ಮದುವೆ ನಿಲ್ಲಿಸಲು ಹೊರಟ ಕುಸುಮಾ, ಇತ್ತ ಧೈರ್ಯ ಮಾಡಿ, ಭಾಗ್ಯಾಳನ್ನು ಭೇಟಿಯಾಗಲು ಮನೆಗೆ ಬಂದ ಸುಂದ್ರಿ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 11th september episode sundri came to bhagya home rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮದುವೆ ನಿಲ್ಲಿಸಲು ಹೊರಟ ಕುಸುಮಾ, ಇತ್ತ ಧೈರ್ಯ ಮಾಡಿ, ಭಾಗ್ಯಾಳನ್ನು ಭೇಟಿಯಾಗಲು ಮನೆಗೆ ಬಂದ ಸುಂದ್ರಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಮದುವೆ ನಿಲ್ಲಿಸಲು ಹೊರಟ ಕುಸುಮಾ, ಇತ್ತ ಧೈರ್ಯ ಮಾಡಿ, ಭಾಗ್ಯಾಳನ್ನು ಭೇಟಿಯಾಗಲು ಮನೆಗೆ ಬಂದ ಸುಂದ್ರಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಸೆಪ್ಟೆಂಬರ್‌ 11ರ ಎಪಿಸೋಡ್‌. ಶ್ರೇಷ್ಠಾ-ತಾಂಡವ್‌ ಮದುವೆ ತಡೆಯಲು ಕುಸುಮಾ ಮನೆಯಿಂದ ಹೊರಡುತ್ತಾಳೆ. ಅತ್ತೆ ನಡೆ ಕಂಡು ಭಾಗ್ಯಾ ಆಶ್ಚರ್ಯಗೊಳ್ಳುತ್ತಾಳೆ. ಅವಳು ಹೊರಡುತ್ತಿದ್ದಂತೆ ಸುಂದ್ರಿ ಭಾಗ್ಯಾಳನ್ನು ಭೇಟಿಯಾಗಲು ಮನೆಗೆ ಬರುತ್ತಾಳೆ.

ಮದುವೆ ನಿಲ್ಲಿಸಲು ಹೊರಟ ಕುಸುಮಾ, ಇತ್ತ ಧೈರ್ಯ ಮಾಡಿ ಭಾಗ್ಯಾಳನ್ನು ಭೇಟಿಯಾಗಲು ಮನೆಗೆ ಬಂದ ಸುಂದ್ರಿ; ಭಾಗ್ಯಲಕ್ಷ್ಮೀ ಧಾರಾವಾಹಿ
ಮದುವೆ ನಿಲ್ಲಿಸಲು ಹೊರಟ ಕುಸುಮಾ, ಇತ್ತ ಧೈರ್ಯ ಮಾಡಿ ಭಾಗ್ಯಾಳನ್ನು ಭೇಟಿಯಾಗಲು ಮನೆಗೆ ಬಂದ ಸುಂದ್ರಿ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಇಷ್ಟು ದಿನಗಳಿಂದ ಗುಟ್ಟಾಗಿದ್ದ ವಿಷಯ ರಟ್ಟಾಗಿದೆ. ಕುಸುಮಾ ಮುಂದೆ ಮಗನ ಮುಖವಾಡ ಬಯಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಶ್ರೇಷ್ಠಾ ಜೊತೆಗೆ ತಾಂಡವ್‌ ಕೋಪ ನೋಡಿ ಕುಸುಮಾ ಶಾಕ್‌ ಆಗಿದ್ದಾಳೆ. ಸೊಸೆಗೆ ಈ ವಿಚಾರ ಯಾವುದೇ ಕಾರಣಕ್ಕೂ ತಿಳಿಯಬಾರದು ಎಂದು ಅವಳಿಂದ ವಿಷಯ ಮುಚ್ಚಿಡುತ್ತಾಳೆ.

ಶ್ರೇಷ್ಠಾ ವರ್ತನೆ ನೆನೆದು ಬೇಸರಗೊಂಡ ಭಾಗ್ಯಾ

ಭಾಗ್ಯಾ, ಅತ್ತೆ ಕುಸುಮಾಳನ್ನು ನೋಡಿ ಗಾಬರಿ ಆಗುತ್ತಾಳೆ. ಇಷ್ಟು ದಿನ ಇಲ್ಲದವರು ಇಂದು ಈ ರೀತಿ ಏಕೆ ಇದ್ದೀರ? ಏನಾಯ್ತು ಎಂದು ಕೇಳುತ್ತಾಳೆ. ಆದರೆ ಕುಸುಮಾ ಭಾಗ್ಯಾಗೆ ಏನೂ ಹೇಳುವುದಿಲ್ಲ. ಏನಿಲ್ಲ ಸ್ವಲ್ಪ ಸುಸ್ತಾಗಿದೆ ಅಷ್ಟೇ ಎನ್ನುತ್ತಾಳೆ. ಹಾಗಿದ್ದರೆ ಈ ಸೀರೆಗಳನ್ನೆಲ್ಲಾ ನಾನೇ ಸರಿ ಮಾಡುತ್ತಿದ್ದೆ ಎಂದು ಭಾಗ್ಯಾ ಹೇಳಿದಾಗ, ಇದನ್ನೆಲ್ಲಾ ನಾನೇ ಸರಿ ಮಾಡಿದ್ದು ಒಳ್ಳೆಯದಾಯ್ತು ಎನ್ನುತ್ತಾಳೆ. ಅತ್ತೆ ಸುಸ್ತಾಗಿದ್ದಾರೆ ಎಂದು ತಿಳಿದು ಭಾಗ್ಯಾ ಕುಸುಮಾಳ ಕಾಲು ಒತ್ತುತ್ತಾಳೆ. ಮನೆಯವರ ಸುಖ ಬಯಸುವ ಇಂಥ ಒಳ್ಳೆ ಸೊಸೆಗೆ ನನ್ನ ಮಗ ಮೋಸ ಮಾಡುತ್ತಿದ್ದಾನಲ್ಲಾ ಎಂದು ತಿಳಿದು ಕುಸುಮಾ ಇನ್ನಷ್ಟು ದುಃಖಗೊಳ್ಳುತ್ತಾಳೆ.

ನೀನು ಹೋಟೆಲ್‌ಗೆ ಏಕೆ ಹೋಗಲಿಲ್ಲ ಎಂದು ಕುಸುಮಾ ಕೇಳುತ್ತಾಳೆ. ಏಕೋ ಮನಸ್ಸೇ ಸರಿ ಇಲ್ಲ, ಈ ಶ್ರೇಷ್ಠಾಳಿಂದ ಎಲ್ಲ‌ರ ಮೂಡ್‌ ಹಾಳಾಯ್ತು ಎಂದು ಮಾತು ಆರಂಭಿಸುವ ಭಾಗ್ಯಾ, ಪಾಪ, ಆ ಹೆಣ್ಣು ಮಗಳಿಗೆ ಇದೆಲ್ಲಾ ಗೊತ್ತಿಲ್ಲ ಅನ್ನಿಸುತ್ತೆ. ನನ್ನ ಗಂಡ ತನಗೆ, ಮಕ್ಕಳಿಗೆ ಮೋಸ ಮಾಡಿ ಎರಡನೇ ಮದುವೆ ಆಗುತ್ತಿರುವ ವಿಚಾರ ತಿಳಿದು ಆಕೆಗೆ ಎಷ್ಟು ಆಘಾತ ಆಗಬಹುದು, ನಮ್ಮವರಿಗೇ ಹೀಗೆ ಆಗಿದ್ದರೆ ನಮಗೆ ಬಹಳ ನೋವಾಗುತ್ತಿತ್ತು. ಎಂದು ಭಾಗ್ಯಾ ಶ್ರೇಷ್ಠಾ ವಿಚಾರವಾಗಿ ಬೇಸರ ವ್ಯಕ್ತಪಡಿಸುತ್ತಾಳೆ. ಭಾಗ್ಯಾಗೆ ವಿಚಾರ ಗೊತ್ತಿಲ್ಲದೆ, ತನ್ನ ಬಗ್ಗೆ ತಾನೇ ಹೇಳಿಕೊಳ್ಳುತ್ತಿರುವುದನ್ನು ಕಂಡು ಕುಸುಮಾ ಕೂಡಾ ಅಳುತ್ತಾಳೆ. ನನಗೆ ಗೊತ್ತು ಅತ್ತೆ ನೀವೂ ಕೂಡಾ ಶ್ರೇಷ್ಠಾ ವಿಚಾರವಾಗಿ ಬೇಸರಗೊಂಡಿದ್ದೀರ ಎನ್ನುತ್ತಾಳೆ. ಇನ್ನು ಆ ಶ್ರೇಷ್ಠಾ ವಿಚಾರ ಬಿಡು ಎಂದು ಕುಸುಮಾ ಸೊಸೆಗೆ ಹೇಳುತ್ತಾಳೆ. ಸರಿ ನೀವು ರೆಸ್ಟ್‌ ಮಾಡಿ, ನಾನು ಕೆಲಸ ಮುಗಿಸುತ್ತೇನೆ ಎಂದು ಭಾಗ್ಯಾ ಅತ್ತೆಗೆ ಹೇಳಿ ರೂಮ್‌ನಿಂದ ಹೊರಡುತ್ತಾಳೆ.

ಮದುವೆ ಮನೆಗೆ ಹೊರಟು ನಿಂತ ಕುಸುಮಾ

ಇನ್ನು ತಡ ಮಾಡಿದರೆ ಆಗುವುದಿಲ್ಲ, ಹೇಗಾದರೂ ಮಾಡಿ ಈ ಮದುವೆ ತಡೆಯಬೇಕು ಎಂದುಕೊಳ್ಳುವ ಕುಸುಮಾ, ಮತ್ತೆ ಮದುವೆ ಮನೆಗೆ ಹೊರಡಲು ಸಿದ್ಧಳಾಗುತ್ತಾಳೆ. ಆರೋಗ್ಯ ಸರಿ ಇಲ್ಲದಿದ್ದರೂ ಕುಸುಮಾ ಹೊರಗೆ ಹೋಗುವುದನ್ನು ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ. ಅತ್ತೆ ಹೊರಗೆ ಹೋಗುವುದನ್ನು ತಡೆಯಲು ಪ್ರಯತ್ನಿಸುತ್ತಾಳೆ. ಆದರೆ ಕುಸುಮಾ ಯಾರ ಮಾತನ್ನು ಕೇಳುವುದಿಲ್ಲ. ನಾನು ಹೊರಗೆ ಹೋಗಬೇಕಿದೆ, ಒಂದು ಸ್ಥಳದಲ್ಲಿ ನನ್ನ ಅವಶ್ಯಕತೆ ಬಹಳ ಇದೆ. ನಾನು ಹೋಗಲೇಬೇಕು. ಇಲ್ಲವಾದರೆ ಸಮಸ್ಯೆ ಆಗುತ್ತದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಅತ್ತೆ ನಡೆ ಕಂಡು ಭಾಗ್ಯಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಆದರೂ ಅತ್ತೆಗೆ ಎದುರು ಮಾತನಾಡದೆ ಸುಮ್ಮನಾಗುತ್ತಾಳೆ.

ಇತ್ತ ಮಹೇಶನಿಗೆ ಕರೆ ಮಾಡುವ ಸುಂದರಿ, ಯಾವುದೇ ಕಾರಣಕ್ಕೂ ಶ್ರೇಷ್ಠಾ ನಿನಗೆ ಹಣ ಕೊಡುವುದಿಲ್ಲ, ಅವಳ ಬದಲಿಗೆ ನಾನೇ ನಿನಗೆ ಹಣ ಕೊಡುತ್ತೇನೆ, ಪೂಜಾಗೆ ಏನೂ ಸಮಸ್ಯೆ ಮಾಡಬೇಡ, ಹಣ ತೆಗೆದುಕೊಂಡು ನಾನೇ ಬರುತ್ತೇನೆ, ದಯವಿಟ್ಟು ಲೊಕೇಶನ್‌ ಕಳಿಸು ಎಂದು ಮನವಿ ಮಾಡುತ್ತಾಳೆ. ಸುಂದ್ರಿಯನ್ನು ನಂಬುವ ಮಹೇಶ ಸರಿ ಯಾರು ಕೊಟ್ಟರೇನು? ನನಗೆ ಹಣ ಬೇಕಷ್ಟೇ ಎಂದು ಲೊಕೇಶನ್‌ ಕಳಿಸುತ್ತಾನೆ. ಪೂಜಾಳನ್ನು ಕಾಪಾಡಲು ಬೇರೆ ವಿಧಿ ಇಲ್ಲದೆ ಸುಂದ್ರಿ ಭಾಗ್ಯಾ ಮನೆಗೆ ಬರುತ್ತಾಳೆ. ಭಾಗ್ಯಾ ನನ್ನನ್ನು ನೋಡಿ ಕೋಪಗೊಳ್ಳಬಹುದು, ಹೊಡೆಯಲೂಬಹುದು, ಆದರೂ ಪರವಾಗಿಲ್ಲ, ಈ ಸಮಯದಲ್ಲಿ ನನಗೆ ಪೂಜಾ ಸೇಫ್‌ ಆಗುವುದು ಮುಖ್ಯ ಎಂದು ಕಾಲಿಂಗ್‌ ಬೆಲ್‌ ಒತ್ತುತ್ತಾಳೆ. ಬಾಗಿಲನ್ನು ತೆಗೆಯುವ ಭಾಗ್ಯಾ ಸುಂದ್ರಿಯನ್ನು ನೋಡಿ ಶಾಕ್‌ ಆಗುತ್ತಾಳೆ.

ಸುಂದ್ರಿಯನ್ನು ನೋಡಿ ಭಾಗ್ಯಾ ಹೇಗೆ ಪ್ರತಿಕ್ರಿಯಿಸುತ್ತಾಳೆ? ಕುಸುಮಾ ತಾಂಡವ್-ಶ್ರೇಷ್ಠಾ ಮದುವೆ ನಿಲ್ಲಿಸುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

mysore-dasara_Entry_Point