Bhagyalakshmi Serial: ಕುಣಿಯಲಾರದವನು ನೆಲ ಡೊಂಕು ಎಂದನಂತೆ ಅನ್ನುವಂತಾಗಿದೆ ತಾಂಡವ್ ಪರಿಸ್ಥಿತಿ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್ 11ರ ಎಪಿಸೋಡ್. ಸೊಸೆಯನ್ನು ಹೊರಗೆ ಕಳಿಸಲು ಇಷ್ಟವಿಲ್ಲದ ಕುಸುಮಾ ಮನೆಯನ್ನು 2 ಭಾಗ ಮಾಡುತ್ತಾಳೆ. ತಾಂಡವ್ ಒಂಟಿಯಾಗಿದ್ದುಕೊಂಡು ಬಹಳ ಕಷ್ಟ ಪಡುತ್ತಿದ್ದಾನೆ.

Bhagyalakshmi Serial: ಭಾಗ್ಯಾ ಈ ಮನೆಯಲ್ಲಿ ಇರಲೇಬಾರದು ಎಂದು ಕಂಡಿಷನ್ ಮಾಡುತ್ತಿದ್ದ ತಾಂಡವ್‌ಗೆ ಬುದ್ಧಿ ಕಲಿಸಲು ಕುಸುಮಾ, ಮನೆಯನ್ನು ಎರಡು ಭಾಗ ಮಾಡುತ್ತಾಳೆ. ಮನೆ ನೀನು ಕಟ್ಟಿದ್ದಾದರೂ ಈ ಮನೆ ನಿಂತಿರುವ ಸೈಟ್ ನಮ್ಮದು ಎಂದು ಹೇಳಿ ಮನೆಯನ್ನು ಇಬ್ಭಾಗ ಮಾಡುತ್ತಾಳೆ. ಇನ್ಮುಂದೆ ನೀನು ಒಂದು ಭಾಗದಲ್ಲಿರು, ನಾವು ನಮ್ಮ ಸೊಸೆ ಜೊತೆ ಇರುತ್ತೇವೆ ಎಂದು ಕುಸುಮಾ, ಮಗನಿಗೆ ಬುದ್ಧಿ ಕಲಿಸಲು ಮುಂದಾಗುತ್ತಾಳೆ.
ತಾನು ಅಂದುಕೊಂಡಿದ್ದೇ ಒಂದು, ಇಲ್ಲಿ ನಡೆಯುತ್ತಿರುವುದೇ ಮತ್ತೊಂದು ಎಂದು ತಿಳಿದು ತಾಂಡವ್ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾನೆ. ಇತ್ತ ಶ್ರೇಷ್ಠಾ ಕೂಡಾ ತಾಂಡವ್ ಮನೆ ಬಿಟ್ಟು ನನ್ನ ಜೊತೆ ಬಂದು ಇರುತ್ತಾನೆ ಎಂದು ಕನಸು ಕಾಣುತ್ತಿದ್ದಾಳೆ. ಆದರೆ ತಾಂಡವ್ ಫೋನ್ ಮಾಡಿ ಎಲ್ಲವನ್ನೂ ವಿವರಿಸಿದಾಗ ಶ್ರೇಷ್ಠಾ ಬೇಸರಗೊಳ್ಳುತ್ತಾಳೆ. ಇತ್ತ ತಾಂಡವ್‌ಗೆ ಹಬ್ಬದ ದಿನದಿಂದ ಅಗ್ನಿ ಪರೀಕ್ಷೆ ಶುರುವಾಗುತ್ತದೆ. ಮೊದಲಿನಂತೆ ಯುಗಾದಿ ಹಬ್ಬ ಆಚರಿಸಲು ಸಾಧ್ಯವಾಗುವುದಿಲ್ಲ ಎಂದು ಬೇಸರ ಮಾಡಿಕೊಳ್ಳುವ ಭಾಗ್ಯಾಗೆ ಕುಸುಮಾ ಸೊಸೆಗೆ ಸಮಾಧಾನ ಮಾಡುತ್ತಾಳೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಹಬ್ಬ ಆಚರಿಸೋಣ, ನೀನು ಎಲ್ಲಾ ತಯಾರಿ ಮಾಡಿಕೋ ಎನ್ನುತ್ತಾಳೆ.
ಅರ್ಧ ಬಾಗಿಲಿಗೆ ತೋರಣ ಕಟ್ಟುವ ಕುಸುಮಾ
ಬೆಳಗ್ಗೆ ಏಳುತ್ತಿದ್ದಂತೆ ತಾಂಡವ್, ಮನೆ 2 ಭಾಗವಾಗಿದೆ ಎನ್ನುವುದನ್ನು ಮರೆತು ಭಾಗ್ಯಾಳನ್ನು ಕೂಗಿ ಕಾಫಿ ತರಲು ಹೇಳುತ್ತಾನೆ. ನಂತರ ಎಲ್ಲಾ ನೆನಪಿಗೆ ಬಂದು ಸುಮ್ಮನಾಗುತ್ತಾನೆ. ಇವರು ಕಾಫಿ ಮಾಡಿಕೊಡದಿದ್ದರೆ ಏನಂತೆ ಬೆಂಗಳೂರಿನಲ್ಲಿ ನೂರಾರು ಹೋಟೆಲ್‌ಗಳಿವೆ ಆರ್ಡರ್ ಮಾಡುತ್ತೇನೆ ಎಂದುಕೊಳ್ಳುತ್ತಾನೆ. ಆದರೆ ಒಂದು ಕಾಫಿಗೆ 200 ರೂ. ಎಂದು ತಿಳಿದು ಗಾಬರಿ ಆಗುತ್ತಾನೆ. ನಾನೇ ಮಾಡಿಕೊಳ್ಳುತ್ತೇನೆ ಎಂದು ಕೆಳಗೆ ಬರುತ್ತಾನೆ. ಅಷ್ಟರಲ್ಲಿ ಕುಸುಮಾ ಹಬ್ಬಕ್ಕೆ ತೋರಣ ಕಟ್ಟುತ್ತಿರುತ್ತಾಳೆ. ಪೂರ್ತಿ ಬಾಗಿಲಿಗೆ ತೋರಣ ಕಟ್ಟಿರುವುದನ್ನು ಸರಿ ಮಾಡಿ ಅರ್ಧ ಬಾಗಿಲಿಗೆ ಮಾತ್ರ ಕಟ್ಟುತ್ತಾಳೆ. ಪಕ್ಕದ ಮನೆಯವರ ಬಾಗಿಲಿಗೆ ನಾವೇಕೆ ತೋರಣ ಕಟ್ಟಬೇಕು? ನಮ್ಮ ಮನೆಗೆ ಮಾತ್ರ ಕಟ್ಟೋಣ ಎನ್ನುತ್ತಾಳೆ.
ಕುಸುಮಾ ವರ್ತನೆ ಕಂಡು ತಾಂಡವ್ ಕೋಪಗೊಳ್ಳುತ್ತಾನೆ. ಹೆತ್ತ ಮಗನ ಬಳಿ ಹೀಗೆ ನಡೆದುಕೊಳ್ಳುವುದಕ್ಕೆ ನಿನಗೆ ಹೇಗಾದರೂ ಮನಸ್ಸಾಗುತ್ತದೆ ಎಂದು ಕೇಳುತ್ತಾನೆ. ನೀನು ಜನ್ಮ ಕೊಟ್ಟ ತಂದೆ ತಾಯಿ ಬಳಿ ಹೇಗೆ ನಡೆದುಕೊಳ್ಳುತ್ತಿದ್ದೀಯ ಮೊದಲು ಅರ್ಥ ಮಾಡಿಕೋ ಎನ್ನುತ್ತಾಳೆ ಕುಸುಮಾ. ಇನ್ನು ತಿಂಡಿ ತಯಾರಿಸುವ ಸರದಿ. ತಾಂಡವ್ ತಾನೇ ತಿಂಡಿ ಮಾಡಲು ಮುಂದಾಗುತ್ತಾನೆ. 2 ಗಂಟೆ ಸಮಯ ಅಡುಗೆ ಮನೆ ಬಿಡುವಂತೆ ಕುಸುಮಾಗೆ ಕೇಳುತ್ತಾನೆ. ಯೂಟ್ಯೂಬ್ ನೋಡಿ ಅಡುಗೆ ಮಾಡಲು ಮುಂದಾಗುತ್ತಾನೆ. ತಿಂಡಿ ಮಾಡಲು ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬಂದು ಒದ್ದಾಡುತ್ತಾನೆ. ಭಾಗ್ಯಾ ಬೇಕಂತಲೇ ಖಾರದ ಈರುಳ್ಳಿ ತಂದಿಟ್ಟಿದ್ದಾಳೆ ಎಂದು ಬೈದುಕೊಳ್ಳುತ್ತಾನೆ.
ತಾಂಡವ್ ಕಾಲೆಳೆಯುವ ಪೂಜಾ
ತಾಂಡವ್ ಪರಿಸ್ಥಿತಿ ನೋಡುವ ಪೂಜಾ, ಮಕ್ಕಳಿಗೆ ಹೇಳಿದಂತೆ ಗಾದೆ ಮಾತುಗಳನ್ನು ಹೇಳುತ್ತಾಳೆ. ಕುಣಿಯಲಾರದವಳು ನೆಲ ಡೊಂಕು ಎಂದಳಂತೆ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರಂತೆ, ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ ಎಂಬ ಗಾದೆ ಮಾತುಗಳನ್ನು ಪೂಜಾ ತಾಂಡವ್‌ನನ್ನು ಉದ್ದೇಶಿಸಿ ಹೇಳುತ್ತಾಳೆ. ಇದೆಲ್ಲವೂ ಹೇಳುತ್ತಿರುವುದು ನನಗೇ ಎಂದು ತಾಂಡವ್‌ಗೆ ಅರ್ಥವಾಗುತ್ತದೆ. ಗಮನ ಬೇರೆಡೆ ಹರಿಸಿದ್ದರಿಂದ ತಾಂಡವ್ ಮಾಡುವ ಅಡುಗೆ ಸೀದು ಹೋಗುತ್ತದೆ. ಅಡುಗೆ ಮಾಡಲು ಬಾರದೆ, ತಾಂಡವ್ ಹೊಟ್ಟೆ ಹಸಿವಿನಿಂದ ಒದ್ದಾಡುತ್ತಾನೆ.
ತಾಂಡವ್‌ನನ್ನು ಮನೆಗೆ ಕರೆ ತರಲು ಪೂಜಾ ಬೇರೇನು ತಂತ್ರ ಹೆಣೆಯುತ್ತಾಳೆ? ಕುಸುಮಾ, ಭಾಗ್ಯಾ ಮನೆಯವರೊಂದಿಗೆ ಸಂತೋಷದಿಂದ ಯುಗಾದಿ ಹಬ್ಬ ಆಚರಿಸುವರೇ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
