ಜೀವನಾಂಶ ಕೊಡುವ ಜವಾಬ್ದಾರಿ ನನ್ನದು ಎಂದು ತಾಂಡವ್‌ ಹೇಳುತ್ತಾನೆ. ಆದರೆ ಭಾಗ್ಯಾ ಮಾಡುವ ಚಾಲೆಂಜ್‌ ಬೇರೆ. ಮನೆ, ಮಕ್ಕಳು, ಅಪ್ಪ ಅಮ್ಮನನ್ನು ನೋಡಿಕೊಳ್ಳುತ್ತೇನೆ ಎಂದು ಈಗಷ್ಟೇ ಹೇಳಿದಿರಿ. ನೀವು ಹೇಳಿದಂತೆ ನಾನು 1 ವಾರ ಮನೆಯಲ್ಲಿ ಇರುವುದಿಲ್ಲ. ನೀವು ಮನೆಗೆ ಬರಬೇಕು. 7 ದಿನಗಳ ಕಾಲ ಮನೆ ಅತ್ತೆ ಮಾವನನ್ನು ನೋಡಿಕೊಳ್ಳಬೇಕು. ಮಕ್ಕಳನ್ನು ನಿಭಾಯಿಸಬೇಕು. ನೀವು ಇದರಲ್ಲಿ ಯಶಸ್ವಿಯಾದರೆ 8ನೇ ದಿನ ನೀವು ಕಳಿಸುವ ಡಿವೋರ್ಸ್‌ ಪೇಪರ್‌ಗೆ ನಾನು ಸಹಿ ಹಾಕುತ್ತೇನೆ ಎಂದು ಭಾಗ್ಯಾ ಹೇಳಿದಾಗ ತಾಂಡವ್‌ ಖುಷಿಯಾಗುತ್ತಾನೆ. ಮನೆ ನಿಭಾಯಿಸುವುದು ಸುಲಭ, ಇಂದು ಸಂಜೆ ಆಫೀಸ್‌ ಮುಗಿಸಿಕೊಂಡು ಮನೆಗೆ ಬರುತ್ತೇನೆ. ಆದರೆ ನೀನು ಅಷ್ಟರಲ್ಲಿ ಮನೆಯಲ್ಲಿ ಇರಬಾರದು ಎಂದು ಖುಷಿಯಿಂದ ಹೊರಡುತ್ತಾನೆ.

ಮನೆ ಕಾಪಾಡುವಂತೆ ದೇವರ ಮೊರೆ ಹೋದ ಭಾಗ್ಯಾ

ಭಾಗ್ಯಾ ಮಾಡಿದ ಕೆಲಸಕ್ಕೆ ಕುಸುಮಾ ಬೇಸರಗೊಳ್ಳುತ್ತಾಳೆ. ಮಗಳೇ ನೀನು ಹೀಗೆ ಮಾಡಬಾರದಿತ್ತು ಎಂದು ಬೇಸರಗೊಳ್ಳುತ್ತಾರೆ. ಅತ್ತೆ ಮಾವನೊಂದಿಗೆ ದೇವರ ದರ್ಶನಕ್ಕೆ ಹೋಗುವ ಭಾಗ್ಯಾ ಅಲ್ಲಿ, ಮನೆಯ ಗೊಂಬೆಯನ್ನು ತೆಗೆದುಕೊಂಡು ಒಂದು ಚೀಟಿಯಲ್ಲಿ ಧರ್ಮರಾಜ್‌, ಕುಸುಮಾ, ತಾಂಡವ್‌, ಭಾಗ್ಯಾ, ತನ್ವಿ, ತನ್ಮಯ್‌ ಹೆಸರು ಬರೆದು ಅದರೊಳಗೆ ಇಡುತ್ತಾಳೆ. ಮನೆಯನ್ನು ಕಾಪಾಡುವಂತೆ ದೇವರಲ್ಲಿ ಮನವಿ ಮಾಡುತ್ತಾಳೆ.

ಭಾಗ್ಯಾ ಹೇಳಿದಂತೆ ತಾಂಡವ್‌ ಒಂದು ವಾರದ ಕಾಲ ಮನೆ ನಿಭಾಯಿಸುತ್ತಾನಾ? ತಾಂಡವ್‌ ಮುಂದೆ ಸೋತು ಭಾಗ್ಯಾ ಮನೆ ಬಿಟ್ಟು ಹೋಗುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner