ಭಾಗ್ಯಾಗಾಗಿ ಸ್ಟಾರ್‌ ಹೋಟೆಲ್‌ ಸಿಬ್ಬಂದಿ ಹುಡುಕಾಟ, ಪೊಲೀಸ್‌ ಕೇಸ್‌ಗೆ ಹೆದರಿ ತಪ್ಪಿಸಿಕೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾಗಾಗಿ ಸ್ಟಾರ್‌ ಹೋಟೆಲ್‌ ಸಿಬ್ಬಂದಿ ಹುಡುಕಾಟ, ಪೊಲೀಸ್‌ ಕೇಸ್‌ಗೆ ಹೆದರಿ ತಪ್ಪಿಸಿಕೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾಗಾಗಿ ಸ್ಟಾರ್‌ ಹೋಟೆಲ್‌ ಸಿಬ್ಬಂದಿ ಹುಡುಕಾಟ, ಪೊಲೀಸ್‌ ಕೇಸ್‌ಗೆ ಹೆದರಿ ತಪ್ಪಿಸಿಕೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 10ರ ಎಪಿಸೋಡ್‌; ಭಾಗ್ಯಾ ಮಾಡಿಕೊಟ್ಟ ಒತ್ತು ಶ್ಯಾವಿಗೆ ಹಾಗೂ ರಸಾಯನ ಪತ್ರಕರ್ತನಿಗೆ ಬಹಳ ಇಷ್ಟವಾಗುತ್ತದೆ. ಭಾಗ್ಯಾಗೆ ಕಾಂಪ್ಲಿಮೆಂಟ್ಸ್‌ ನೀಡಲು ಆಕೆ ಅಲ್ಲಿರುವುದಿಲ್ಲ. ಹೋಟೆಲ್‌ ಸಿಬ್ಬಂದಿ ಭಾಗ್ಯಾಳನ್ನು ಹುಡುಕಲು ಹೋಗುತ್ತಾರೆ. ಅವರೆಲ್ಲರನ್ನೂ ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ.

ಭಾಗ್ಯಾಗಾಗಿ ಸ್ಟಾರ್‌ ಹೋಟೆಲ್‌ ಸಿಬ್ಬಂದಿ ಹುಡುಕಾಟ, ಪೊಲೀಸ್‌ ಕೇಸ್‌ಗೆ ಹೆದರಿ ತಪ್ಪಿಸಿಕೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಾಗಾಗಿ ಸ್ಟಾರ್‌ ಹೋಟೆಲ್‌ ಸಿಬ್ಬಂದಿ ಹುಡುಕಾಟ, ಪೊಲೀಸ್‌ ಕೇಸ್‌ಗೆ ಹೆದರಿ ತಪ್ಪಿಸಿಕೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾ ವೈಯಕ್ತಿಕ ಜೀವನ ದಿಕ್ಕು ತಪ್ಪಿದೆ. ಗಂಡ ತಾಂಡವ್‌ ತನಗೆ ಡಿವೋರ್ಸ್‌ ಕೊಡಲು ಕಾಯುತ್ತಿದ್ದಾನೆ. ಇದೇ ವಿಚಾರಕ್ಕೆ ಮನೆ 2 ಭಾಗವಾಗಿದೆ. ತಂಗಿ ಲಕ್ಷ್ಮೀ ಮದುವೆಗಾಗಿ ತಾನು ಮಾಡಿದ ಸಾಲ ತೀರಿಸಲು ಭಾಗ್ಯಾ ಬಹಳ ಕಷ್ಟ ಪಡುತ್ತಿದ್ದಾಳೆ. ಜೊತೆಗೆ ಮಕ್ಕಳ ಸ್ಕೂಲ್‌ ಫೀಜ್‌, ಮನೆ ಇಎಂಐ ಕೂಡಾ ಕಟ್ಟಬೇಕು. ಎಲ್ಲದಕ್ಕೂ ಹೇಗೆ ಹಣ ಹೊಂದಿಸುವುದು ಅನ್ನೋದೆ ಭಾಗ್ಯಾಗೆ ಚಿಂತೆ ಆಗಿದೆ.

ಭಾಗ್ಯಾ ಮಾಡಿಕೊಟ್ಟ ತಿಂಡಿ ಇಷ್ಟಪಟ್ಟ ಪತ್ರಕರ್ತ

ಭಾಗ್ಯಾಗೆ ಸಿಕ್ಕ ಕೆಲಸ ಕೂಡಾ ಈಗ ಇಲ್ಲದಂತೆ ಆಗಿದೆ. ಭಾಗ್ಯಾ ಬೇಕಂತಲೇ ಮೋಸ ಮಾಡಿದ್ದಾಳೆ. ಮತ್ತೊಬ್ಬರ ಹೆಸರಿನಲ್ಲಿ ಕೆಲಸಕ್ಕೆ ಸೇರಿದ್ದಾಳೆ ಎಂದು ತಪ್ಪು ತಿಳಿದ ಹೋಟೆಲ್‌ ಮ್ಯಾನೇಜರ್‌, ಭಾಗ್ಯಾಳನ್ನು ಅಲ್ಲಿಂದ ವಾಪಸ್‌ ಕಳಿಸಿದ್ದಾರೆ. ಕೆಲಸ ಕಳೆದುಕೊಳ್ಳುವ ಭೀತಿ ನಡುವೆಯೂ ಭಾಗ್ಯಾ, ಹೋಟೆಲ್‌ಗೆ ಫುಡ್‌ ರಿವ್ಯೂ ಬರೆಯಲು ಬಂದ ಪತ್ರಕರ್ತನಿಗಾಗಿ ಒತ್ತು ಶ್ಯಾವಿಗೆ ಮಾವಿನ ರಸಾಯನ ಮಾಡಿಕೊಟ್ಟಿದ್ದಾಳೆ. ಭಾಗ್ಯಾ ಮಾಡಿಕೊಟ್ಟ ಅಡುಗೆ ಖಂಡಿತ ಆತನಿಗೆ ಇಷ್ಟವಾಗುವುದಿಲ್ಲ. ಇನ್ನು ನಮ್ಮ ಹೋಟೆಲ್‌ಗೆ ಕೆಟ್ಟ ಹೆಸರು ಅಷ್ಟೇ ಎಂದು ಮ್ಯಾನೇಜರ್‌ ಫಿಕ್ಸ್‌ ಆಗಿರುತ್ತಾನೆ. ಆದರೆ ಭಾಗ್ಯಾ ಮಾಡಿಕೊಟ್ಟ ತಿಂಡಿ ಸವಿದ ಪತ್ರಕರ್ತ ಅದನ್ನು ಬಹಳ ಇಷ್ಟಪಡುತ್ತಾನೆ. ಅವನ ಮುಖದಲ್ಲಿ ಕಿರುನಗೆ ಕಂಡು ಮ್ಯಾನೇಜರ್‌ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಅಡುಗೆ ಅಂದ್ರೆ ಇದು, ನಾನು ಇದುವರೆಗೂ ತಿಂದ ತಿಂಡಿಗಳಲ್ಲಿ ಇದು ಬೆಸ್ಟ್‌, ನಿಜಕ್ಕೂ ಒತ್ತು ಶ್ಯಾವಿಗೆ, ರಸಾಯನ ಬಹಳ ಚೆನ್ನಾಗಿದೆ ಎಂದು ಫುಡ್‌ ರಿವ್ಯೂವರ್‌ ಹೇಳುತ್ತಿದ್ದಂತೆ ಮ್ಯಾನೇಜರ್‌ ಹಾಗೂ ಸೂಪರ್‌ವೈಸರ್‌ ಖುಷಿಯಾಗುತ್ತಾರೆ. ನಾನು ನಿಮ್ಮ ಬಳಿ ಇದನ್ನೆಲ್ಲಾ ಹೇಳುತ್ತಿದ್ದೇನೆ. ಅಡುಗೆ ಮಾಡಿದ ಭಾಗ್ಯಾಳನ್ನು ಕರೆಯಿರಿ ನಾನು ಅವರ ಜೊತೆ ಮಾತನಾಡಬೇಕು ಎಂದು ಪತ್ರಕರ್ತ ಹೇಳುತ್ತಿದ್ದಂತೆ ಇಬ್ಬರೂ ಗಾಬರಿ ಆಗುತ್ತಾರೆ. ಹೇಗಾದರೂ ಮಾಡಿ ಭಾಗ್ಯಾಳನ್ನು ಹುಡುಕಿ ತರಬೇಕೆಂದು ನಿರ್ಧರಿಸಿ ಸೂಪರ್‌ವೈಸರ್‌, ಹಿತಾ ಹಾಗೂ ಇತರ ಸ್ಟಾಫ್‌ ಜೊತೆ ಭಾಗ್ಯಾಳನ್ನು ಹುಡುಕಿ ತರಲು ಹೋಗುತ್ತಾರೆ.

ತನ್ನನ್ನು ಹಿಂಬಾಲಿಸಿದ ಹೋಟೆಲ್‌ ಸ್ಟಾಫ್‌ ನೋಡಿ ಗಾಬರಿಯಾದ ಭಾಗ್ಯಾ

ಮನೆಗೆ ಆಟೋದಲ್ಲಿ ಹೋಗುವುದು ಬೇಡ ಎಂದುಕೊಳ್ಳುವ ಭಾಗ್ಯಾ ಬಸ್‌ ಹತ್ತುತ್ತಾಳೆ. ಭಾಗ್ಯಾ ಬಸ್‌ ಹತ್ತುವುದನ್ನು ನೋಡಿದ ಹಿತಾ ಹಾಗೂ ಸಹೋದ್ಯೋಗಿಗಳು ಆಕೆಯನ್ನು ಹಿಂಬಾಲಿಸುತ್ತಾರೆ. ಅವರನ್ನು ನೋಡುತ್ತಿದ್ದಂತೆ ಭಾಗ್ಯಾ ಗಾಬರಿ ಆಗುತ್ತಾಳೆ. ಇವರೆಲ್ಲಾ ಏಕೆ ಓಡಿ ಬರುತ್ತಿದ್ದಾರೆ? ಒಂದು ವೇಳೆ ಪೊಲೀಸ್‌ ಕೇಸ್‌ ಆದರೆ ಕಷ್ಟ, ನಾನು ಈಗ ಇರುವ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಗೊತ್ತಾದರೆ ಎಲ್ಲರೂ ಗಾಬರಿ ಆಗುತ್ತಾರೆ ಎಂದು ಭಾಗ್ಯಾ, ಮುಂದಿನ ಸಿಗ್ನಲ್‌ನಲ್ಲಿ ಬಸ್‌ ನಿಲ್ಲುತ್ತಿದ್ದಂತೆ ತಪ್ಪಿಸಿಕೊಂಡು ಇಳಿದು ಹೋಗುತ್ತಾಳೆ. ಭಾಗ್ಯಾ ಬಸ್‌ ಒಳಗೆ ಇಲ್ಲದ್ದನ್ನು ನೋಡಿ ಎಲ್ಲರೂ ಶಾಕ್‌ ಆಗುತ್ತಾರೆ. ಇವತ್ತು ಭಾಗ್ಯಾಳನ್ನು ಹುಡುಕೇ ತೀರಬೇಕೆಂದು ಹೋಟೆಲ್‌ ಸಿಬ್ಬಂದಿ ಬಸ್‌ ಇಳಿದು ಮತ್ತೆ ಭಾಗ್ಯಾಗಾಗಿ ಹುಡುಕಾಡುತ್ತಾರೆ.

ಪೊಲೀಸ್‌ ಕೇಸ್‌ಗೆ ಹೆದರಿ ಭಾಗ್ಯಾ ಯಾರಿಗೂ ಕಾಣದಂತೆ ತಪ್ಪಿಸಿಕೊಳ್ಳುತ್ತಾಳಾ? ಹೋಟೆಲ್‌ ಸಿಬ್ಬಂದಿ ಕಣ್ಣಿಗೆ ಕಾಣಿಸಿಕೊಳ್ಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ

ಇನ್ನಷ್ಟು ಮನರಂಜನೆ ಸುದ್ದಿಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

Whats_app_banner