ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 11th March 2024 Episode Kannika Insult Kusuma Bhagya Rsm

Bhagyalakshmi Serial: ಪ್ರಶಸ್ತಿಯನ್ನು ನೆಲಕ್ಕೆ ಎಸೆದು ಭಾಗ್ಯಾ,ಕುಸುಮಾಗೆ ವೇದಿಕೆ ಮೇಲೆ ಅವಮಾನ ಮಾಡಿದ ಕನ್ನಿಕಾ;ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 11ರ ಸಂಚಿಕೆ ಹೀಗಿದೆ. ಭಾಗ್ಯಾ, ಕುಸುಮಾಗೆ ಪ್ರಶಸ್ತಿ ನೀಡಲು ವೇದಿಕೆ ಮೇಲೆ ಕರೆಯುವ ಕನ್ನಿಕಾ, ಅವರ ಕೈಗೆ ಪ್ರಶಸ್ತಿ ಫಲಕ ನೀಡದೆ ಅದನ್ನು ಕೆಳಗೆ ಬೀಳಿಸಿ ಅವಮಾನ ಮಾಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 11ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 11ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಭಾಗ್ಯಾ ಹಾಗೂ ಕುಸುಮಾಗೆ ಈ ಬಾರಿ ಮಹಿಳಾ ಸಾಧಕಿ ಪ್ರಶಸ್ತಿ ದೊರೆಯುತ್ತಿದೆ. ಅದು ನನಗೆ ಬರಬೇಕಿತ್ತು, ಕೈ ತಪ್ಪಿ ಹೋಯ್ತಲ್ಲಾ ಎಂಬ ಕೋಪದಿಂದ ಕನ್ನಿಕಾ, ಇಬ್ಬರಿಗೂ ವೇದಿಕೆ ಮೇಲೆ ಅವಮಾನ ಮಾಡಲು ಪ್ಲ್ಯಾನ್‌ ಮಾಡುತ್ತಾಳೆ. ಅದಕ್ಕಾಗಿ ಪಿಎಗೆ ಹೇಳಿ ಭಾಗ್ಯಾ ವೈಯಕ್ತಿಕ ವಿವರಗಳನ್ನು ತರಲು ಹೇಳುತ್ತಾಳೆ.

ಕನ್ನಿಕಾ ಪ್ಲ್ಯಾನ್‌ ಅರ್ಥ ಮಾಡಿಕೊಳ್ಳದ ಕುಸುಮಾ ಆಕೆಗೆ ಕಪಾಳಮೋಕ್ಷ ಮಾಡುತ್ತಾಳೆ. ಭಾಗ್ಯಾ ಬಂದು ಕನ್ನಿಕಾ ಏನೋ ಪ್ಲ್ಯಾನ್‌ ಮಾಡುತ್ತಿದ್ದಾಳೆ. ಅವರೊಂದಿಗೆ ಮಾತನಾಡಬೇಡಿ ಎಂದು ಅತ್ತೆಯನ್ನು ಕರೆದೊಯ್ಯುತ್ತಾಳೆ. ಅಷ್ಟರಲ್ಲಿ ಕಾರ್ಯಕ್ರಮ ಆರಂಭವಾಗುತ್ತದೆ. ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ತಮಗೆ ಮಹಿಳಾ ಸಾಧಕಿ ಪ್ರಶಸ್ತಿ ದೊರೆಯುತ್ತಿದೆ ಎಂದು ತಿಳಿದ ಭಾಗ್ಯಾ, ಕುಸುಮಾ ಶಾಕ್‌ ಆಗುತ್ತಾರೆ. ನನ್ನನ್ನು ಇಲ್ಲಿ ಡ್ಯಾನ್ಸ್‌ ಮಾಡಲು ಕರೆದದ್ದು ಅಂತದ್ದರಲ್ಲಿ ನಮಗೆ ಈ ಪ್ರಶಸ್ತಿ ದೊರೆಯುತ್ತಿದೆ ಎಂದು ತಿಳಿದು ಭಾಗ್ಯಾ ಆಶ್ಚರ್ಯಗೊಳ್ಳುತ್ತಾಳೆ. ಕಾರ್ಯಕ್ರಮದ ಆಯೋಜಕರು ಹೇಳಿದಂತೆ ಕನ್ನಿಕಾ ವೇದಿಕೆ ಹತ್ತಿ ಭಾಗ್ಯಾ, ಕುಸುಮಾ ಇಬ್ಬರ ಬಗ್ಗೆ ಮಾತನಾಡುತ್ತಾಳೆ.

ವೇದಿಕೆ ಮೇಲೆ ಕುಸುಮಾ, ಭಾಗ್ಯಾಗೆ ಅವಮಾನ ಮಾಡಿದ ಕನ್ನಿಕಾ

ಭಾಗ್ಯಾ ಹಾಗೂ ಕುಸುಮಾ ನಿಜಕ್ಕೂ ಆದರ್ಶ ಅತ್ತೆ ಸೊಸೆ, ಒಬ್ಬರಿಗೊಬ್ಬರು ಬಹಳ ಅರ್ಥ ಮಾಡಿಕೊಂಡಿದ್ದಾರೆ. ಇವರಂಥ ಅತ್ತೆ ಸೊಸೆ ಎಲ್ಲೂ ಇಲ್ಲ. ಈ ವಯಸ್ಸಿನಲ್ಲೂ ಓದಬೇಕೆನ್ನುವ ಭಾಗ್ಯಾ ಛಲ, ಆಕೆಗೆ ಪ್ರೋತ್ಸಾಹ ನೀಡುತ್ತಿರುವ ಕುಸುಮಾ ಇಬ್ಬರನ್ನೂ ವೇದಿಕೆ ಮೇಲೆ ಬರಮಾಡಿಕೊಳ್ಳೋಣ ಎಂದು ಇಬ್ಬರನ್ನೂ ವೇದಿಕೆ ಮೇಲೆ ಆಹ್ವಾನಿಸುತ್ತಾಳೆ. ಕನ್ನಿಕಾ ವರ್ತನೆ ನೋಡಿ ಕುಸುಮಾಗೆ ಅನುಮಾನ ಉಂಟಾಗುತ್ತದೆ. ಇಬ್ಬರೂ ವೇದಿಕೆ ಮೇಲೆ ಬಂದು ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾರೆ. ಇಬ್ಬರಿಗೂ ಪ್ರಶಸ್ತಿ ನೀಡಲೆಂದು ಹೋಗುವ ಕನ್ನಿಕಾ ಅದನ್ನು ಭಾಗ್ಯಾ ಕೈಗೆ ಕೊಡದೆ ನೆಲದ ಮೇಲೆ ಬೀಳಿಸುತ್ತಾಳೆ. ಪ್ರಶಸ್ತಿಗೆ ಒಂದು ಗೌರವ ಇದೆ ಅದನ್ನು ಏಕೆ ಈ ರೀತಿ ನೆಲದ ಮೇಲೆ ಬೀಳಿಸುತ್ತೀರ ಎಂದು ಭಾಗ್ಯಾ ಕೇಳುತ್ತಾಳೆ. ಹೌದು ಪ್ರಶಸ್ತಿಗೆ ಗೌರವ ಇದೆ ನಿಮಗೆ ಇಲ್ಲವಲ್ಲಾ ಎನ್ನುತ್ತಾಳೆ.

ಈ ಪ್ರಶಸ್ತಿ ಇರುವುದು ಸಾಧನೆ ಮಾಡಿದ ಮಹಿಳೆಯರಿಗೆ, ನಿಮ್ಮಂಥ ಚಿಲ್ಲರೆ ಶೋಕಿ ಮಾಡುವ ಜನರಿಗಲ್ಲ ಎಂದು ವೇದಿಕೆ ಮೇಲೆ ಕನ್ನಿಕಾ ಇಬ್ಬರಿಗೂ ಅವಮಾನ ಮಾಡುತ್ತಾಳೆ. ಕಾರ್ಯಕ್ರಮ ಲೈವ್‌ ಪ್ರಸಾರವಾಗುತ್ತಿದ್ದರೂ ಕನ್ನಿಕಾಗೆ ವೇದಿಕೆ ಮೇಲೆ ಕುಸುಮಾ, ಭಾಗ್ಯಾಗೆ ಅವಮಾನ ಮಾಡುವ ಗುರಿ ಬಿಟ್ಟರೆ ಬೇರೆ ಯಾವುದೂ ಗಮನಕ್ಕಿಲ್ಲ. ಕುಸುಮಾ ಭಾಗ್ಯಾಳನ್ನು ಓದಿಸುತ್ತಿರುವುದು ಆಕೆ ಮುಂದೆ ಓದಿ ಆಫೀಸರ್‌ ಆಗಬೇಕು ಎಂದಲ್ಲ. ಕುಸುಮಾ ಅವರಂಥ ಹೆಂಗಸಿಗೆ ಸೊಸೆ ಹೊರಗೆ ಹೋಗಿ ದುಡಿಯುವುದು ಇಷ್ಟವಿಲ್ಲ, ಸೊಸೆಯನ್ನು ಓದಿಸುತ್ತಿರುವುದು ಅವಳ ಜೀವನ ಸರಿ ಹೋಗಲಿ ಎಂದು ಮಾತ್ರ. ಈ ವಿಚಾರವಾಗಿ ಆಕೆ ಮಾತನಾಡಿದ್ದನ್ನು ಆಕೆಯ ಮಾತಿಂದಲೇ ಕೇಳಿಸುತ್ತೇಳೆ ಎಂದು ಕಾರ್ಯಕ್ರಮ ಆರಂಭಕ್ಕೂ ಮುನ್ನ ಕುಸುಮಾ ಜೊತೆ ಮಾತನಾಡಿದ್ದನ್ನು ಆಕೆಗೆ ಗೊತ್ತಿಲ್ಲದಂತೆ ರೆಕಾರ್ಡ್‌ ಮಾಡಿ ವೇದಿಕೆ ಮೇಲೆ ಎಲ್ಲರಿಗೂ ತೋರಿಸುತ್ತಾಳೆ.

ತನ್ನದೇ ವಿಡಿಯೋ ನೋಡಿ ಗಾಬರಿಯಾದ ಕುಸುಮಾ

ತನ್ನ ವಿಡಿಯೋ ನೋಡಿ ಕುಸುಮಾ ಬೇಸರಗೊಳ್ಳುತ್ತಾಳೆ. ನಾನು ಮೊದಲು ಹೇಳಿದ್ದನ್ನೆಲ್ಲಾ ಬಿಟ್ಟು ನಿನಗೆ ಯಾವ ರೀತಿ ಬೇಕೋ ಆ ರೀತಿ ಬಳಸಿಕೊಳ್ಳುತ್ತಿದ್ದೀಯ ಇದು ಸರಿನಾ ಎಂದು ಪ್ರಶ್ನಿಸುತ್ತಾಳೆ. ಕಾರ್ಯಕ್ರಮದ ಲೈವ್‌ ನೋಡಿ ತಾಂಡವ್‌ ಗಾಬರಿ ಆಗುತ್ತಾನೆ. ಪೂಜಾ, ಸುನಂದಾ, ತನ್ವಿ ಕೂಡಾ ಬೇಸರಗೊಳ್ಳುತ್ತಾರೆ. ಮಹಿಳಾ ಸಾಧಕಿ ಪ್ರಶಸ್ತಿ ಕನ್ನಿಕಾಗೆ ದೊರೆಯುವುದಾ? ಭಾಗ್ಯಾ ಕುಸುಮಾಗೆ ಮಹಿಳಾ ಸಮಾಜದವರಿಂದ ಕೂಡಾ ಅವಮಾನವಾಗುವುದಾ ಕಾದು ನೋಡಬೇಕು.

IPL_Entry_Point